ಮನರಂಜನಾ ಉದ್ಯಮದ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಕ್ಷೇತ್ರವಾಗಿದ್ದು, ಇಲ್ಲಿ BookMyShow ತನ್ನದೇ ಆದ ಛಾಪು ಮೂಡಿಸಿದೆ. ಆಶಿಶ್ ಹೇಮರಾಜನಿ ಅವರು ಬುಕ್‌ಮೈಶೋನ ಸಿಇಒ ಮತ್ತು ಸಹ-ಸಂಸ್ಥಾಪಕರಾಗಿದ್ದಾರೆ.
ಈ ಪೋರ್ಟಲ್ ಭಾರತದಲ್ಲಿ ನಡೆಯುವ ಸ್ಪೋರ್ಟ್ ಈವೆಂಟ್, ನಾಟಕಗಳು, ಸಂಗೀತ ಕಚೇರಿಗಳು ಮತ್ತು ಸಿನಿಮಾ ಮುಂತಾದ ಲೈವ್ ಈವೆಂಟ್‌ಗಳಿಗೆ ಟಿಕೆಟ್‌ಗಳನ್ನು ಖರೀದಿಸುವ ಜನಪ್ರಿಯ ವೆಬ್‌ಸೈಟ್ ಆಗಿದೆ. 1999 ರಲ್ಲಿ, ಅವರು BookMyShow ಪ್ರಾರಂಭಿಸುವ ಮೂಲಕ ಅವರ ಮೂಲ ಕಂಪನಿಯಾದ Bigtree Entertainment ಅನ್ನು ಸ್ಥಾಪಿಸಿದರು.

ಆಶಿಶ್ ಹೇಮರಾಜನಿ, ಪರೀಕ್ಷಿತ್ ದಾರ್ ಮತ್ತು ರಾಜೇಶ್ ಬಲ್ಪಾಂಡೆ ಈ ಮೂವರು ಬುಕ್‌ಮೈಶೋನ ಸಂಸ್ಥಾಪಕರಾಗಿದ್ದಾರೆ. ಈ ಮೂವರೂ ಮುಂಬೈ ವಿಶ್ವವಿದ್ಯಾಲಯದ ಸಿಡೆನ್‌ಹ್ಯಾಮ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ. ಪ್ರಸ್ತುತ ಆಶಿಶ್ ಹೇಮರಾಜನಿ ಪ್ರಸ್ತುತ ಬುಕ್‌ಮೈಶೋನ ಸಿಈಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬುಕ್‌ಮೈಶೋನ ಸಹ-ಸಂಸ್ಥಾಪಕ ಮತ್ತು ಸಿಇಒ ಆಶಿಶ್ ಹೇಮರಾಜನಿ ಸಂದರ್ಶನವೊಂದರಲ್ಲಿ ಸ್ವಾರಸ್ಯಕರ ಮಾಹಿತಿ ಹಂಚಿಕೊಂಡಿದ್ದು,"1999 ರಲ್ಲಿ ಬಾಸ್‌ನೊಂದಿಗೆ ಟೆಕ್ಟ್ಸ್ ಚಾಟ್ ಮಾಡುವ ವೇಳೆ ತನ್ನ ವ್ಯವಹಾರ ಕಲ್ಪನೆಯನ್ನು ಪಾನಮತ್ತರಾಗಿದ್ದ ವೇಳೆ ಹಂಚಿಕೊಂಡಿದ್ದರು".
ಆಶ್ಚರ್ಯವೆಂಬಂತೆ ಅವರ ಬಾಸ್ ಈ ಐಡಿಯಾವನ್ನು ಬೆಂಬಲಿಸಿದ್ದು, 'ತೊಂದರೆ ಇಲ್ಲ. ಮುಂದಕ್ಕೆ ಸಾಗು (No problem. Go for it.)' ಪ್ರತಿಕ್ರಿಯಿಸಿದ್ದರು. ಈ ಅಸಾಮಾನ್ಯ ಸಂಭಾಷಣೆಯೇ ಹೇಮರಾಜನಿ ಅವರನ್ನು ಪ್ರಭಾವಿ ವೇದಿಕೆಯನ್ನು ರಚಿಸುವ ಹಾದಿಯಲ್ಲಿ ಸಾಗುವಂತೆ ಪ್ರೇರಪಿಸಿತು ಎಂದು ಎಂಟರ್‌ಪ್ರೆನರ್ಸ್ ಟುಡೇ ವರದಿ ಮಾಡಿದೆ.
ಹೇಮರಾಜನಿ ಕಂಪನಿಯ ಪ್ರಾರಂಭದಲ್ಲಿ ಮಾರ್ಕೆಟಿಂಗ್ ಮತ್ತು ಜಾಹೀರಾತಿನ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಲ್ಟಿಪ್ಲೆಕ್ಸ್‌ಗಳು ಮತ್ತು ಎಲೆಕ್ಟ್ರಾನಿಕ್ ಪಾವತಿ ವಿಧಾನಗಳು ಬೆಳವಣಿಗೆಯಾದಂತೆ,ಅವರು ಬ್ಯಾಕ್-ಎಂಡ್ ಟಿಕೆಟಿಂಗ್ ಸೇವೆಗಳನ್ನು ನೀಡುವುದರ ಮೂಲಕ ಬುಕ್‌ಮೈಶೋ ಅನ್ನು ಕಟ್ಟಿಬೆಳೆಸಿದರು.
ಆಶಿಶ್ ಹೇಮರಾಜನಿ ಸಿಡೆನ್‌ಹ್ಯಾಮ್‌ನಿಂದ ಮಾರ್ಕೆಟಿಂಗ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಬುಕ್‌ಮೈಶೋ ಅನ್ನು ಹುಟ್ಟುಹಾಕುವ ಮೊದಲು ಮೊದಲು,ಹೇಮರಾಜನಿ ಅವರು ಜೆ. ವಾಲ್ಟರ್ ಥಾಂಪ್ಸನ್ (J. Walter Thompson) ಎಂಬ ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡಿದ್ದರು. ಇಲ್ಲಿ ಅವರು ಕ್ಲೈಂಟ್ ಮತ್ತು ಅಕೌಂಟ್ ಮ್ಯಾನೇಜ್ ಮೆಂಟ್ ಪ್ರಮುಖ ಹುದ್ದೆಯನ್ನು ಹೊಂದಿದ್ದರು.
"ಗೋ ಫಾರ್ ಟಿಕೆಟಿಂಗ್" ಎಂಬುದು ಬುಕ್‌ಮೈಶೋ ನ ಮೂಲ ಹೆಸರಾಗಿತ್ತು. 2002 ರಲ್ಲಿ, ಕಂಪನಿಯು ತನ್ನ ಪ್ರಸ್ತುತ ಮಾನಿಕರ್‌ಗೆ ಬದಲಾಯಿಸುವ ಮೊದಲು "ಇಂಡಿಯಾ ಟಿಕೆಟಿಂಗ್" ಎಂಬ ಹೆಸರನ್ನು ಪಡೆದುಕೊಂಡಿತು. ಆದಾದ ಬಳಿಕ 2007 ರಲ್ಲಿ ತನ್ನ ಉದ್ಯೋಗಿಗಳಿಂದ ಹೆಸರು-ಸಲಹೆಗಳ ಬಗ್ಗೆ ಸ್ಪರ್ಧೆಯನ್ನು ಪ್ರಾರಂಭಿಸಿದಾಗ, ಇಂಟರ್ನ್ ಆಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು BookMyShow ಎಂಬ ಹೆಸರನ್ನು ನೀಡಿದರು.
ಈ ಹೆಸರು ಸಂಸ್ಥೆಯ ವ್ಯವಹಾರವು ಮತ್ತುಆದರ ಗುರಿ, ಉದ್ದೇಶಗಳಿಗೆ ಹೊಂದಿಕೆಯಾದ ಕಾರಣ ಆ ಹೆಸರನ್ನೇ ಮುಂದೆ ಆಯ್ಕೆ ಮಾಡಿಕೊಂಡರು. ಆಶಿಶ್ ಅವರ ನಾಯಕತ್ವದಲ್ಲಿ, ಬುಕ್‌ಮೈಶೋ ತನ್ನ ಸೇವೆಗಳನ್ನು ಭಾರತವನ್ನು ಮೀರಿ, ಇಂಡೋನೇಷ್ಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಶ್ರೀಲಂಕಾದಂತಹ ದೇಶಗಳನ್ನು ತಲುಪಿದೆ. ದಿ ಟೈಮ್ ಆಫ್ ಇಂಡಿಯಾ ವರದಿಯ ಪ್ರಕಾರ, BookMyShow ನ ಮೌಲ್ಯವು ಸುಮಾರು 7,500 ಕೋಟಿ ರೂಪಾಯಿ ($900 ಮಿಲಿಯನ್) ಎಂದು ಅಂದಾಜಿಸಲಾಗಿದೆ.


Click it and Unblock the Notifications