ಫ್ಯೂಚರ್ ಗ್ರೂಪ್‌ನ ಸಂಸ್ಥಾಪಕ ಮತ್ತು ಸಿಇಒ, 'ಕಿಂಗ್ ಆಫ್ ಇಂಡಿಯನ್ ರಿಟೇಲ್' ಎಂದೂ ಖ್ಯಾತಿ ಪಡೆದ ಕಿಶೋರ್ ಬಿಯಾನಿ ಅವರು ಇತ್ತೀಚೆಗೆ ಯೂಟ್ಯೂಬರ್ ರಾಜ್ ಶಾಮಾನಿ ಅವರೊಂದಿಗಿನ ಸಂದರ್ಶನದಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ 3 ತಿಂಗಳಲ್ಲಿ 7000 ಕೋಟಿ ರೂಪಾಯಿ ಮೌಲ್ಯದ ಬಿಸಿನೆಸ್ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದೇ ವೇಳೆ ಫ್ಯೂಚರ್ ಗ್ರೂಪ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಜೆಫ್ ಬೆಜೋಸ್ ಅವರ ಅಮೆಜಾನ್ ನಡುವಿನ ಜಗಳದ ಬಗ್ಗೆ ಕಿಶೋರ್ ಬಿಯಾನಿ ಮಾಹಿತಿ ತೆರೆದಿಟ್ಟಿದ್ದಾರೆ.

"ಯಾವುದು ತಪ್ಪು ಮತ್ತು ಯಾವುದು ಸರಿ ಎಂಬುದರ ಕುರಿತು ಯಾರದರೂ ಮಾತನಾಡಬಹುದು. ಆದರೆ ನಾವು ಅದನ್ನೇ ಸಕಾರಾತ್ಮಕ ರೀತಿಯಲ್ಲಿ ನೋಡಿದರೆ, ಯಾವಾಗ ಆರಂಭವಾಗಿದ್ದೇವೋ ಅಂದಿನಿಂದಲೇ ನಾವು ಲೀಡರ್ ಶಿಪ್ ನ್ನು ಮೈನ್ಟೇನ್ ಮಾಡಿದ್ದೇವೆ," ಎಂದು ಕಿಶೋರ್ ಬಿಯಾನಿ ಹೇಳಿದ್ದಾರೆ.
"ತಂತ್ರಜ್ಞಾನ, ಕಸ್ಟಮರ್ ಪ್ರೊಪೊಸಿಶನ್ ಯನ್ನು ನೀಡುವ ವಿಷಯದಲ್ಲಿ ನಾವು ಒಂದು ಹೆಜ್ಜೆ ಮುಂದಿದ್ದೇವೆ ಮತ್ತು ನಾಯಕರಾಗುವ ಪ್ರಯಾಣದ ಸಮಯದಲ್ಲಿ ನಾವು ನಮ್ಮ ಬಾಲೆನ್ಸ್ ಶೀಟ್ ನ್ನು ವಿಸ್ತರಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ. ಚಿಲ್ಲರೆ ವ್ಯಾಪಾರದಲ್ಲಿ ಎಫ್‌ಡಿಐ ಅನ್ನು ಅನುಮತಿಸಲಾಗಲಿಲ್ಲ, ಆದ್ದರಿಂದ ಕಂಪನಿಗೆ ನಾವು ಅಂದುಕೊಂಡಷ್ಟು ಎಫ್‌ಡಿಐ ಪಡೆಯಲು ಸಾಧ್ಯವಾಗಲಿಲ್ಲ. ಯಾಕೆಂದರೆ ಆ ಸಮಯದಲ್ಲಿ ಎಲ್ಲಾ ದೊಡ್ಡ ದೊಡ್ಡ ಹೂಡಿಕೆದಾರರು ವಿದೇಶಿಯರಾಗಿದ್ದರು," ಎಂದು ಅವರು ಹೇಳಿದ್ದಾರೆ.
"ನಮಗೆ ಕೋವಿಡ್ ವೇಳೆ ನಿಭಾಯಿಸಲು ಸಾಧ್ಯವಾಗಲಿಲ್ಲ. ಕೋವಿಡ್ ಸಂಭವಿಸಿದಾಗ ನಾವು ಮೂರು ತಿಂಗಳಲ್ಲಿ 7,000 ಕೋಟಿ ರೂಪಾಯಿ ಮೌಲ್ಯಗಳ ವ್ಯವಹಾರವನ್ನು ಕಳೆದುಕೊಂಡಿದ್ದೇವೆ. ಈ ಹೊಡೆತದಿಂದ ಚೇತರಿಸಿಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಏಕೆಂದರೆ ಬ್ಯಾಂಕ್ ಲೈನ್‌ಗಳಲ್ಲಿ ಕೆಲಸ ಮಾಡುತ್ತಿದ್ದಾಗ ಎಲ್ಲವೂ ಜಾಮ್‌ಗೆ ಸಿಲುಕುತ್ತದೆ. ಇದಾದ ಬಳಿಕ ಇತ್ಯರ್ಥ ಮತ್ತು ಮಾರಾಟಬಿಟ್ಟು ಬೇರೆ ದಾರಿಯಿಲ್ಲ ಎಂದು ನಿರ್ಧರಿಸಿದ್ದೇವು," ಎಂದು ಕಿಶೋರ್ ಬಿಯಾನಿ ಹೇಳಿದ್ದಾರೆ.
ರಿಲಯನ್ಸ್ - ಫ್ಯೂಚರ್ ಗ್ರೂಪ್ ಡೀಲ್‌ಗೆ ಅಮೆಜಾನ್ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿದ ಬಿಯಾನಿ, ಇದು ನಿಜಕ್ಕೂ ನಮ್ಮ ಕಂಪನಿಗೆ ಸಮಸ್ಯೆಯನ್ನು ಹೆಚ್ಚಿಸಿದೆ ಎಂದು ಹೇಳಿದರು. ನಮ್ಮ ಮೇಲಿದ್ದ ಹೊಣೆಗಾರಿಕೆ ಹಾಗೂ ಇದ್ದ ಸಮಸ್ಯೆಗೆ ಪರಿಹಾರ ಕಂಡುಕೊಂಡು ಮುಂದುವರಿಯಲು ಸಿದ್ಧರಿರುವ ಖರೀದಿದಾರರನ್ನು ನಮಗೆ ದೊರಕಿದರು.
ಆದರೆ ನಂತರ ನಮ್ಮ ನಡುವಿನ ಒಪ್ಪಂದವು ಕಾನೂನು ಸಮಸ್ಯೆಗಳಿಗೆ ಸಿಲುಕಿತು. ನಾವು ವಿಶ್ವದ ಇಬ್ಬರು ನಾಯಕರ ನಡುವೆ ಸಿಲುಕಿದ್ದು ನಾವು ಬಯಸಿದ ರೀತಿಯಲ್ಲಿ ಕೆಲಸ ಗಳು ನಡೆಯಲಿಲ್ಲ ಎಂದು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಗೆ ಮಾರಾಟ ಮಾಡಲು ಫ್ಯೂಚರ್ ಗ್ರೂಪ್ ಒಪ್ಪಂದ ಬಗ್ಗೆ ಅಮೆಜಾನ್ ತಕರಾರು ಎತ್ತಿರುವ ಬಗ್ಗೆ ವಿವರಿಸಿದರು.
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್‌ಗೆ 2020 ರಲ್ಲಿ ಫ್ಯೂಚರ್ ಗ್ರೂಪ್‌ನ ಆಸ್ತಿ ಮಾರಾಟ ಮಾಡಲು ನಿರ್ಧರಿಸಿತ್ತು. ಆದರೆ ಫ್ಯೂಚರ್ ಗ್ರೂಪ್ ನಡುವಿನ ಒಪ್ಪಂದದ ಉಲ್ಲಂಘನೆ ಎಂದಿದ್ದ ಅಮೆಜಾನ್ ಈ ಸಂಬಂಧ ಫ್ಯೂಚರ್ ಗ್ರೂಪ್ ಮೇಲೆ ಪ್ರಕರಣವನ್ನು ದಾಖಲಿಸಿತ್ತು. ಹೀಗಾಗಿ ಫ್ಯೂಚರ್ ಗ್ರೂಪ್‌ನ 3.4 ಶತಕೋಟಿ ಡಾಲರ್ ಮೌಲ್ಯದ ಆಸ್ತಿಯನ್ನು ಮುಕೇಶ್ ಅಂಬಾನಿಗೆ ಮಾರಾಟ ಮಾಡುವ ಕಿಶೋರ್ ಬಯಾನಿಯ ಯೋಜನೆಯನ್ನು ಅಮೆಜಾನ್ ಸ್ಥಗಿತಗೊಳಿಸಿತ್ತು.
ಅಮೆಜಾನ್ ಈ ಮಾರಾಟವನ್ನು ಸ್ಥಗಿತಗೊಳಿಸಲು ಸಿಂಗಾಪುರ್ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್ (ಎಸ್‌ಐಎಸಿ) ನಲ್ಲಿ ಪ್ರಕರಣವನ್ನು ದಾಖಲಿಸಿತು. ಜೊತೆಗೆ ಅಮೆಜಾನ್ ಮತ್ತು ಫ್ಯೂಚರ್ ಗ್ರೂಪ್ ಸಹ ಸುಪ್ರೀಂ ಕೋರ್ಟ್ ಸೇರಿದಂತೆ ಭಾರತೀಯ ನ್ಯಾಯಾಲಯಗಳಲ್ಲಿ ಪರಸ್ಪರರ ವಿರುದ್ಧ ಮೊಕದ್ದಮೆಗಳನ್ನು ಹೂಡಿದವು.
ಕಿಶೋರ್ ಬಿಯಾನಿ ಯಾರು?
ಫ್ಯೂಚರ್ ಗ್ರೂಪ್‌ನ ಸಂಸ್ಥಾಪಕ ಮತ್ತು ಸಿಇಒ ಆಗಿದ್ದ ಕಿಶೋರ್ ಬಿಯಾನಿ ತನ್ನ ಅಂಗ ಸಂಸ್ಥೆಯಾದ ಬಿಗ್ ಬಜಾರ್ ಅನ್ನು 2001 ರಲ್ಲಿ ಸ್ಥಾಪಿಸಿದರು. ಫ್ಯೂಚರ್ ಗ್ರೂಪ್‌ನ ಈಸಿಡೇ, ಫುಡ್ ರಿಟೇಲ್ ಫುಡ್ ಹಾಲ್ ಮತ್ತು ಹೈಪರ್‌ಮಾರ್ಕೆಟ್ ಬ್ರಾಂಡ್ ಬಿಗ್ ಬಜಾರ್ ಅನ್ನು ಒಳಗೊಂಡಿದೆ.


Click it and Unblock the Notifications