ರಿಲಯನ್ಸ್ ಕಂಪೆನಿ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಬಲಗೈ ಎಂದೇ ಕರೆಯಲ್ಪಡುವ ಮನೋಜ್ ಮೋದಿ ಅವರು ಸದಾಕಾಲ ಪ್ರಚಾರದಿಂದ ಬಹಳ ದೂರ ಉಳಿಯಲು ಬಯಸುತ್ತಿರುವ ವ್ಯಕ್ತಿ. ಭಾರತದ ಬಿಸಿನೆಸ್ ವಲಯದವರ ಹೊರತಾಗಿ ಹೊರಗಿನವರ ಪೈಕಿ ಕೆಲವೇ ಕೆಲವು ಮಂದಿಗೆ ಮಾತ್ರ ಮನೋಜ್ ಮೋದಿ ಅವರ ಹೆಸರು ಗೊತ್ತಿರುವುದು. ಆದರೆ, ಮನೋಜ್ ಮೋದಿ ಅವರು ಭಾರತದ ಶ್ರೀಮಂತ ವ್ಯಕ್ತಿಯ ಬೃಹತ್ ವ್ಯಾಪಾರ ಸಾಮ್ರಾಜ್ಯದ ಹಿಂದಿರುವ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳ ಪೈಕಿ ಒಬ್ಬರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮನೋಜ್ ಮೋದಿ ಅವರು ಅತ್ಯಂತ ಕೆಳಮಟ್ಟದ ಜೀವನವನ್ನು ನಡೆಸುತ್ತಿದ್ದು, ಅವರು ಬಿಲಿಯನೇರ್ ಮುಕೇಶ್ ಅಂಬಾನಿ ಅವರ ಬಲಗೈ ವ್ಯಕ್ತಿ ಆಗಿದ್ದರೂ, ಎಲ್ಲರ ನೋಟದಿಂದಲೂ ಬಹಳ ದೂರ ಉಳಿಯಲು ಬಯಸುತ್ತಾರೆ. ರಿಲಯನ್ಸ್ ಜಿಯೋ ಮತ್ತು ಫೇಸ್‌ಬುಕ್ ಇಂಚ್ ನಡುವಿನ ಅತಿದೊಡ್ಡದಾದ 5.7 ಬಿಲಿಯನ್ ಅಮೆರಿಕನ್ ಡಾಲರ್ ಬಿಸಿನೆಸ್ ಡೀಲ್‌ಗೆ ಮನೋಜ್ ಮೋದಿ ಅವರು ಪ್ರಮುಖ ಕಾರಣಕರ್ತರಾಗಿದ್ದಾರೆ.

ಮುಕೇಶ್ ಅಂಬಾನಿ ಡಿಜಿಟಲ್ ತಂತ್ರಜ್ಞಾನಗಳ ಡೊಮೇನ್‌ನಲ್ಲಿ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಯೋಜಿಸುತ್ತಿರುವಾಗ, ಮನೋಜ್ ಮೋದಿ ಅವರು ಸದ್ದಿಲ್ಲದೆ ಅವರಿಗೆ ಉತ್ತಮ ವ್ಯವಹಾರಗಳನ್ನು ಮಾಡಲು ಸಹಾಯ ಮಾಡುತ್ತಾರೆ. ಫೇಸ್‌ಬುಕ್‌ನ ಒಪ್ಪಂದದ ಬಳಿಕ ಜೀಯೋ ಪ್ಲಾಟ್‌ಫಾರ್ಮ್‌ಗಳು ವಿವಿಧ ಖಾಸಗಿ ಇಕ್ವಿಟಿ ಫಂಡ್‌ಗಳೊಂದಿಗೆ ಹಲವು ವ್ಯವಹಾರಗಳಿಗೆ ಸಹಿ ಹಾಕಿದವು. ಆವುಗಳಲ್ಲಿ 13 ಬಿಲಿಯನ್ ಅಮೆರಿಕನ್ ಡಾಲರ್ ಡೀಲ್ ಕೂಡ ಸೇರಿವೆ.
ಮನೋಜ್ ಮೋದಿ ಅವರು ಪ್ರಚಾರ ಅಥವಾ ಮಾಧ್ಯಮದಿಂದ ಎಷ್ಟರ ಮಟ್ಟಿಗೆ ದೂರ ಉಳಿದಿದ್ದಾರೆ ಅಂದರೆ ಅವರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲಿಯೂ ಲಭ್ಯವಿಲ್ಲ. ಮನೋಜ್ ಮೋದಿ ಅವರು ಮಾಧ್ಯಮಕ್ಕೆ ಯಾವುದೇ ಸಂದರ್ಶನಗಳನ್ನು ನೀಡುವುದಿಲ್ಲ. ಲಭ್ಯ ಮಾಹಿತಿಗಳ ಪ್ರಕಾರ, ಮನೋಜ್ ಮೋದಿ ಅವರಿಗೆ 60 ವರ್ಷ ವಯಸ್ಸಿರಬಹುದೆಂದು ಅಂದಾಜಿಸಲಾಗಿದೆ.
"ಇದು ತನ್ನ ಆಡಳಿತ ಮಂಡಳಿ ಹುದ್ದೆಗಳ ಬಗ್ಗೆ ಪ್ರಚಾರ ಮಾಡುವ ಕಂಪೆನಿಯಲ್ಲ. ಆದರೆ ಅಂಬಾನಿ ಹಾಗೂ ಮನೋಜ್ ಮೋದಿ ಅವರು ಬಹಳ ಗಾಢವಾದ ವ್ಯವಹಾರಿಕ ಸಂಬಂಧ ಹೊಂದಿರುವ ಟೀಮ್ ಎಂಬುದು ಉದ್ಯಮಕ್ಕೆ ಗೊತ್ತಿದೆ. ಇಬ್ಬರು ಕೂಡ ಒಟ್ಟಾಗಿ ಬಿಸಿನೆಸ್ ಡೀಲ್ ಮಾತುಕತೆಗಳನ್ನು ನಡೆಸುತ್ತಾರೆ. ಆ ಮೂಲಕ ಅವುಗಳ ಅನುಷ್ಠಾನದಲ್ಲಿ ಭಾಗಿಯಾಗುತ್ತಾರೆ" ಎನ್ನುತ್ತಾರೆ ಕಲಾರಿ ಕ್ಯಾಪಿಟಲ್ ಪಾರ್ಟ್‌ನರ್ಸ್ ಎಂಬ ಕ್ಯಾಪಿಟಲ್ ಫರ್ಮ್‌ನ ವ್ಯವಸ್ಥಾಪಕ ನಿರ್ದೇಶಕಿ ವಾಣಿ ಕೋಲಾ.
ಕಳೆದ ವರ್ಷ ನಡೆದ ಸಮಾವೇಶದಲ್ಲಿ ಬಹಳ ಅಪರೂಪ ಎನ್ನುವಂತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಲ್ಲಿ ಮನೋಜ್ ಮೋದಿ ಅವರ ಮನವೊಲಿಸುವಲ್ಲಿ ಇವರು ಯಶಸ್ವಿಯಾಗಿದ್ದರು. ಮನೋಜ್ ಮೋದಿ ಅವರು ರಿಲಯನ್ಸ್ ಲಿಮಿಟೆಡ್ ಹಾಗೂ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನಲ್ಲಿ ನಿರ್ದೇಶಕರಾಗಿದ್ದಾರೆ. ಹಲವಾರು ಹಿರಿಯ ವ್ಯಾಪಾರ ಕಾರ್ಯನಿರ್ವಾಹಕರ ಪ್ರಕಾರ, ಮನೋಜ್ ಮೋದಿ ಅವರು ಬಹಳ ಚಾಣಾಕ್ಯ ಚೌಕಾಶಿದಾರ ಹಾಗೂ ಉತ್ತಮ ಡೀಲ್‌ಗಳನ್ನು ಯಶಸ್ವಿಗೊಳಿಸುವಲ್ಲಿ ಬಹಳ ಬುದ್ಧಿವಂತರಾಗಿದ್ದಾರೆ.
ಎಕನಾಮಿಕ್ ಟೈಮ್ಸ್ ಪ್ರಕಾರ, ಸ್ಟಾರ್ಟಪ್‌ಗಳೊಂದಿಗೆ ವ್ಯವಹರಿಸುವಾಗ ಪರೋಕ್ಷವಾಗಿ ಡೀಲ್‌ಗಳನ್ನು ನಡೆಸುತ್ತಾರೆ. ಮನೋಜ್ ಮೋದಿ ಅವರು ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಬಹಳ ಅನುಭವಿ ವ್ಯಕ್ತಿಯಾಗಿದ್ದಾರೆ. ಏಕೆಂದರೆ, 1980ರ ದಶಕದಲ್ಲಿ ಮುಕೇಶ್ ಅಂಬಾನಿ ಅವರ ತಂದೆ ಧೀರೂಭಾಯಿ ಅಂಬಾನಿ ಅವರು ತೈಲ ಮತ್ತು ಪೆಟ್ರೋಕೆಮಿಕಲ್ಸ್ ಅನ್ನು ಪ್ರಾರಂಭಿಸುವಾಗ ಸೇರಿದ್ದರು.
ಮನೋಜ್ ಹರ್ಜಿವಂದಾಸ್ ಮೋದಿ ಅವರು ಮುಂಬೈನ ಕೆಮಿಕಲ್ ಟೆಕ್ನಾಲಜಿ ವಿಶ್ವವಿದ್ಯಾಲಯದಲ್ಲಿ ಮುಕೇಶ್ ಅಂಬಾನಿ ಜತೆಗೆ ಅಧ್ಯಯನ ಮಾಡಿದ್ದಾರೆ. ಮನೋಜ್ ಮೋದಿ ಅವರು ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಹಾಗೂ ಅವರ ಮಕ್ಕಳಾದ ಇಶಾ ಮತ್ತು ಆಕಾಶ್ ಅಂಬಾನಿ ಅವರೊಂದಿಗೂ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಅವರು ಟೆಲಿಕಾಂ ಹಾಗೂ ರಿಟೇಲ್ ಬಿಸಿನೆಸ್ ಅನ್ನು ಮುನ್ನಡೆಸುತ್ತಿದ್ದಾರೆ.
More From GoodReturns

Stock Market vs FD: ಷೇರು ಮಾರುಕಟ್ಟೆ vs ಬ್ಯಾಂಕ್ ಎಫ್ಡಿ; 5 ವರ್ಷದಲ್ಲಿ ಹೆಚ್ಚು ಆದಾಯ ಯಾವುದು ನೀಡುತ್ತೆ?

PPF Withdrawal: PPF ಹಣವನ್ನು ಲಾಕ್-ಇನ್ ಮುನ್ನವೇ ಹಿಂಪಡೆಯಬಹುದೇ? ಇಲ್ಲಿದೆ ಸಂಪೂರ್ಣ ನಿಯಮಗಳು

YES Bank Rules: ಯೆಸ್ ಬ್ಯಾಂಕ್ ಗ್ರಾಹಕರೇ ಇಲ್ಲಿ ಗಮನಿಸಿ; ಏಪ್ರಿಲ್ 1 ರಿಂದ ಬದಲಾಗಲಿದೆ ನಿಯಮ

Silver Rates Today: ಭಾರತೀಯ ಬೆಳ್ಳಿ ಖರೀದಿದಾರರಿಗೆ ಸಿಹಿಸುದ್ದಿ; 5000 ರೂ.ನಷ್ಟು ಇಳಿಕೆ

Fixed Deposits vs NSC: ತೆರಿಗೆ ಉಳಿತಾಯಕ್ಕಾಗಿ ಎಫ್ಡಿ vs ಎನ್ಎಸ್ಸಿ; ಯಾವುದು ಬೆಸ್ಟ್?

Fixed Deposit: 8.3% ಲಾಭದೊಂದಿಗೆ ಪ್ರವಾಸ ನಿಧಿ ಕಟ್ಟಿ, ಪ್ರವಾಸದ ಕನಸು ನನಸಾಗಿಸಲು 5 ಸರಳ ಮಾರ್ಗ

LPG Crisis: ಭಯಪಡಬೇಡಿ, ಅವಸರದಲ್ಲಿ ಬುಕ್ ಮಾಡ್ಬೇಡಿ; ಗೃಹಬಳಕೆಯ ಎಲ್ಪಿಜಿ ಬಳಕೆದಾರರಿಗೆ ಕೇಂದ್ರ ಭರವಸೆ

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

LPG Shortage: ರಾಜ್ಯದಲ್ಲಿ ಇನ್ನೂ 10 ದಿನ ಸಿಗಲ್ಲ ಎಲ್ಪಿಜಿ; ಸಚಿವ ಕೆಎಚ್ ಮುನಿಯಪ್ಪ ಹೇಳಿದ್ದೇನು?

LPG-Milk: ಎಲ್ಪಿಜಿ ಪೂರೈಕೆ ಕೊರತೆ; ಹಾಲು ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ!

Eid ul Fitr 2026: ಭಾರತದಲ್ಲಿ ಯಾವಾಗ ಚಂದ್ರನ ದರ್ಶನ? ರಂಜಾನ್ ಹಬ್ಬ ಯಾವಾಗ?



Click it and Unblock the Notifications