ವಿದೇಶದಲ್ಲಿ ವ್ಯಾಸಂಗ ಮಾಡಿ ಭಾರತಕ್ಕೆ ವಾಪಾಸ್ಸಾಗಿ ತಮ್ಮ ಕುಟುಂಬದ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಅಂಥಹ ಯಶಸ್ವಿ ಉದ್ಯಮಿಗಳ ಪೈಕಿ ಜವಳಿ ಹಾಗೂ ಸಕ್ಕರೆ ತಯಾರಕ ಕೆಪಿಆರ್ ಮಿಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಿಆರ್ ಆನಂದ ಕೃಷ್ಣನ್ ಕೂಡ ಒಬ್ಬರು.
ಕೆಪಿಆರ್ ಮಿಲ್ ಎಂಬ ಜವಳಿ ಬ್ರಾಂಡ್ ಕಂಪನಿಯನ್ನು ಅವರ ತಂದೆ ಕೆಪಿ ರಾಮಸಾಮಿ ಅವರು 1984ರಲ್ಲಿ ಸ್ಥಾಪಿಸಿದ್ದರು. ಆದರೆ, ಈಗ ಅವರ ಈ ಕಂಪನಿಯು ಬಹಳ ಎತ್ತರಕ್ಕೆ ಬೆಳೆದು ನಿಂತಿದೆ. ಹೀಗಾಗಿ, 2023ರ ಅಕ್ಟೋಬರ್ ವೇಳೆಗೆ ಈ ಕಂಪನಿಯು 2.3 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ 100 ಮಂದಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕಂಪನಿಯು ಪ್ರಸ್ತುತ 26,473 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.

ಆನಂದ ಕೃಷ್ಣನ್ ಅವರು ತಮಿಳುನಾಡಿನ ಕೊಯಮತ್ತೂರಿನ ಜಿಆರ್‌ಡಿ ಕಾಲೇಜಿನಿಂದ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ಫಿಲಡಲ್ಪಿಯಾ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವುದಕ್ಕೆ ಅಮೆರಿಕಾಕ್ಕೆ ಹೋಗಿದ್ದರು.
2001ರಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ನಂತರ 20002ರಲ್ಲಿ ಆನಂದ್ ಕೃಷ್ಣನ್ ಅವರು ಕೆಪಿಆರ್ ತಂಡವನ್ನು ಸೇರಿಕೊಂಡಿದ್ದರು. ಅಂದಿನಿಂದ ಈ ಕಂಪನಿಯನ್ನು ಎತ್ತರಕ್ಕೆ ಬೆಳೆಸುವುದಕ್ಕೆ ಆನಂದ್ ಕೃಷ್ಣನ್ ಅವರು ಅವಿರತ ಶ್ರಮ ವಹಿಸಿದ್ದಾರೆ.
2008ರಿಂದ ಆನಂದ್ ಕೃಷ್ಣನ್ ಅವರು ಕಂಪನಿಯ ಅಧ್ಯಕ್ಷರಾಗಿ(ಸಂಸ್ಕರಣಾ ವಿಭಾಗ) ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದೆ 2001ರಲ್ಲಿ ಅವರು ಕೆಪಿಆರ್ ಮಿಲ್ ಲಿಮಿಟೆಡ್‌ನ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡರು. ಆ ಮೂಲಕ ಆನಂದ್ ಅವರು ಕೆಪಿಆರ್ ಗ್ರೂಪ್‌ನ ವಿವಿಧ ವಿಸ್ತರಣೆ ಹಾಗೂ ಮಾಡರ್ನ್ ಪ್ಲಾನಿಂಗ್ ಮಾಡುವತ್ತ ಹೆಚ್ಚಿನ ಗಮನವನ್ನು ಹರಿಸಿದ್ದಾರೆ.
ಈಗ ಆನಂದನ್ ಕೃಷ್ಣನ್ ಅವರು ಕರ್ನಾಟಕದಲ್ಲಿ ಸಂಸ್ಕರಣಾ ವಿಭಾಗ, ಗಾರ್ಮೆಂಟ್ ಘಟಕ, ಕೆಲವು ನೈಯ್ಗೆ ಘಟಕಗಳು ಹಾಗೂ ಕೋ-ಜೆನ್ ಕಮ್ ಶುಗರ್ ಪ್ಲಾಂಟ್‌ನ ಆಪರೇಷನ್‌ಗಳನ್ನು ನೋಡಿಕೊಳ್ಳುತ್ತಿದ್ದಾರೆ. ಈ ನಡುವೆ ಆನಂದ್ ಕೃಷ್ಣನ್ ಅವರು ಕೋಯಮತ್ತೂರಿನಲ್ಗಲಿ ಆಡಿ ಹಾಗೂ ಹಾರ್ಲೆ ಡೇವಿಡ್‌ಸನ್ ವಾಹನಗಳ ಅಧಿಕೃತ ಡೀಲರ್‌ಶಿಪ್‌ಗಳನ್ನು ಕೂಡ ಹೊಂದಿದ್ದಾರೆ.
ಕೆಪಿಆರ್ ಕಂಪನಿ ಈಗ ಎಷ್ಟೊಂದು ಎತ್ತರಕ್ಕೆ ಬೆಳೆದು ನಿಂತಿದೆ ಅಂದರೆ ವಾರ್ಷಿಕವಾಗಿ 128 ಮಿಲಿಯನ್ ಉಡುಪುಗಳನ್ನು ಸಿದ್ಧಪಡಿಸುತ್ತಿದೆ. ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತ್ರಗಳಿಂದ ಹಿಡಿದು ಸ್ಲೀಪರ್‌ವೇರ್ ತನಕ ಎಲ್ಲ ರೀತಿಯ ಬಟ್ಟೆಗಳನ್ನು ಉತ್ಪಾದಿಸುತ್ತಿದೆ. ವಾಲ್‌ಮಾರ್ಟ್, ಎನ್ ಅಂಡ್ ಎಂ, ಮಾರ್ಕ್ಸ್ ಅಂಡ್ ಸ್ಪೆಂಸರ್‌ನಂಥಹ ಬ್ರಾಂಡೆಡ್ ಮಳಿಗೆಗಳಲ್ಲಿಯೂ ಲಭ್ಯವಿದೆ


Click it and Unblock the Notifications