ನಿನ್ನೆಯಷ್ಟೆ (ಮೇ 13) ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡ ರಾಘವ್ ಚಡ್ಡ ನಿಶ್ಚಿತಾರ್ಥವಾಗಿದೆ. ಈ ನಿಶ್ಚಿತಾರ್ಥದಲ್ಲಿ ವಿಶೇಷವಾಗಿ ಡಿಸೈನ್ ಮಾಡಲಾದ ಬಟ್ಟೆಯಲ್ಲಿ ನಟಿ ಪರಿಣಿತಿ ಚೋಪ್ರಾರ ಕಾಣಿಸಿಕೊಂಡಿದ್ದಾರೆ. ಈ ಬಟ್ಟೆಯನ್ನು ಡಿಸೈನ್ ಮಾಡಿದವರು ದೇಶದ ಅತೀ ಜನಪ್ರಿಯ ಡಿಸೈನರ್ ಮನೀಶ್ ಮಲ್ಹೋತ್ರಾ.
ಮನೀಶ್ ಮಲ್ಹೋತ್ರಾ ಸುಂದರವಾದ ಡ್ರೆಸ್ ಅನ್ನು ಡಿಸೈನ್ ಮಾಡಿರುವುದು ಇದೇ ಮೊದಲೇನಲ್ಲ. ಇದಕ್ಕೂ ಹಿಂದೆ ಹಲವಾರು ಸ್ಟಾರ್ ಸೆಲೆಬ್ರೆಟಿಗಳಿಗೆ ಮನೀಶ್ ಮಲ್ಹೋತ್ರಾ ಡ್ರೆಸ್ ಡಿಸೈನ್ ಮಾಡಿದ್ದಾರೆ. ಈ ಹಿಂದೆ ಇಶಾ ಅಂಬಾನಿಗೆ ವಿವಾಹವಾದಾಗಲೂ ಮಲ್ಹೋತ್ರಾ ಡಿಸೈನ್ ಮಾಡಿದ ಡಿಸೈನರ್ ಬಟ್ಟೆಯನ್ನು ಇಶಾ ತೊಟ್ಟಿದ್ದಾರೆ. ಬಾಲಿವುಡ್‌ನ ಈ ಜನಪ್ರಿಯ ಡಿಸೈನರ್ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

ಮನೀಶ್ ಮಲ್ಹೋತ್ರಾ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ
ಮನೀಶ್ ಮಲ್ಹೋತ್ರಾ ಪಂಜಾಬಿ ಕುಟುಂಬದಲ್ಲಿ ಜನಿಸಿದ್ದಾರೆ. ತನ್ನ ಸ್ವ ಪರಿಶ್ರಮದಿಂದ ದೇಶದಲ್ಲಿ ಪ್ರಸಿದ್ಧ ಡಿಸೈನರ್ ಆಗಿ ಹೊರಹೊಮ್ಮಿದ ವ್ಯಕ್ತಿ ಮನೀಶ್ ಮಲ್ಹೋತ್ರಾ. ಬಾಲ್ಯದಿಂದಲೇ ಮನೀಶ್ ಮಲ್ಹೋತ್ರಾ ಸ್ಕೆಚ್ ಮಾಡುವುದು, ಪೇಂಟ್ ಮಾಡುವುದರಲ್ಲಿ ಆಸಕ್ತಿ ಹೊಂದಿದ್ದರು. ತನ್ನ ತಾಯಿಯ ಸೀರೆಯಲ್ಲಿ ಬೇರೆ ಬೇರೆ ವಿಧದ ಬಟ್ಟೆ ಮಾಡುವ, ಡಿಸೈನ್ ಕೂಡಾ ಮಾಡುತ್ತಿದ್ದರು. ಸಿನಿಮಾದಲ್ಲಿ ಅತೀವ ಆಸಕ್ತಿಯನ್ನು ಕೂಡಾ ಹೊಂದಿದ್ದರು.
ಮುಂಬೈನ ಎಲ್ಫಿನ್‌ಸ್ಟೋನ್ ಕಾಲೇಜಿನಲ್ಲಿ ಓದುತ್ತಿದ್ದಾಗ, ಮನೀಶ್ ಮಲ್ಹೋತ್ರಾ ಹಲವಾರು ಬ್ರಾಂಡ್‌ಗಳಿಗೆ ಮಾಡೆಲಿಂಗ್ ಮಾಡಲು ಪ್ರಾರಂಭಿಸಿದರು. ಫ್ಯಾಷನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಿಂಗಾಪುರ ಮತ್ತು ಬ್ಯಾಂಕಾಕ್‌ಗೆ ತೆರಳಿದ್ದರು. ಅದಾದ ಬಳಿಕ ತಾನು ಫ್ಯಾಷನ್ ಡಿಸೈನರ್ ಆಗಬಹುದು ಎಂಬ ನಿರ್ಧಾರವನ್ನು ಮಾಡಿದರು.
ಮನೀಶ್ ಮಲ್ಹೋತ್ರಾ 1990 ರಲ್ಲಿ ಜೂಹಿ ಚಾವ್ಲಾರ ಡ್ರೆಸಿಂಗ್ ಮಾಡಿದಾಗ ಜನಮನಗೆದ್ದರು. ಅದಾದ ಬಳಿಕ ಊರ್ಮಿಳಾ ಮಾತೋಂಡ್ಕರ್‌ರ ರಂಗೀಲಾ ಬಟ್ಟೆಗಳನ್ನು ವಿನ್ಯಾಸಗೊಳಿಸಿದಾಗ ದೇಶದಲ್ಲಿ ಮನೀಶ್ ಮಲ್ಹೋತ್ರಾರ ಫ್ಯಾಶನ್ ಸೆನ್ಸ್ ಜನಪ್ರಿಯವಾಯಿತು.
ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಹೇಳಿಕೆಯಲ್ಲಿ ಮಾತನಾಡಿದ್ದ ಮನೀಶ್ ಮಲ್ಹೋತ್ರಾ, "ನಾನು ಏನು ಮಾಡಲು ಬಯಸಿದ್ದೇನೋ ಅದನ್ನು ಮಾಡಲು ನನ್ನ ತಾಯಿ ನನಗೆ ಪ್ರೋತ್ಸಾಹ ನೀಡಿದ್ದಾರೆ," ಎಂದು ತಿಳಿಸಿದ್ದಾರೆ. ಇನ್ನು ಮನೀಶ್ ಮಲ್ಹೋತ್ರಾ ವಿದ್ಯಾಭ್ಯಾಸದ ವಿಚಾರಕ್ಕೆ ಬಂದಾಗ ಹಿಂದುಳಿದಿದ್ದಾರೆ. ಆದರೆ 6ನೇ ತರಗತಿಯಲ್ಲಿ ಚಿತ್ರಕಲಾ ತರಗತಿಗೆ ಸೇರಿದಾಗ ಅವರ ಜೀವನದಲ್ಲಿ ಮಹತ್ವದ ಬದಲಾವಣೆ ಉಂಟಾಗಿದೆ. ತನ್ನ ತಾಯಿಗೆ ತಾನೆ ಫ್ಯಾಷನ್ ಸಲಹೆಯನ್ನು ನೀಡುತ್ತಿದ್ದರು.
ಮನೀಶ್ ಮಲ್ಹೋತ್ರಾ ಆದಾಯ
ಮನೀಶ್ ಮಲ್ಹೋತ್ರಾ ಮಾಡೆಲಿಂಗ್‌ಗಾಗಿ 2000 ರೂಪಾಯಿ ಪಡೆದಿದ್ದಾರೆ. ತನ್ನ 21ನೇ ವಯಸ್ಸಿನಲ್ಲಿಯೇ ಸಿನಿಮಾ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಇನ್ನು ತನ್ನ ಎಫ್‌ಬಿ ಪೇಜ್‌ನಲ್ಲಿ, "ರಂಗೀಲಾ ಒಂದು ವರ್ಷದ ನಂತರ ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಆಯಿತು. ನಾನು ಮೊದಲ ಫಿಲ್ಮ್‌ಫೇರ್ ಅವಾರ್ಡ್ ಅನ್ನು ಅದಕ್ಕೆ ಪಡೆದುಕೊಂಡೆ," ಎಂದು ಮನೀಶ್ ಮಲ್ಹೋತ್ರಾ ತಿಳಿಸಿದ್ದಾರೆ.
"ಮೊದಲು ರಂಗೀಲಾಕ್ಕೆ ನಾನು ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡೆ. ಆದರೆ ನನಗೆ ಹಲವಾರು ಸವಾಲುಗಳು ಇದ್ದವು. ಸ್ಟೋರಿಲೈನ್ ಬಗ್ಗೆ ನಾನು ಅತೀ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಿದ್ದಾಗ ನಿರ್ಮಾಪಕರು ಕೋಪಗೊಳ್ಳುತ್ತಿದ್ದು ನನಗೆ ಈಗಲೂ ನೆನಪಿದೆ. ನಾನು ಬರೀ ಹಿರೋಯಿನ್ ಅನ್ನು ಗ್ಲಾಮರ್ ಆಗಿ ಕಾಣುವಂತೆ ಮಾಡಬೇಕಾಗಿತ್ತು. ಆದರೆ ನನಗೆ ಅದಕ್ಕೂ ಅಧಿಕ ನಿರೀಕ್ಷೆಗಳಿತ್ತು," ಎಂದು ಎಫ್‌ಬಿ ಪೇಜ್‌ನಲ್ಲಿ ಮನೀಶ್ ಮಲ್ಹೋತ್ರಾ ಬರೆದುಕೊಂಡಿದ್ದಾರೆ.
2005ರಲ್ಲಿ ಮನೀಶ್ ಮಲ್ಹೋತ್ರಾ ತನ್ನದೇ ಆದ ಫ್ಯಾಷನ್ ಲೇಬಲ್ ಅನ್ನು ಆರಂಭ ಮಾಡಿದ್ದಾರೆ. ಹಾಗೆಯೇ ಇಂಡಸ್ಟ್ರೀಯಲ್ಲಿ ಸುಮಾರು 30 ವರ್ಷಗಳ ಕಾಲ ಕಳೆದಿದ್ದಾರೆ. ಮನೀಶ್ ಮಲ್ಹೋತ್ರಾ ಯಶಸ್ವಿ ವ್ಯಾಪಾರಿಯಾಗಿದ್ದಾರೆ. 2000 ರೂಪಾಯಿ ಸಂಪಾದನೆಯನ್ನು ಹೊಂದಿದ್ದ ಮನೀಶ್ ಮಲ್ಹೋತ್ರಾ ಈಗ ಮಿಲಿಯನೇರ್ ಆಗಿದ್ದಾರೆ. 2019ರ ಫೋರ್ಬ್ಸ್ ಲೆಕ್ಕಾಚಾರದಲ್ಲಿ ಮನೀಶ್ ಮಲ್ಹೋತ್ರಾ ಆದಾಯ 230 ಕೋಟಿ ರೂಪಾಯಿ ಆಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಕಂಪನಿಯಲ್ಲಿ ಶೇಕಡ 40ರಷ್ಟು ಪಾಲನ್ನು ಖರೀದಿಸಿದ ನಂತರ ಮನೀಶ್ ಮಲ್ಹೋತ್ರಾ ಮುಕೇಶ್ ಅಂಬಾನಿಯವರ ವ್ಯಾಪಾರ ಪಾಲುದಾರರಾದರು. ಒಪ್ಪಂದದ ಗಾತ್ರವನ್ನು ಈವರೆಗೂ ಬಹಿರಂಗಪಡಿಸಿಲ್ಲ. ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್‌ನ ಮೂಲ ಕಂಪನಿಯಾದ ರಿಲಯನ್ಸ್ ರಿಟೇಲ್ ಅನ್ನು ಇಶಾ ಅಂಬಾನಿ ಮುನ್ನಡೆಸುತ್ತಿದ್ದಾರೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications