ದೇಶದಲ್ಲಿ ನವ ಉದ್ಯಮ ಆರಂಭಿಸಿ ಯಶಸ್ವಿಯಾದ ನೂರಾರು ಕಥೆಗಳಿವೆ, ಅವುಗಳಲ್ಲಿ ಕೆಲವು ಅಸಾಮಾನ್ಯ, ನಂಬಸಾಧ್ಯವಾದ ಕಥೆಗಳನ್ನು ಇವೆ. ಲಾಟರಿ ಹೊಡೆದಂತೆ ಯಶಸ್ವಿಯಾದ ಉದ್ಯಮಿಗಳಲ್ಲಿ ಅರ್ಜುನ್ ಅಹ್ಲುವಾಲಿಯಾ ಕೂಡಾ ಒಬ್ಬರು. ಸ್ಟಾರ್ಟಪ್ ಸಂಸ್ಥಾಪಕರಾಗಿರುವ ಇವರು ತಮ್ಮ 2000 ರೂಪಾಯಿ ಕೋಟಿ ಮೌಲ್ಯದ ವ್ಯವಹಾರದ ಐಡಿಯಾ ಹುಟ್ಟಿಕೊಂಡಿದ್ದು, ವಿಚಿತ್ರ ಸನ್ನಿವೇಶದಲ್ಲಿ!
ಅರ್ಜುನ್ ಅವರ ಮನೆಕೆಲಸದಾಕೆ ವಿಶ್ವದ ಅತಿದೊಡ್ಡ ಕೊಳೆಗೇರಿಗಳಲ್ಲಿ ಒಂದಾದ ಮುಂಬೈನ ಧಾರಾವಿ ಪ್ರದೇಶದವಳಾಗಿದ್ದಳು. ತನ್ನ ಮನೆಕೆಲಸದಾಕೆಗೆ ಮೊಬೈಲ್ ಫೋನ್ ಖರೀದಿಸಲು ಖಾಸಗಿ ಹಣಕಾಸು ಸೇವಾ ಕಂಪನಿಯಿಂದ ಸಾಲ ತೆಗೆದುಕೊಳ್ಳುತ್ತಿದ್ದಾಳೆ ಎಂದು ತಿಳಿದಾಗ, ಅರ್ಜುನ್ ಅವರ ಮೆದುಳಿನಲ್ಲಿ ಸ್ಟಾರ್ಟಪ್ ಕಲ್ಪನೆ ಹುಟ್ಟಿತಂತೆ.

ನ್ಯೂಯಾರ್ಕ್‌ನ ದೊಡ್ಡ ಪ್ರೈವೆಟ್ ಇಕ್ವಿಟಿ ಕಂಪನಿಯಲ್ಲಿ ಉತ್ತಮ ಸಂಬಳದ ಹುದ್ದೆ ತ್ಯಜಿಸಲು ನಿರ್ಧರಿಸಿದ್ದ ಅರ್ಜುನ್ ಅಹ್ಲುವಾಲಿಯಾ ಅಮೇರಿಕಾದಲ್ಲಿ ನೆಲೆಸಿ ಐಷಾರಾಮಿ ಜೀವನವನ್ನು ಬಿಟ್ಟು. ಆರು ವರ್ಷಗಳ ಹಿಂದೆ ಸ್ವದೇಶಕ್ಕೆ ಮರಳಿದರು. ಆರು ತಿಂಗಳ ಕಾಲ ಮಹಾರಾಷ್ಟ್ರದ ಹಳ್ಳಿಯಲ್ಲಿ ವಾಸವಾಗಿ ಅಲ್ಲಿನ ರೈತರ ಸಮುದಾಯದ ಕುರಿತು ಅಧ್ಯಯನ ಮಾಡಿದರು.
ಅಲ್ಲಿಂದ ಖಾಲಿ ಕೈಯಲ್ಲಿ ಮರಳದೆ, ಉದಯೋನ್ಮುಖ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮದೇ ವ್ಯಾಪಾರವನ್ನು ಸ್ಥಾಪಿಸಲು ಯತ್ನಿಸಿದರು. ಇದಕ್ಕಾಗಿ ಅಮೇರಿಕನ್ ಪ್ರಜೆಯಾಗಿದ್ದ ಕಾಲೇಜು ದಿನಗಳ ತನ್ನ ಸ್ನೇಹಿತನ ಮನವೊಲಿಸಿದರು. ಆಗ ಅರ್ಜುನ್ ಅಹ್ಲುವಾಲಿಯಾ ಅವರಿಗೆ 27 ವರ್ಷವಾಗಿತ್ತು.
ಅರ್ಜುನ್ ಅವರು ಟೆಕ್ಸಾಸ್ ಎ & ಎಂ ವಿಶ್ವವಿದ್ಯಾನಿಲಯದಲ್ಲಿ ಹಣಕಾಸು ವಿಷಯದಲ್ಲಿ ಪದವಿ ಪಡೆದಿದ್ದರು. ಭಾರತಕ್ಕೆ ವಾಪಾಸ್ ಆಗಲು ನಿರ್ಧರಿಸುವ ಮೊದಲು ಅವರು ನ್ಯೂಯಾರ್ಕ್‌ನಲ್ಲಿ ಅಬ್ರಾಜ್ ಗ್ರೂಪ್‌ನಲ್ಲಿ ಕೆಲಸ ಮಾಡಿದ್ದರು. ಲೇವಾದೇವಿದಾರರ , ಮೋಸದ ಸಾಲದಾತರ ಬಲೆಗೆ ಬೀಳದೆ ಭಾರತದಲ್ಲಿನ ರೈತರು ಒಂದು ಸಾಲ, ಹಣದ ಸಹಾಯ ಪಡೆಯಲು ಒಂದು ವ್ಯವಸ್ಥಿತ ಯೋಜನೆ ರಚಿಸುವುದು ಅವರ ವ್ಯವಹಾರದ ಕಲ್ಪನೆಯನ್ನು ಒಳಗೊಂಡಿತ್ತು.
ಇದಕ್ಕಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ 8 ತಿಂಗಳ ಯಶಸ್ವಿ ಪ್ರಾಯೋಗಿಕ ಆರಂಭದ ನಂತರ ಗ್ರಾಮೀಣ ಫಿನ್‌ಟೆಕ್ ಸಂಸ್ಥೆಯಾದ ಜೈ ಕಿಸಾನ್ ಗ್ರಾಮೀಣ ಕೇಂದ್ರಿತ ನಿಯೋ ಬ್ಯಾಂಕ್ ತೆರೆದರು. ಅರ್ಜುನ್ ಅವರ ಕಂಪನಿಯು ಎ ಸರಣಿಯಲ್ಲಿ 30 ಮಿಲಿಯನ್ ಡಾಲರ್ ಮತ್ತು ಸರಣಿ ಬಿ ಸುತ್ತಿನಲ್ಲಿ 50 ಮಿಲಿಯನ್ ಡಾಲರ್ (398 ಕೋಟಿ ರೂಪಾಯಿಗೂ ಹೆಚ್ಚು) ನಿಧಿಯನ್ನು ಪಡೆದುಕೊಂಡಿದೆ.
ಸಂಸ್ಥೆಯ ಮೌಲ್ಯವನ್ನು $200-$240 ಮಿಲಿಯನ್ ಅಂದರೆ (2023 ರಲ್ಲಿ ಸುಮಾರು 2000 ಕೋಟಿ ರೂಪಾಯಿ) ನಡುವೆ ನಿಗದಿಪಡಿಸಲಾಗಿದೆ. ಈ ಸಂಸ್ಥೆಯ ಹೂಡಿಕೆದಾರರಲ್ಲಿ ಯಾರಾ ಗ್ರೋತ್ ವೆಂಚರ್ಸ್, ಜಿಎಂಒ ವೆಂಚರ್ ಪಾರ್ಟನರ್ಸ್ ಮತ್ತು ಡಿಜಿ ಡೈವಾ ವೆಂಚರ್ಸ್ ಸೇರಿದ್ದಾರೆ.


Click it and Unblock the Notifications