ಭಾರತದಲ್ಲಿ ಸ್ಟಾರ್ಟಪ್‌ಗಳು ಹೆಚ್ಚಿನ ಯಶಸ್ವಿನ ಹಾದಿಯಲ್ಲಿ ಮುನ್ನುಗ್ಗುತ್ತಿರುವಂತೆಯೇ ವಿವಿಧ ಕ್ಷೇತ್ರಗಳಲ್ಲಿ ಹಲವು ಹೊಸ ಕಂಪನಿಗಳು ಹುಟ್ಟಿಕೊಳ್ಳುತ್ತಿವೆ. ಅದರಂತೆ ವೇದಾ ಎಂಬ ಕಂಪನಿಯನ್ನು ಮನುನ್ ಠಾಕೂರ್ 2020ರಲ್ಲಿ ಸ್ಥಾಪಿಸಿದ್ದು, 2021ರ ಮಾರ್ಚ್‌ನಿಂದ ಅದು ಕಾರ್ಯಾರಂಭ ಮಾಡಿದೆ.
ಕೇವಲ 26 ತಿಂಗಳಲ್ಲಿ ಕಂಪನಿಯು ಬಹಳ ವೇಗವಾಗಿ ಉದ್ಯಮದ ವಿಸ್ತರಣೆಯನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಶ್ರೀಮಂತ ವ್ಯಕ್ತಿಗಳಲ್ಲಿ ಅದರಲ್ಲಿಯೂ ಸೆಲೆಬ್ರಿಟಿಗಳು ಹಾಗೂ ಗಣ್ಯ ವ್ಯಕ್ತಿಗಳಲ್ಲಿ ಸುರಕ್ಷಿತ ಆರೈಕೆಯನ್ನು ಪಡೆಯ ಬಯಸುವವರಿಗೆ ವೇದಾ ಪ್ರಮುಖ ಆಯ್ಕೆಯಾಗಿ ಜನಪ್ರಿಯತೆಯನ್ನು ಗಳಿಸಿತು.

ಮನುನ್ ಅವರು ಯಾವಾಗಲೂ ಸ್ವಂತ ಉದ್ಯಮವನ್ನು ಸ್ಥಾಪಿಸುವ ಮೂಲಕ ಕಂಪನಿಯೊಂದರ ಮಾಲೀಕರಾಗುವುದಕ್ಕೆ ಬಯಸಿದ್ದರು. ತಮ್ಮ ಮನಸ್ಸಿನ ಆರೋಗ್ಯ ಸಮಸ್ಯೆಗಳ ಬಗ್ಗೆ ಅವರಿಗೆ ಸ್ಪಷ್ಟವಾದ ಅರಿವು ಇತ್ತು. ಅದಕ್ಕಾಗಿ ಅವರು ಎಲ್ಲಿ ಜನರು ತಮ್ಮ ಮಾನಸಿಕ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಬೇಕೆಂದು ಬಯಸುತ್ತಾರೋ ಅಲ್ಲಿ ಸೇವೆ ನೀಡುವುದಕ್ಕೆ ಮುಂದಾದರು. ಆ ಮೂಲಕ ವೇದಾ ಪರಿಕಲ್ಪನೆಯಡಿ ಸಂಸ್ಥೆಯನ್ನು ಹುಟ್ಟು ಹಾಕಿದರು.
ಆದರೆ, ತಮ್ಮ ಚಿಕಿತ್ಸಾ ಕೇಂದ್ರಗಳಿಗೆ ಬರುವಂತೆ ಜನರನ್ನು ಮನವೊಲಿಸುವುದು ಬಹುದೊಡ್ಡ ಸವಾಲಾಗಿತ್ತು. "ಆರಂಭದ ದಿನಗಳಲ್ಲಿ ಗ್ರಾಹಕರನ್ನು ತಮ್ಮ ಕ್ಲಿನಿಕ್‌ಗೆ ಬರುವಂತೆ ಮನವೊಲಿಸುವುದು ತುಂಬಾ ಕಷ್ಟವಾಗಿತ್ತು. ಆ ಮೂಲಕ ಗ್ರಾಹಕರ ವಿಶ್ವಾಸವನ್ನು ಪಡೆಯುವುದು ಸವಾಲಾಗಿತ್ತು. ಬಹಳ ಅನುಭವ ಹೊಂದಿರುವ ಯುವ ತಂಡ ನಮ್ಮ ಜತೆಗಿತ್ತು. ಇದು ನಮ್ಮ ವೇದಾ ಯಶಸ್ಸಿಗೆ ಕಾರಣವಾಗುತ್ತಾ ಹೋಗಿತ್ತು," ಎನ್ನುತ್ತಾರೆ ಮನುನ್ ಅವರು.
ಪ್ರಸ್ತುತ ಮನುನ್ ನೇತೃತ್ವದ ವೇದಾ ತನ್ನ ಟೆಕ್ ಪ್ಲಾಟ್‌ಫಾರ್ಮ್ ಮತ್ತು ಸೆಂಟರ್‌ಗಳಲ್ಲಿ ಸುಮಾರು 11.5 ಕೋಟಿ ರೂಪಾಯಿಯಷ್ಟು ಹೂಡಿಕೆ ಮಾಡಿದೆ. ಅದರ ಮೌಲ್ಯ ಈಗ 125 ಕೋಟಿ ರೂಪಾಯಿ ಆಗಿದೆ. ಈಗ ಪ್ರಗತಿಯ ಹಾದಿಯಲ್ಲಿರುವ ವೇದಾ ಕಂಪನಿಯು ಮುಂದಿನ ದಿನಗಳಲ್ಲಿ 130 ಕೋಟಿ ರೂಪಾಯಿ ಆದಾಯ ಗಳಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.


Click it and Unblock the Notifications