ಭಾರತದ ಅನೇಕ ಶ್ರೀಮಂತ ಉದ್ಯಮಿಗಳ ನೆಲೆಯಾಗಿದ್ದು, ಮುಕೇಶ್ ಅಂಬಾನಿ, ರತನ್ ಟಾಟಾ, ಗೌತಮ್ ಅದಾನಿ ಸೇರಿದಂತೆ ಅನೇಕ ಸಿರಿವಂತವಂತರು ಐಷಾರಾಮಿ ಕಾರು, ಜೆಟ್ , ಕ್ರೂಸ್ ಹಾಗೂ ಅನೇಕ ಆಸ್ತಿಗಳ ಸಂಗ್ರಹವನ್ನೇ ಹೊಂದಿದ್ದಾರೆ. ಇಷ್ಟೆಲ್ಲಾ ಇದ್ದರೂ, ವಿಶ್ವದ ಅತ್ಯಂತ ದುಬಾರಿ ಖಾಸಗಿ ಜೆಟ್ ಎಂಬ ಹೆಗ್ಗಳಿಕೆಗೆ ಭಾರತೀಯ ಸಿರಿವಂತರು ಪಾತ್ರವಾಗಿಲ್ಲ.
ಯಾಕೆಂದರೆ ದುಬಾರಿ ಖಾಸಗಿ ಜೆಟ್ ಒಡೆತನ ಸೌದಿ ಅರೇಬಿಯಾದ ರಾಜಕುಮಾರ ಮತ್ತು ಉದ್ಯಮಿ ಅಲ್ ವಲೀದ್ ಬಿನ್ ತಲಾಲ್ ಅಲ್ ಸೌದ್ ಒಡೆತನದಲ್ಲಿದೆ. ಅಲ್ ವಲೀದ್ ಅವರು ಮಧ್ಯಪ್ರಾಚ್ಯದ ರಾಜಮನೆತನಕ್ಕೆ ಸೇರಿದ್ದು, ಅಪಾರ ಪ್ರಮಾಣದ ಸಂಪತ್ತು ಹೊಂದಿದ್ದಾರೆ.

ಸೌದಿ ರಾಜಕುಮಾರ ಅಲ್ ವಲೀದ್ ಬಿನ್ ತಲಾಲ್ ಅಲ್-ಸೌದ್ ಅವರ ಬಳಿ ಇರುವ ವಿಶ್ವದ ಅತ್ಯಂತ ದುಬಾರಿ ಪ್ರೈವೆಟ್ ಜೆಟ್ ನ ಮೌಲ್ಯ ಯುಎಸ್ ಡಿ 500 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಇದು ಭಾರತೀಯ ಕರೆನ್ಸಿಯಲ್ಲಿ 4100 ಕೋಟಿ ರೂ. ಆಗಿದೆ. ಭಾರತೀಯ ಸಿರಿವಂತ ಉದ್ಯಮಿಗಳ ಪೈಕಿ ಅಂಬಾನಿ ಮತ್ತು ಟಾಟಾ ಇಬ್ಬರೂ ಖಾಸಗಿ ಜೆಟ್‌ಗಳನ್ನು ಹೊಂದಿದ್ದರೂ, ಸೌದಿ ರಾಜಕುಮಾರನ ಬಳಿ ಇರುವ ಖಾಸಗಿ ಜೆಟ್ ಹೋಲಿಸಿದರೆ ಇದರ ಮೌಲ್ಯಗಳು ತುಂಬಾ ಕಡಿಮೆಯಾಗಿದೆ.
ಉದ್ಯಮಿ ಅಲ್ ವಲೀದ್ ಬಿನ್ ತಲಾಲ್ ಅಲ್-ಸೌದ್ ಒಡೆತನದ ಖಾಸಗಿ ಜೆಟ್, "ಬೋಯಿಂಗ್ 747" ಆಗಿದ್ದು, ಇದಕ್ಕೆ ಸಾಮಾನ್ಯವಾಗಿ ಯುಎಸ್ ಡಿ 150 ಮಿಲಿಯನ್ ನಿಂದ 200 ಮಿಲಿಯನ್ ವೆಚ್ಚ ತಗಲುತ್ತದೆ. ವಿಮಾನಕ್ಕೆ ಮಾಡಿದ ಮಾರ್ಪಾಡುಗಳು ಮತ್ತು ಐಷಾರಾಮಿ ಸೇರ್ಪಡೆಗಳಿಂದಾಗಿ ರಾಜಕುಮಾರ ಒಡೆತನದ ಖಾಸಗಿ ಜೆಟ್ ಮಾದರಿಯ ಒಟ್ಟಾರೆ ವೆಚ್ಚ ಯುಎಸ್ ಡಿ 500 ಮಿಲಿಯನ್‌ಗಿಂತಲೂ ಹೆಚ್ಚಿದೆ ಎಂದು ವರದಿಗಳು ಉಲ್ಲೇಖಿಸಿವೆ.
ತಲಾಲ್ ಅಲ್-ಸೌದ್ ಅವರ ಖಾಸಗಿ ವಿಮಾನವು 800 ಜನ ಕೂರುವ ಸಾಮರ್ಥ್ಯವನ್ನು ಹೊಂದಿದ್ದು, ವಿಮಾನವು 10 ಆಸನಗಳನ್ನು ಹೊಂದಿರುವ ಡೈನಿಂಗ್ ಹಾಲ್, ಐಷಾರಾಮಿ ಬೆಡ್ ರೂಮ್, ಪ್ರಾರ್ಥನಾ ಕೊಠಡಿ, ಮನರಂಜನಾ ಕೊಠಡಿ, ಹೋಮ್ ಥಿಯೇಟರ್ ವ್ಯವಸ್ಥೆ, ಸ್ಪಾ ಮತ್ತು ಸೌನಾದೊಂದಿಗೆ ಮಾರ್ಪಡಿಸಲಾಗಿದೆ.
ಫೋರ್ಬ್ಸ್ ವರದಿ ಪ್ರಕಾರ, ಅಲ್ ವಲೀದ್ ಬಿನ್ ತಲಾಲ್ ಅಲ್ ಸೌದ್ ಅವರ ನಿವ್ವಳ ಆಸ್ತಿ ಮೌಲ್ಯವು 1.55 ಲಕ್ಷ ಕೋಟಿ ರೂಪಾಯಿ ಆಗಿದೆ. ಭಾರತದ ಸಿರಿವಂತ ಉದ್ಯಮಿಗಳಾದ ರತನ್ ಟಾಟಾ ಹಾಗೂ ಮುಕೇಶ್ ಅಂಬಾನಿ ಅವರಿಗೆ ಹೋಲಿಸಿದರೆ ತಲಾಲ್ ಅಲ್ ಸೌದ್ ಅವರ ಆಸ್ತಿ ಮೌಲ್ಯ ಕಡಿಮೆಯಿದೆ ಆದರೆ ಅವರ ಬಳಿ ಇರುವುದು ವಿಶ್ವದ ದುಬಾರಿ ಪ್ರೈವೆಟ್ ಜೆಟ್ ಆಗಿದೆ.
ಇನ್ನು ಭಾರತೀಯ ಬಿಲಿಯೇನರ್ ಮುಕೇಶ್ ಅಂಬಾನಿ ಅವರು ಬೋಯಿಂಗ್ ಜೆಟ್-2 ಅನ್ನು ಹೊಂದಿದ್ದಾರೆ. ಇದರ ಬೆಲೆ 603 ಕೋಟಿ ರೂಪಾಯಿ ಆಗಿದೆ. ಅದೇ ರೀತಿ ಅದಾನಿ ಗ್ರೂಪ್‌ನ ಗೌತಮ್ ಅದಾನಿ ಅವರು ಕೂಡ ಬೊಂಬಾರ್ಡಿಯಾರ್ ಚಾಲೆಂಜ್ 605, ಎಂಬ್ರೇರ್ ಲೆಗಸಿ 650 ಹಾಗೂ ಹಾಕರ್ ಬೀಚ್ಕ್ರಾಫ್ಟ್ 850 ಎಕ್ಸ್‌ಪಿನಂಥಹ ಹಲವು ಖಾಸಗಿ ಜೆಟ್ ಗಳನ್ನು ಹೊಂದಿದ್ದಾರೆ.
ಇನ್ನು ಟಾಟಾ ಗ್ರೂಪ್‌ನ ರತನ್ ಟಾಟಾ ಅವರು ಕೂಡ ಅತ್ಯಂತ ದುಬಾರಿ ಬೆಲೆಯ ಖಾಸಗಿ ಜೆಟ್ ಮಾಡೆಲ್ ಆಗಿರುವ ಡಸಾಲ್ಟ್ ಫಾಲ್ಕನ್ 2000 ಅನ್ನು ಹೊಂದಿದ್ದು, ಇದರ ಬೆಲೆ ಸುಮಾರು 200 ಕೋಟಿ ರೂಪಾಯಿ ಆಗಿದೆ. ಇವರಷ್ಟೇ ಅಲ್ಲದೇ ಜಗತ್ತಿನ ಅತ್ಯಂತ ಶ್ರೀಮಂತ ಬಿಲಿಯನೇರ್ ಗಳಾದ ಎಲಾನ್ ಮಸ್ಕ್, ಬಿಲ್ ಗೇಟ್ಸ್ ಹಾಗೂ ಜೆಫ್ ಬೆಜೋಸ್ ಅವರು ಕೂಡ ದುಬಾರಿ ಖಾಸಗಿ ಜೆಟ್ ಗಳ ಒಡೆಯರಾಗಿದ್ದಾರೆ.


Click it and Unblock the Notifications