ಗುಜರಾತ್‌ನಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಮೊಹಮದಾದಿಲ್ ಆಸಿಫ್ ಮಲ್ಕಾನಿ ಅಲಿಯಾಸ್ ಆದಿಲ್ ಖಾದ್ರಿ ಅವರು ಇಂದು ಲಕ್ಸುರಿ ಫರ್ಫ್ಯೂಮ್ ಬ್ರಾಂಡ್ ನ ಮಾಲೀಕರಾಗಿದ್ದಾರೆ. ಇವರ ಯಶಸ್ಸಿನ ಕಥೆಯು ಯುವಜನತೆಗೆ ಸ್ಫೂರ್ತಿದಾಯಕವಾಗಿದೆ.
ಲಕ್ಸುರಿ ಫರ್ಫ್ಯೂಮ್ ಬ್ರಾಂಡ್ ಆದ "ಆದಿಲ್‌ಖಾದ್ರಿ" ಯ ಮಾಲೀಕರಾಗಿರುವ ಆದಿಲ್ ಖಾದ್ರಿ ಅವರು 2018 ರಲ್ಲಿ ಆದಿಲ್ ಖಾದ್ರಿ ಎಂಬ ಇ-ಕಾಮರ್ಸ್ ಸೈಟ್ ಅನ್ನು ಪ್ರಾರಂಭಿಸಿದ್ದು ಇಂದು ಅವರ ಉತ್ಪನ್ನಗಳು ಭಾರತದ ಹಾಗೂ ಸುತ್ತಮುತ್ತದ ದೇಶಗಳಲ್ಲಿ ಲಭ್ಯವಿದೆ.

ಆದಿಲ್ ಖಾದ್ರಿಯವರ ತಂದೆ-ತಾಯಿ ಕೂಲಿ ಕಾರ್ಮಿಕರಾಗಿದ್ದು, ಅವರ ಕುಟುಂಬ ಜೀವನ ನಿರ್ವಹಣೆಗೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಇವರು ಚಿಕ್ಕ ವಯಸ್ಸಿನಲ್ಲಿಯೇ ತೀವ್ರವಾದ ಅಸ್ತಮಾದಿಂದ ಬಳಲುತ್ತಿದ್ದು ಹದಿಹರೆಯದಲ್ಲಿ ಈ ಸಮಸ್ಯೆಯಿಂದ ಸುಮಾರು 4-5 ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದರು, ಇದು ಅವರ ಶಾಲಾ ಶಿಕ್ಷಣ ಅಡ್ಡಿಯಾಯಿತು.
ಇದರಿಂದಾಗಿ 5 ನೇ ತರಗತಿಯ ನಂತರ ಶಾಲೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ರೋಗದ ಕಾರಣದಿಂದ ಅನೇಕ ನಿರ್ಬಂಧಗಳೊಂದಿಗೆ ಅವರು ಜೀವನ ನಡೆಸಬೇಕಾಗಿತ್ತು. ಅದರೂ ಅವರಲ್ಲಿದ್ದ ಉತ್ಸಾಹ, ಸಮರ್ಪಣೆ ಮತ್ತು ಕಠಿಣ ಪರಿಶ್ರಮ ಆದಿಲ್ ಅವರನ್ನು ಮತ್ತಷ್ಟು ಎತ್ತರಕ್ಕೆ ತಲುಪಲು ಸಹಾಯ ಮಾಡಿತು.
ಬಾಲ್ಯದಿಂದ ಯೌವ್ವನಕ್ಕೆ ಕಾಲಿಡುತ್ತಿದ್ದಂತೆಯೇ ಆದಿಲ್ ಅವರ ದೇಹವು ಅಸ್ತಮಾ ವಿರುದ್ಧ ಹೋರಾಡಲು ಶಕ್ತಿಯನ್ನು ಪಡೆಯಲಾರಂಭಿಸಿತು. ಇದೇ ವೇಳೆ ತಮ್ಮ ಕುಟುಂಬವನ್ನು ಬಡತನದಿಂದ ಹೊರತರಲು ಆದಿಲ್ ಬಯಸಿದ್ದರು. ಅವರು ಉತ್ತಮ ಹಣವನ್ನು ಗಳಿಸುವ ಸ್ಕಿಲ್ ಗಳನ್ನು ಕಲಿಯಲು ಬಯಸಿದ್ದರು.
ಇದಕ್ಕಾಗಿ ಆದಿಲ್ ಮೊದಲು ಮೊಬೈಲ್ ಮತ್ತು ಕಂಪ್ಯೂಟರ್ ರಿಪೇರಿ ಕಲಿತು ಮೊಬೈಲ್ ರಿಪೇರಿ ಕೇಂದ್ರದಲ್ಲಿ ಕೆಲಸ ಆರಂಭಿಸಿದರು. 2015 ರಲ್ಲಿ, ಅವರು ತಮ್ಮ ಮೊದಲ ವೆಬ್‌ಸೈಟ್ ಅನ್ನು ಪ್ರಾರಂಭಿಸಿದರೂ ಇದರಿಂದ ಪ್ರಯೋಜನ ಸಿಗಲಿಲ್ಲ. ಹೀಗಾಗಿ ಇದನ್ನು ನಿಲ್ಲಿಸಿದ ಅವರು ಡಿಜಿಟಲ್ ಮಾರ್ಕೆಟಿಂಗ್ ಮತ್ತು ಎಸ್‌ಇಒ ಕೌಶಲ್ಯಗಳಿಸಿಕೊಂಡರು.
ಬಹಳಷ್ಟು ಯೋಚನೆ ಮಾಡಿದ ಅವರು ಇ-ಕಾಮರ್ಸ್ ಕ್ಷೇತ್ರವನ್ನು ಪ್ರವೇಶಿಸಲು ನಿರ್ಧರಿಸಿದರು. ಸುಗಂಧ ದ್ರವ್ಯವನ್ನು ತಮ್ಮ ಉತ್ಪನ್ನವಾಗಿ ಆಯ್ಕೆ ಮಾಡಿಕೊಂಡು 2018 ರಲ್ಲಿ ಆದಿಲ್ ಖಾದ್ರಿ ಎಂಬ ಇ-ಕಾಮರ್ಸ್ ಸೈಟ್ ಅನ್ನು ಪ್ರಾರಂಭಿಸಿ ಮುಂದೆ ಸುಗಂಧ ದ್ರವ್ಯದ ಪ್ರಸಿದ್ಧ ಮಾರಾಟಗಾರರಾದರು. ಇಂದು, ಆದಿಲ್ ಖಾದ್ರಿಯ ಸುಗಂಧ ದ್ರವ್ಯಗಳ ಶ್ರೇಣಿಯು ಅದರ ಗುಣಮಟ್ಟದ ಫರ್ಫ್ಯೂಮ್‌ಗಳಿಗೆ ಹೆಸರುವಾಸಿಯಾಗಿದೆ.
ಆದಿಲ್ ಖಾದ್ರಿ ಫರ್ಫ್ಯೂಮ್ ಬ್ರ್ಯಾಂಡ್ ಆಲ್ಕೋಹಾಲ್ ಮುಕ್ತವಾಗಿರುವುದರಿಂದ ಧಾರ್ಮಿಕ ಕಾರಣಗಳಿಗಾಗಿ ಅವುಗಳನ್ನು ಬಳಸದ ಗ್ರಾಹಕರನ್ನೂ ಅವರ ಬ್ರ್ಯಾಂಡ್ ಸೆಳೇಯುವಲ್ಲಿ ಯಶಸ್ವಿಯಾಗಿದೆ. ಐಷಾರಾಮಿ ಸುಗಂಧ ದ್ರವ್ಯಗಳಾದ ಆದಿಲ್ ಖಾದ್ರಿ ಔದ್-ಅಲ್-ಹಶ್ಮಿ ಮತ್ತು ಆದಿಲ್ ಖಾದ್ರಿ ಕಸ್ತೂರಿ- ಅಲ್- ಗಜಾಲಿ ಅತ್ಯಂತ ಜನಪ್ರಿಯವಾಗಿವೆ.
ಆದಿಲ್‌ಖಾದ್ರಿ ಔದ್- ಅಲ್- ಹಶ್ಮಿ ಎಂಬುದು ನಿಜವಾದ ಮೃದುವಾದ ಔದ್‌ನಿಂದ ಪಡೆದ ಸುಗಂಧ ದ್ರವ್ಯವಾಗಿದೆ. ಇದು ಅಗರ್‌ವುಡ್‌ನಿಂದ ಬರುವ ಬೆಚ್ಚಗಿನ ಹೊಗೆಯ ಪರಿಮಳವನ್ನು ಹೊಂದಿದ್ದು ಇದು ಅತ್ಯಂತ ದುಬಾರಿ ಮರವಾಗಿದೆ. ಆದಿಲ್ ಖಾದ್ರಿ ಶನಯ ಅತ್ತರ್, ಆದಿಲ್ ಖಾದ್ರಿ ಸಿಗ್ನೇಚರ್ ಅತ್ತರ್ ಮತ್ತು ಆದಿಲ್ ಕಾದ್ರಿ ಸಫ್ವಾನ್ ಅತ್ತರ್ ಇವರ ಕಂಪನಿಯ ಪಾಕೆಟ್ ಪ್ರೆಂಡ್ಲಿಯಾಗಿರುವ ಫರ್ಫ್ಯೂಮ್‌ಗಳಾಗಿವೆ.


Click it and Unblock the Notifications