ಇನ್ ಸ್ಟೆಂಟ್ ಮಸಾಲಾ ಮತ್ತು ಮಿಕ್ಸ್ ಉತ್ಪನ್ನಗಳು ಇಂದು ಭಾರತದ ಹೆಚ್ಚಿನ ಮನೆಗಳಲ್ಲಿ ಚಿರಪರಿಚಿತವಾಗಿದೆ. ಈ ಮಸಾಲೆಗಳು ಮನೆಯಲ್ಲಿ ತಯಾರಿಸಿದ ಆಹಾರಗಳ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸಲು ಹೆಸರುವಾಸಿಯಾಗಿದೆ.
ಈ ಮಾರುಕಟ್ಟೆ ವಲಯದಲ್ಲಿ "ಕ್ವಾಲಿಟಿ ಫುಡ್ಸ್ ಕಂಪನಿ" ತನ್ನದೇ ಆದ ಹೆಸರುಮಾಡಿದ್ದು, ಇದು 2019ರಲ್ಲಿ 50 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ದಾಖಲಿಸಿದೆ. ಈ ಬಗ್ಗೆ ಇಲ್ಲಿದೆ ವರದಿ ಮುಂದೆ ಓದಿ....

ಆರಂಭಿಕ ಆರಂಭ
ಭವರ್ಲಾಲ್ಜಿ ಪಗರಿಯಾ ಎಂಬವರು ರಾಜಸ್ಥಾನದ ಸೋಜತ್ ತೊರೆದು ಬೆಂಗಳೂರಿಗೆ ಸ್ಥಳಾಂತರಗೊಂಡಾಗ ಅಂದರೆ 1960 ರ ದಶಕದ ಉತ್ತರಾರ್ಧದಲ್ಲಿ ಈ ವ್ಯವಹಾರ ಆರಂಭವಾಯಿತು. ಇವರು ಮಸಾಲೆಗಳನ್ನು ಮಾರಾಟ ಮಾಡಲೆಂದು ಸಣ್ಣ ಕಿರಾಣಿ ಅಂಗಡಿಯನ್ನು ಆರಂಭಿಸಿ ಅದನ್ನು 30 ವರ್ಷಗಳ ಕಾಲ ಮುನ್ನಡೆಸಿದರು.
ತಂದೆಯ ವ್ಯವಹಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅವರ ಪುತ್ರ ನರೇಶ್ ಪಗರಿಯಾ ಅವರು ಮಸಾಲೆಗಳನ್ನು ಕೇವಲ ಮಾರಾಟ ಮಾಡುವುದಕ್ಕಿಂತ , ಮಸಾಲಾಗಳನ್ನು ಖುದ್ದು ತಯಾರಿಸಿ ಮಾರಾಟ ಮಾಡುವುದು ಉತ್ತಮ ಎಂದು ತಮ್ಮ ತಂದೆಗೆ ಸಲಹೆ ನೀಡಿದರು.
"ನಾನು ಇನ್ನೂ ಓದುತ್ತಿದ್ದೆ, ಆಗ ಆ ಸಣ್ಣ ಅಂಗಡಿಯಲ್ಲಿ ನಾಲ್ಕು ವಿಧದ ಮಸಾಲೆಗಳನ್ನು ತಯಾರಿಸಲು ಪ್ರಾರಂಭಿಸಿದೆವು. ನನ್ನ ಅಧ್ಯಯನವನ್ನು ಪೂರ್ಣಗೊಂಡ ನಂತರ, ನಾನು ಮಸಾಲಾ ಉತ್ಪಾದನಾ ವ್ಯವಹಾರವನ್ನು ನಡೆಸುವ ನಿಲುವನ್ನು ತೆಗೆದುಕೊಂಡಿದ್ದೆ," ಎನ್ನುತ್ತಾರೆ ನರೇಶ್ ಪಗರಿಯಾ.
ಪಗರಿಯಾ ಫುಡ್ಸ್ ಮತ್ತು ಬ್ರ್ಯಾಂಡ್ ಕ್ವಾಲಿಟಿ ಫುಡ್ಸ್
ವಿವಿಧ ಮಸಾಲೆಗಳನ್ನು ಉತ್ಪಾದಿಸಿ, ಉದ್ಯಮ ವಿಸ್ತರಿಸಬೇಕೆಂಬ ಪ್ರಯತ್ನದಲ್ಲಿದ್ದ ನರೇಶ್ ಅವರು, 1998 ರಲ್ಲಿ, ಅವರು ಸಣ್ಣ ಅಂಗಡಿಯಿಂದ ಮಾಗಡಿ ರಸ್ತೆಯಲ್ಲಿರುವ 300 ಚದರ ಅಡಿ ಅಂಗಡಿಯೊಂದಕ್ಕೆ ಸ್ಥಳಾಂತರಗೊಂಡರು. ಇದೇ ಸಂದರ್ಭ ಅವರು ತಮ್ಮ ಉತ್ಪನ್ನಗಳಿಗೆ ಪಗರಿಯಾ ಫುಡ್ಸ್ ಮತ್ತು ಬ್ರ್ಯಾಂಡ್ ಕ್ವಾಲಿಟಿ ಫುಡ್ಸ್ ಎಂದು ಹೆಸರಿಸಿದರು.
ಒಂದು ವರ್ಷದ ನಂತರ, ನರೇಶ್ ಅವರು ರಾಜಾಜಿನಗರದಲ್ಲಿ ಮತ್ತೊಂದು ಉತ್ಪಾದನಾ ಘಟಕವನ್ನು ಪ್ರಾರಂಭಿಸಿದ್ದು ಇದು ಹಿಂದಿನದಕ್ಕಿಂತ ಐದು ಪಟ್ಟು ದೊಡ್ಡದಾಗಿತ್ತು. "ಮಸಾಲಾಗಳೊಂದಿಗೆ ಆರಂಭಿಸಿ ನಾವು ಮುಂದೆ ಪೌಷ್ಟಿಕ ಮತ್ತು ಕೈಗೆಟುಕುವ ಉತ್ಪನ್ನಗಳ ಅಗತ್ಯ ಅರಿತು ಅವುಗಳನ್ನು ತಯಾರಿಸತೊಡಗಿದೆವು. ಇದರೊಂದಿಗೆ ನಾವು ಇತರ ಬ್ರಾಂಡ್‌ಗಳನ್ನು ಸೂಕ್ಷ್ಮವಾಗಿ ಗಮನಿಸತೊಡಗಿದೆವು," ಎನ್ನುತ್ತಾರೆ ನರೇಶ್.
"2002 ರಲ್ಲಿ ಅಸ್ತಿತ್ವದಲ್ಲಿರುವ ಉತ್ಪಾದನಾ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ ತಮ್ಮ ದವಸ ಧಾನ್ಯಗಳ ಉತ್ಪನ್ನ ಆರಂಭಿಸಿದ್ದು, ಇದು ಕಡಿಮೆ ಸಮಯದಲ್ಲಿ ಸೂಪರ್ ಹಿಟ್ ಆಯಿತು. ಬಳಿಕ ನಾವು ದಕ್ಷಿಣ ಭಾರತದ ಎಲ್ಲಾ ಮಾರುಕಟ್ಟೆಗಳಿಗೆ ನಮ್ಮ ಉತ್ಪನ್ನಗಳನ್ನು ತ್ವರಿತವಾಗಿ ವಿಸ್ತರಿಸಿದವು. ಇದೇ ವೇಳೇ ನನ್ನ ಸೋದರಳಿಯ ಧೀರಜ್ ಜೈನ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ನಿರ್ವಹಿಸಲು ನಮ್ಮೊಂದಿಗೆ ಸೇರಿಕೊಂಡರು," ಎಂದು ನರೇಶ್ ಕಂಪನಿಯ ಬೆಳವಣಿಗೆಯ ಬಗ್ಗೆ ವಿವರಿಸುತ್ತಾರೆ.
ಸಾಮಾನ್ಯ ವ್ಯಾಪಾರ, ಆಧುನಿಕ ವ್ಯಾಪಾರ, ಇ-ಕಾಮರ್ಸ್ ಮತ್ತು ರಫ್ತು ಈ ನಾಲ್ಕು ಬಗೆಯ ಮಾರಾಟಕ್ಕೂ 2006 ರಿಂದ, ನರೇಶ್ ಅವರು ತಮ್ಮ ಗಮನವನ್ನು ಕೇಂದ್ರೀಕರಿಸಿದ್ದು, ಸಾಮಾನ್ಯ ವ್ಯಾಪಾರದಲ್ಲಿ, 35,000 ದೇಶೀಯ ರಿಟೇಲ್ ವ್ಯಾಪಾರಿಗಳೊಂದಿಗೆ ಕೈ ಜೋಡಿಸಿದ್ದು ದಕ್ಷಿಣ ಭಾರತ ಮತ್ತು ಪಶ್ಚಿಮ ಭಾರತದಾದ್ಯಂತ 450 ಕ್ಕೂ ಹೆಚ್ಚು ವಿತರಕರನ್ನು ಸಂಸ್ಥೆ ಹೊಂದಿದೆ.
ಆಧುನಿಕ ವ್ಯಾಪಾರದಲ್ಲಿ, ಕಂಪನಿಯು ಡಿ -ಮಾರ್ಟ್, ಬಿಗ್ ಬಜಾರ್, ಮೆಟ್ರೋ ಕ್ಯಾಶ ಅಂಡ್ ಕ್ಯಾರಿ, ರಿಲಯನ್ಸ್, ಮೋರ್, ವಾಲ್‌ಮಾರ್ಟ್, ಇತ್ಯಾದಿಗಳಿಗೆ ಉತ್ಪನ್ನಗಳನ್ನು ಪೂರೈಸುತ್ತದೆ. ಕ್ವಾಲಿಟಿ ಸಂಸ್ಥೆಯೂ ಡಿಜಿಟಲ್ ವ್ಯವಹಾರದ ಕಡೆಗೂ ಗಮನ ಹರಿಸಿದ್ದು ಅಮೆಜಾನ್ ಇಂಡಿಯಾ, ಫ್ಲಿಪ್‌ಕಾರ್ಟ್ ಮತ್ತು ಬಿಗ್‌ಬಾಸ್ಕೆಟ್‌ನಲ್ಲಿ ಮಾರಾಟ ಮಾಡುತ್ತದೆ.
ಮಾತ್ರವಲ್ಲದೇ 20 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದ್ದು 5,000 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮಳಿಗೆಗಳಲ್ಲಿ ಕ್ವಾಲಿಟಿ ಉತ್ಪನ್ನಗಳು ಲಭ್ಯವಿದೆ. ಕ್ವಾಲಿಟಿ ಫುಡ್ಸ್ ಪ್ರಸ್ತುತ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಪ್ರಧಾನ ಕಚೇರಿ ಹೊಂದಿದ್ದು ಹಾರೋಹಳ್ಳಿಯಲ್ಲಿ ಬೃಹತ್ ಉತ್ಪಾದನಾ ಘಟಕವಿದೆ. ಈ ಉತ್ಪಾದನಾ ಘಟಕವೇ ನಮ್ಮ ಯಶಸ್ಸಿಗೆ ಕಾರಣ.
ನಮ್ಮ ಯಾವುದೇ ಉತ್ಪನ್ನಗಳಿಗೇ ಯಾವುದೇ ಬಗೆಯ ಕೃತಕ ಬಣ್ಣಗಳು / ಸುವಾಸನೆ ಅಥವಾ ಪ್ರಿಸರೇಟಿವ್ಸ್ ಸೇರಿಸುವುದಿಲ್ಲ ಇದೇ ನಮ್ಮ ವ್ಯವಹಾರದ ಗುಟ್ಟು ಎನ್ನುತ್ತಾರೆ ನರೇಶ್. ಕ್ವಾಲಿಟಿ ಬ್ರ್ಯಾಂಡ್ ನಗರವಾಸಿಗಳ ಪ್ರತಿ ಮನೆಗೂ ವ್ಯಾಪಿಸಿದ್ದು , ಜೊತೆಗೆ ಎಂಡಿಎಚ್, ಎಂಟಿಆರ್ ಮತ್ತು ಎವರೆಸ್ಟ್‌ನಂತಹ ದೊಡ್ಡ ಆಹಾರ ಉತ್ಪನ್ನ ಸಂಸ್ಥೆಗಳಿಗೆ ನಿಕಟ ಸ್ಪರ್ಧೆಯನ್ನು ನೀಡುತ್ತಿದೆ.
ಇದಕ್ಕಾಗಿ ಪ್ರತಿಷ್ಟಿತ ಅವಾರ್ಡ್ ಗಳು ಇವರ ಸಂಸ್ಥೆಗೆ ಒಲಿದು ಬಂದಿದೆ. ಎಸ್‌ಎಂಇ ಫೋರಮ್ ಅವಾರ್ಡ್ 2013, Dun & Bradstreet Award for Best Emerging SME, ಮತ್ತು ಇನ್ವೆಸ್ಟ್ ಕರ್ನಾಟಕ ಶೃಂಗಸಭೆಯಲ್ಲಿ ಅತ್ಯುತ್ತಮ ಉತ್ಪಾದನಾ ಶ್ರೇಷ್ಠ ಪ್ರಶಸ್ತಿ (ಆಹಾರ ವಿಭಾಗ) ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications