ನಮಗೆ ಅದೆಷ್ಟೋ ವೇತನವನ್ನು ನೀಡುವ ಉದ್ಯೋಗವಿದ್ದರೂ ಕೂಡಾ ನಾವು ಇಷ್ಟುಪಡುವ, ನಮ್ಮ ಕನಸಿನ ಉದ್ಯೋಗ ಎಂದಿಗೂ ಕೂಡಾ ನಮಗೆ ಅತೀ ಮುಖ್ಯವಾಗುತ್ತದೆ. ಹಣ ಮುಖ್ಯವಾದರೂ ಕೂಡಾ ನಮ್ಮ ಕನಸು ನನಸಾಗಿಸಿಯೇ ಉತ್ತಮ ಆದಾಯವನ್ನು ನಾವು ಪಡೆಯುವ ಹಲವಾರು ಮಾರ್ಗಗಳು ನಮಗಿದೆ.
ಈ ಜಗತ್ತಿನಲ್ಲಿ ಅನೇಕ ಜನರು ಬೇರೆ ಬೇರೆ ಕನಸುಗಳನ್ನು ಹೊಂದಿದ್ದಾರೆ. ಆದರೆ ಅವರಲ್ಲಿ ಕೆಲವೇ ಕೆಲವರು ಅವಕಾಶಗಳನ್ನು ಪಡೆಯುತ್ತಾರೆ. ತಮ್ಮ ಕನಸನ್ನು ನನಸಾಗಿಸಲು ಸಮರ್ಥರಾಗಿರುತ್ತಾರೆ. ಗೋಲ್ಡ್‌ಮನ್ ಸ್ಯಾಚ್ಸ್‌ನ ಅತಿದೊಡ್ಡ ಮತ್ತು ಹಳೆಯ ಹೂಡಿಕೆ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಲಾಭದಾಯಕ ಸ್ಥಾನವನ್ನು ನೀವು ಹೊಂದಿದ್ದೀರಿ ಎಂದು ಒಮ್ಮೆ ಕಲ್ಪಿಸಿಕೊಂಡು ನೋಡಿ!

ಆದರೆ ಇಂತಹ ಕೆಲಸವನ್ನು ತೊರೆದು ಇಡ್ಲಿ ಮಾರಾಟ ಮಾಡುವ ಸಣ್ಣ ಅಂಗಡಿಯನ್ನು ಆರಂಭಿಸಿದ ವ್ಯಕ್ತಿಯ ಬಗ್ಗೆ ನಾವಿಲ್ಲಿ ನಿಮಗೆ ವಿವರಿಸಿದ್ದೇವೆ. ಹೌದು! ಬೆಂಗಳೂರಿನ ವಿಜ್ಞಾನ ನಗರದಲ್ಲಿ ಅಯ್ಯರ್ ಇಡ್ಲಿ ಎಂಬ ಸಣ್ಣ ಅಂಗಡಿಯನ್ನು ಪ್ರಾರಂಭಿಸಲು ಕೃಷ್ಣನ್ ಮಹದೇವನ್ ಅಧಿಕ ವೇತನವನ್ನು ನೀಡುವ ಉದ್ಯೋಗವನ್ನು ತೊರೆದಿದ್ದಾರೆ!
2001 ರಲ್ಲಿ ಅವರ ತಂದೆ ಪ್ರಾರಂಭಿಸಿದ ಮತ್ತು ಬಿಸಿ ಇಡ್ಲಿಗಳನ್ನು ಸವಿಯಲು ಬೆಂಗಳೂರಿಗರು ಇಷ್ಟಪಡುವ ಹೆಸರುವಾಸಿಯಾದ ತಮ್ಮ ಕುಟುಂಬದ ವ್ಯವಹಾರವಾದ ಅಯ್ಯರ್ ಇಡ್ಲಿಯನ್ನು ನಿರ್ವಹಿಸುವ ಸಲುವಾಗಿ ಕೃಷ್ಣನ್ ಮಹಾದೇವನ್ ತಮ್ಮ ಕೆಲಸವನ್ನು ತೊರೆದಿದ್ದಾರೆ. ಕಳೆದ 20 ವರ್ಷಗಳಲ್ಲಿ, ವ್ಯಾಪಾರವು ಉತ್ತಮವಾಗಿ ನಡೆಯುತ್ತಿದ್ದು, ಇದು ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಅಂಗಡಿಗಳನ್ನು ಒಂದಾಗಿದೆ.
ಸುಮಾರು 19 ವರ್ಷಗಳ ಕಾಲ, ಕೃಷ್ಣನ್ ಮಹಾದೇವನ್ ಅವರ ತಂದೆ ತೆಂಗಿನಕಾಯಿ ಚಟ್ನಿಯೊಂದಿಗೆ ಇಡ್ಲಿಗಳನ್ನು ಮಾತ್ರ ಮಾರಾಟ ಮಾಡಿದರು. ಸಮೀಪದಲ್ಲಿ ಅನೇಕ ರೆಸ್ಟೋರೆಂಟ್‌ಗಳಿದ್ದರೂ ಸಹ, ಅಯ್ಯರ್ ಇಡ್ಲಿಯು ಅದರ ವಿಶಿಷ್ಟವಾದ, ನಯವಾದ ಮತ್ತು ಮೃದುವಾದ ಇಡ್ಲಿಗಳಿಗಾಗಿ ಇನ್ನೂ ಬಹಳ ಜನಪ್ರಿಯವಾಗಿದೆ.
ಇದು ಉತ್ತಮ ಗುಣಮಟ್ಟದ ಆಹಾರದ ಕಾರಣದಿಂದಾಗಿ, ಮತ್ತು ಅಂಗಡಿಯು ಕೇವಲ 20 ರಿಂದ 10 ಅಡಿ ಜಾಗವನ್ನು ಆಕ್ರಮಿಸಿಕೊಂಡಿದ್ದರೂ ಸಹ, ಅಯ್ಯರ್ ಇಡ್ಲಿ ವೆಚ್ಚವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. ಪ್ರತಿ ತಿಂಗಳು, ಅಂಗಡಿಯು 50,000 ಕ್ಕೂ ಹೆಚ್ಚು ಇಡ್ಲಿಗಳನ್ನು ಮಾರಾಟ ಮಾಡುತ್ತದೆ.
ಯಾವುದೇ ಆಡಂಬರದ ಹೊಟೇಲ್ ಇದಲ್ಲ. ಇಲ್ಲಿ ಗುಣಮಟ್ಟ, ತಾಜಾತನ, ಶುಚಿತ್ವ ಮತ್ತು ರುಚಿ ಮಾತ್ರ ಆದ್ಯತೆಗಳಾಗಿವೆ. ಈ ದಿನಗಳಲ್ಲಿ, ಕೃಷ್ಣನ್ ವಡಾ, ಕೇಸರಿ ಭಾತ್ ಮತ್ತು ಖಾರಾ ಭಾತ್ ಅನ್ನು ಮೆನುವಿನಲ್ಲಿ ಸೇರಿಸಿದ್ದಾರೆ. ಇದು ಕೃಷ್ಣನ್ ಮಹಾದೇವನ್ ನಿರ್ವಹಣೆಯಲ್ಲಾದ ಬದಲಾವಣೆಯಾಗಿದೆ.
ಕೃಷ್ಣನ್ ಅವರ ತಂದೆ 2009 ರಲ್ಲಿ ನಿಧನರಾದಾಗ, ಅಂಗಡಿ ಅಥವಾ ಹೊಟೇಲ್ ನಿರ್ವಹಣೆ ಜವಾಬ್ದಾರಿ ಅವರ ಮತ್ತು ಅವರ ತಾಯಿ ಉಮಾ ಅವರ ವಶವಾಯಿತು. ಕೃಷ್ಣನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ನಂತರ ಕಾಲೇಜಿಗೆ ಹೋಗುತ್ತಿದ್ದರು. ಕೆಲಸ ಸಿಕ್ಕ ನಂತರವೂ ಇದೇ ಮುಂದುವರೆಯಿತು. ಈಗ ಕೆಲಸ ತೊರೆದು ಸಂಪೂರ್ಣವಾಗಿ ಹೊಟೇಲ್ ನಿರ್ವಹಣೆ ಮಾಡುತ್ತಿದ್ದಾರೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ



Click it and Unblock the Notifications