Sushil Singh: ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು 11,000 ರೂ. ಸಂಬಳ ಪಡೆಯುತ್ತಿದ್ದ ವ್ಯಕ್ತಿ ಈಗ ಮೂರು ಕಂಪನಿಗಳ ಮಾಲೀಕ!

ಪ್ರತಿಯೊಬ್ಬರ ಬದುಕಿನಲ್ಲಿಯೂ ಸೋಲು, ಕಹಿ ಅನುಭವ ಹಾಗೂ ನಿರಾಶೆಯನ್ನು ಉಂಟು ಮಾಡುತ್ತದೆ. ಆದರೆ ಅವು ಯಶಸ್ಸಿನೆಡೆಗೆ ಇರುವ ಮೆಟ್ಟಿಲು ಎಂದು ಭಾವಿಸುವವರು ಕೂಡ ಅನೇಕರು ಇದ್ದಾರೆ. ಅಂಥವರ ಸಾಲಿನಲ್ಲಿ ಸುಶೀಲ್‌ ಸಿಂಗ್‌ ಕೂಡ ಸೇರಿದ್ದಾರೆ. ಸುಶೀಲ್‌ ಸಿಂಗ್‌ ಅವರು ಎಸ್‌ಎಸ್‌ಆರ್‌ ಟೆಕ್‌ವಿಷನ್‌, ಬಿಪಿಒ ಸೇರಿದಂತೆ ಹಲವಾರು ಗ್ರಾಹಕ ಸೇವಾ ವ್ಯವಹಾರಗಳನ್ನು ನಡೆಸುತ್ತಿದ್ದಾರೆ.

ಆ ಪೈಕಿ ಡೀಬಾಕೊ ಪ್ರಮುಖ B2C ಫ್ಯಾಷನ್ ಆನ್‌ಲೈನ್‌ ಶಾಪಿಂಗ್‌ ವೇದಿಕೆ ಹಾಗೂ Saiva System Inc ಎಂಬ ಸಾಗರೋತ್ತರ ಐಟಿ ಸೇವೆಗಳನ್ನು ಒದಗಿಸುವ ಸಂಸ್ಥೆಯಾಗಿದೆ. ಸುಶೀಲ್‌ ಸಿಂಗ್‌ ಉತ್ತರ ಪ್ರದೇಶದ ಜಾನ್‌ಪುರ ಜಿಲ್ಲೆಯಿಂದ ಬಂದವರಾಗಿದ್ದು, ಅವರು ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟಿದ್ದರು.

 11,000 ರೂ. ಸಂಬಳ ಪಡೆಯುತ್ತಿದ್ದ ವ್ಯಕ್ತಿ ಈಗ ಮೂರು ಕಂಪನಿಗಳ ಮಾಲೀಕ!

ಆದರೆ ಈಗ ಅವರು ಟೆಕ್ನೋ ಉದ್ಯಮಿಯಾಗಿದ್ದು, ಮೂರು ಲಾಭದಾಯಕ ವ್ಯವಹಾರಗಳನ್ನು ಹೊಂದಿದ್ದಾರೆ. ಆದರೆ ಅವರು ಈ ಹಂತಕ್ಕೆ ಬೆಳೆಯಬೇಕೆಂದರೆ ನಡೆದು ಬಂದ ಹಾದಿ ಅಷ್ಟೊಂದು ಸುಖಕರವಾಗಿರಲಿಲ್ಲ. ಏಕೆಂದರೆ ಅವರು ತಮ್ಮ ವೃತ್ತಿ ಜೀವನವನ್ನು ಕೇವಲ 11,000 ರೂಪಾಯಿಯೊಂದಿಗೆ ಪ್ರಾರಂಭಿಸಿದ್ದರು.

ಸುಶೀಲ್‌ ಸಿಂಗ್ ಜೀವನ

ಸುಶೀಲ್‌ ಅವರು ಅತ್ಯಂತ ಸರಳ ಕುಟುಂಬದ ಹಿನ್ನಲೆಯಿಂದ ಬಂದವರು. ಉದ್ಯೋಗದ ಹುಡುಕಾಟದಿಂದಾಗಿ ಜಾನ್‌ಪುರದಿಂದ ಮುಂಬೈನಂಥಹ ಮಹಾನಗರಕ್ಕೆ ಸ್ಥಳಾಂತರಗೊಂಡಿದ್ದರು. ಅವರ ತಾಯಿಯು ಗೃಹಿಣಿಯಾಗಿದ್ದು, ತಂದೆಯು ಬ್ಯಾಂಕ್‌ನಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿದ್ದರು. ಅವರ ಕುಟುಂಬವು ಡೊಂಬಿವಲಿಯ ಚಾಲ್‌ನಲ್ಲಿ ವಾಸಿಸುತ್ತಿತ್ತು.

ಕಲ್ಯಾಣ್‌ ಡೊಂಬಿವಲಿ ಮುನ್ಸಿಪಲ್‌ ಕಾರ್ಪೊರೇಷನ್ ನಿರ್ವಹಿಸುತ್ತಿರುವ ಕಡಿಮೆ ಆದಾಯದ ಕುಟುಂಬಗಳಿಗಾಗಿ ಇರುವ ಹಿಂದಿ ಮಾಧ್ಯಮ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದರು. 10 ನೇ ತರಗತಿವರೆಗಿನ ತಮ್ಮ ಕಲಿಕೆಯು ಸ್ವಲ್ಪ ಮಟ್ಟಿಗೆ ಉತ್ತಮವಾಗಿತ್ತು ಎಂದು ಸುಶೀಲ್‌ ಸಿಂಗ್‌ ಹೇಳಿಕೊಂಡಿದ್ದಾರೆ.

ಆದರೆ ಹೈಸ್ಕೂಲ್‌ನಲ್ಲಿ ಇರಬೇಕಾದರೆ ಸುಶೀಲ್‌ ಸಿಂಗ್‌ ಕಲಿಕೆಯಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದು, ಅದು ನಾನಾ ರೀತಿಯ ತಿರುವಿಗೆ ಕಾರಣವಾಯಿತು. ಬೆಟರ್‌ ಇಂಡಿಯಾ ಪ್ರಕಾರ, ಸುಶೀಲ್‌ ಅವರು ಪಿಯುಸಿ ಬೋರ್ಡ್‌ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದು, ನಂತರದ ವರ್ಷದಲ್ಲಿ ತೇರ್ಗಡೆ ಹೊಂದಿದ್ದರು.

11 ಸಾವಿರ ರೂಪಾಯಿಗೆ ದುಡಿಯುತ್ತಿದ್ದ ಸುಶೀಲ್

ಮುಂದೆ ಸುಶೀಲ್‌ ಸಿಂಗ್‌ ಅವರು ಅಲಹಾಬಾದ್‌ ವಿವಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿಯನ್ನು ಮಾಡಲು ಪ್ರವೇಶ ಪಡೆದುಕೊಂಡರು. ಆದರೆ ಎರಡನೇ ವರ್ಷದಲ್ಲಿ ಅಂದರೆ 2003 ರಲ್ಲಿ‌ ಗಣಿತದಲ್ಲಿ ಫೇಲ್‌ ಆದ ಕಾರಣ ಶಿಕ್ಷಣವನ್ನು ಅರ್ಧಕ್ಕೆ ಕೈಬಿಟ್ಟರು. ಮುಂದೆ 2015 ರಲ್ಲಿ ಪಾಲಿಟೆಕ್ನಿಕ್‌ ಕೋರ್ಸ್‌ ಅನ್ನು ಮಾಡಿ ಟೆಲಿ ಕಾಲರ್‌ ಹಾಗೂ ಸೇಲ್ಸ್‌ ಎಕ್ಸಿಕ್ಯೂಟೀವ್‌ ಆಗಿ ತಿಂಗಳಿಗೆ 11,000 ರೂಪಾಯಿಗೆ ದುಡಿಯುತ್ತಿದ್ದರು.

ಕೆಲವು ವರ್ಷಗಳ ನಂತರ ಸುಶೀಲ್‌ ಸಿಂಗ್‌ ಅವರು ಸರಿತಾ ರಾವತ್‌ ಸಿಂಗ್‌ ಅವರನ್ನು ಮದುವೆಯಾದರು. ಬಳಿಕ ಎಸ್‌ಎಸ್‌ಆರ್‌ ಟೆಕ್‌ವಿಷನ್‌ ಎಂಬ ಬಿಬಿಒ ಸರ್ವೀಸ್‌ ಕಂಪನಿಯನ್ನು ನೋಯ್ಡಾದಲ್ಲಿ ಪ್ರಾರಂಭಿಸಿದರು. ಯುಎಸ್‌ ಆಧಾರಿತ ವ್ಯವಹಾರವನ್ನು ಮಾಡಿದ ನಾಲ್ಕು ತಿಂಗಳ ಬಳಿಕ ನೋಯ್ಡಾದಲ್ಲಿ ಕೋ ವರ್ಕಿಂಗ್‌ ಸ್ಪೇಸ್‌ ಅನ್ನು ಪಡೆದುಕೊಂಡರು.

ಎರಡೂವರೆ ವರ್ಷಗಳ ನಂತರ ಉದ್ಯಮವು ಯಶಸ್ಸನ್ನು ಸಾಧಿಸಲು ಶುರು ಮಾಡಿದ್ದು, ನೋಯ್ಡಾದಲ್ಲಿ ಸ್ವಂತ ಕಟ್ಟಡವನ್ನು ಖರೀದಿಸಿದರು. ನಂತರದಲ್ಲಿ Deebaco ಎಂಬ ಜಾಗತಿಕ B2C ಉಡುಪು ಆನ್‌ಲೈನ್‌ ​​ಸ್ಟೋರ್ ಪ್ರಾರಂಭಿಸಿದರು. 2019 ರಲ್ಲಿ ಸುಶೀಲ್ ಸಿಂಗ್ ಸ್ಥಾಪಿಸಿದ ಅವರು ಮೂರನೇ ವ್ಯಾಪಾರವಾದ Saiva System Inc ಅನ್ನು ಪ್ರಾರಂಭಿಸಿದ್ದು, ಅದು ಬಹುರಾಷ್ಟ್ರೀಯ ಐಟಿ ಕನ್ಸಲ್ಟೆಂಗ್‌ ಕಂಪನಿಯಾಗಿದೆ.

ಅದು ಈಗ ಅಮೆರಿಕ ಹಾಗೂ ಭಾರತದಲ್ಲಿ ಎಂಪ್ಲಾಯಿಮೆಂಟ್‌ ಏಜೆನ್ಸಿಯಾಗಿದೆ. ಆದರೆ ಸದ್ಯ ಸುಶೀಲ್‌ ಅವರ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ ಅದು ಈಗ ಹಲವು ಕೋಟಿಗಳಲ್ಲಿ ಇದೆ ಎಂಬುದಾಗಿ ಹಲವು ವರದಿಗಳು ಹೇಳುತ್ತಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+