ದಿಲ್ಶರ್ ಸಿಂಗ್ ಮಲ್ಹಿ ಅವರು ಕೌಶಲ್ಯ ಆಧಾರಿತ ಗೇಮಿಂಗ್ ಕಂಪನಿಯಾದ ಝುಪಿ (Zupee) ಯ ಸಂಸ್ಥಾಪಕರು ಮತ್ತು ಸಿಇಓ ಆಗಿದ್ದಾರೆ. ಐಐಟಿಯ ಹಳೆಯ ವಿದ್ಯಾರ್ಥಿ ದಿಲ್ಶರ್ ಅವರ ಕಂಪನಿಯೂ, ವೇಗವಾಗಿ ಬೆಳೆಯುತ್ತಿರುವ ಭಾರತೀಯ ಸಂಸ್ಥೆಗಳಲ್ಲಿ ಒಂದಾಗಿದೆ.
ಅದು ಪ್ರಾರಂಭವಾದ ಕೇವಲ 5 ವರ್ಷಗಳಲ್ಲಿ 5,000 ಕೋಟಿ ರೂಪಾಯಿ ($600 ಮಿಲಿಯನ್‌ಗಿಂತಲೂ ಹೆಚ್ಚು) ಮೌಲ್ಯವನ್ನು ತಲುಪಿದೆ. ಕಂಪನಿಯ ಫಂಡಿಂಗ್ ಲ್ಲಿ ಏರಿಕೆಯಾಗಿದ್ದು ಅದು ಒಟ್ಟಾರೆ 122 ಮಿಲಿಯನ್ ಡಾಲರ್ ಹಣ ಸಂಗ್ರಹಿಸಿದೆ.

ತನ್ನ ಪಾಲುದಾರ ಸಂಸ್ಥೆಗಳಲ್ಲಿ ಮುಕೇಶ್ ಅಂಬಾನಿ ನೇತೃತ್ವದ ಡಿಜಿಟಲ್ ದೈತ್ಯ ಜಿಯೋ ಪ್ಲಾಟ್‌ಫಾರ್ಮ್ ಕೂಡಾ ಒಂದಾಗಿದೆ. ದಿಲ್ಶರ್ ರಾಜಸ್ಥಾನದ ಬಿಕಾನೇರ್ ಮೂಲದವರಾಗಿದ್ದು, ಕಾನ್ಪುರದ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ ಹಳೆಯ ವಿದ್ಯಾರ್ಥಿಯಾಗಿದ್ದು, ಇಲ್ಲಿ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ.
ಇವರು ಐಐಟಿ ಕಾನ್ಪುರದಲ್ಲಿ ಸಿಮ್ಯುಟೆಕ್ ಕ್ಲಬ್‌ನ ಮುಖ್ಯಸ್ಥರಾಗಿದ್ದರು. ಸಿಮುಟೆಕ್ ವಿದ್ಯಾರ್ಥಿಗಳು ರಾಸಾಯನಿಕ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಸೈದ್ಧಾಂತಿಕ, ಪ್ರಾಯೋಗಿಕ ಮತ್ತು ಸಿಮ್ಯುಲೇಶನ್ ಯೋಜನೆಗಳಲ್ಲಿ ತಮ್ಮ ಆಸಕ್ತಿಯನ್ನು ಮುಂದುವರಿಸಲು ವೇದಿಕೆಯನ್ನು ಒದಗಿಸುತ್ತದೆ.
ಇದಾದ ಬಳಿಕ ಅವರು ಸ್ವಿಟ್ಜರ್ಲೆಂಡ್ ಮೂಲದ ಇಪಿಎಫ್‌ಎಲ್ ನಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿ ಕೆಲಸ ಮಾಡಿದರು. 2018 ರಲ್ಲಿ, ಅವರು ಸಿದ್ಧಾಂತ್ ಸೌರಭ್ ಜೊತೆಗೆ ಗೇಮಿಂಗ್ ಪ್ಲಾಟ್‌ಫಾರ್ಮ್ ಝುಪಿಯನ್ನು ಸ್ಥಾಪಿಸಿದರು. ಇತ್ತೀಚೆಗೆ ಐಡಿಎಫ್‌ಸಿ ಫಸ್ಟ್ ಮತ್ತು ಹುರುನ್ ಇಂಡಿಯಾ ಬಿಡುಗಡೆ ಮಾಡಿದ 2023 ರ ಭಾರತದ ಟಾಪ್ 200 ಸ್ವಯಂ ನಿರ್ಮಿತ ಉದ್ಯಮಿಗಳ ಪಟ್ಟಿಯಲ್ಲಿ 27 ನೇ ವಯಸ್ಸಿನಲ್ಲಿ ದಿಲ್ಶರ್ ಕಾಣಿಸಿಕೊಂಡಿದ್ದಾರೆ.
ದಿಲ್ಶರ್‌ನ ಕಂಪನಿಯು ಕಳೆದ ವರ್ಷ ಆಗಸ್ಟ್ ನಲ್ಲಿ ಸಂಗ್ರಹಿಸಿದ್ದ 30 ಮಿಲಿಯನ್ ಡಾಲರ್ ನಿಧಿಯನ್ನು ಒಳಗೊಂಡಂತೆ ರೂ. 760 ಕೋಟಿಗೆ (102 ಮಿಲಿಯನ್ ಡಾಲರ್) ತನ್ನ ಸರಣಿ B ಸುತ್ತಿನ ನಿಧಿಯನ್ನು ಮುಕ್ತಾಯಗೊಳಿಸಿದ ನಂತರ 600 ಮಿಲಿಯನ್ ಡಾಲರ್ ಮೌಲ್ಯವನ್ನು ತಲುಪಿದೆ.
ಅದೇ ವೇಳೆ ಝುಪಿ , ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಹಿರಿಯ ಮಗ ಆಕಾಶ್ ಅಂಬಾನಿ ನೇತೃತ್ವದ ಜಿಯೋ ಪ್ಲಾಟ್‌ಫಾರ್ಮ್ ಜೊತೆ ಪಾಲುದಾರಿಕೆ ಮಾಡಿಕೊಂಡಿದ್ದಾರೆ. ದಿಲ್ಶರ್ ಜಿಯೋ ಜೊತೆಗಿನ ಒಡನಾಟವನ್ನು ಕಾರ್ಯತಂತ್ರದ ಪಾಲುದಾರಿಕೆ ಎಂದು ಕರೆದ್ದಿದ್ದು, ಇದರಲ್ಲಿ ಆದಾಯ-ಹಂಚಿಕೆ ಒಪ್ಪಂದ ಮತ್ತು ಯಾವುದೇ ಇಕ್ವಿಟಿ ಹೂಡಿಕೆ ಇಲ್ಲ.
ದಿಲ್ಶರ್ ಅವರ ಕಂಪನಿಯು ಭಾರತದಲ್ಲಿ ಉದಯೋನ್ಮುಖ ಆಗುತ್ತಿರುವ ಆನ್‌ಲೈನ್ ಗೇಮಿಂಗ್ ನಲ್ಲಿ ಈಗಾಗಲೇ ಬಿಲಿಯನ್- ಡಾಲರ್ ಲೇಬಲ್‌ಗಳನ್ನು ಹೊಂದಿರುವ ಡ್ರೀಮ್ 11 ಮತ್ತು ಮೊಬೈಲ್ ಪ್ರೀಮಿಯರ್ ಲೀಗ್‌ನಂತಹ ಸಂಸ್ಥೆಯೊಂದಿಗೆ ಸ್ಪರ್ಧಿಸುತ್ತದೆ.


Click it and Unblock the Notifications