ಟಿವಿಎಸ್ ಮೋಟಾರ್ ಕಂಪನಿಯನ್ನು ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ಅವರು 2022 ರ ಮೇ ಯಿಂದ ಮುನ್ನಡೆಸುತ್ತಿದ್ದಾರೆ. ಅಂದ ಹಾಗೆ ಟಿವಿಎಸ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ ಯಾಕೆಂದರೆ ಆಟೋಮೊಬೈಲ್ ಕ್ಷೇತ್ರದಲ್ಲಿ ಟಿವಿಎಸ್ ಪ್ರತಿಯೊಬ್ಬರಿಗೂ ಚಿರಪರಿಚಿತವಾಗಿದೆ
ಟಿವಿಎಸ್ ಆಟೋಮೊಬೈಲ್ ಕಂಪನಿಯು ದ್ವಿಚಕ್ರ ವಾಹನಗಳ ಭಾರತದ ಮೂರನೇ ಅತಿದೊಡ್ಡ ತಯಾರಕ ಸಂಸ್ಥೆಯಾಗಿದೆ. ಸುದರ್ಶನ್ ಅವರು 4 ನೇ ತಲೆಮಾರಿನ ಉದ್ಯಮಿಯಾಗಿದ್ದು ಅವರು ಟಿವಿಎಸ್ ಮೋಟಾರ್‌ನ ಗೌರವಾನ್ವಿತ ಅಧ್ಯಕ್ಷ ವೇಣು ಶ್ರೀನಿವಾಸನ್ ಅವರ ಪುತ್ರರಾಗಿದ್ದಾರೆ.

ಅವರ ಸಹೋದರಿ ಲಕ್ಷ್ಮಿ ವೇಣು ಟಿವಿಎಸ್ ಮೋಟಾರ್ಸ್ ಗ್ರೂಪ್‌ನ ಒಂದು ಭಾಗವಾದ ಸುಂದರಂ-ಕ್ಲೇಟನ್ ಲಿಮಿಟೆಡ್ (ಎಸ್‌ಸಿಎಲ್) ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಡಿಸೆಂಬರ್ ಮೂರನೇ ವಾರದಲ್ಲಿ ಈ ಕಂಪನಿಯ ಮಾರುಕಟ್ಟೆ ಮೌಲ್ಯ 92,357 ಕೋಟಿ ರೂಪಾಯಿ ಆಗಿದೆ. ಎನ್‌ಎಸ್‌ಇಯಲ್ಲಿ ಕಂಪನಿಯ ಷೇರಿನ ಬೆಲೆ 1,945 ರೂಪಾಯಿ ಆಗಿದೆ.
ಸುದರ್ಶನ್ ಅವರು ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಿಂದ ನಿರ್ವಹಣೆ ಮತ್ತು ತಂತ್ರಜ್ಞಾನದಲ್ಲಿ ಜೆರೋಮ್ ಫಿಶರ್ ಪ್ರೋಗ್ರಾಮ್‌ನಲ್ಲಿ ಗೌರವ ಪದವಿಯನ್ನು ಪಡೆದುಕೊಂಡಿದ್ದಾರೆ. ಬಿ.ಎಸ್. ಸ್ಕೂಲ್ ಆಫ್ ಎಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು ಬಿ.ಎಸ್. ವಾರ್ಟನ್ ಶಾಲೆಯಿಂದ ಅರ್ಥಶಾಸ್ತ್ರದಲ್ಲಿ ಎಂ.ಎಸ್ಸಿ ಮುಗಿಸಿದ್ದಾರೆ.
ಯುನೈಟೆಡ್ ಕಿಂಗ್‌ಡಂನ ವಾರ್ವಿಕ್ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗವಾದ ವಾರ್ವಿಕ್ ಮ್ಯಾನುಫ್ಯಾಕ್ಚರಿಂಗ್ ಗ್ರೂಪ್‌ನಿಂದ ಅಂತರರಾಷ್ಟ್ರೀಯ ತಂತ್ರಜ್ಞಾನ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಸುದರ್ಶನ್ ಅವರು ಭಾರತದ ಅತ್ಯಂತ ಹಳೆಯ ಫ್ಯಾಕ್ಟರಿ ರೇಸಿಂಗ್ ತಂಡದ ಎಂಜಿನ್‌ಗಳ ಘರ್ಜನೆಯ ನಡುವೆ ಬೆಳೆದ ಕಾರಣ ಆಟೋಮೋಟಿವ್ ಬಗ್ಗೆ ಅವರಿಗೆ ಸಹಜ ಆಸಕ್ತಿ ಬೆಳೆದುಬಂದಿತ್ತು.
ಸುದರ್ಶನ್ ವೇಣು ಅವರ ನಾಯಕತ್ವದಲ್ಲಿ ಟಿವಿಎಸ್ ಮೋಟಾರ್ ತನ್ನ ಮಾರ್ಕೆಟ್ ಷೇರಿನಲ್ಲಿ ಮಹತ್ವದ ತಿರುವು ಪಡೆದಿದೆ. ಅವರ ತಂದೆ ಡಿಸೆಂಬರ್ 21 ರ ಹೊತ್ತಿಗೆ 27,470 ಕೋಟಿ ರೂಪಾಯಿಗಳ ರಿಯಲ್ ಟೈಮ್ ನೆಟ್ ವರ್ತ್ ಹೊಂದಿದ್ದು, ಬಿಲಿಯನೇರ್ ಆಗಿದ್ದಾರೆ.
ಆಫ್ರಿಕಾ, ಆಸಿಯಾನ್ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಟಿವಿಎಸ್ ಮೋಟಾರ್ ಕಂಪನಿಯ ಅಂತಾರಾಷ್ಟ್ರೀಯ ವಿಸ್ತರಣೆಯಲ್ಲಿ ಸುದರ್ಶನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಟಿವಿಎಸ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್, ಹೋಲ್ಡಿಂಗ್ ಕಂಪನಿ ಮತ್ತು ಟಿವಿಎಸ್ ಕ್ರೆಡಿಟ್ ಸರ್ವಿಸಸ್ ಲಿಮಿಟೆಡ್ ಹಾಗೂ ಎನ್‌ಬಿಎಫ್‌ಸಿ ಆರ್ಮ್ ಅಧ್ಯಕ್ಷರಾಗಿದ್ದಾರೆ.


Click it and Unblock the Notifications