ರಿಟೇಲ್ ಚೈನ್ ಸುಭಿಕ್ಷಾ ಸಂಸ್ಥಾಪಕ ಮತ್ತು ಐಐಟಿ ಹಳೆಯ ವಿದ್ಯಾರ್ಥಿ ಆರ್ ಸುಬ್ರಮಣಿಯನ್ ಹೂಡಿಕೆದಾರರನ್ನು ವಂಚಿಸಿದ ಆರೋಪದ ಮೇಲೆ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ನವೆಂಬರ್ 20, 2023 ರ ನ್ಯಾಯಾಲಯದ ತೀರ್ಪಿನ ಪ್ರಕಾರ, ನೂರಾರು ಹೂಡಿಕೆದಾರರನ್ನು ವಂಚಿಸುವ ಅತ್ಯಾಧುನಿಕ ವಂಚನೆಯನ್ನು ರೂಪಿಸಿದ್ದಕ್ಕಾಗಿ ಸುಬ್ರಮಣಿಯನ್, ತಮಿಳುನಾಡು ಠೇವಣಿದಾರರ ಹಿತಾಸಕ್ತಿಗಳ (TNPID) ಕಾಯಿದೆಯಡಿಯಲ್ಲಿ ಚೆನ್ನೈನ ವಿಶೇಷ ನ್ಯಾಯಾಲಯವು ಸುಬ್ರಮಣಿಯನ್ ಮತ್ತು ಅವರ ಸಹಚರರನ್ನು ತಪ್ಪಿತಸ್ಥರೆಂದು ಘೋಷಿಸಿದೆ.

ತೀರ್ಪಿನ ಪ್ರಕಾರ, ಸುಬ್ರಮಣಿಯನ್ ಮತ್ತು ಇತರರು ಪ್ರಚಾರ ಮಾಡಿದ ನಾಲ್ಕು ಯೋಜನೆಗಳ ಮೂಲಕ ಠೇವಣಿ ಸಂಗ್ರಹಿಸಿ ಹಣ ಹಿಂತಿರುಗಿಸದೇ ವಂಚನೆ ಎಸಗಿದ್ದಾರೆ. ಐಐಟಿಯ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿ ಮತ್ತು ಐಐಎಂನ ಪದವೀಧರ, ಐಐಟಿ ಮದ್ರಾಸ್‌ನಿಂದ ಚಿನ್ನದ ಪದಕ ವಿಜೇತ ಎಂಜಿನಿಯರ್ ಆಗಿರುವ ಸುಬ್ರಮಣಿಯನ್ ಅವರು 1991 ರಲ್ಲಿ ವಿಶ್ವಪ್ರಿಯ ಇಂಡಿಯಾ ಲಿಮಿಟೆಡ್ ಅನ್ನು ಸ್ಥಾಪಿಸಿದರು.
ಈ ಹಣಕಾಸು ಸೇವಾ ಕಂಪನಿ ಪ್ರೈಮ್ ಇನ್ವೆಸ್ಟ್, ಅಸೆಟ್ ಬ್ಯಾಕ್ಡ್ ಸೆಕ್ಯುರಿಟಿ ಬಾಂಡ್, ಲಿಕ್ವಿಡ್ ಪ್ಲಸ್ ಮತ್ತು ಸೇಫ್ಟಿ ಪ್ಲಸ್-ಯೋಜನೆಗಳ ಮೂಲಕ ಲಾಭದಾಯಕ ಆದಾಯವನ್ನು ಭರವಸೆ ನೀಡಿ ಹೂಡಿಕೆದಾರರಿಗೆ ಆಮಿಷ ಒಡ್ಡಿದ್ದರು.
ಯೋಜನೆ ಮುಕ್ತಾಯದ ಬಳಿಕ ಮತ್ತೆ ಠೇವಣಿದಾರರನ್ನು ವಂಚಿಸಿ ಹಣ ವಾಪಾಸ್ ನೀಡದೆ, ಹೆಚ್ಚಿನ ಅಲ್ಪಾವಧಿಯ ಆದಾಯವನ್ನು ಭರವಸೆ ನೀಡುವ ಹೊಸ ಯೋಜನೆಗಳಲ್ಲಿ ಮರುಹೂಡಿಕೆ ಮಾಡಲು ಅವರಿಗೆ ಮನವೊಲಿಸಿದರು. ಆದರೆ ಆರೋಪಿಗಳು ಮೆಚ್ಯೂರ್ಡ್ ಮೊತ್ತವನ್ನು ಹಿಂದಿರುಗಿಸಲು ವಿಫಲವಾಗಿ ಠೇವಣಿದಾರರಿಗೆ ಮೋಸ ಮಾಡಿದ್ದಾರೆ.
ವಿಶ್ವಪ್ರಿಯ, ಸುಬ್ರಮಣಿಯನ್ ಅವರ ಮೊದಲ ಉದ್ಯಮವಾಗಿದ್ದು, ಮೇ 1991 ರಲ್ಲಿ ಇದನ್ನು ಹಣಕಾಸು ಸೇವೆಗಳ ಕಂಪನಿಯಾಗಿ ಸ್ಥಾಪಿಸಲಾಯಿತು. 1997 ರಲ್ಲಿ ಅವರು ಸುಭಿಕ್ಷಾವನ್ನು ಪ್ರಾರಂಭಿಸಿದರು. ಅನೇಕ ಹೂಡಿಕೆದಾರರು ವಿಶ್ವಪ್ರಿಯ ಸಂಸ್ಥೆಯ ಯೋಜನೆ ಆಕರ್ಷಣೆಗೊಂಡು ಹಣ ಹೂಡಿಕೆ ಮಾಡಿದರು.
ಆದರೆ ಹತ್ತು ವರ್ಷಗಳಿಂದ ಸ್ವಯಂಪ್ರೇರಣೆಯಿಂದ ಯಾವುದೇ ಹಣವನ್ನು ಠೇವಣಿ ಮಾಡಿಕೊಂಡಿರಲಿಲ್ಲ. ಆದರೆ ಹಣ ಹೂಡಿಕೆ ಮಾಡಿದ 587 ಮಂದಿ ಈವರೆಗೆ ತಮ್ಮ ಹಣವನ್ನು ಮರಳಿ ಪಡೆಯದೆ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಠೇವಣಿದಾರರಿಗೆ 137 ಕೋಟಿ ರೂ. ಅಧಿಕ ಮೊತ್ತವನ್ನು ಹಿಂದಿರುಗಿಸುವುದು ಬಾಕಿ ಇದೆ.
ಸುಬ್ರಮಣಿಯನ್ ಅವರಿಗೆ ನ್ಯಾಯಾಲಯ 8.92 ಕೋಟಿ ರೂಪಾಯಿ ದಂಡ ವಿಧಿಸಿದ್ದು, ಅಪರಾಧಿ ಸಂಸ್ಥೆಗೆ 191.98 ಕೋಟಿ ರೂಪಾಯಿ ದಂಡ ವಿಧಿಸಿದೆ. ಈ ಮೊತ್ತದಲ್ಲಿ 180 ಕೋಟಿ ರೂಪಾಯಿಗಳನ್ನು ಠೇವಣಿದಾರರ ಪರಿಹಾರಕ್ಕಾಗಿ ನಿಗದಿಪಡಿಸಲಾಗಿದೆ. ನ್ಯಾಯಾಲಯದ ತೀರ್ಪಿನ ಅನುಗುಣವಾಗಿ, ಪರಿಹಾರದ ಹಣವನ್ನುಸಕ್ಷಮ ಪ್ರಾಧಿಕಾರಕ್ಕೆ ವರ್ಗಾಯಿಸಬೇಕು. ಇದು ಸಂತ್ರಸ್ತ ಹೂಡಿಕೆದಾರರ ದಾಖಲೆಗಳನ್ನು ಪರಿಶೀಲಿಸಿದ ನಂತರ ಹಣವನ್ನು ವಿತರಿಸುತ್ತದೆ.


Click it and Unblock the Notifications