ಮಹೇಂದ್ರ ಸಿಂಗ್ ಧೋನಿ ಖ್ಯಾತ ಕ್ರಿಕೆಟಿಗರಾಗಿರುವುದು ಮಾತ್ರಲ್ಲದೇ, ಅವರೊಬ್ಬ ಯಶಸ್ವಿ ಉದ್ಯಮಿ, ಹಲವು ಬ್ರ್ಯಾಂಡ್ ಗಳ ಅಂಬಾಸಿಡರ್ ಕೂಡಾ ಆಗಿದ್ದಾರೆ. ಧೋನಿ ಯಶಸ್ವಿ ವ್ಯಾಪಾರ ಸಾಮ್ರಾಜ್ಯವನ್ನು ಮುನ್ನಡೆಸುತ್ತಿರುವುದು ಮಾತ್ರವಲ್ಲದೇ ಅನೇಕ ಬ್ಯುಸಿನೆಸ್ ಮತ್ತು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರು ಹೂಡಿಕೆ ಮಾಡಿದ ಬ್ಯುಸಿನೆಸ್ ನಲ್ಲಿ ಒಂದಾದ Cars24ನ್ನು ಇದನ್ನು ಉದ್ಯಮಿ ವಿಕ್ರಮ್ ಚೋಪ್ರಾ ಅವರು ಮುನ್ನಡೆಸುತ್ತಿದ್ದಾರೆ.
ವಿಕ್ರಮ್ ಚೋಪ್ರಾ ಬಳಸಿರುವ ಕಾರು-ಮಾರಾಟ ಮಾಡುವ ಯಶಸ್ವಿ ಪ್ಲಾಟ್‌ಫಾರ್ಮ್ ಆಗಿರುವ Cars24 ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಈ ಸಂಸ್ಥೆಯೂ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮತ್ತು ಖರೀದಿಯ ಪ್ಲಾಟ್‌ಫಾರ್ಮ್ ಆಗಿದೆ. 2015 ರಲ್ಲಿ ಪ್ರಾರಂಭವಾದ Cars24 ಸ್ಟಾರ್ಟ್‌ಅಪ್ ಅನ್ನು ಮೆಹುಲ್ ಅಗರವಾಲ್, ಗಜೇಂದ್ರ ಜಂಗಿದ್ ಮತ್ತು ರುಚಿತ್ ಅಗರ್ವಾಲ್ ಜೊತೆಯಾಗಿ ಪ್ರಾರಂಭಿಸಿದರು.

Cars24 ಸಂಸ್ಥಾಪಕ ವಿಕ್ರಮ್ ಚೋಪ್ರಾ ಅವರು ತಮ್ಮ ಬಾಲ್ಯದಿಂದಲೂ ಉದ್ಯಮಶೀಲತೆ ಮನಸ್ಸು ಹೊಂದಿದ್ದು, ತಮ್ಮ ವೃತ್ತಿಜೀವನದ ಆರಂಭದಲ್ಲಿ FabFurnish ಎಂಬ ಕಂಪನಿಯನ್ನು ಸ್ಥಾಪಿಸಿದ್ದರು. ಆದರೆ ಅದು ವಿಫಲವಾದಾಗ, ಮುಂದೆ ಸಿಕ್ವೊಯಾ ಕ್ಯಾಪಿಟಲ್‌ನಲ್ಲಿ ಹೂಡಿಕೆ ವಿಶ್ಲೇಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು.
ವಿಕ್ರಮ್ ಅವರು ಶೈಕ್ಷಣಿಕ ಅರ್ಹತೆಯೂ ವೈವಿಧ್ಯಮಯವಾಗಿದ್ದು, ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯಲ್ಲಿ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಮತ್ತು ಎಂಟೆಕ್ ಪದವಿಯನ್ನು ಪಡೆದಿದ್ದಾರೆ. ನಂತರ ಅವರು ವಾರ್ಟನ್ ಶಾಲೆಯಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಹಣಕಾಸು ವಿಷಯದಲ್ಲಿ ಎಂಬಿಎ ಪಡೆದರು.
ಎಂಬಿಎ ವ್ಯಾಸಂಗಕ್ಕಾಗಿ ವಿಕ್ರಮ್ ಯುಎಸ್‌ಗೆ ತೆರಳುವ ಮೊದಲು ಅವರು ತಮ್ಮ ಕಾರನ್ನು ಮಾರಾಟ ಮಾಡಲು ಪ್ರಯತ್ನಿಸಿದಾಗ ಕಾರು ಮಾರಾಟ ಸುಲಭದಾಯಕವಾಗಿರಲಿಲ್ಲ. ತಮ್ಮ ಎಂಬಿಎ ಪದವಿ ಬಳಿಕ ದೇಶಕ್ಕೆ ಹಿಂದಿರುಗಿದಾಗ ಓಡಾಟಕ್ಕಾಗಿ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಲು ನಿರ್ಧರಿಸಿದಾಗ, ಸೆಕೆಂಡ್ ಹ್ಯಾಂಡ್ ವಾಹನಗಳ ಮಾರ್ಕೆಟ್ ನಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ ಕಂಡುಕೊಂಡ ಅವರು ಸರಳವಾದ ಕಲ್ಪನೆಯೊಂದಿಗೆ Cars24 ಆನ್‌ಲೈನ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಿದರು.
ಇದು ಜನರು ತಮ್ಮ ಬಳಸಿದ ಕಾರುಗಳನ್ನು ಮಾರಾಟ ಮಾಡುವ ಆನ್‌ಲೈನ್ ಮಾರುಕಟ್ಟೆ ಸ್ಥಳವಾಗಿದೆ. ಆನ್‌ಲೈನ್ ನಲ್ಲಿ ಬಳಸಿದ ಕಾರು ಮಾರಾಟ ಪ್ರಮುಖ ಯಶಸ್ಸನ್ನು ಕಂಡ ನಂತರ, ಅವರು ಆಫ್‌ಲೈನ್ ಸ್ಟೋರ್‌ಗಳನ್ನು ತೆರೆಯಲು ಪ್ರಾರಂಭಿಸಿದರು.
2021 ರಲ್ಲಿ Cars24 ಮೇಜರ್ ಬೂಮ್ ಕಂಡಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್, ಆಸ್ಟ್ರೇಲಿಯಾ ಮತ್ತು ಥೈಲ್ಯಾಂಡ್ ನಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ನಿರ್ಧರಿಸಿತು. ಕಂಪನಿಯು ಈಗ 73 ನಗರಗಳಲ್ಲಿ ಆಫ್‌ಲೈನ್ ಸ್ಟೋರ್ ಹೊಂದಿದ್ದು ಪ್ರಪಂಚದಾದ್ಯಂತ 202 ಸ್ಥಳಗಳಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಂಡಿದೆ. ಇದು 2019 ರಲ್ಲಿ ವಾರ್ಷಿಕವಾಗಿ 150,000 ಕಾರು ಮಾರಾಟ ಮಾಡಿತ್ತು .
ವಿಕ್ರಮ್ ಚೋಪ್ರಾ ಅವರ Cars24, ಸರಿ ಸುಮಾರು 15,000 ಕೋಟಿ ರೂಪಾಯಿ ಬೃಹತ್ ಆದಾಯ ಗಳಿಸಿದೆ. ಮಾತ್ರವಲ್ಲದೇ Cars24 ಮೋಟೋ ಎಂಬ ಬೈಕ್ ಮರುಮಾರಾಟದ ಉದ್ಯಮವನ್ನು ಪ್ರಾರಂಭಿಸಿದೆ. ಕಂಪನಿಯ ಯಶಸ್ಸು ಬ್ರಾಂಡ್ ಅಂಬಾಸಿಡರ್ ಆಗಿದ್ದಎಂಎಸ್ ಧೋನಿ ಅವರನ್ನು ಸೆಳೆದ ಕಾರಣ ಅವರು, ಬಹಿರಂಗಪಡಿಸದ ಮೊತ್ತವನ್ನು ಇದರಲ್ಲಿ ಹೂಡಿಕೆ ಮಾಡಿದರು.
Cars24 ಪ್ರಸ್ತುತ 26,600 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಮೌಲ್ಯವನ್ನು ಹೊಂದಿದ್ದು, ಚೋಪ್ರಾ ಸುಮಾರು 5 ಮಿಲಿಯನ್ ಯುಎಸ್ ಡಾಲರ್ ವೈಯಕ್ತಿಕ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.


Click it and Unblock the Notifications