ವೃತ್ತಿಯಲ್ಲಿ ವೈದ್ಯರಾಗಿರುವ ಅಮರಿಂದರ್ ಸಿಂಗ್ ಅವರು ಈಗ ದೇಶದ ಪ್ರಮುಖ ಉದ್ಯಮಿಗಳ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಭಾರತದಲ್ಲಿ ಅತಿದೊಡ್ಡ ದಂತ ಸರಪಳಿಯಾಗಿ ಗುರುತಿಸಿಕೊಂಡಿರುವ ಕ್ಲೋವ್ ಡೆಂಟಲ್ ಅನ್ನು ಸ್ಥಾಪಿಸುವ ಯೋಚನೆಯನ್ನು 2010ರಲ್ಲಿ ಮಾಡಿದ್ದರು.
ಇದಕ್ಕೆ ಕಾರಣ ಕೂಡ ಇದೆ. ಏಕೆಂದರೆ ಒಮ್ಮೆ ಅಮರಿಂದರ್ ಸಿಂಗ್ ಅವರು ತಮ್ಮ ಪತ್ನಿಯೊಂದಿಗೆ ದಿಲ್ಲಿಯ ದಂತ ಚಿಕಿತ್ಸಾಲಯಕ್ಕೆ ಹೋಗಿದ್ದಾಗ ಅವರಿಗೆ ಕೆಟ್ಟ ಅನುಭವವೊಂದು ಆಗಿತ್ತು. ಈ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ, ಮುಂದೆ ಓದಿ....

ಆಗಿದ್ದೇನು ತಿಳಿಯಿರಿ
ಈ ಬಗ್ಗೆ ನೆನಪಿಸಿಕೊಳ್ಳುವ ಅಮರಿಂದರ್ ಸಿಂಗ್ "ನಾನು ಹಲ್ಲು ಫಿಲ್ ಮಾಡುವುದಕ್ಕೆ ಕ್ಲಿನಿಕ್‌ಗೆ ಹೋಗಿದ್ದೆ. ಆ ವೇಳೆ ನಾನು ಫಿಲ್ಲಿಂಗ್ ಮಾಡಿದಾಗ ಉಗುಳುವ ತನಕ ಎಲ್ಲವೂ ಸರಿಯಾಗಿತ್ತು. ಆದರೆ, ಅಲ್ಲಿ ಉಗುಳುವ ಜಾಗವು ಅಷ್ಟೊಂದು ಗಲೀಜಿನಿಂದ ಕೂಡಿತ್ತು. ಆ ಅಸಹ್ಯ ವಾತಾವರಣವು ನನ್ನನ್ನು ಸ್ವಂತ ಡೆಂಟಲ್ ಕ್ಲಿನಿಕ್ ಸ್ಥಾಪಿಸುವತ್ತ ಪ್ರೇರೆಪಿಸಿದೆ," ಎನ್ನುತ್ತಾರೆ ಅಮರಿಂದರ್ ಸಿಂಗ್.
ಅವರು ಇತ್ತೀಚೆಗೆ ಅಮೆರಿಕಾ & ಕೆನಡಾದಲ್ಲಿ ಸುಧೀರ್ಘ ಅವಧಿಗೆ ನೆಲೆಸಿ ಇದೀಗ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಆ ಮೂಲಕ ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ಲೆಕ್ಕಾಚಾರ ಹಾಕಿಕೊಂಡಿದ್ದರು. 2011ರಲ್ಲಿ ಕ್ಲೋವ್ ಡೆಂಟಲ್ ಅನ್ನು ಸ್ಥಾಪಿಸಿದ್ದು, ಬಳಿಕ ಸುಮಾರು 350 ಕ್ಕೂ ಹೆಚ್ಚು ಕ್ಲಿನಿಕ್ ಚೈನ್ ನೆಟ್‌ವರ್ಕ್‌ನೊಂದಿಗೆ ದೇಶದೆಲ್ಲೆಡೆ ವಿಸ್ತರಿಸಿಕೊಂಡಿದ್ದಾರೆ. ಆ ಮೂಲಕ 2019ರ ವೇಳೆಗೆ 140 ಕೋಟಿ ರೂ. ವಹಿವಾಟು ನಡೆಸಿದೆ.
ವಿದ್ಯಾರ್ಥಿ ಜೀವನ ಹೇಗಿತ್ತು?
ಸಿಂಗ್ ಅವರು ತಮ್ಮ ಆರಂಭದ ಶಿಕ್ಷಣವನ್ನು ದಿಲ್ಲಿಯಲ್ಲಿ ಪಡೆದುಕೊಂಡಿದ್ದು, ಬಳಿಕ ಡೆಹ್ರೂಡಾನ್ನ ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನಲ್ಲಿ ನಂತರ ನೈಜೀರಿಯಾದಲ್ಲಿ ಪಡೆದುಕೊಂಡಿದ್ದಾರೆ. ಅವರ ತಂದೆಯು ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ಹುದ್ದೆಯಲ್ಲಿದ್ದು, ತಾಯಿಯು ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ನೈಜೀರಿಯಾದಲ್ಲಿರಬೇಕಾದರೆ ಶೈಕ್ಷಣಿಕವಾಗಿ ಬಹಳ ಗಮನಾರ್ಹ ಸಾಧನೆ ಮಾಡಿದ್ದು, 15 ವರ್ಷವಿರುವಾಗಲೇ ಉತ್ತಮ ಶಿಕ್ಷಣವನ್ನು ಪಡೆದುಕೊಂಡಿದ್ದರು.
ನಂತರ ಅವರು ಐದು ವರ್ಷಗಳ ಎಂಜಿನಿರಿಂಗ್ ಶಿಕ್ಷಣವನ್ನು ಪಡೆದುಕೊಂಡಿದ್ದರು. ನೈಜೀರಿಯಾದಲ್ಲಿರಬೇಕಾದರೆ 8 ಸಾವಿರ ನೈಜೀರಿಯನ್ ವಿದ್ಯಾರ್ಥಿಗಳ ಪೈಕಿ 12 ವಿದೇಶಿ ವಿದ್ಯಾರ್ಥಿಗಳಿದ್ದರು. ಅದರಲ್ಲಿ ಪೇಟಾ ಧರಿಸಿದ್ದ ಏಕೈಕ ವ್ಯಕ್ತಿ ಅಮರಿಂದರ್ ಸಿಂಗ್ ಆಗಿದ್ದು, ಎಲ್ಲರೂ ತಮಾಷೆ ಮಾಡುತ್ತಿದ್ದರು.
ಈ ನಡುವೆ ಕೋಪಬಂದಿದ್ದರೂ ಬಹಳ ತಾಳ್ಮೆಯಿಂದ ಶಿಕ್ಷಣದ ಕಡೆಗೆ ಗಮನವನ್ನು ಕೇಂದ್ರೀಕರಿಸಿಕೊಂಡಿದ್ದೆ ಎಂದು ಶಿಕ್ಷಣ ಪಡೆಯುತ್ತಿದ್ದ ಅವಧಿಯಲ್ಲಿನ ಘಟನೆಗಳನ್ನು ನೆನಪಿಸಿಕೊಳ್ಳುತ್ತಾರೆ. ಪದವಿ ಪಡೆದುಕೊಂಡ ನಂತರ ಸಿಂಗ್ ಅವರು 1989ರಲ್ಲಿ ಪ್ಲಾಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಲಾರಂಭಿಸಿದ್ದರು. ನಂತರ ಅವರು ಕೆನಡಾದ ಪ್ರತಿಷ್ಠಿತ ವಾಟರ್‌ಲೋ ವಿವಿಯಿಂದ ಎಂಜಿನಿರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು.
ಮುಂದೆ ಅವರು ಸಪ್ಲೈ ಚೈನ್ ಮಾನೇಜರ್ ಆಗಿ ಕೆನಡಾದಲ್ಲಿ ಹಲವು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಅದಾದ ನಂತರ ಸಿಂಗ್ ಅವರು 1998ರಲ್ಲಿ ಹಾರ್ವರ್ಡ್ ವಿವಿಯಿಂದ ಎಂಬಿಎ ಪದವಿಯನ್ನು ಪಡೆದುಕೊಂಡರು. ಅದನ್ನು ಮುಗಿಸಿಕೊಂಡು ಅವರು ಸ್ಯಾನ್‌ಫ್ರಾನ್ಸಿಸ್ಕೋಗೆ ಶಿಫ್ಟ್ ಆದರು.
ಅಲ್ಲಿ ಅವರು ಇಬ್ಬರು ಸ್ನೇಹಿತರ ಜತೆಗೆ ಸೇರಿಕೊಂಡು ಬಿ2ಬಿ ಶೈಕ್ಷಣಿಕ ವೆಂಚರ್ ಅನ್ನು ಪ್ರಾರಂಭಿಸಿದರು. ಅದಕ್ಕಾಗಿ 2000ದಲ್ಲಿ 35 ಮಿಲಿಯನ್ ಅಮೆರಿಕನ್ ಡಾಲರ್ ಫಂಡ್ ಅನ್ನು ರೈಸ್ ಮಾಡಿದರು. ಆದರೆ, 2002ರಲ್ಲಿ ಆ ಕಂಪನಿಯನ್ನು ಮಾರಾಟ ಮಾಡಿದರು.
ಈ ನಡುವೆ 2000ದಲ್ಲಿ ಸಿಂಗ್ ಅವರು ಮದುವೆಯಾಗಿದ್ದು, 2003ರಲ್ಲಿ ಮಗಳು ಹುಟ್ಟಿದ್ದರು. ಆ ಸಂದರ್ಭದಲ್ಲಿ ಸುಮಾರು 6 ತಿಂಗಳು ಕನ್ಸಲ್ಟೆನ್ಸಿ ಕೆಲಸವನ್ನು ಮಾಡಿಕೊಂಡಿದ್ದರು. ಅದಾದ ನಂತರ 2010 ರಲ್ಲಿ ಭಾರತಕ್ಕೆ ವಾಪಾಸ್ಸಾಗುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಅದು ಅವರ ಬದುಕಿಗೆ ದೊಡ್ಡ ತಿರುವು ನೀಡಿದೆ.
"ಆಗ ನನಗೆ 9 ಹಾಗೂ 5 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದು, ಅನಿವಾರ್ಯವಾಗಿ ದಿಲ್ಲಿಯಲ್ಲಿರುವ ಪೋಷಕರ ಮನೆಗೆ ಬರುವುದು ಅನಿವಾರ್ಯವಾಗಿತ್ತು," ಎನ್ನುತ್ತಾರೆ. ಹೀಗೆ ಭಾರತಕ್ಕೆ ಬಂದವರು ಭಾರತದಲ್ಲಿ ದಂತ ವೈದ್ಯ ಉದ್ಯಮಕ್ಕೆ ಇರುವ ವಿಪುಲ ಅವಕಾಶಗಳನ್ನು ಕಂಡುಕೊಂಡರು.
ಅದೇ ಸಂದರ್ಭದಲ್ಲಿ ಡೆಂಟಲ್ ಕ್ಲಿನಿಕ್‌ಗೆ ಹೋದಾಗ ಆದ ಕಹಿ ಅನುಭವವು ಸ್ವಂತ ದಂತ ಚಿಕಿತ್ಸಾಲಯ ಸ್ಥಾಪಿಸುವ ನಿರ್ಧಾರಕ್ಕೆ ಪ್ರೇರೇಪಿಸಿದೆ. ಅದರ ಪರಿಣಾಮವಾಗಿ 7 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯೊಂದಿಗೆ ಕ್ಲೋವ್ ಡೆಂಟಲ್ ಹುಟ್ಟಿಕೊಂಡಿದೆ. ಇದೀಗ ಅವರ ಈ ಕಂಪನಿಯು ಭಾರತದಲ್ಲೇ ಮುಂಚೂಣಿ ಡೆಂಟಲ್ ಚಿಕಿತ್ಸಾಲಯವಾಗಿ ಜನಪ್ರಿಯತೆ ಪಡೆದುಕೊಂಡಿದೆ.
2023ರ ನವೆಂಬರ್‌ನಲ್ಲಿ ಕತ್ತಾರ್ ಇನ್‌ವೆಸ್ಟ್‌ಮೆಂಟ್ ಅಥಾರಿಟಿಯ ಕ್ಲೋವ್ ಕಂಪನಿಯಲ್ಲಿ 417 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಮತ್ತಷ್ಟು ಎತ್ತರಕ್ಕೆ ವಿಸ್ತರಿಸಿಕೊಂಡಿದೆ. ಈಗ ಗ್ಲೋಬಲ್ ಡೆಂಟಲ್ ಸರ್ವೀಸಸ್ ಕ್ಲೋವ್ ಡೆಂಟಲ್ ಅನ್ನು ಮುನ್ನಡೆಸುತ್ತಿದೆ. ಆ ಮೂಲಕ ಭಾರತೀಯ ದಂತ ವೈದ್ಯ ಉದ್ಯಮ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸುತ್ತಿದೆ.


Click it and Unblock the Notifications