ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದ ವಿದೇಶಿ ಗಣ್ಯರ ಪೈಕಿ ಸೌದಿ ಅರೇಬಿಯಾದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ಲಾಜಿಜ್ ಅಲ್ ಸೌದ್ ಕೂಡಾ ಒಬ್ಬರಾಗಿದ್ದರು. ಶೃಂಗಸಭೆ ಮುಗಿದ ಒಂದೇ ದಿನಕ್ಕೆ ಸೌದಿ ಅರೇಬಿಯಾ ಮತ್ತು ಭಾರತದ ಮಧ್ಯೆ ವಿವಿಧ ಒಪ್ಪಂದಗಳಾಗಿವೆ ಎಂಬುವುದು ಗಮನಾರ್ಹ.
ಪ್ರಧಾನಿ ನರೇಂದ್ರ ಮೋದಿ ಮತ್ತು ಸೌದಿ ದೊರೆ ಸಲ್ಮಾನ್ ಹೈದರಾಬಾದ್ ಹೌಸ್‌ನಲ್ಲಿ ದ್ವಿಪಕ್ಷೀಯ ಸಭೆ ನಡೆಸಿದ್ದು, ನವೀಕರಿಸಬಹುದಾದ ಇಂಧನ, ರಕ್ಷಣೆ, ತೈಲ ಸಂಸ್ಕರಣೆ, ಆರೋಗ್ಯ, ಆಹಾರ ಭದ್ರತೆ, ಫಿನ್‌ಟೆಕ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಅವಕಾಶಗಳ ಕುರಿತು ಭಾರತ ಹಾಗೂ ಸೌದಿ ಅರೇಬಿಯಾ ಮಹತ್ವದ ಒಡಂಬಡಿಕೆಗಳಿಗೆ ಸಹಿ ಹಾಕಿತ್ತು.

ಸೌದಿ ಅರೇಬಿಯಾದ ದೊರೆಯಾಗಿದ್ದ ಸಲ್ಮಾನ್ ಬಿನ್ ಅಬ್ದುಲಜೀಜ್ ಅವರ ಮಗನಾಗಿರುವ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಎಂಬಿಎಸ್ ಎಂಬ ಸಂಕ್ಷಿಪ್ತ ರೂಪದಿಂದಲೇ ಜನಪ್ರಿಯವಾದ್ದು, ರಾಜ ವೈಭೋಗ ಅವರ ಹುಟ್ಟಿನಿಂದಲೇ ಬಂದಿರುವ ಕಾರಣ ಐಷಾರಾಮಿ ಜೀವನ ಶೈಲಿ ಹೊಂದಿದ್ದಾರೆ. ತಮ್ಮ 25ನೇ ಹುಟ್ಟುಹಬ್ಬ ಆಚರಿಸಲೆಂದು ಪ್ರಿನ್ಸ್ ಎಂಬಿಎಸ್ ಅವರು ಮಾಲ್ಡೀವ್ಸ್‌ನಲ್ಲಿ ಇಡೀ ದ್ವೀಪವನ್ನು 57 ಕೋಟಿ ರೂಪಾಯಿಗೆ ಬಾಡಿಗೆಗೆ ಪಡೆದಿದ್ದರು.
ಡೈಲಿಮೇಲ್ ಪ್ರಕಾರ, ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಐಷಾರಾಮಿ ಕಾರುಗಳ ಸಂಗ್ರಹ ಹೊಂದಿದ್ದು ಅವರು ಹೆಚ್ಚಾಗಿ 3.6 ಕೋಟಿ ರೂಪಾಯಿ ಮೌಲ್ಯದ ಲಂಬೋರ್ಗಿನಿ ಅವೆಂಟಡಾರ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಅವರು ಆರು ಚಕ್ರ ಹೊಂದಿರುವ ಆಫ್-ರೋಡರ್ ಮರ್ಸಿಡಿಸ್ G63 (8.7 ಕೋಟಿ ರೂಪಾಯಿ) ವಾಹನದಿಂದ 5.54 ಕೋಟಿ ರೂಪಾಯಿ ಮೌಲ್ಯದ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಮತ್ತು ಗೋಲ್ಡನ್ ಪಾಲಿಶ್ ಮಾಡಿದ ರೋಲ್ಸ್ ರಾಯ್ಸ್ ವರೆಗಿನ ಅನೇಕ ಐಷಾರಾಮಿ ಕಾರುಗಳ ಸಂಗ್ರಹವೇ ಅವರಲ್ಲಿದೆ.
ಸೌದಿ ಕ್ರೌನ್ ಪ್ರಿನ್ಸ್ ಫ್ರಾನ್ಸ್‌ನಲ್ಲಿ 2400 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಅರಮನೆಯನ್ನು ಹೊಂದಿದ್ದಾರೆ. ಈ ಆಸ್ತಿಯನ್ನು ಫ್ರಾನ್ಸ್‌ನಲ್ಲಿರುವ ಅತ್ಯಂತ ಐಷಾರಾಮಿ ವಿಲಾಸಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪ್ರೆಂಚ್ ನ ರಾಜ ಲೂಯಿಸ್ XIV ಅರಮನೆಯ ಥೀಮ್ ಮೇಲೆ ಈ ಐಷಾರಾಮಿ ನಿವಾಸ ನಿರ್ಮಿಸಲಾಗಿದ್ದು, ಇಲ್ಲಿನ ಬಾಗಿಲುಗಳು ಮತ್ತು ವಾಲ್ ರೈಲಿಂಗ್ಸ್ ಚಿನ್ನದಿಂದ ಲೇಪಿತವಾಗಿವೆ ಎಂದು ಹೇಳಲಾಗುತ್ತದೆ.
ಸೌದಿ ಕ್ರೌನ್ ಪ್ರಿನ್ಸ್ ವಿಶ್ವದ ಮೂರನೇ ಅತಿದೊಡ್ಡ ಸೂಪರ್ ಯಾಚ್ ಒಡೆಯರಾಗಿದ್ದು, ಇದರ ಮೌಲ್ಯ 3300 ಕೋಟಿ ರೂಪಾಯಿ ಆಗಿದೆ. ಫೋರ್ಬ್ಸ್ ನಿಯತಕಾಲಿಕದ ಪ್ರಕಾರ, ಈ ವಿಹಾರ ನೌಕೆಯು ಇಟಲಿಯ ಫಿನ್‌ಕಾಂಟಿಯೆರಿ ಯಾರ್ಡ್‌ನಿಂದ ನಿರ್ಮಿಸಲಾದ ಮೊದಲ ಸೂಪರ್‌ಯಾಚ್ ಆಗಿದೆ. ಈ ಯಾಚ್ ನಲ್ಲಿ ಎರಡು ಹೆಲಿಪ್ಯಾಡ್‌ಗಳಿದ್ದು ಅವುಗಳಲ್ಲಿ ಒಂದನ್ನು ಅಗತ್ಯವಿದ್ದರೆ ಈಜುಕೊಳ ಅಥವಾ ಡ್ಯಾನ್ಸ್ ಫ್ಲೋರ್ ಆಗಿ ಪರಿವರ್ತಿಸಬಹುದಾಗಿದೆ.
37 ರ ಹರೆಯದ ಸೌದಿ ಕ್ರೌನ್ ಪ್ರಿನ್ಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು ಅವರ ನಿವ್ವಳ ಮೌಲ್ಯ ಸುಮಾರು ಯುಎಸ್ಡಿ 25 ಬಿಲಿಯನ್ ಎಂದು ಅಂದಾಜಿಸಲಾಗಿದೆ.


Click it and Unblock the Notifications