ಭಾರತೀಯ ಐಟಿ ಉದ್ಯಮದ ಅನುಭವಿ ಸಿಪಿ ಗುರ್ನಾನಿ ಅವರು ಪ್ರಮುಖವಾದ ಎಡ್‌ಟೆಕ್ ಅಪ್‌ಗ್ರಾಡ್‌ನ (UpGrad) ನ ನಿರ್ದೇಶಕರ ಮಂಡಳಿಗೆ ಸೇರಿದ್ದಾರೆ. ಈ ಹಿಂದೆ ಅವರು 1,21,000 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿರುವ ಟೆಕ್ ಮಹೀಂದ್ರಾದ ಮಾಜಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಸುಮಾರು 19 ವರ್ಷಗಳ ಕಾಲ ಟೆಕ್ ಮಹೀಂದ್ರಾದಲ್ಲಿ ಸಂತೃಪ್ತಿಯ ವೃತ್ತಿಜೀವನದ ನಂತರ, ಗುರ್ನಾನಿ ಇತ್ತೀಚೆಗೆ ಕಾರ್ಪೊರೇಟ್ ಜೀವನದಿಂದ ನಿವೃತ್ತರಾದರು ಜೊತೆಗೆ ಕಂಪನಿಯ ಕಾರ್ಯನಿರ್ವಾಹಕ- ಅಲ್ಲದ ಸ್ವತಂತ್ರ ನಿರ್ದೇಶಕ ಸ್ಥಾನಕ್ಕೂ ರಾಜೀನಾಮೆ ನೀಡಿದರು.

2012 ರಲ್ಲಿ ಟೆಕ್ ಮಹೀಂದ್ರದ ಸಿಇಒ ಆಗಿ ಸಿಪಿ ಗುರ್ನಾನಿ ಅವರನ್ನು ನೇಮಿಸಲಾಗಿತ್ತು. ಈ ವೇಳೆ ಟೆಕ್ ಮಹೀಂದ್ರಾ ಜೊತೆಗೆ ಮಹೀಂದ್ರಾ ಸತ್ಯಂ ಅನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಐಟಿ ದೈತ್ಯನಿಗೆ ಟೆಕ್ ಮಹೀಂದ್ರಕ್ಕೆ ವಿದಾಯ ಹೇಳಿದ ನಂತರ, ಗುರ್ನಾನಿ edtech ಯುನಿಕಾರ್ನ್ ಆಗಿ ಜಾಗತಿಕವಾಗಿ ವಿಸ್ತರಿಸಲು ಸಹಾಯ ಮಾಡಲೆಂದು ಹೊಸ ಪಾತ್ರವನ್ನು ವಹಿಸಿಕೊಂಡಿದ್ದಾರೆ.
ಗುರ್ನಾನಿ ಈಗ ಸ್ವತಂತ್ರ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅಪ್‌ಗ್ರೇಡ್‌ಗೆ ಸೇರಿದ್ದಾರೆ. ಅಂದ ಹಾಗೆ ಎಡ್‌ಟೆಕ್ UpGrad, ಉನ್ನತ ಶಿಕ್ಷಣ ಕೋರ್ಸ್‌ಗಳು ಮತ್ತು ಕೌಶಲ್ಯ ಕಾರ್ಯಕ್ರಮಗಳನ್ನು ನೀಡುತ್ತದೆ. ರೋನಿ ಸ್ಕ್ರೂವಾಲಾ, ಮಾಯಾಂಕ್ ಕುಮಾರ್ ಮತ್ತು ಫಲ್ಗುನ್ ಕೊಂಪಲ್ಲಿ ಮೂರು ಮಂದಿ ಈ ಅಪ್‌ಗ್ರೇಡ್ ಸ್ಥಾಪಿಸಿದ್ದರು.
ಕಳೆದ ವರ್ಷ ಮಾರ್ಚ್‌ನಲ್ಲಿ ಚೆಗ್‌ನ ಡ್ಯಾನ್ ರೋಸೆನ್ಸ್‌ವೀಗ್ ಅವರ ನೇಮಕಾತಿಯನ್ನು ಭಾರತದ ಹೆಚ್ಕ್ಯು ಕೌಶಲ್ಯದ ದೈತ್ಯ ಘೋಷಿಸಿದ ನಂತರ ಗುರ್ನಾನಿ ಈಗ ಎರಡನೇ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.
ಇನ್ನು ಸಿಪಿ ಗುರ್ನಾನಿ ಅವರ ಬಗ್ಗೆ ಹೇಳಬೇಕೆಂದರೆ ಅವರು , ಮಧ್ಯಪ್ರದೇಶದ ನೀಮುಚ್‌ನಲ್ಲಿ ಡಿಸೆಂಬರ್ 19, 1958 ರಂದು ಜನಿಸಿದ ಅವರು ತಮ್ಮ ಪ್ರಾರಂಭದ ಜೀವನವನ್ನು ಜೈಪುರ ಮತ್ತು ರಾಜಸ್ಥಾನದ ಕೆಲವು ಪ್ರದೇಶದಲ್ಲಿ ಕಳೆದಿದ್ದಾರೆ. ರೂರ್ಕೆಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.
ವರದಿಗಳ ಪ್ರಕಾರ, ಗುರ್ನಾನಿಯ ನಿವ್ವಳ ಮೌಲ್ಯ ಸುಮಾರು 5 ಮಿಲಿಯನ್ ಡಾಲರ್ ಆಗಿದೆ. ಟೆಕ್ ಮಹೀಂದ್ರಾಗೆ ಸೇರುವ ಮೊದಲು, ಗುರ್ನಾನಿ ಅವರು ಹೆಚ್‌ಸಿಎಲ್, ಹೆಲ್‌ಲೆಟ್ ಪಾಕರ್ಡ್ ಲಿಮಿಟೆಡ್, ಪೆರೋಟ್ ಸಿಸ್ಟಮ್ಸ್ (ಇಂಡಿಯಾ) ಲಿಮಿಟೆಡ್ ಮತ್ತು ಎಚ್‌ಸಿಎಲ್ ಕಾಪೋರೆಷನ್ ಲಿಮಿಟೆಡ್ ಮುಂತಾದ ಕಂಪನಿಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದರು.
ಎಕನಾಮಿಕ್ ಟೈಮ್ಸ್ ಪ್ರಕಾರ, ಗುರ್ನಾನಿ ಅವರ ಸಂಭಾವನೆಯಲ್ಲಿ ಶೇಕಡ 189 ಏರಿಕೆಯಾದ ನಂತರ ಅವರು 22ರ ಆರ್ಥಿಕ ವರ್ಷದಲ್ಲಿ 63.4 ಕೋಟಿ ರೂಪಾಯಿ ವೇತನ ಪಡೆದುಕೊಂಡಿದ್ದಾರೆ. ಇನ್ನು ಹಣಕಾಸು ವರ್ಷ 2023 ರಲ್ಲಿ ಶೇಕಡ 50 ರಷ್ಟು ವೇತನ ಕಡಿತ ತೆಗೆದುಕೊಂಡು 32 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ.


Click it and Unblock the Notifications