ಅಂಬಾನಿ, ಅದಾನಿ, ಟಾಟಾಗಿಂತ ಶ್ರೀಮಂತವಾಗಿದ್ದ ವ್ಯಕ್ತಿಯಿಂದ ಹೊಸ ಉದ್ಯಮ, ಯಾರಿವರು?!

ಜಗತ್ತಿನ ಮುಂಚೂಣಿಯ ಬಿಲಿಯನೇರ್‌ ಉದ್ಯಮಿ ಜಾಕ್‌ ಮಾ ಇತ್ತೀಚಿನ ನಡವಳಿಕೆ ನೋಡಿದರೆ ಅವರು ನಿವೃತ್ತಿಯಾಗುತ್ತಾರೆ ಎನ್ನುವ ಅನುಮಾನ ಮೂಡುತ್ತದೆ. ಅವರು ಇದೀಗ ಸಾರ್ವಜನಿಕ ಬದುಕಿನಿಂದ ಒಂದು ಹೆಜ್ಜೆ ಹಿಂದೆ ಸರಿದಿದ್ದ ಅವರು ಇತ್ತೀಚಿನ ಕೆಲವು ಬೆಳವಣಿಗಳ ಬಳಿಕ ಹ್ಯಾಂಗ್‌ಝೌ ಎಂಬ ಸಣ್ಣ ಕಂಪನಿಯಲ್ಲಿ 10 ಮಿಲಿಯನ್‌ ಯುವಾನ್‌(1.4 ಮಿಲಿಯನ್‌ ಡಾಲರ್‌) ಆರಂಭಿಕ ಬಂಡವಾಳವನ್ನು ಹೂಡಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅವರು ಹೂಡಿಕೆ ಮಾಡಿರುವುದು ಮಾʼಸ್‌ ಕಿಚನ್‌ ಫುಡ್‌ ಎಂಬ ಹೊಸ ಕಂಪನಿಯಲ್ಲಿ. ಚೀನಾದ ನ್ಯಾಷನಲ್‌ ಎಂಟರ್‌ಪ್ರೈಸ್‌ ಕ್ರೆಡಿಟ್‌ ಇನ್ಫಾರ್ಮೇಷನ್‌ ಪಬ್ಲಿಸಿಟಿ ಸಿಸ್ಟಮ್‌ನ ಪ್ರಕಾರ, ಕಂಪನಿಯು ಕೃಷಿ ಉತ್ಪನ್ನಗಳನ್ನು ಸಂಸ್ಕರಿಸುವ ಹಾಗೂ ಮಾರಾಟ ಮಾಡುವತ್ತ ಗಮನಹರಿಸುತ್ತದೆ.

 ನಾಪತ್ತೆಯಾಗಿದ್ದ ಜಾಕ್‌ ಮಾ ಇದೀಗ ಹೊಸ ಉದ್ಯಮ ಸ್ಥಾಪನೆಯತ್ತ!

2020 ರಿಂದ ಬೀಜಿಂಗ್‌, ಮಾ ಅವರ ಕಂಪನಿಗಳಾದ ಅಲಿಬಾಬಾ ಹಾಗೂ ಆಂಟದದ ಗ್ರೂಪ್‌ ಕೋ ಮೇಲೆ ನಿಯಂತ್ರಣಗಳನ್ನು ಹೆಚ್ಚಿಸಿದಾಗ ಅವರ ಚಟುವಟಿಕೆಗಳು ಹಾಗೂ ಇರುವಿಕೆ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಚೀನಾದ ಹಣಕಾಸು ವ್ಯವಸ್ಥೆ ಬಗ್ಗೆ ಮಾತನಾಡಿದ ಬಳಿಕ ಅವರು ಸಾರ್ವಜನಿಕ ಬದುಕಿನಿಂದ ದೂರವಾಗಿದ್ದರು.

ಆ ನಂತರದಲ್ಲಿ ಮಾ ಅವರು ಕೃಷಿ ಕ್ಷೇತ್ರದತ್ತ ತಮ್ಮ ಗಮನವನ್ನು ಹರಿಸಿದ್ದಾರೆ. ತಮ್ಮ ಫೌಂಡೇಷನ್‌ ಮೂಲಕ ಕಮ್ಯೂನಿಸ್ಟ್‌ ಪಕ್ಷದ ಸಾಮಾನ್ಯ ಸಮೃದ್ಧಿ ಉಪಕ್ರಮದ ಮೂಲಕ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಇದಕ್ಕೆ ಹಲವು ಪ್ರಭಾವಿ ಉದ್ಯಮಿಗಳು ಕೂಡ ಸಾಥ್‌ ನೀಡಿದ್ದಾರೆ.

ಹಾಂಗ್‌ಝೌದಲ್ಲಿನ ಶಾಲೆಯೊಂದರಲ್ಲಿ ಮಾ ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಇದು ಅವರು ಸಾರ್ವಜನಿಕ ಬದುಕಿಗೆ ವಾಪಾಸ್ಸಾಗುತ್ತಾರೆ ಎಂಬ ಸುಳಿವು ನೀಡಿದ್ದರೂ, ತಮ್ಮ ಸಮಯವನ್ನು ಈಗ ಕೃಷಿ ಹಾಗೂ ಶೈಕ್ಷಣಿಕ ಚಟುವಟಿಕೆಗಳತ್ತ ಹರಿಸಿದ್ದಾರೆ. ಅವರು ಆರಂಭಿಸುತ್ತಿರುವ ಹೊಸ ಉದ್ಯಮದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

ಆದರೆ, ತಮ್ಮ ಫೌಂಡೇಷನ್‌ನ ಹಿರಿಯ ಅಧಿಕಾರಿಗಳು ಈ ಕಂಪನಿಯ ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮೂರು ವರ್ಷಗಳ ಹಿಂದೆಯಷ್ಟೇ ಜಾಕ್‌ ಮಾ ಅವರು 61.7 ಬಿಲಿಯನ್‌ ಡಾಲರ್‌ ಆಸ್ತಿಯೊಂದಿಗೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಅವರು ಮುಕೇಶ್‌ ಅಂಬಾನಿ, ರತನ್‌ ಟಾಟಾ ಹಾಗೂ ಗೌತಮ್‌ ಅದಾನಿ ಅವರಿಗಿಂತ ಶ್ರೀಮಂತರಾಗಿದ್ದರು.

ಆದರೆ ಆ ನಂತರದಲ್ಲಿ ಅದು ಸಂಪೂರ್ಣ ಬದಲಾಗಿದ್ದು, ಈಗ ಅವರ ಬಳಿ ಸುಮಾರು 24 ಬಿಲಿಯನ್‌ ಡಾಲರ್‌ ಆಸ್ತಿ ಮಾತ್ರ ಉಳಿದುಕೊಂಡಿದೆ. 1964 ರಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ ಜನಿಸಿದ ಮಾ ಅವರು ಅಚಲ ನಿರ್ಧಾರದಿಂದ ಆರಂಭಿಕ ಸವಾಲುಗಳನ್ನು ಎದುರಿಸಿದ್ದರು. ಕೆಎಫ್‌ಸಿ ಸೇರಿದಂತೆ ಹಲವು ಕಡೆ ಅವರಿಗೆ ಉದ್ಯೋಗ ನೀಡುವುದಕ್ಕೆ ಕಂಪನಿಗಳು ನಿರಾಕರಿಸಿದ್ದವು.

ಆದರೆ, ಅವರು ತಮ್ಮ ಛಲ ಹಾಗೂ ಹಿಂಜರಿಕೆಯನ್ನು ಬಿಟ್ಟಿರಲಿಲ್ಲ. 1995ರಲ್ಲಿ ಅವರು ಅಂತರ್ಜಾಲವನ್ನು ನೋಡಿದಾಗ ಅವರ ಬದುಕು ದೊಡ್ಡ ತಿರುವು ಪಡೆಯುವುದಕ್ಕೆ ಕಾರಣವಾಯಿತು. 1999ರಲ್ಲಿ ಅವರು ಚೀನಾ ವ್ಯಾಪಾರಿಗಳನ್ನು ಜಾಗತಿಕ ಖರೀದಿದಾರರೊಂದಿಗೆ ಸಂಪರ್ಕಿಸುವುದಕ್ಕೆ ಅಲಿಬಾಬಾ ಕಂಪನಿಯನ್ನು ಪ್ರಾರಂಭಿಸಿದ್ದರು.

ತಂತ್ರಜ್ಞಾನದ ಮೂಲಕ ಮಧ್ಯಮ ಹಾಗೂ ಸಣ್ಣ ಉದ್ದಿಮೆದಾರರನ್ನು ತಂತ್ರಜ್ಞಾನದ ಸಬಲೀಕರಣಗೊಳಿಸುವುದು ಅವರ ಉದ್ದೇಶ ಹಾಗೂ ಕನಸಾಗಿತ್ತು. Taobao ಮತ್ತು Tmall ನಂತಹ ಉಪಕ್ರಮಗಳು ಜನರನ್ನು ಚೀನಾ ಹಾಗೂ ಜಾಗತಿಕ ಮಟ್ಟದಲ್ಲಿ ಶಾಪಿಂಗ್‌ನತ್ತ ಸೆಳೆಯುವುದಕ್ಕೆ ಪ್ರೇರೇಪಿಸಿತ್ತು. ಆ ಮೂಲಕ ಇ-ಕಾಮರ್ಸ್‌ ವಲಯದಲ್ಲಿ ಅಲಿಬಾಬಾ ಕಂಪನಿಯು ಹೊಸ ಕ್ರಾಂತಿಯನ್ನೇ ಸೃಷ್ಟಿಸಿತ್ತು.

ಈ ಇ-ಕಾಮರ್ಸ್‌ ಸೇವೆಯ ಹೊರತಾಗಿ ಮಾ ಅವರು ಅಲಿಬಾಬಾ ಪೋರ್ಟ್‌ಪೋಲಿಯೊವನ್ನು ಕ್ಲೌಡ್‌ ಕಂಪ್ಯೂಟಿಂಗ್‌, ಡಿಜಿಟಲ್‌ ಪಾವತಿಗಳು(ಅಲಿಪೇ), ಮನರಂಜನೆ (ಅಲಿಬಾಬಾ ಪಿಚ್ಚರ್ಸ್‌) ಹಾಗೂ (ಕೈನಿಯಾವೊ ನೆಟ್‌ವರ್ಕ್‌) ಲಾಜಿಸ್ಟಿಕ್‌ ಕ್ಷೇತ್ರಕ್ಕೆ ವಿಸ್ತರಿಸಿಕೊಂಡರು. ಇತ್ತೀಚೆಗೆ ಅವರು ಚೀನಾದ ನಿಯಂತ್ರಣ ವ್ಯವಸ್ಥೆ ಬಗ್ಗೆ ಮಾಡಿದ ಬಹಿರಂಗ ಟೀಕೆಗಳು ಸಾಕಷ್ಟು ಕೋಲಾಹಲವನ್ನು ಚೀನಾದಲ್ಲಿ ಸೃಷ್ಟಿಸಿತ್ತು. 2020ರಲ್ಲಿ ಆಂಟ್‌ ಗ್ರೂಪ್‌ನ ಐಪಿಒವನ್ನು ಅಮಾನುಗೊಳಿಸಲಾಯಿತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+