ಕ್ರಿಕೆಟ್ ವೃತ್ತಿಜೀವನದ ಹೊರತಾಗಿ, ಚೆನ್ನೈ ಸೂಪರ್ ಕಿಂಗ್ಸ್ ನಾಯಕರು ಕೂಡಾ ಆಗಿರುವ ಎಂಎಸ್ ಧೋನಿ ಬರೀ ಕ್ರಿಕೆಟ್‌ನಿಂದ ಆದಾಯವನ್ನು ಗಳಿಸುತ್ತಿಲ್ಲ. ಬದಲಾಗಿ ತಾನು ವ್ಯಾಪಾರಗಳಿಗೆ ಮಾಡುವ ಹೂಡಿಕೆ ಹಾಗೂ ಸ್ಟಾರ್ಟ್‌ಅಪ್ ಕಂಪನಿಗಳ ಮೂಲಕವೂ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಗಳಿಸುತ್ತಿದ್ದಾರೆ. ಅಂತಹ ಕಂಪನಿಗಳಲ್ಲಿ ಎಂ ಎಸ್ ಧೋನಿಯ ಬ್ಯುಜಿನೆಸ್ ಪಾರ್ಟ್‌ನರ್ ಆಗಿದ್ದು, ಅಂತಾರಾಷ್ಟ್ರೀಯ ಸ್ವಿಮ್ಮರ್ ಕೂಡಾ ಆಗಿದ್ದಾರೆ.
ಹೌದು, ಧೋನಿಗೆ ಕೋಟ್ಯಾಂತರ ರೂಪಾಯಿ ಲಭ್ಯವಾಗುವ ಸಂಸ್ಥೆಗಳಲ್ಲಿ ಧೋನಿಯ ವ್ಯಾಪಾರ ಪಾಲುದಾರರಲ್ಲಿ ಅಗ್ನಿಶ್ವರ್ ಜಯಪ್ರಕಾಶ್ ಕೂಡಾ ಒಬ್ಬರಾಗಿದ್ದಾರೆ. ಅಗ್ನಿಶ್ವರ್ ಜಯಪ್ರಕಾಶ್ ಡ್ರೋನ್ ಕಂಪನಿಯನ್ನು ನಡೆಸುತ್ತಿದ್ದಾರೆ. ಅಗ್ನಿಶ್ವರ್ ಜಯಪ್ರಕಾಶ್ ಭಾರತದ ಪ್ರಮುಖ ಡ್ರೋನ್ ಕಂಪನಿಯಾದ ಗರುಡಾ ಏರೋಸ್ಪೇಸ್‌ನ ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಈ ಸಂಸ್ಥೆಯು ಪ್ರಸ್ತುತ ಭದ್ರತೆ ಮತ್ತು ಆಹಾರ ವಿತರಣೆಯ ಸೇವೆಗಳನ್ನು ಒದಗಿಸುತ್ತಿದೆ.

ಇದು ಮಾತ್ರವಲ್ಲದೆ ಅಗ್ನಿಶ್ವರ್ ಜಯಪ್ರಕಾಶ್, ಭಾರತದ ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯ (ಎಂಎಸ್ ಧೋನಿ) ಪ್ರಮುಖ ಬ್ಯುಜಿನೆಸ್ ಪಾರ್ಟ್‌ನರ್ ಆಗಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಈಜುಗಾರ ಮತ್ತು ಉದ್ಯಮಿ ಅಗ್ನಿಶ್ವರ್ ಜಯಪ್ರಕಾಶ್ ಅವರು ನಿರ್ವಹಣೆ ಮಾಡುವ ಸಾರ್ಟ್‌ಅಪ್ ಸಂಸ್ಥೆಯಾದ ಗರುಡಾ ಏರೋಸ್ಪೇಸ್‌ನಲ್ಲಿ ಎಂಎಸ್ ಧೋನಿಯು ಅತೀ ದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ. ಧೋನಿ 2022 ರಲ್ಲಿ ಡ್ರೋನ್ ಕಂಪನಿಯಲ್ಲಿ ಹೂಡಿಕೆ ಮಾಡುವುದನ್ನು ಕೊನೆ ಮಾಡಿದ್ದಾರೆ.
ಧೋನಿಯ ಬ್ಯುಜಿನೆಸ್ ಪಾರ್ಟ್‌ನರ್ ಅಗ್ನಿಶ್ವರ್ ಜಯಪ್ರಕಾಶ್ ಯಾರು?
ಅಗ್ನಿಶ್ವರ್ ಜಯಪ್ರಕಾಶ್ ಅಂತರಾಷ್ಟ್ರೀಯ ಮಟ್ಟದ ಈಜುಪಟು ಆಗಿದ್ದಾರೆ. ಜಯಪ್ರಕಾಶ್ ವಿಶ್ವ ಚಾಂಪಿಯನ್‌ಶಿಪ್ ಮತ್ತು ದಕ್ಷಿಣ ಏಷ್ಯಾ ಕ್ರೀಡಾಕೂಟಗಳಲ್ಲಿ ದೇಶವನ್ನು ಅನೇಕ ಬಾರಿ ಪ್ರತಿನಿಧಿಸಿದ್ದಾರೆ. ಒಲಿಂಪಿಕ್ಸ್‌ಯಲ್ಲಿ ಕಾಣುವ ನಿರೀಕ್ಷೆಯಲ್ಲಿದ್ದರು. ಆದರೆ ದೇಶಕ್ಕೆ ಇನ್ನೊಂದು ರೀತಿಯಲ್ಲಿ ಸೇವೆ ಸಲ್ಲಿಸಲು ನಿರ್ಧರಿಸಿದರು.
ಅಗ್ನಿಶ್ವರ್ ಜಯಪ್ರಕಾಶ್ ಪ್ರತಿಷ್ಠಿತ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. ಯುಎನ್ ಅಸಿಸ್ಟೆಂಟ್ ಸೆಕ್ರೆಟರಿ ಜನರಲ್ ಮೇಡಮ್ ಲಕ್ಷ್ಮಿ ಪುರಿ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅಗ್ನಿಶ್ವರ್ ಜಯಪ್ರಕಾಶ್ ಡ್ರೋನ್ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡರು. ಡ್ರೋನ್ ಕಂಪನಿಯನ್ನು ಪ್ರಾರಂಭಿಸಲು ನಿರ್ಧರಿಸಿದರು.
ಪ್ರಸ್ತುತ, ಅಗ್ನಿಶ್ವರ್ ಜಯಪ್ರಕಾಶ್ ಡ್ರೋನ್ ಕಂಪನಿ ಗರುಡಾ ಏರೋಸ್ಪೇಸ್ 400 ಕ್ಕೂ ಹೆಚ್ಚು ಡ್ರೋನ್ ಫ್ಲೀಟ್ ಅನ್ನು ಹೊಂದಿದೆ. ಗೋದಾಮಿನ ಸೇವೆಗಳಿಗಾಗಿ ಸ್ವಿಗ್ಗಿ, ಫ್ಲಿಪ್‌ಕಾರ್ಟ್ ಮತ್ತು ಡೆಲಿವರಿಯಂತಹ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಆರಂಭಿಕ ಹೂಡಿಕೆಯ ನಂತರ, ಎಂಎಸ್ ಧೋನಿ ಡ್ರೋನ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಸಹಿ ಹಾಕಿದ್ದಾರೆ.
ಬಹು ಮಾಧ್ಯಮಗಳ ವರದಿಗಳ ಪ್ರಕಾರ, ಕಂಪನಿಯು ಸುಮಾರು 165 ಕೋಟಿ ರೂಪಾಯಿಗಳ ಮತ್ತೊಂದು ಸುತ್ತಿನ ಹೂಡಿಕೆಯನ್ನು ನಿರೀಕ್ಷಿಸುತ್ತಿದೆ. ಅದರ ಪ್ರಸ್ತುತ ವ್ಯವಹಾರದ ಪ್ರಕಾರ, ಗರುಡಾ ಏರೋಸ್ಪೇಸ್ 2051 ಕೋಟಿ ರೂಪಾಯಿಗಿಂತ ಅಧಿಕ ಮೌಲ್ಯದ್ದಾಗಿದೆ ಮತ್ತು ಶೇಕಡ 24 ರಷ್ಟು ಲಾಭಾಂಶವನ್ನು ಹೊಂದಿದೆ. ಎಂಎಸ್ ಧೋನಿಯ ವ್ಯಾಪಾರ ಪಾಲುದಾರರಲ್ಲದೆ, ಅಗ್ನಿಶ್ವರ್ ಜಯಪ್ರಕಾಶ್ ಸಿಎಸ್‌ಕೆ ನಾಯಕನ ಸೂಪರ್ ಫ್ಯಾನ್ ಆಗಿದ್ದಾರೆ.
800 ಕೋಟಿಯ ಸಂಸ್ಥೆ ನಡೆಸುತ್ತಿರುವ ಧೋನಿಯ ಅತ್ತೆ
ಧೋನಿ ಇನ್ನೂ ಕೋಟಿ ರೂಪಾಯಿಯ ಮೌಲ್ಯದ ಬೃಹತ್ ವ್ಯಾಪಾರ ಸಾಮ್ರಾಜ್ಯವನ್ನು ಹೊಂದಿದ್ದಾರೆ. ಅವರ ಕಂಪನಿಗಳಲ್ಲಿ ಒಂದನ್ನು ಧೋನಿಯ ಅತ್ತೆ ಶೀಲಾ ಸಿಂಗ್ ನಡೆಸುತ್ತಿದ್ದಾರೆ. ಶೀಲಾ ಸಿಂಗ್ ಎಂಎಸ್ ಧೋನಿಯ ನಿರ್ಮಾಣ ಸಂಸ್ಥೆ ಧೋನಿ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದಾರೆ. ಇದು ಬಹುಕೋಟಿ ವ್ಯವಹಾರವಾಗಿದೆ.
ತನ್ನ ವ್ಯಾಪಾರ ಸಾಮ್ರಾಜ್ಯವನ್ನು ಹೇಗೆ ವಿಸ್ತರಿಸುವುದು ಎಂದು ನಿರ್ಧರಿಸುವ ವಿಚಾರಕ್ಕೆ ಬಂದಾಗ ಚೆನ್ನೈ ಸೂಪರ್ ಕಿಂಗ್ ನಾಯಕ ಮಹೇಂದ್ರ ಸಿಂಗ್ ಧೋನಿ ಕುಟುಂಬದ ಸಹಾಯ ಪಡೆಯುವ ನಿರ್ಧಾರವನ್ನು ಮಾಡಿದ್ದಾರೆ. ಧೋನಿ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಇಬ್ಬರೂ ಸಿಇಒಗಳಾದ ಸಾಕ್ಷಿ ಧೋನಿ ಮತ್ತು ಅವರ ತಾಯಿ ಶೀಲಾ ಸಿಂಗ್ 2020 ರಿಂದ ಈ ಕಂಪನಿಯ ಮುಖ್ಯಸ್ಥರಾಗಿದ್ದಾರೆ.


Click it and Unblock the Notifications