ಎಂಬಿಎ ಪದವೀಧರೆ, ಮಾಜಿ ಫೆಮಿನಾ ಮಿಸ್ ಇಂಡಿಯಾ, ನಟಿ ಅದಿತಿ ಆರ್ಯ ಅವರ ವಿವಾಹ ದೇಶದ ಖ್ಯಾತ ಬ್ಯಾಂಕ್ ಉದ್ಯಮಿ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ಸಂಸ್ಥಾಪಕ ಉದಯ್ ಕೋಟಕ್ ಅವರ ಪುತ್ರ ಜೇ ಕೋಟಕ್ ಅವರೊಂದಿಗೆ ನೆರವೇರಿದೆ.
ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ನ.7 ರ ಮಂಗಳವಾರ ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ಮದುವೆ ನಡೆದಿದ್ದು, ವಿವಾಹಕ್ಕೆ ಸಂಬಂಧಿಸಿದ ಇತರ ಕಾರ್ಯಕ್ರಮಗಳು ಉದಯಪುರದಲ್ಲಿ ನಡೆಯಿತು.
ಆದರೆ ಇವರಿಬ್ಬರು ಮದುವೆ ಸಮಾರಂಭದ ಯಾವುದೇ ಫೋಟೋಗಳನ್ನುಇನ್ನು ಹಂಚಿಕೊಂಡಿಲ್ಲ ಹಾಗೂ ತಮ್ಮ ಮದುವೆ ಬಗ್ಗೆ ಇನ್ನು ಮಾಹಿತಿಯನ್ನು ನೀಡಿಲ್ಲ.

ಆದರೆ ಮದುವೆಯಲ್ಲಿ ಪಾಲ್ಗೊಂಡವರು ಹಂಚಿಕೊಂಡಿರುವ ಫೋಟೋಗಳು ಇವರಿಬ್ಬರು ಮದುವೆಯಾಗಿರುವುದನ್ನು ದೃಢೀಕರಿಸುತ್ತಿವೆ. ಈ ಜೋಡಿ 2022ರ ಆಗಸ್ಟ್ ನಲ್ಲಿ ರಹಸ್ಯ ವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು ಎಂಬ ಗಾಸಿಪ್ ಹರಡಿತ್ತು. ಎಂಗೇಜ್ ಮೆಂಟ್ ನಂತರ ಪ್ಯಾರಿಸ್‌ನ ಐಫೆಲ್ ಟವರ್ ಮುಂದೆ ಪೋಸ್ ನೀಡಿರುವ ಇವರಿಬ್ಬರ ಫೋಟೋ ವೈರಲ್ ಆಗಿತ್ತು.
ಆದರೆ ಜೇ ಕೋಟಕ್ ಅವರು , ಅದಿತಿ ಮೇನಲ್ಲಿ ಯೇಲ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಸಮಾರಂಭದ ಪೋಟೋ ಹಂಚಿಕೊಂಡು ಅದರಲ್ಲಿ ಫಿಯಾನ್ಸಿ ಎಂದು ಕರೆದು, "ನಿಮ್ಮ ಬಗ್ಗೆ ಅಪಾರ ಹೆಮ್ಮೆಯಿದೆ," ಎಂದು ಬರೆದು ವಿಶ್ ಮಾಡಿದಾಗ ಅವರ ಸಂಬಂಧ ಕನ್ಫರ್ಮ್ ಆಗಿತ್ತು.
ಇವರಿಬ್ಬರು ಕೆಲವು ವರ್ಷಗಳ ಹಿಂದೆ ಪಾರ್ಟಿಯಲ್ಲಿ ಭೇಟಿಯಾಗಿದ್ದರು. ಇದಾದ ನಂತರ ಜೇ ಇನ್‌ಸ್ಟಾಗ್ರಾಂನಲ್ಲಿ ಅದಿತಿ ಅವರಿ ರಿಕ್ವೆಸ್ಟ್ ಕಳುಹಿಸಿದ್ದು ಬಳಿಕ ಇಬ್ಬರು ಸ್ನೇಹಿತರಾದರು.
ಅದಿತಿ ಆರ್ಯ ಯಾರು?
1993ರ ಸೆಪ್ಟೆಂಬರ್ ನಲ್ಲಿ ಜನಿಸಿದ ಅದಿತಿ ಆರ್ಯ ಭಾರತೀಯ ನಟಿ, ರೂಪದರ್ಶಿ, ರಿಸರ್ಚ್ ಎನಾಲಿಸ್ಟ್, ಮತ್ತು 2015 ರಲ್ಲಿ ಸೌಂದರ್ಯ ಸ್ಪರ್ಧೆ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ವಿಜೇತರಾಗಿದ್ದಾರೆ. 2015ರ ಮಿಸ್ ವಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2022 ರ ಬಾಲಿವುಡ್ ಚಿತ್ರ '83'ರಲ್ಲಿಯೂ ನಟಿಸಿದ್ದಾರೆ.
ಚಂಡೀಗಢದಲ್ಲಿ ಹುಟ್ಟಿ ಬೆಳೆದ ಅವರು ಪ್ರಾಥಮಿಕ ಶಿಕ್ಷಣವನ್ನು ಸೇಕ್ರೆಡ್ ಹಾರ್ಟ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಪೂರ್ಣಗೊಳಿಸಿದರು.ಬಳಿಕ ಗುರುಗ್ರಾಮ್‌ಗೆ ಸ್ಥಳಾಂತರಗೊಂಡ ಅವರು ಅಮಿಟಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.
ನಂತರ, ಅವರು ದೆಹಲಿ ವಿಶ್ವವಿದ್ಯಾಲಯದ ಶಾಹೀದ್ ಸುಖದೇವ್ ಕಾಲೇಜ್ ಆಫ್ ಬಿಸಿನೆಸ್ ಸ್ಟಡೀಸ್‌ನಿಂದ ಫೈನಾನ್ಸ್ ವಿಷಯದಲ್ಲಿ ಪದವಿ ಪಡೆದರು. ಅದಿತಿ ಅವರು ಇತ್ತೀಚೆಗಷ್ಟೇ ಎಂಬಿಎ ಪದವಿಯನ್ನು ಯೇಲ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಪಡೆದುಕೊಂಡಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶನದ ಇಸ್ಮ್ ಚಿತ್ರದಲ್ಲಿ ನಾಯಕಿಯಾಗಿ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಇವರು ನಿನ್ನ ವಡಿಲಿ ನೇನು ಪೋಲೆನುಲೆ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನ ಕುರುಕ್ಷೇತ್ರದಲ್ಲಿ ನಟಿಸುವ ಮೂಲಕ ಕನ್ನಡಕ್ಕೂ ಪಾದಾರ್ಪಣೆ ಮಾಡಿದರು. ಅವರು ಸಿದ್ಧಾಂತ್ ಸಚ್‌ದೇವ್ ನಿರ್ದೇಶನದ, ವಿಕ್ರಮ್ ಭಟ್ ನಿರ್ಮಾಣದ " ತಂತ್ರ" ಎಂಬ ಹಿಂದಿ ವೆಬ್ ಸೀರೀಸ್ ನಲ್ಲಿಯೂ ನಟಿಸಿದ್ದಾರೆ.
ಇವರ ಸಂಗಾತಿ ಜೇ ಕೋಟಕ್ ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ ಎಂಬಿಎ ಪದವಿ ಪಡೆದಿದ್ದು, ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಹಿಸ್ಟರಿ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಸದ್ಯ Kotak811 ಗೆ ಸಹ-ಮುಖ್ಯಸ್ಥರಾಗಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications