ಐಐಎಂ ಅಥವಾ ಐಐಟಿಯ ಹಳೆವಿದ್ಯಾರ್ಥಿಗಳನ್ನು ಹೊರತುಪಡಿಸಿ, ಅನೇಕ ಎಂಬಿಎ ಪದವೀಧರರು ಇಂದು ಭಾರತದಲ್ಲಿ ಅನೇಕ ದೊಡ್ದ - ದೊಡ್ಡ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಅವರಲ್ಲಿದ್ದ ಕಠಿಣ ಪರಿಶ್ರಮ ಮತ್ತು ಸ್ಥಿರತೆಯಿಂದ, ಅವರಲ್ಲಿ ಬಹಳಷ್ಟು ಮಂದಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲೂ ಕೆಲಸ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಜೊತೆಗೆ ಮುಂದೆ ಅದೇ ಕಂಪನಿಗಳ ಉನ್ನತ ಸ್ಥಾನಗಳಿಗೂ ಅವರು ಭಡ್ತಿ ಪಡೆದುಕೊಂಡಿದ್ದಾರೆ. ಸರ್ಕಾರ ಸಂಸ್ಥೆಯಾಗಿರುವ ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಗೆ 1989 ರಲ್ಲಿ ಸೇರಿದ ಅಂತಹ ವ್ಯಕ್ತಿಯೊಬ್ಬರು, ಈಗ ಅದರ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಮುನ್ನಡೆಸುತ್ತಿದ್ದಾರೆ. ಅವರೇ ಕೊಪ್ಪು ಸದಾಶಿವ ಮೂರ್ತಿ.

ಕೊಪ್ಪು ಸದಾಶಿವ ಮೂರ್ತಿ ಯಾರು?
2023 ರಲ್ಲಿ ನವೆಂಬರ್ ಅವರನ್ನು ಈ ಹುದ್ದೆಗೆ ನೇಮಿಸಲಾಗಿದ್ದು, ಇದಕ್ಕೂ ಮೊದಲು, ಮೂರ್ತಿಯವರು ಬಿಹೆಚ್ಇಎಲ್‌ನಲ್ಲಿ ಕಾರ್ಪೊರೇಟ್ ಕಾರ್ಯಾಚರಣೆಗಳ ನಿರ್ವಹಣಾ ಗುಂಪಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು. ಇದರ ಜೊತೆಗೆ ಅದೇ ಸಮಯದಲ್ಲಿ ಭಾರತ್ ಪಂಪ್ಸ್ ಮತ್ತು ಕಂಪ್ರೆಸರ್ಸ್ ಲಿಮಿಟೆಡ್ (BPCL) ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರ ಹೆಚ್ಚುವರಿ ಜವಾಬ್ದಾರಿಯನ್ನು ಕೂಡಾ ಹೊಂದಿದ್ದರು.
ಭಾರತ ಸರ್ಕಾರದ ಒಡೆತನದಲ್ಲಿರುವ ಈ ಕಂಪನಿಯು, ಬೃಹತ್ ಕೈಗಾರಿಕೆಗಳ ಸಚಿವಾಲಯ (MHI) ದ ಆಡಳಿತಾತ್ಮಕ ನಿಯಂತ್ರಣವನ್ನು ಹೊಂದಿದೆ. ಜನವರಿ 4, 2024 ರಂತೆ 67901 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್ ನ ಪಿಎಸ್‌ಯು ಷೇರು ಬೆಲೆ ಗುರುವಾರದಂದು 195.30 ರೂಪಾಯಿ ಆಗಿತ್ತು.
56 ವರ್ಷದ ಸದಾಶಿವ ಮೂರ್ತಿಯವರು ಭೋಪಾಲ್ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿದ್ದು, ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವೀಧರರು. ಜೊತೆಗೆ ಹಣಕಾಸು ವಿಷಯದಲ್ಲಿ ಎಂಬಿಎ ಪದವಿಯನ್ನು ಪಡೆದಿದ್ದಾರೆ. ಮೂರ್ತಿಯವರು 1989 ರಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನ ಝಾನ್ಸಿ ಉತ್ಪಾದನಾ ಘಟಕಕ್ಕೆ ಮೊದಲ ಬಾರಿಗೆ ಸೇರ್ಪಡೆಗೊಂಡರು.
ಇದು ಟ್ರಾನ್ಸ್‌ಫಾರ್ಮರ್ ಮತ್ತು ಲೊಕೊಮೊಟಿವ್ ಉತ್ಪಾದನಾ ಕೇಂದ್ರವಾಗಿದೆ. ಬಿಹೆಚ್ಇ ಎಲ್ ನಲ್ಲಿ ಅವರ 34 ವರ್ಷಗಳ ದೀರ್ಘ ಕಾಲದ ಸೇವೆಯ ಅವಧಿಯಲ್ಲಿ, ಮೂರ್ತಿ ಅವರು ಕಾರ್ಯತಂತ್ರ, ಕಾರ್ಯಾಚರಣೆ, ಪ್ರೋಜೆಕ್ಟ್ ಮತ್ತು ಕಮರ್ಷಿಯಲ್ ಮ್ಯಾನೇಜ್ಮೆಂಟ್ ನಲ್ಲಿ ಹೀಗೆ ಸಮಗ್ರ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ಅಲ್ಲದೇ 34 ವರ್ಷಗಳ ಅವಧಿಯಲ್ಲಿ ಹೈದರಾಬಾದ್, ಭೋಪಾಲ್, ಝಾನ್ಸಿ ಮತ್ತು ವಾರಣಾಸಿ ಸೇರಿದಂತೆ ವಿವಿಧ ಬಿಎಚ್‌ಇಎಲ್ ಘಟಕಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ವೃತ್ತಿಜೀವನದ ಅವಧಿಯನ್ನು ನೋಡುವುದಾದರೆ ಸಂಸ್ಥೆಯೂ ಸ್ಥಿರವಾದ ಆದಾಯ ಜೊತೆಗೆ ಲಾಭದಾಯಕತೆಯನ್ನು ತಲುಪಿಸುವ ಅತ್ಯುತ್ತಮ ದಾಖಲೆಯಿಂದ ಗುರುತಿಸಲ್ಪಟ್ಟಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications