ಮಿಸ್ಟರ್‌ಬೀಸ್ಟ್ ಎಂದೇ ಜನಪ್ರಿಯತೆ ಪಡೆದುಕೊಂಡಿರುವ ಜಿಮ್ಮಿ ಡೊನಾಲ್ಡ್‌ಸನ್ ಯೂಟ್ಯೂಬ್ ನಲ್ಲಿ ಅತ್ಯಂತ ಯಶಸ್ವಿ ಕಂಟೆಂಟ್ ಕ್ರಿಯೇಟರ್ ಆಗಿದ್ದು, ಅವರು ತಮ್ಮ ಚಾನೆಲ್‌ನಲ್ಲಿ 139 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಪ್ರಸ್ತುತ ಅವರು ಜಗತ್ತಿನ ಅತಿದೊಡ್ಡ ಯೂಟೂಬರ್ ಆಗಿದ್ದಾರೆ. ಅವರು ಬಹಳ ವಿಶಿಷ್ಟ ಹಾಗೂ ದುಬಾರಿ ಸಾಹಸಗಳು, ಚಾಲೆಂಜ್‌ಗಳು ಅವರನ್ನು ಅತಿಹೆಚ್ಚು ಸಂಭಾವನೆ ಪಡೆಯುವ ಕಂಟೆಂಟ್ ಕ್ರಿಯೇಟರ್‌ನ್ನಾಗಿ ಬೆಳೆಸಿದೆ. 2021ರಲ್ಲಿ ಫೋರ್ಬ್ಸ್ ಗುರುತಿಸಿರುವಂತೆ $54 ಮಿಲಿಯನ್ ಸಂಪಾದನೆ ಹಾಗೂ 10 ಬಿಲಿಯನ್ ವ್ಯೂವ್ಸ್‌ನೊಂದಿಗೆ ಅತಿಹೆಚ್ಚು ಪಾವತಿಯ ಯೂಟೂಬರ್ ಆಗಿದ್ದಾರೆ.
ಅವರು 1998ರ ಮೇ 7ರಂದು ನಾರ್ತ್ ಕೆರೊಲಿನಾದ ಗ್ರೀನ್‌ವೆಲ್ಲೆಯಲ್ಲಿ ಜನಿಸಿದ್ದಾರೆ. ಮಿಸ್ಟರ್‌ಬೀಸ್ಟ್ ತಮ್ಮ ವೃತ್ತಿ ಜೀವನವನ್ನು 2012ರಲ್ಲಿ ಯೂಟ್ಯೂಬ್ ನಲ್ಲಿ ಪ್ರಾರಂಭಿಸಿದ್ದಾರೆ. ಆ ಮೂಲಕ ಗೇಮಿಂಗ್ ಹಾಗೂ ಕಾಮೆಂಟರಿ ಕುರಿತ ವೀಡಿಯೊಗಳನ್ನು ನಿರ್ಮಿಸುತ್ತಿದ್ದರು. ಆದರೆ ಅವರು ಸ್ಟಂಟ್ಸ್, ಚಾಲೆಂಜಸ್ ಹಾಗೂ ಫಿಲೋಂಥ್ರಾಫಿ ವೀಡಿಯೊ ಕಂಟೆಂಟ್‌ಗಳನ್ನು ನಿರ್ಮಿಸುವುದಕ್ಕೆ ಪ್ರಾರಂಭಿಸಿದ ನಂತರ ಅವರ ಚಾನೆಲ್ ಹೆಚ್ಚಿನ ಜನಪ್ರಿಯತೆ ಪಡೆಯಲಾರಂಭಿಸಿತು.

ಮಿಸ್ಟರ್‌ಬೀಸ್ಟ್ ಅವರು ತಾವು ಮಾಡುವ ಅತಿರಂಜಿತ ವೀಡಿಯೊಗಳಿಂದ ಗಳಿಸುವ ಹಣದಲ್ಲಿ ಹೆಚ್ಚಿನ ಪಾಲನ್ನು ಚಾರಿಟಿ, ಬಡವರಿಗೆ ದಾನ ಮಾಡುವ ಜತೆಗೆ 20 ಮಿಲಿಯನ್ ಗಿಡಗಳನ್ನು ನೆಟ್ಟು ಬೆಳೆಸುವುದಕ್ಕೆ ಹಾಗೂ ಖಾಸಗಿ ದ್ವೀಪ ಖರೀದಿಯಿಂದಾಗಿ ಮತ್ತಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದಾರೆ.
ಮಿಸ್ಟರ್‌ಬೀಸ್ಟ್ ತನ್ನ ಯೂಟೂಬ್ ಚಾನೆಲ್ ಮತ್ತು ಸಂಬಂಧಿತ ಕಂಪೆನಿಗಳಿಗೆ ಶತಕೋಟಿ ಡಾಲರ್‌ಗಳ ಆಫರ್ ಪಡೆದಿರುವುದಾಗಿ ಫ್ಲಾಗ್ರಾಂಟ್‌ನೊಂದಿಗೆ ನೀಡಿರುವ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು. ಆದರೆ ಅವರು ಅದನ್ನು ತಿರಸ್ಕರಿಸಿದ್ದರು. ಈ ಆಫರ್ ಆಕರ್ಷಕವಾಗಿದ್ದರು ಕೂಡ ಅವರು ತಮ್ಮ ಯೂಟ್ಯೂಬ್ ಚಾನೆಲ್‌ಗೆ ಕೆಲಸ ಮಾಡಲು ಬಯಸಿರಲಿಲ್ಲ. ಬದಲಿಗೆ ತಮ್ಮದೇ ಷರತ್ತುಗಳೊಂದಿಗೆ ಕಂಟೆಂಟ್‌ಗಳನ್ನು ಕ್ರಿಯೇಟ್ ಮಾಡುವುದನ್ನು ಮುಂದುವರಿಸುವತ್ತ ಹೆಚ್ಚಿನ ಆದ್ಯತೆಯನ್ನು ನೀಡಿದರು.
ನೆಟಿಜನ್‌ಗಳು ಮಿಸ್ಟರ್‌ಬೀಸ್ಟ್ ನಿರ್ಧಾರಗಳಿಂದ ಪ್ರಭಾವಿತರಾಗಿದ್ದು, ಕಾಮೆಂಟ್ಸ್ ಬಾಕ್ಸ್‌ನಲ್ಲಿ ಅವರಿಗೆ ಭಾರೀ ಬೆಂಬಲವನ್ನು ತೋರಿಸಿದರು. ಅವರ ಉದ್ಯಮಶೀಲತೆ ಹಾಗೂ ವೀಡಿಯೊಗಳಲ್ಲಿ ನೀಡುವ ಅಮೂಲ್ಯ ಸಲಹೆಗಳಿಗಾಗಿ ಅನೇಕರು ಅವರನ್ನು ಶ್ಲಾಘಿಸತೊಡಗಿದರು. ಬಿಲಿಯನ್ ಡಾಲರ್‌ಗಳ ಆಫರ್‌ಗಳನ್ನು ತಿರಸ್ಕರಿಸಿದರೂ ಮಿಸ್ಟರ್‌ಬೀಸ್ಟ್ ಯಶಸ್ವಿ ಅತ್ಯುನ್ನತ ಕಂಟೆಂಟ್ ಕ್ರಿಯೇಟರ್ ಆಗಿ ಮುಂದುವರಿದ್ದಾರೆ. ಅಷ್ಟೇಅಲ್ಲ, ತಮ್ಮ ಸಂಪಾದನೆ ಸಾಮರ್ಥ್ಯದಿಂದಾಗಿ 2020ರಲ್ಲಿ ಫೋರ್ಬ್ಸ್ ಗುರುತಿಸಿದ ಜಗತ್ತಿನ ಅತಿಹೆಚ್ಚು ಸಂಭಾವನೆಯ ಟಾಪ್ 40 ತಾರೆಯರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು.
ಮಿಸ್ಟರ್‌ಬೀಸ್ಟ್ ತಮ್ಮ ಪ್ರೇಕ್ಷಕರನ್ನು ಮನರಂಜನೆಗೊಳಿಸುವ ಹಾಗೂ ಅವರನ್ನು ಆಕರ್ಷಣೆಗೊಳಿಸುವ ಕಂಟೆಂಟ್ ರಚಿಸುವಲ್ಲಿ ಹೊಂದಿರುವ ಸಾಮರ್ಥ್ಯವೇ ಅವರ ಯಶಸ್ಸು ಮತ್ತು ಜನಪ್ರಿಯತೆಗೆ ಪ್ರಮುಖ ಕಾರಣ ಎಂದು ಹೇಳಬಹುದು. ಅವರ ಮುಖ್ಯ ಚಾನೆಲ್ 139 ಮಿಲಿಯನ್ ಚಂದಾದಾರರನ್ನು ಹೊಂದಿದ್ದು, ಉಳಿದ ಮಿಸ್ಟರ್‌ಬೀಸ್ಟ್‌ನ ಎಲ್ಲ ಐದು ಚಾನೆಲ್‌ಗಳು ಕೂಡ ತಲಾ 7 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಅವರು ಬಹುದೊಡ್ಡ ಫಾಲೋವರ್ಸ್‌ನ್ನು ಹೊಂದಿದ್ದು, ಪ್ರತಿಯೊಂದು ಹೊಸ ವೀಡಿಯೊ ಅಪ್‌ಲೋಡ್‌ಗಾಗಿ ಬಹಳ ಕುತೂಹಲದಿಂದ ಕಾಯುತ್ತಿರುತ್ತಾರೆ.


Click it and Unblock the Notifications