ಏಷ್ಯಾ ಹಾಗೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಇತ್ತೀಚೆಗೆ ತಮ್ಮ ಅಲ್ಟ್ರಾ ಐಷಾರಾಮಿ ಮೆಗಾ-ಮಾಲ್ ಜಿಯೋ ವರ್ಲ್ಡ್ ಅನ್ನು ಪ್ರಾರಂಭಿಸುವ ಮೂಲಕ ಈ ಸಮೂಹವು ಈಗ ಚಿಲ್ಲರೆ ವಲಯದಲ್ಲಿ ದೊಡ್ಡ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದೆ.
7,50,000 ಚದರ ಅಡಿ ಜಾಗವು ಲೂಯಿಸ್ ವಿಟಾನ್, ಗುಸ್ಸಿ, ಅರ್ಮಾನಿ ಹಾಗೂ ಬಾಲೆನ್ಸಿಯಾಗದಂಥಹ ವಿಶ್ವದ ಕೆಲವು ಐಷಾರಾಮಿ ಬ್ರಾಂಡ್‌ಗಳಿಗೆ ಅವಕಾಶ ನೀಡಿದೆ. ಈ ಮಾಲ್ ಮುಂಬೈ ನಗರದ ಅತ್ಯಂತ ಪ್ರತಿಷ್ಠಿತ ಪ್ರದೇಶವಾದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಈ ಮಾಲ್‌ನ ರೆಡ್ ಕಾರ್ಪೆಟ್ ಈವೆಂಟ್ ನಡೆದಿದ್ದು, ಎ-ದರ್ಜೆ ಸೆಲಬ್ರಿಟಿಗಳು ಹಾಗೂ ಬಾಲಿವುಡ್ ಸ್ಟಾರ್‌ಗಳು ಭಾಗವಹಿಸಿದ್ದರು.

ಅಂಬಾನಿ ಅವರ ಜಿಯೋ ವರ್ಲ್ಡ್ ಪ್ಲಾಜಾದಿಂದ 30 ನಿಮಿಷಗಳ ದೂರದಲ್ಲಿರುವ ಲೋವರ್ ಪರೇಲ್‌ನಲ್ಲಿ ಭಾರತದ ಮೊದಲ ಐಷಾರಾಮಿ ಚಿಲ್ಲರೆ ವ್ಯಾಪಾರ ಸ್ಥಳವಾದ ಫೀನಿಕ್ಸ್ ಪ್ಲಾಡಿಯಂ ಇದೆ. ಈ ಐಷಾರಾಮಿ ಮಾಲ್ ಕೂಡ ಫೀನಿಕ್ಸ್ ಮಿಲ್ಸ್‌ನ ಪ್ರಮುಖ ಸ್ಥಾಪನೆಗಳಲ್ಲಿ ಒಂದಾಗಿದೆ. ಇದು 36000 ಕೋಟಿ ರೂಪಾಯಿಗಿಂತ ಹೆಚ್ಚಿನ ಮಾರುಕಟ್ಟೆ ಕ್ಯಾಪ್ ಹೊಂದಿರುವ ಲಿಸ್ಟೆಡ್ ರಿಯಲ್ ಎಸ್ಟೇಟ್ ದೈತ್ಯ ಕಂಪನಿಯಾಗಿದೆ.
ಮಾಲ್, ವಸತಿ ರಿಯಲ್ ಎಸ್ಟೇಟ್ ಹಾಗೂ ಹೋಟೆಲ್ ಸೆಗ್ಮೆಂಟ್‌ಗಳಲ್ಲಿ ತೊಡಗಿಸಿಕೊಂಡಿರುವ ಫೀನಿಕ್ಸ್ ಮಿಲ್ಸ್ ಒಂದು ಶತಮಾನದ ಹಳೇಯ ನಷ್ಟದಲ್ಲಿದ್ದ ಜವಳಿ ಕಂಪನಿಯಾಗಿತ್ತು. 90ರ ದಶಕದಲ್ಲಿ ಇದು ಗಿರಣಿಯಿಂದ ಮಾಲ್ ರೂಪಾಂತರವನ್ನು ಪಡೆದುಕೊಂಡಿತ್ತು. ಈ ಕಂಪನಿಯ ಯಶಸ್ವಿ ತಿರುವಿನ ಕಥೆಗೆ ರಿಯಲ್ ಎಸ್ಟೇಟ್ ಮಾಂತ್ರಿಕ ಅತುಲ್ ರುಯಿಯಾ ಪ್ರಬಲ ಶಕ್ತಿಯಾಗಿದ್ದಾರೆ.
ಮುಂಬೈ ಮೂಲದ ಈ ಉದ್ಯಮಿ 2023ರಲ್ಲಿ ಭಾರತದ ಬಿಲಿಯನೇರ್‌ಗಳ ಪಟ್ಟಿಗೂ ಸೇರ್ಪಡೆಯಾಗಿದ್ದಾರೆ. ರುಯಿಯಾ ಅವರು ಪ್ರಸ್ತುತ ಸುಮಾರು 15000 ಕೋಟಿ ರೂಪಾಯಿ (1.8 ಬಿಲಿಯನ್ ಡಾಲರ್) ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಹಾಗೂ ಕಾರ್ಮಿಕರ ಸಮಸ್ಯೆಗಳ ನಡುವೆ ತತ್ತರಿಸಿದ್ದ 33 ಲಕ್ಷ ಚದರ ಅಡಿ ಗಿರಣಿ ಜಾಗದ ಮೌಲ್ಯವನ್ನು ಅವರು ಮನಗಂಡಿದ್ದರು.
1994ರಲ್ಲಿ ಸಂಕಷ್ಟದಲ್ಲಿದ್ದ ಕುಟುಂಬದ ವ್ಯವಹಾರವನ್ನು ಸ್ವಾಧೀನಪಡಿಸಿಕೊಂಡ ರೂಯಾ ಅವರು ಫೀನಿಕ್ಸ್ ಮಿಲ್ಸ್ ಪ್ರದೇಶವನ್ನು ಮುಂಬೈನ ಬಹುಬೇಡಿಕೆಯ ಚಿಲ್ಲರೆ ವ್ಯಾಪಾರದ ಸ್ಥಳವಾಗಿ ಪರಿವರ್ತಿಸಿದರು. 2007ರಲ್ಲಿ ಅವರು ಕಾಂಪೌಂಡ್‌ನಲ್ಲಿ ಪಂಚತಾರಾ ಐಷಾರಾಮಿ ಹೋಟೆಲ್ ಅನ್ನು ಪ್ರಾರಂಭಿಸಿದರು.
ಫೀನಿಕ್ಸ್ ಮಿಲ್ಸ್ ಇಂದು ದೇಶದ ಏಳು ನಗರಗಳಾದ ಮುಂಬೈ, ಅಹಮದಾಬಾದ್, ಇಂದೋರ್, ಲಕ್ನೋ, ಚೆನ್ನೈ,ಪುಣೆ ಹಾಗೂ ಬೆಂಗಳೂರಿನಲ್ಲಿ ಒಟ್ಟು 8 ಮಾಲ್‌ಗಳನ್ನು ಹೊಂದಿದೆ. ಜತೆಗೆ, ಈ ಉದ್ಯಮದಲ್ಲಿಸೇಂಟ್ ರೆಗಿಸ್ ಮುಂಬೈ ಹಾಗೂ ಕೋರ್ಟ್ಯಾರ್ಡ್ ಮ್ಯಾರಿಯಟ್ ಆಗ್ರಾ ಹೋಟೆಲ್‌ಗಳು ಕೂಡ ಸೇರಿವೆ.
ಅತುಲ್ ರುಯಿಯಾ ಅವರು ಫೀನಿಕ್ಸ್ ಮಿಲಗ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತರಾಗಿದ್ದು, ಸಂಸ್ಥೆಯ ಅಧ್ಯಕ್ಷರಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅವರು ಯುಬೈಟೆಡ್ ಸ್ಟೇಟ್ಸ್‌ನ ಪೆನ್ಸಿಲ್ವೇನಿಯಾ ವಿವಿಯ ಮಾರ್ಟಿನ್ ಸ್ಕೂಲ್‌ನಲ್ಲಿ ಓದಿದ್ದಾರೆ. ಅವರ ವ್ಯವಹಾರ ಮಾಡೆಲ್ ವಿಶ್ವದರ್ಜೆ ರಿಯಲ್ ಎಸ್ಟೇಟ್ ಕಂಪನಿಯನ್ನು ಸ್ಥಾಪಿಸುವುದಾಗಿತ್ತು.
ಆ ಪೈಕಿ ಚಿಲ್ಲರೆ ಸ್ವತ್ತು ಹೊಂದುವುದು, ಅಭಿವೃದ್ಧಿಪಡಿಸುವುದು, ಅದರ ನಿರ್ವಹಣೆ, ವಾಣಿಜ್ಯ ಸ್ವತ್ತುಗಳ ಅಭಿವೃದ್ಧಿ, ಗುತ್ತಿಗೆ ನೀಡುವುದು ಹಾಗೂ ಆತಿಥ್ಯ ಸ್ವತ್ತುಗಳನ್ನು ಕೂಡ ಹೊಂದುವುದು ಹಾಗೂ ಅವುಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸುವುದು ಆಗಿದೆ.


Click it and Unblock the Notifications