ವಿಶ್ವದಲ್ಲಿ ಭಾರತವು ನೆಟ್‍ಫ್ಲಿಕ್ಸ್‌ನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ. ಜಾಗತಿಕವಾಗಿ ಈ ಕಂಪೆನಿಯ ಆದಾಯವು 2.6 ಲಕ್ಷ ಕೋಟಿಯನ್ನು ಮೀರಿದ್ದು, 2022ರಲ್ಲಿ ದೇಶದಲ್ಲಿ ಅತಿಹೆಚ್ಚು ಪಾವತಿ ಚಂದಾರರನ್ನು ಸೇರ್ಪಡೆಗೊಳಿಸಿರುವುದಾಗಿ ಹೇಳಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ಹಿಂದಿನ ಶಕ್ತಿಯೇ ಕಂಟೆಂಟ್ ವಿಭಾಗದ ಉಪಾಧ್ಯಕ್ಷರಾಗಿರುವ ಮೋನಿಕಾ ಶೆರ್ಗಿಲ್.
ಮೋನಿಕಾ ಶೆರ್ಗಿಲ್ ಅವರು ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಹುಟ್ಟಿದ್ದಾರೆ. ಅವರು ಬೆಳೆಯುತ್ತಿರಬೇಕಾದರೆ ನಮ್ಮಲ್ಲಿ ಬ್ಲ್ಯಾಕ್ ಅಂಡ್ ವೈಟ್ ಟೆಲಿವಿಷನ್ ಯುಗ ಇದ್ದು, ದೂರದರ್ಶನವನ್ನು ನೋಡುತ್ತಿದ್ದರು. ಅವರು ಆಗ ವರ್ಲ್ಡ್ ದಿಸ್ ವೀಕ್ ಅನ್ನುವ ಕಾರ್ಯಕ್ರಮ ನೋಡುತ್ತಿದ್ದಾರೆ. ಅದು ಅವರ ಇಷ್ಟದ ಕಾರ್ಯಕ್ರವಾಗಿದ್ದು, ಅವರಿಗೆ ಹೊರ ಜಗತ್ತಿನತ್ತ ಬಾಗಿಲನ್ನು ತೆರೆಯಿಸುವಂತೆ ಮಾಡಿತ್ತು. ಅವರು ಸದಾ ಕಾಲ ಕಥೆಗಳನ್ನು ಹೇಳುವುದಕ್ಕ ಇಷ್ಟಪಡುತ್ತಿರುವುದಾಗಿ ಫೋರ್ಬ್ಸ್‌ಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು.

ಮೋನಿಕಾ ಅವರು ಮೀರತ್‌ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಹೊಸದಿಲ್ಲಿಯ ಮಿರಂದಾ ಹೌಸ್‌ನಲ್ಲಿ ಬಿಎ ಪದವಿ ಮಾಡಿದರು. ಬಳಿಕ ಅವರು ಪತ್ರಿಕೋದ್ಯಮದಲ್ಲಿ ಕೋರ್ಸ್‌ನ್ನು ಮಾಡಿದ್ದಾರೆ. ಅವರು ಮುಂದೆ ಕರೆಸ್ಪಾಂಡೆಂಟ್ ಹಾಗೂ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕನ್ನು ಪ್ರಾರಂಭಿಸಿದರು. 1990ರಲ್ಲಿ ಡಾಕ್ಯುಮೆಂಟರಿಗಳನ್ನು ಮಾಡುತ್ತಿದ್ದರು. ಅವರು ಬಹಳ ಸವಾಲಿನ ಹಾಗೂ ಅಪಾಯಕಾರಿ ಪ್ರಾಜೆಕ್ಟ್‌ಗಳನ್ನು ವಹಿಸಿಕೊಳ್ಳುತ್ತಿದ್ದರು.
ಉದಾಹರಣೆಗೆ ಮೋನಿಕಾ ಅವರು ಧಾನ್‌ಬಾದ್‌ನ ಅಕ್ರಮ ಮರಳುಗಾರಿಕೆ ಬಗ್ಗೆ ವರದಿ ಮಾಡಿದ್ದರು. ಮೋನಿಕಾ ಅವರು ನೆಟ್‍ಫ್ಲಿಕ್ಸ್ ಸೇರುವ ಮೊದಲು ವಯೋಕಾಮ್18 ಡಿಜಿಟಲ್‌ನಲ್ಲಿ ಕಂಟೆಂಟ್ ಹೆಡ್ ಆಗಿದ್ದರು. ಅಷ್ಟೇಅಲ್ಲ ಮೋನಿಕಾ ಅವರು ಸ್ಟಾರ್ ಇಂಡಿಯಾಗೆ ಏಳು ವರ್ಷ 8 ತಿಂಗಳು ಕ್ರಿಯೇಟಿವ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಿದ್ದರು. ಜತೆಗೆ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿಯೂ ಕ್ರಿಯೇಟಿವ್ ಡೈರಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.
ತಮ್ಮ ಸಾಹಸಿ ಪತ್ರಿಕೋದ್ಯಮ ಜರ್ನಿಗೆ ಹೆತ್ತವರೇ ಕಾರಣ ಎಂಬುದಾಗಿ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಹೊಗಳಿದ್ದರು. ಮೋನಿಕಾ ಅವರು ಭಾರತದಲ್ಲಿ ಕಂಪೆನಿ ಯಶಸ್ವಿಯಾಗಿ ಮುನ್ನಡೆಯುವುದಕ್ಕೆ ಕಾರಣಕರ್ತರಾಗಿದ್ದಾರೆ. 2022ರಲ್ಲಿ ನೆಟ್‍ಫ್ಲಿಕ್ಸ್ ಕಂಪೆನಿಯ ವಾರ್ಷಿಕ ಆದಾಯವು ಶೇ.25ರಷ್ಟು ಜಾಸ್ತಿಯಾಗಿತ್ತು. ಭಾರತದ ಕಂಟೆಂಟ್‌ಗಳಾದ ಮೋನಿಕಾ, ಹೋ ಮೈ ಡಾರ್ಲಿಂಗ್, ಜಂತರ:ಸೀಸನ್ 2, ಆರ್‌ಆರ್‌ಆರ್ ಯಶಸ್ಸನ್ನು ತಂದು ಕೊಟ್ಟು ಅಚ್ಚರಿಯನ್ನೇ ಸೃಷ್ಟಿಸಿತ್ತು.
ಆದರೆ ಈ ಯಶಸ್ವಿ ಪಯಣವು ಅಷ್ಟೊಂದು ಸುಲಭವಾಗಿರಲಿಲ್ಲ. ಮೋನಿಕಾ ಅವರು ಜವಾಬ್ದಾರಿಯನ್ನು ತೆಗೆದುಕೊಂಡಾಗ ನೆಟ್‍ಫ್ಲಿಕ್ಸ್ ಇಂಡಿಯಾವು ಸ್ಕೇರ್ಡ್ ಗೇಮ್ಸ್ ಹಾಗೂ ದಿಲ್ಲಿ ಕ್ರೈಮ್ ಎನ್ನುವ ಎರಡು ಸೀರಿಸ್‌ಗೆ ಮಾತ್ರ ಫೇಮಸ್ ಆಗಿತ್ತು. ಹೀಗಾಗಿ, ಅವರು ಉತ್ತಮ ತಂಡವನ್ನು ನಿರ್ಮಿಸುವತ್ತ ಗಮನಹರಿಸಿದ್ದರು. ಅವರು ಸರಿಯಾದ ಸ್ಟೋರಿ ಟೆಲ್ಲರ್‌ಗಳನ್ನು ಸೇರಿಸಿಕೊಂಡರು.
ಮೋನಿಕಾ ಅವರು ನೆಟ್‍ಫ್ಲಿಕ್ಸ್‌ನಲ್ಲಿ ಬಹಳ ಕಡಿಮೆ ಚಂದಾದಾರಿಕೆ ಪ್ಲ್ಯಾನ್ ಹಾಗೂ ಭಾರೀ ರಿಯಾಯಿತಿಗಳನ್ನು ಘೋಷಿಸಿ ಬಳಕೆದಾರರನ್ನು ಆಕರ್ಷಿಸುವ ಬದಲು ಬಹಳ ಭಿನ್ನವಾಗಿ ಯೋಚಿಸತೊಡಗಿದರು. ಈ ರೀತಿಯ ತಂತ್ರಗಾರಿಕೆಯನ್ನು ಬಳಸುವುದರಿಂದ ಬಳಕೆದಾರರು ಸುಧೀರ್ಘ ಅವಧಿಗೆ ಮುಂದುವರಿಯುವುದಿಲ್ಲ ಎನ್ನುತ್ತಿದ್ದರು.
ಕಂಪೆನಿಯು ನೆಟ್‍ಫ್ಲಿಕ್ಸ್ನ ಮೌಲ್ಯಕ್ಕೆ ಅವಲಂಬಿತವಾಗಿ ಸುಸ್ಥಿರ ಬೆಳವಣಿಗೆಯನ್ನು ಸಾಧಿಸಬೇಕು ಎನ್ನುವುದು ಅವರ ಯೋಚನೆ-ಯೋಜನೆಯಾಗಿತ್ತು. ಕಂಪನಿಯನ್ನು ಎರಡನೇ ಹಂತದ ನಗರಗಳಲ್ಲಿ ವಿಸ್ತರಿಸಬೇಕೆಂದು ಬಯಸಿದರು. ಅಂಥಹ ನಗರಗಳಲ್ಲಿ ಪ್ರಮೋಷನ್‌ಗಳನ್ನು ಮಾಡಲಾರಂಭಿಸಿದರು. ಇಲ್ಲಿನ ಮಾರುಕಟ್ಟೆಯನ್ನು ಅವಲಂಬಿಸಿಕೊಂಡು ಸಿನಿಮಾಗಳನ್ನು ಖರೀದಿಸಲು ನಿರ್ಧರಿಸಿದರು.


Click it and Unblock the Notifications