ಭಾರತೀಯ ಬಿಲಿಯನೇರ್ ಆಗಿರುವ ರಾಜನ್ ಮಿತ್ತಲ್, ಭಾರ್ತಿ ಎಂಟರ್‌ಪ್ರೈಸಸ್‌ನ ಉಪಾಧ್ಯಕ್ಷರಾಗಿದ್ದು, ಇವರ ಬಹುದೊಡ್ಡ ಆಸ್ತಿ ಭಾರ್ತಿ ಏರ್‌ಟೆಲ್ ಆಗಿದೆ. ಭಾರ್ತಿ ಎಂಟರ್‌ಪ್ರೈಸಸ್ ಟೆಲಿಕಾಂ, ಬಾಹ್ಯಾಕಾಶ ಸಂವಹನ ಇತ್ಯಾದಿಗಳಲ್ಲಿ ವೈವಿಧ್ಯಮಯ ಆಸಕ್ತಿಗಳನ್ನು ಹೊಂದಿರುವ ಭಾರತದ ಪ್ರಮುಖ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿದೆ. ರಾಜನ್ ಅವರು 1976 ರಲ್ಲಿ ಭಾರ್ತಿ ಎಂಟರ್‌ಪ್ರೈಸಸ್ ಅನ್ನು ಸ್ಥಾಪಿಸಿದ ಉದ್ಯಮಿ ಸುನಿಲ್ ಮಿತ್ತಲ್ ಅವರ ಸಹೋದರರಾಗಿದ್ದಾರೆ.
20 ವರ್ಷಗಳ ಹಿಂದೆ ಸಹೋದರರಾದ ರಾಜನ್, ಸುನಿಲ್ ಮತ್ತು ರಾಕೇಶ್ ಭಾರತಿ ಮಿತ್ತಲ್ ಸ್ಥಾಪಿಸಿದ ಏರ್‌ಟೆಲ್ ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಸಂಸ್ಥೆಯೊಂದಿಗೆ ಸ್ಪರ್ಧಿಸುತ್ತದೆ. ಡಿಸೆಂಬರ್ 18ರ ವೇಳೆಯಲ್ಲಿ, ಇವರ ಸಂಸ್ಥೆಯ ಮಾರುಕಟ್ಟೆ ಮೌಲ್ಯವು 5,80,000 ಕೋಟಿ ರೂಪಾಯಿ ಆಗಿದೆ.

ಭಾರತೀಯ ವಾಣಿಜ್ಯೋದ್ಯಮಿಯಾಗಿರುವ ಇವರು, ತಮ್ಮ ಕುಟುಂಬದಲ್ಲಿ ಉದ್ಯಮದಲ್ಲಿ ತೊಡಗಿರುವ ಮೊದಲ ತಲೆಮಾರಿನವರಾಗಿದ್ದಾರೆ. ರಾಜನ್ ಅವರರು ಪಂಜಾಬ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ ನೇರವಾಗಿ ಭಾರ್ತಿ ಎಂಟರ್‌ಪ್ರೈಸಸ್‌ಗೆ ಸೇರಿದರು. 63 ವರ್ಷದ ರಾಜನ್ ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನ ಹಳೆಯ ವಿದ್ಯಾರ್ಥಿಯೂ ಆಗಿದ್ದಾರೆ.
ಪ್ರಸ್ತುತ ಅವರ ರಿಯಲ್ ಟೈಮ್ ನಿವ್ವಳ ಮೌಲ್ಯ 42,330 ಕೋಟಿ ರೂಪಾಯಿ ಆಗಿದೆ. ರಾಜನ್ ಅವರು ಕಾರ್ಪೊರೇಟ್ ಮಟ್ಟದಲ್ಲಿ ತಂಡಗಳ ಮೇಲ್ವಿಚಾರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಮಾರ್ಕೆಟಿಂಗ್ ವಿಚಾರದಲ್ಲಿ ಅವರ ಅಗಾಧ ಅನುಭವವಿದೆ. ರಾಜನ್ ಅವರು ಸಂಸ್ಥೆಯ ಅನೇಕ, ಹೊಸ ಉದ್ಯಮಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇದಲ್ಲದೇ ಹಲವಾರು ಇಂಡಸ್ಟ್ರಿ ಅಸ್ಸೊಸಿಯೆಷನ್ಸ್ ಮತ್ತು ಪಾಲಿಸಿ ಮೇಕಿಂಗ್ ಬಾಡೀಸ್ ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ. 2012-13 ರಲ್ಲಿ ಇಂಟರ್ ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್ (ಐಸಿಸಿ) ಭಾರತದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2009 - 2010 ರ ಎಫ್‌ಐಸಿಸಿಐ ಅಧ್ಯಕ್ಷರಾಗಿದ್ದರು.
ಮಿತ್ತಲ್ ಮತ್ತುಅವರ ಇಬ್ಬರು ಸಹೋದರರು ತಮ್ಮ ಚಾರಿಟಬಲ್ ಫೌಂಡೇಶನ್‌ಗೆ 1.1 ಯುಎಸ್ ಡಾಲರ್ ಬಿಲಿಯನ್ ನೀಡುವ ವಾಗ್ದಾನ ನೀಡಿದ್ದು, ಈ ಫೌಂಡೇಶನ್ ಮುಖ್ಯವಾಗಿ ಬಡವರಿಗೆ ಉಚಿತ ಶಿಕ್ಷಣವನ್ನು ಒದಗಿಸುವ ದೃಷಿಯಿಂದ ಹೊಸ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಕೆಲಸ ಮಾಡುತ್ತದೆ.


Click it and Unblock the Notifications