ಸೋಲಾರ್ ಇಂಡಸ್ಟ್ರೀಸ್ ಇಂಡಿಯಾದ ಮಾಲೀಕರಾದ ಬಿಲಿಯನೇರ್ ಉದ್ಯಮಿ ಸತ್ಯನಾರಾಯಣ ನುವಾಲ್ ಅವರ ಬದುಕಿನ ಕಥೆಯು ಅತ್ಯಂತ ಸ್ಫೂರ್ತಿದಾಯಕವಾಗಿದೆ. 1995ರಲ್ಲಿ ಸ್ಥಾಪನೆಯಾದ ಈ ಕಂಪನಿ ಮಾಲೀಕರು ಬಡತನದಿಂದ ಮೇಲೆ ಬಂದು ಶ್ರೀಮಂತಿಕೆಯನ್ನು ಕಂಡವರು.
ಸತ್ಯನಾರಾಯಣ ನುವಾಲ್ ಅವರು ತಮ್ಮ ಕಠಿಣ ಪರಿಶ್ರಮ ಹಾಗೂ ಬಿಸಿನೆಸ್ ಕೌಶಲ್ಯಗಳಿಂದಾಗಿ ಉದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರು ರಾಜಸ್ಥಾನದ ಭಿಲಿವಾರದಲ್ಲಿ ಜನಿಸಿದವರು. ನುವಾಲ್ ಅವರ ತಂದೆಯು ಸರ್ಕಾರಿ ಉದ್ಯೋಗಿಯಾಗಿದ್ದರು. ಆದರೆ ಮಗನಿಗೆ ಯುವಕನಾಗಿದ್ದಾಗಲೇ ಬಿಸಿನೆಸ್ ಮಾಡುವತ್ತ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು.

ಹೀಗಾಗಿ, ನುವಾಲ್‌ಗೆ 18 ವರ್ಷ ವಯಸ್ಸಿರುವಾಗಲೇ ತಂದೆಯು ಇಂಕ್ ಉತ್ಪಾದನಾ ಘಟಕವೊಂದನ್ನು ಸ್ಥಾಪಿಸಿ ಆ ಆಸೆಯನ್ನು ನೆರವೇರಿಸಿದ್ದರು. ಆದರೆ ಕೆಲವು ಸಮಯದ ಬಳಿಕ ಆ ವ್ಯಾಪಾರವು ವಿಫಲಗೊಂಡಿತ್ತು. ಆದರೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳದ ಅವರು ಹಲವಾರು ವ್ಯಾಪಾರ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಆ ಮೂಲಕ ಅವರು 36000 ಕೋಟಿ ರೂಪಾಯಿ ಕಂಪನಿಯನ್ನು ಕಟ್ಟಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಸತ್ಯನಾರಾಯಣ ನುವಾಲ್ ಅವರ ಬದುಕು ಅತ್ಯಂತ ಕಷ್ಟಗಳಿಂದ ಕೂಡಿದ್ದು, ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರು. ಎಲ್ಲಿಯವರೆಗೆ ಅಂದರೆ ಹಣವಿಲ್ಲದೆ ರೈಲು ನಿಲ್ದಾಣದಲ್ಲಿ ಮಲಗಬೇಕಾದ ಸನ್ನಿವೇಶವೂ ಎದುರಾಗಿತ್ತು. ನುವಾಲ್ ಅವರು 10 ನೇ ತರಗತಿ ನಂತರ ಶಾಲೆಯನ್ನು ಅರ್ಧಕ್ಕೆ ಬಿಟ್ಟಿದ್ದು, ಮುಂದೆ ಕುಟುಂಬದ ಜವಾಬ್ದಾರಿಗಳನ್ನು ಹೊರಬೇಕಾದ ಕಾರಣ ಕಾಲೇಜು ಶಿಕ್ಷಣವನ್ನು ಮುಂದುವರಿಸಿರಲಿಲ್ಲ.
ಸತ್ಯನಾರಾಯಣ ಅವರ ತಂದೆಯು ಗ್ರಾಮ ಲೆಕ್ಕಾಧಿಕಾರಿಯಾಗಿದ್ದು, 1971ರಲ್ಲಿ ಅವರ ನಿವೃತ್ತಿ ಬಳಿಕ ಕುಟುಂಬವು ಸಾಕಷ್ಟು ಎದುರಿಸಿತ್ತು. ನುವಾಲ್ ಅವರು ಕೇವಲ 19 ವರ್ಷ ವಯಸ್ಸಿನಲ್ಲಿಯೇ ಮದುವೆ ಮಾಡಿಕೊಂಡಿದ್ದರು. 1977ರಲ್ಲಿ ಅವರು ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಬಲ್ಹಾರ್ಷಾಗೆ ಶಿಫ್ಟ್ ಆಗಿದ್ದರು. ಈ ಬದಲಾವಣೆಯು ಅವರ ಬದುಕಿಗೆ ಹೊಸ ತಿರುವನ್ನು ನೀಡಿತ್ತು. ಅವರು ಬಲ್ಹಾರ್ಷಾದಲ್ಲಿ ಬಾವಿ ತೋಡಲು, ರಸ್ತೆ ನಿರ್ಮಾಣ ಹಾಗೂ ಗಣಿಗಾರಿಕೆಯಲ್ಲಿಸ್ಫೋಟಕಗಳನ್ನು ಪೂರೈಸುವ ಅಬ್ದುಲ್ ಸತ್ತಾರ್ ಅಲ್ಲಾಭಾಯ್ ಅನ್ನು ಭೇಟಿ ಮಾಡಿದ್ದರು.
ಕೆಲವು ತಿಂಗಳ ಬಳಿಕ ನುವಾಲ್ ಅವರು ಅಬ್ದುಲ್ ಸತ್ತಾರ್ ಅವರ ಜತೆಸೇರಿಕೊಂಡು ವ್ಯಾಪಾರ ಮಾಡಲು ಪ್ರಾರಂಭಿಸಿದ್ದು, ಪ್ರತಿ ತಿಂಗಳು ಸತ್ತಾರ್‌ಗೆ 1000 ರೂಪಾಯಿ ನೀಡುತ್ತಿದ್ದರು. ನುವಾಲ್ ಅವರು ಸತ್ತಾರ್ ಅವರ ಸ್ಫೋಟಕ ಸಾಮಗ್ರಿಗೆ ಸಂಬಂಧಿಸಿದ ಲೈಸೆನ್ಸ್ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು, ಅದಕ್ಕಾಗಿ ಅವರಿಗೆ ಹಣ ಕೂಡ ನೀಡುತ್ತಿದ್ದರು.
ಕೆಲವು ಸಮಯದ ಬಳಿಕ ಬ್ರಿಟಿಷ್ ಮೂಲದ ಇಂಪಿರಿಯಲ್ ಕೆಮಿಕಲ್ ಇಂಡಸ್ಟ್ರೀಸ್ ಎಂಬ ಕಂಪನಿಯು ನುವಾಲ್ ಅವರ ಪ್ರತಿಭೆಯನ್ನು ಗಮನಿಸಿತ್ತು. ಅದು ಅವರಿಗೆ ಹೊಸ ಪ್ರಪಂಚದತ್ತ ಬದುಕನ್ನು ತೋರಿಸುವಲ್ಲಿ ಯಶಸ್ವಿಯಾಯಿತು. ಪ್ರಸ್ತುತ ನುವಾಲ್ ಅವರ ಕಂಪನಿಯು ಸ್ಫೋಟಕದಿಂದ ಹಿಡಿದು ಡ್ರೋನ್‌ವರೆಗೆ ಎಲ್ಲ ರೀತಿಯ ವಸ್ತುಗಳನ್ನು ತಯಾರಿಸುತ್ತಿದೆ.
ಒಂದು ದಶಕದಲ್ಲಿ ನುವಾಲ್ ಅವರ ಸೋಲಾರ್ ಇಂಡಸ್ಟ್ರೀಸ್‌ನ ಮೌಲ್ಯವು ಶೇಕಡ 1,700 ರಷ್ಟು ಹೆಚ್ಚಾಯಿತು. 2012ರಲ್ಲಿ 1765 ಕೋಟಿ ರೂಪಾಯಿ ಇದ್ದು, ಅದು 2022ಕ್ಕೆ 35,000 ಕೋಟಿ ರೂಪಾಯಿಗೆ ಏರಿತ್ತು. ಸತ್ಯನಾರಾಯಣ ನುವಾಲ್ ಅವರ ಒಟ್ಟು ನಿವ್ವಳ ಆಸ್ತಿ ಮೌಲ್ಯವು 2.2 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಭಾರತೀಯ ರೂಪಾಯಿಯಲ್ಲಿ ಲೆಕ್ಕಾಚಾರ ಮಾಡಿದಾಗ ಅದು 19,000 ಕೋಟಿ ರೂಪಾಯಿ ಆಗಿದೆ.


Click it and Unblock the Notifications