ಪ್ರಸ್ತುತ ಹಲವಾರು ಉದ್ಯಮಿಗಳು, ವ್ಯಾಪಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅತೀ ಹೆಚ್ಚಾಗಿ ಜನಪ್ರಿಯವಾಗುತ್ತಿದ್ದಾರೆ. ಈ ಉದ್ಯಮಗಳಲ್ಲಿ ಮುಕೇಶ್ ಬನ್ಸಾಲ್ ಕೂಡಾ ಒಬ್ಬರಾಗಿದ್ದಾರೆ. ಮುಕೇಶ್ ತನ್ನ ಪಾಡ್‌ಕಾಸ್ಟ್ ಸಿರೀಸ್‌ನ ಮೂಲಕ ಇತರೆ ಉದ್ಯಮಿಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದು ಈ ಮೂಲಕ ಜನಪ್ರಿಯತೆ ಪಡೆದಿದ್ದಾರೆ.
ಬನ್ಸಾಲ್‌ರ ಪಾಡ್‌ಕಾಸ್ಟ್ ಯಶಸ್ವಿಯಾಗಿದ್ದು, ಹಲವಾರು ಬಾರಿ ಜನರ ಗಮನವನ್ನು ಸೆಳೆದಿದ್ದಾರೆ. ಮುಕೇಶ್ ಬನ್ಸಾಲ್ ಸುಮಾರು 18000 ಕೋಟಿ ರೂಪಾಯಿಯ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದಾರೆ. ಆದರೆ ಈ ಐಐಟಿ ಕಾನ್ಪುರದ ಹಳೆ ವಿದ್ಯಾರ್ಥಿ ಈ ಹಿಂದಿನಿಂದಲೂ ಉದ್ಯಮ ನಡೆಸುತ್ತಾ ಬಂದವರೇನಲ್ಲ.

ತನ್ನ ಪದವಿ ಪಡೆಯುವಾಗ ಚಿಕಾಗೋದಲ್ಲಿ ಡೆಲೊಯಿಟ್‌ಗಾಗಿ ಕೆಲಸ ಮಾಡಿದ ಬನ್ಸಾಲ್, ತನ್ನದೇ ಆದ ಉದ್ಯಮವನ್ನು ಆರಂಭ ಮಾಡುವ ಮುನ್ನ ಹಲವಾರು ಸಿಲಿಕಾನ್ ವ್ಯಾಲಿ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಮುಕೇಶ್ ಬನ್ಸಾಲ್ ಅವರೇ 2007ರಲ್ಲಿ ಅಶುತೋಷ್ ಲವಾನಿಯಾ ಮತ್ತು ವಿನೀತ್ ಸಕ್ಸೇನ ಜೊತೆ ಸೇರಿ ಫ್ಯಾಷನ್ ಇ ಕಾಮರ್ಸ್ ಆಪ್ ಆದ ಮಿಂತ್ರಾವನ್ನು ಆರಂಭಿಸಿದ್ದಾರೆ.
ಮಿಂತ್ರಾ ಆರಂಭದಲ್ಲಿ ಒಂದು ಸಣ್ಣ ಪ್ಲಾಟ್‌ಫಾರ್ಮ್ ಆಗಿದ್ದು, ಈಗ ಅತೀ ಜನಪ್ರಿಯವಾದ ಪ್ಲಾಟ್‌ಫಾರ್ಮ್ ಆಗಿದೆ. ಮಿಂತ್ರಾ ಬೆಳವಣಿಗೆ ಕಾಣುತ್ತಿದ್ದಂತೆ ಇತರೆ ಇಕಾಮರ್ಸ್ ಸಂಸ್ಥೆಗಳ ಗಮನವನ್ನು ಸೆಳೆದಿದ್ದು, ಸುಮಾರು 2,730 ಕೋಟಿ ರೂಪಾಯಿ ಡೀಲ್‌ನಲ್ಲಿ ಮಿಂತ್ರಾವನ್ನು ಫ್ಲಿಫ್‌ಕಾರ್ಟ್ ವಶಪಡಿಸಿಕೊಂಡಿದೆ.
ತಾನು ಸ್ಥಾಪಿಸಿದ ಸಂಸ್ಥೆಯನ್ನು ಮಾರಾಟ ಮಾಡಿದ ಬಳಿಕ ಮುಕೇಶ್ ಬನ್ಸಾಲ್ ಫ್ಲಿಫ್‌ಕಾರ್ಟ್‌ನಲ್ಲಿ ಕಾಮರ್ಸ್ ಮತ್ತು ಜಾಹೀರಾತು ವ್ಯಾಪಾರದ ಮುಖ್ಯಸ್ಥರಾಗಿದ್ದಾರೆ. ಈ ಪ್ಲಾಟ್‌ಫಾರ್ಮ್ 41,364 ಕೋಟಿ ರೂಪಾಯಿ ಆದಾಯವನ್ನು ಗಳಿಸುವ ಹಾದಿಯಲ್ಲಿ ದೊಡ್ಡ ಪಾತ್ರವನ್ನು ಮುಕೇಶ್ ಬನ್ಸಾಲ್ ವಹಿಸಿಕೊಂಡಿದ್ದಾರೆ.
ತಾನು ಸ್ಥಾಪಿಸಿದ ಸಂಸ್ಥೆಯಾದ ಮಿಂತ್ರಾವನ್ನು ಮಾರಾಟ ಮಾಡಿದ ಮುಕೇಶ್ ಬನ್ಸಾಲ್ ಪ್ರಸ್ತುತ ಆರೋಗ್ಯ ಮತ್ತು ಫಿಟ್‌ನೆಸ್ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಯೂರ್ ಫಿಟ್ ಅತೀ ಉತ್ತಮವಾಗಿ ಬೆಳವಣಿಗೆ ಕಂಡಿದ್ದು, ಅತೀ ಜನಪ್ರಿಯವಾದ ಕಲ್ಟ್ ಫಿಟ್ ಸೇರಿದಂತೆ ಹಲವಾರು ಜಿಮ್ ಚೇನ್‌ಗಳನ್ನು ವಶಕ್ಕೆ ಪಡೆದುಕೊಂಡಿದೆ. ಈಟ್ ಫಿಟ್ ಅನ್ನು ಕೂಡಾ ಹೊಂದಿದ್ದಾರೆ.
ಮುಕೇಶ್ ಬನ್ಸಾಲ್‌ರ ಜಿಮ್ ಚೇನ್ ಆದ ಕ್ಯೂರ್ ಫಿಟ್ ಮತ್ತು ಕಲ್ಟ್ ಮೇಲೆ ಟಾಟಾ ಡಿಜಿಟಲ್ ಕೂಡಾ ಹೆಚ್ಚಿನ ಆಸಕ್ತಿ ತೋರಿಸಿದೆ. ಕ್ಯೂರ್ ಫಿಟ್‌ಗೆ ಉತ್ತಮ ಫಂಡಿಂಗ್ ಲಭ್ಯವಾಗಿದ್ದು, ಇದರಿಂದಾಗಿ ಬನ್ಸಾಲ್ ಉದ್ಯಮ ಉತ್ತಮ ಬೆಳವಣಿಗೆ ಕಂಡಿದೆ. ಇಕಾನಮಿಕ್ ಟೈಮ್ಸ್ ಪ್ರಕಾರ ಟಾಟಾ ಸಂಸ್ಥೆಯು ಸುಮಾರು 620 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಇದರಿಂದಾಗಿ ಫಿಟ್ ಮತ್ತು ಕ್ಯೂರ್ ಫಿಟ್ ಮೌಲ್ಯ 12,411ಕ್ಕೆ ತಲುಪಿದೆ. ಮುಕೇಶ್ ಬನ್ಸಾಲ್ ನಿವ್ವಳ ಆದಾಯವು 4200 ಕೋಟಿ ರೂಪಾಯಿಗೆ ತಲುಪಿದೆ.
ಮುಕೇಶ್ ಬನ್ಸಾಲ್ ಶಿಕ್ಷಣ
ಮುಕೇಶ್ ಬನ್ಸಾಲ್ ಉತ್ತರಖಂಡದ ಹರಿದ್ವಾರದವರು. ಐಐಟಿ ಕಾನ್ಪುರದಲ್ಲಿ ಬಿಟೆಕ್ ಅನ್ನು ನಡೆಸಿದ್ದಾರೆ. ತನ್ನ ಶಿಕ್ಷಣದ ಬಳಿಕ ಡೆಲೊಯಿಟ್‌ನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ನೆಕ್ಸ್‌ಟ್ಯಾಗ್, ಇವಾಂಟೆಡ್, ಸೆಂಸ್ಟ್ರತ, ನ್ಯೂಸ್ಕೇಲ್‌ನಲ್ಲಿಯೂ ಕೆಲಸ ಮಾಡಿದ್ದಾರೆ. ಈ ಸಂಸ್ಥೆಗಳೆಲ್ಲವು ಸಿಲಿಕಾನ್ ವ್ಯಾಲಿಯಲ್ಲಿನ ಸ್ಟಾರ್ಟ್‌ಅಪ್ ಸಂಸ್ಥೆಗಳಾಗಿದೆ.


Click it and Unblock the Notifications