ಬರ್ಗರ್‌ಗಳು ಭಾರತದಲ್ಲಿ ಅದರಲ್ಲಿಯೂ ಯುವ ಸಮುದಾಯದಲ್ಲಿ ಒಂದು ನೆಚ್ಚಿನ ಫುಡ್ ಐಟಂ ಆಗಿ ಗುರುತಿಸಿಕೊಂಡಿದೆ. ಈ ಕಾರಣದಿಂದಾಗಿಯೇ ಅಂತಾರಾಷ್ಟ್ರೀಯ ಬ್ರಾಂಡ್ ಆಗಿರುವ ಮೆಕ್ ಡೊನಾಲ್ಡ್ ಹಾಗೂ ಬರ್ಗರ್ ಕಿಂಗ್ ಜತೆ ಸಹಭಾಗಿತ್ವವನ್ನು ಕೂಡ ಹೊಂದಿವೆ.
ಆದರೆ, ಈ ಪ್ರವೃತ್ತಿ ಈಗ ಬದಲಾಗಿದ್ದು, ಗ್ರಿಲ್ಡ್ ಬರ್ಗರ್ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಜತೆಗೆ, ಅಂತಾರಾಷ್ಟ್ರೀಯ ಬರ್ಗರ್ ಕಂಪನಿಗಳಿಗೂ ಪೈಪೋಟಿ ನೀಡುವತ್ತ ಬೆಳೆಯುತ್ತಿದೆ. ಕೇವಲ 20 ಸಾವಿರ ಹಣವನ್ನು ಕೈಯಲ್ಲಿ ಹಿಡಿದುಕೊಂಡು ಬಿರಾಜ ರೌಟ್ ಗ್ರಿಲ್ಡ್ ಅವರು ಬರ್ಗರ್ ತಯಾರಿಸುವತ್ತ ಉದ್ಯಮವನ್ನು ಸ್ಥಾಪಿಸಿದ್ದರು.

ಈ ರೀತಿ ಪ್ರಾರಂಭಿಸಿದ ಕಂಪನಿ ಈಗ 100 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದೆ. ರೌತ್ ಅವರು ಐಟಿ ಪರಿಣತರಾಗಿದ್ದು, ಬೆಂಗಳೂರಿಗೆ ಸ್ಥಳಾಂತರಗೊಂಡು ಕೆಲಸ ಮಾಡುತ್ತಿರಬೇಕಾದರೆ, 21ನೇ ವಯಸ್ಸಿನಲ್ಲಿಯೇ ಮೊದಲ ಬಾರಿಗೆ ಬರ್ಗರ್ ತಿಂದಿದ್ದರು.
ಬರ್ಗರ್‌ಗೆ ಪೈಪೋಟಿ ನೀಡುವ ಬ್ರ್ಯಾಂಡ್
ಆದರೆ ಅವರು ಬರ್ಗರ್ ಅನ್ನು ಒಂದು ತಿಂಡಿಯಾಗಿ ಪರಿಗಣಿಸಿರಲಿಲ್ಲ. ಅದು ಅವರಿಗೆ ಹಸಿವನ್ನು ನೀಗಿಸುವ ಊಟವಾಗಿತ್ತು. ಆದರೆ, ಬರ್ಗರ್‌ಗೆ ಪೈಪೋಟಿ ನೀಡುವ ಯಾವುದೇ ಸ್ವದೇಶಿ ಬ್ರಾಂಡ್ ಇಲ್ಲ ಎಂಬುದನ್ನು ಅವರು ಅರಿತುಕೊಂಡಿದ್ದರು. ಮೆಕ್‌ಡೊನಾಲ್ಡ್ ಮತ್ತು ಕೆಎಫ್‌ಸಿಯಂತ ವಿದೇಶಿ ಬ್ರಾಂಡ್‌ಗಳು ಮಾತ್ರ ಬರ್ಗರ್ ಆಹಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದವು.
ಈ ಹಿನ್ನೆಲೆಯಲ್ಲಿ ಅವರು ತಮ್ಮ ಸ್ವಂತ ಬಿಗ್ಗೀಸ್ ಬರ್ಗರ್ ರೆಸ್ಟೊರೆಂಟ್‌ಗಳನ್ನು ತೆರೆಯುವ ಕನಸನ್ನು ಕಂಡರು. ಅದಕ್ಕಾಗಿ ಇನ್ಫೋಸಿಸ್‌ನ ಕೆಲಸವನ್ನು ಕೂಡ ತೊರೆದಿದ್ದರು. ಬಿಗ್ಗೀಸ್ ಬರ್ಗರ್ ಪ್ರಾರಂಭಿಸುವುದರ ಹಿಂದಿನ ಉದ್ದೇಶ ಕೂಡ ಭಾರತದಲ್ಲಿ ಅಧಿಕೃತವಾಗಿ ಗ್ರಿಲ್ಡ್ ಬರ್ಗರ್ ಅನ್ನು ಪ್ರಾರಂಭಿಸುವುದು ಹಾಗೂ ಸ್ವದೇಶಿ ಕ್ಯೂಎಸ್‌ಆರ್ ಬ್ರಾಂಡ್ ಅನ್ನು ಜನಪ್ರಿಯಗೊಳಿಸುವುದು ಆಗಿತ್ತು.
ಟೆಕ್ಕಿಯಾಗಿದ್ದ ರೌತ್ ಯೂಟ್ಯೂಬ್ ಟ್ಯುಟೋರಿಯಲ್‌ಗಳ ಮೂಲಕ ಬರ್ಗರ್ ಮಾಡುವುದರ ಬಗ್ಗೆ ಜ್ಞಾನವನ್ನು ಸಂಪಾದಿಸುವುದಕ್ಕೆ ಪ್ರಾರಂಭಿಸಿದ್ದರು. ಕೇವಲ 20 ಸಾವಿರ ರೂ. ಹೂಡಿಕೆಯೊಂದಿಗೆ ಬೆಂಗಳೂರಿನಲ್ಲಿ ಸಣ್ಣ ಕಿಯೋಸ್ಕ್ ಅನ್ನು ತೆರೆದರು. ಅಲ್ಲಿ ಅವರು ಗ್ರಿಲ್ಡ್ ಬರ್ಗರ್‌ಗೆ ಗ್ರಾಹಕರನ್ನು ಸೆಳೆಯುವ ಮೂಲಕ ಅವರ ವಿಶ್ವಾಸವನ್ನು ಗಳಿಸಿದರು. ಇದು ನಿಧಾನಕ್ಕೆ ಗ್ರಾಹಕರಿಂದ ಗ್ರಾಹಕರಿಗೆ ತಲುಪುವ ಮೂಲಕ ಜನಪ್ರಿಯತೆಯನ್ನು ಪಡೆಯಲಾರಂಭಿಸಿತು.
ಆದರೆ ದೃಢ ವಿಶ್ವಾಸ ಹಾಗೂ ಸಂಕಲ್ಪದೊಂದಿಗೆ ಬಿಗ್ಗೀಸ್ ಬರ್ಗರ್ ಅನ್ನು ನಿಧಾನವಾಗಿ ನಗರದಿಂದ ನಗರಕ್ಕೆ ವಿಸ್ತರಿಸುವುದಕ್ಕೆ ಪ್ರಾರಂಭಿಸಿದರು. ಈಗ ಅದು ಭಾರತದ ಅತಿದೊಡ್ಡ ಹಾಗೂ ಜನಪ್ರಿಯ ಹೋಮ್‌ಗ್ರೋನ್ ಬರ್ಗರ್ ಬ್ರಾಂಡ್ ಆಗಿ ಬೆಳೆದಿದೆ. 2023ರ ಮಾಹಿತಿಯಂತೆ ಕಂಪನಿಯು 100 ಕೋಟಿ ರೂಪಾಯಿ ಆದಾಯವನ್ನು ಹೊಂದಿದೆ.
ಈ ಬಿಗೀಸ್ ಬರ್ಗರ್ ಅನ್ನು 2ನೇ ಹಂತದ ನಗರಗಳಿಗೆ ಕೊಂಡೊಯ್ಯುವುದು ಆ ಮೂಲಕ ಕಂಪನಿಯ ನೆಟ್‌ವರ್ಕ್ ಹೆಚ್ಚಿಸುವ ಮೂಲಕ ಆದಾಯವನ್ನು ಕೂಡ 200 ಕೋಟಿ ರೂಪಾಯಿಗೆ ಏರಿಸುವ ಗುರಿ ಹೊಂದಲಾಗಿದೆ. ರೌತ್ ಅವರ ಅಚಲ ವಿಶ್ವಾಸದಿಂದಾಗಿ ಬಿಗ್ಗೀಸ್ ಈಗ 14 ರಾಜ್ಯಗಳ 28 ನಗರಗಳಲ್ಲಿ ಒಟ್ಟು 130 ಸ್ಟೋರ್‌ಗಳನ್ನು ಹೊಂದಿವೆ. ಇಲ್ಲಿವರೆಗೆ ಇದು ಸುಮಾರು 50 ಲಕ್ಷ ಬರ್ಗರ್ ಅನ್ನು ಮಾರಾಟ ಮಾಡಿದೆ.
ಕಂಪನಿಯು ತನ್ನ ಮಳಿಗೆಗಳನ್ನು ದೇಶದೆಲ್ಲೆಡೆ ವಿಸ್ತರಿಸುವುದಕ್ಕೆ ಪ್ರಾಂಚೈಸ್ ಮಾದರಿಯನ್ನು ಅಳವಡಿಸಿಕೊಂಡಿದೆ. ಆ ಮೂಲಕ ಉತ್ಸಾಹ ಹೊಂದಿರುವ ಹಾಗೂ ಕಂಪನಿಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಪಾಲುದಾರರನ್ನು ಆಯ್ಕೆ ಮಾಡಿಕೊಂಡು ನಮ್ಮ ಪ್ರಾಂಚೈಸಿಗಳನ್ನು ನೀಡಲಾಗುತ್ತಿದೆ.
2024ರ ವೇಳೆಗೆ ನಮ್ಮ ಮಳಿಗೆಗಳ ಜಾಲವನ್ನು 350ಕ್ಕೆ ವಿಸ್ತರಿಸುವ ಉದ್ದೇಶವನ್ನು ಹೊಂದಿರುವುದಾಗಿ ರಾವುತ್ ಹೇಳುತ್ತಾರೆ. ಒಟ್ಟಾರೆ, ಬರ್ಗರ್ ಕ್ಷೇತ್ರದ ಬಗ್ಗೆ ಏನು ಗೊತ್ತಿಲ್ಲದೆ ಅದರ ಬಗ್ಗೆ ಕಲಿತುಕೊಂಡು ಭಾರತದ ಮುಂಚೂಣಿಯ ಬ್ರಾಂಡ್ ಆಗಿ ಬೆಳೆಸಿರುವ ಬಿಗ್ಗೀಸ್ ಬರ್ಗರ್‌ನ ಮಾಲೀಕ ರಾವುತ್ ಅವರು ನಿಜಕ್ಕೂ ಹಲವರಿಗೆ ಸ್ಫೂರ್ತಿ ನೀಡುವ ಮಾದರಿ ಉದ್ಯಮಿಯಾಗಿದ್ದಾರೆ.


Click it and Unblock the Notifications