ನಾವು ಕಷ್ಟಪಟ್ಟು ದುಡಿದರೆ ಖಂಡಿತವಾಗಿಯೂ ಜೀವನದಲ್ಲಿ ಯಶಸ್ವಿಯನ್ನು ಕಾಣಲು ಸಾಧ್ಯವಾಗುತ್ತದೆ. ಹನಿ ಹನಿ ಸೇರಿದರೆ ಹಳ್ಳ ಎಂಬಂತೆ ನಾವು ಇಂದು ಮಾಡಿದ ಉಳಿತಾಯವು ಮುಂದಿನ ದಿನಗಳಲ್ಲಿ ನಮಗೆ ಸಹಾಯವಾಗಲಿದೆ. ಹಾಗೆಯೇ ನಾವು ಇಂದು ನಾವು ಕಷ್ಟಪಟ್ಟರೆ, ಮುಂದೊಂದು ದಿನ ಯಶಸ್ವಿಯಾಗುವುದು ಖಂಡಿತವಾಗಿದೆ.
ಇಂದು ನಮ್ಮ ಮುಂದೆ ಹೀಗೆ ಯಶಸ್ವಿಯಾದ ಹಲವಾರು ಮಂದಿಯ ಉದಾಹರಣೆಗಳು ಇದೆ. ಅಂತಹ ಒಬ್ಬ ಉದ್ಯಮಿ ಕುನ್ವರ್ ಸಚ್‌ದೇವ್ ಆಗಿದ್ದಾರೆ. ಕುನ್ವರ್‌ರ ಸ್ಪೂರ್ತಿದಾಯಕ ಕಥೆಯು ಯುವ ಉದ್ಯಮಿಗಳಿಗೆ ಹೆಚ್ಚು ಪ್ರೇರಣೆ ನೀಡುತ್ತದೆ. ಸು-ಕಾಮ್ ಕಂಪನಿಯನ್ನು ಕುನ್ವರ್ ಸಚ್‌ದೇವ್ ಸ್ಥಾಪಿಸಿದ್ದು, ಇದು ಸೋಲಾರ್ ಉತ್ಪನ್ನಗಳಿಗೆ ಭಾರತ ಮತ್ತು ವಿದೇಶಗಳಲ್ಲಿ ಬಲವಾದ ಮಾರುಕಟ್ಟೆಯಾಗಿದೆ.

ಕುನ್ವರ್ ಸಚ್‌ದೇವ್ ಯಾರು ತಿಳಿಯಿರಿ
ಕುನ್ವರ್ ಸಚ್‌ದೇವ್ ತಂದೆ ರೈಲ್ವೆ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಖಾಸಗಿ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ನಡೆಸಿದ ಕುನ್ವರ್ ಸಚ್‌ದೇವ್, ಶಾಲೆಯ ಫೀಸ್ ಕಟ್ಟಲು ಕಷ್ಟವಾದಾಗ ಸರ್ಕಾರಿ ಶಾಲೆಗೆ ಸೇರಿದರು. ವೈದ್ಯರಾಗುವ ಹಂಬಲವನ್ನು ಕುನ್ವರ್ ಸಚ್‌ದೇವ್ ಹೊಂದಿದ್ದರು. ಆದರೆ ಆರ್ಥಿಕ ಸಮಸ್ಯೆಯಿಂದ ಇದು ಸಾಧ್ಯವಾಗಿಲ್ಲ. ಅದಾದ ಬಳಿಕ ಮನೆ ಮನೆಗೆ ಹೋಗಿ ಪೆನ್ನು ಮಾರಾಟ ಮಾಡಿ ಶಿಕ್ಷಣದ ವೆಚ್ಚವನ್ನು ಬರಿಸಿದ್ದಾರೆ.
ಉದ್ಯಮ ಆರಂಭಿಸಿದ ಕುನ್ವರ್ ಸಚ್‌ದೇವ್
ತನ್ನ ಪದವಿಯ ನಂತರ, ಕುನ್ವರ್ ಮಾರ್ಕೆಟಿಂಗ್ ವಿಭಾಗದಲ್ಲಿ ಕೇಬಲ್ ಸಂವಹನ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅಲ್ಲಿ ಉದ್ಯೋಗ ಮಾಡುವಾಗ ರಾಷ್ಟ್ರದ ಕೇಬಲ್ ಉದ್ಯಮವು ಉತ್ತಮ ಭವಿಷ್ಯವನ್ನು ಹೊಂದಿದೆ, ಲಾಭವನ್ನು ಹೊಂದಿದೆ ಎಂದು ಅವರ ಅರಿವಿಗೆ ಬಂದಿತು.
ಅದಾದ ಬಳಿಕ ತಮ್ಮ ಕೆಲಸವನ್ನು ತೊರೆದು, ತಮ್ಮದೇ ಆದ ಕಂಪನಿಯನ್ನು ಪ್ರಾರಂಭಿಸಿದರು. ಕುನ್ವರ್ ಸಚ್‌ದೇವ್ ಕಂಪನಿಯನ್ನು ಮೊದಲು ಆರಂಭಿಸಿದಾಗ ಅದಕ್ಕೆ ಸು-ಕಾಮ್ ಕಮ್ಯುನಿಕೇಷನ್ ಸಿಸ್ಟಮ್ ಎಂದು ಹೆಸರು ಇರಿಸಿದರು. ಕುನ್ವರ್ ಸಚ್‌ದೇವ್ ಮನೆಯಲ್ಲಿ ಇನ್ವರ್ಟರ್ ಇತ್ತು. ಆದರೆ ಅದು ಸರಿಯಿರಲಿಲ್ಲ. ಆದರೆ ತಾನೇ ಸಂಸ್ಥೆಯನ್ನು ಆರಂಭಿಸಿದಾಗ ಕಡಿಮೆ ಗುಣಮಟ್ಟದ ವಸ್ತು ಸಮಸ್ಯೆಗೆ ಕಾರಣ ಎಂಬುವುದು ಅವರ ಗಮನಕ್ಕೆ ಬಂದಿದೆ.
ಇದಾದ ಬಳಿಕ ಕುನ್ವರ್ ಸಚ್‌ದೇವ್ ಸ್ವಂತವಾಗಿ ಇನ್‌ವರ್ಟರ್‌ಗಳನ್ನು ಉತ್ಪಾದಿಸುವ ನಿರ್ಧಾರವನ್ನು ಮಾಡಿದರು. 1998 ರಲ್ಲಿ, ಸು-ಕಾಮ್ ಪವರ್ ಸಿಸ್ಟಮ್ ಅನ್ನು ಸ್ಥಾಪಿಸಿದರು. ಇನ್ವರ್ಟರ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸಿದರು. ಪ್ರಸ್ತುತ ಕುನ್ವರ್ ಸಚ್‌ದೇವ್ ಕಂಪನಿಯು ಸೌರ ಉತ್ಪನ್ನಗಳನ್ನು ಉತ್ಪಾದನೆ ಮಾಡುತ್ತದೆ. ಈ ಸಂಸ್ಥೆಯ ಉತ್ಪನ್ನಗಳಿಗೆ ಭಾರತ ಮತ್ತು ವಿದೇಶಗಳಲ್ಲಿ ಬೇಡಿಕೆಯಿದೆ.
ಕಂಪನಿಯ ಮೌಲ್ಯ, ನಿವ್ವಳ ಆದಾಯವೆಷ್ಟಿದೆ?
ಕುನ್ವರ್ ಸಚ್‌ದೇವ್ ಪ್ರಸ್ತುತ ಸುಮಾರು 2300 ಕೋಟಿ ರೂಪಾಯಿ ಮೌಲ್ಯದ ವ್ಯವಹಾರವನ್ನು ಹೊಂದಿದ್ದಾರೆ. ಹಾಗೆಯೇ ಕುನ್ವರ್ ನಿವ್ವಳ ಆದಾಯ 5 ಬಿಲಿಯನ್ ಡಾಲರ್ ಆಗಿದೆ. ಈ ಕಂಪನಿಯು ಹತ್ತು ಗಂಟೆಗಳ ದೈನಂದಿನ ವಿದ್ಯುತ್ ಉತ್ಪಾದನೆಯನ್ನು ಹೊಂದಿರುವ ಸೌರ ಉತ್ಪನ್ನಗಳನ್ನು ಸಹ ತಯಾರಿಸುತ್ತದೆ. ಒಂದು ಲಕ್ಷಕ್ಕೂ ಹೆಚ್ಚು ಭಾರತೀಯ ಮನೆಗಳು ಈಗಾಗಲೇ ಅದರ ಉತ್ಪನ್ನಗಳನ್ನು ಹೊಂದಿದೆ. ಸು-ಕಾಮ್‌ನ ಸೌರ ಉತ್ಪನ್ನಗಳಿಗೆ ಪ್ರಸ್ತುತ ವಿದೇಶಗಳಲ್ಲಿ ಮತ್ತು ಭಾರತದಲ್ಲಿ ಬೇಡಿಕೆಯಿದೆ.


Click it and Unblock the Notifications