ವಿಶ್ವದ ಬಿಲಿಯನೇರ್‌ಗಳು ತಮ್ಮ ವ್ಯವಹಾರಗಳನ್ನು ವಿಸ್ತರಣೆ ಮಾಡುತ್ತಾ ಬರುತ್ತಿದ್ದಾರೆ. ಹಾಗೆಯೇ ಪ್ರತಿ ದಿನ ಸಾಕಷ್ಟು ಹಣವನ್ನು ಸಂಗ್ರಹಣೆ ಮಾಡುತ್ತಾ ಬರುತ್ತಿದ್ದಾರೆ. ಪ್ರತಿದಿನ ಶತಕೋಟಿ ಡಾಲರ್ ಗಳಿಸುತ್ತಿದ್ದಾರೆ. ಇಲ್ಲೊಬ್ಬರು ಕೆಲವೇ ದಿನಗಳಲ್ಲಿ ಎರಡು ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ.
ಹೌದು ನಾವು ಲಕ್ಷ ಲಕ್ಷ ರೂಪಾಯಿ ಸಂಗ್ರಹ ಮಾಡಲು ಒದ್ದಾಡುತ್ತಿರುವಾಗ, ಇಲ್ಲೊಬ್ಬರು ಕೆಲವೇ ದಿನಗಳಲ್ಲಿ ಎರಡು ಲಕ್ಷ ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ. ಆದರೆ ಇವರು ಮುಕೇಶ್ ಅಂಬಾನಿ, ಗೌತಮ್ ಅದಾನಿ, ಎಲಾನ್ ಮಸ್ಕ್ ಅಲ್ಲ. ಹಾಗಾದರೆ ಯಾರಿವರು ಎಂದು ತಿಳಿಯೋಣ ಮುಂದೆ ಓದಿ....

ಕೆಲವೇ ದಿನದಲ್ಲಿ 2 ಲಕ್ಷ ಕೋಟಿ ಆದಾಯ
ಹಲವಾರು ಬಿಲಿಯನೇರ್‌ಗಳು ಪ್ರತಿ ದಿನ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಆ ಪೈಕಿ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಕೂಡಾ ಒಬ್ಬರಾಗಿದ್ದಾರೆ. ಮಾರ್ಕ್ ಜುಕರ್‌ಬರ್ಗ್ ಕೆಲವೇ ದಿನಗಳಲ್ಲಿ 2 ಲಕ್ಷ ಕೋಟಿ ರೂಪಾಯಿ ಅಥವಾ 28 ಶತಕೋಟಿ ಯುಎಸ್ ಡಾಲರ್ ಅನ್ನು ಸಂಗ್ರಹ ಮಾಡಿದ್ದಾರೆ.
39 ವರ್ಷದ ಅವರು ಈಗ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರಿಗಿಂತ ಶ್ರೀಮಂತರಾಗಿದ್ದಾರೆ. ಮೆಟಾ ನಾಲ್ಕನೇ ತ್ರೈಮಾಸಿಕ ಗಳಿಕೆಯನ್ನು ಬಿಡುಗಡೆ ಮಾಡಿದ ನಂತರ ಜುಕರ್‌ಬರ್ಗ್ ಅವರ ಸಂಪತ್ತಿನಲ್ಲಿ ಏರಿಕೆ ಕಂಡು ಬಂದಿದೆ. ಇದರ ನಂತರ, ಕಂಪನಿಯು ಸ್ಟಾಕ್‌ನಲ್ಲಿ ಶೇಕಡ 22 ರಷ್ಟು ಏರಿಕೆ ಕಂಡಿದೆ.
ಜುಕರ್‌ಬರ್ಗ್ ನಿವ್ವಳ ಆದಾಯ ಎಷ್ಟಿದೆ?
ಫೋರ್ಬ್ಸ್ ಪ್ರಕಾರ, ಜುಕರ್‌ಬರ್ಗ್ ರಿಯಲ್ ಟೈಮ್ ನಿವ್ವಳ ಮೌಲ್ಯ 161.8 ಶತಕೋಟಿ ಯುಎಸ್ ಡಾಲರ್ ಅಥವಾ 1343380 ಕೋಟಿ ರೂಪಾಯಿ ಆಗಿದೆ. ವಿಶ್ವದ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅವರು 4 ನೇ ಸ್ಥಾನದಲ್ಲಿದ್ದಾರೆ. ಇವರಿಗೆ ಹೋಲಿಸಿದರೆ ಬಿಲ್ ಗೇಟ್ಸ್ 123.1 ಶತಕೋಟಿ ಯುಎಸ್ ಡಾಲರ್‌ನೊಂದಿಗೆ 7 ನೇ ಸ್ಥಾನದಲ್ಲಿದ್ದಾರೆ.
ಮಾರ್ಚ್‌ನಲ್ಲಿ ಕಂಪನಿಯು ತನ್ನ ಮೊದಲ ಲಾಭಾಂಶವನ್ನು ಪಾವತಿಸಿದಾಗ ಜುಕರ್‌ಬರ್ಗ್ ಸರಿಸುಮಾರು 174 ಮಿಲಿಯನ್ ಡಾಲರ್ ಹಣವನ್ನು ಸ್ವೀಕರಿಸಿದ್ದಾರೆ. ಅವರು ಈಗ ಕಂಪನಿಯ ಶೇಕಡ 13 ರಷ್ಟು ಷೇರುಗಳನ್ನು ಹೊಂದಿದ್ದಾರೆ. ಕಂಪನಿಯು ಪ್ರಸ್ತುತ ಫೆಬ್ರವರಿ 6 ರ ಹೊತ್ತಿಗೆ 1.18 ಟ್ರಿಲಿಯನ್ ಯುಎಸ್ ಡಾಲರ್ ಮೌಲ್ಯದ್ದಾಗಿದೆ. ಮೆಟಾ ತನ್ನ ಶೇಕಡ 50 ರಷ್ಟು ತ್ರೈಮಾಸಿಕ ಲಾಭಾಂಶವನ್ನು ನಿರ್ವಹಿಸಿದರೆ ಜುಕರ್‌ಬರ್ಗ್ ವಾರ್ಷಿಕವಾಗಿ 690 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಗಳಿಸುತ್ತಾರೆ.
ಜನವರಿ 2019 ರಲ್ಲಿ, ಜುಕರ್‌ಬರ್ಗ್ ಕ್ಯಾಲಿಫೋರ್ನಿಯಾದ ಲೇಕ್ ತಾಹೋದಲ್ಲಿ 59 ಮಿಲಿಯನ್ ಡಾಲರ್ ಮೌಲ್ಯದ ವಾಟರ್‌ಫ್ರಂಟ್ ಆಸ್ತಿಯನ್ನು ಖರೀದಿಸಿದರು. ಅವರು 2004 ರಲ್ಲಿ ಹಾರ್ವರ್ಡ್‌ನಲ್ಲಿ ತಮ್ಮ 19 ನೇ ವಯಸ್ಸಿನಲ್ಲಿ ಫೇಸ್‌ಬುಕ್ ಅನ್ನು ಪ್ರಾರಂಭಿಸಿದರು. ವಿದ್ಯಾರ್ಥಿಗಳಿಗೆ ಸಹಪಾಠಿಗಳ ಫೋಟೋಗಳೊಂದಿಗೆ ಹೆಸರುಗಳನ್ನು ಹೊಂದಿಸಲು ವೇದಿಕೆಯನ್ನು ಆರಂಭದಲ್ಲಿ ಪ್ರಾರಂಭಿಸಲಾಯಿತು.


Click it and Unblock the Notifications