ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ಟಾಟಾ ಸಮೂಹವನ್ನು ಎತ್ತರಕ್ಕೆ ಕೊಂಡೊಯ್ದಿದ್ದರೂ ಅವರು ಒಬ್ಬ ಯಶಸ್ವಿ ಉದ್ಯಮಿಯಲ್ಲ, ಆದರೆ ಭಾರತದ ಪಾಲಿಗೆ ಅವರೊಬ್ಬ ದೊಡ್ಡ ಜನೋಪಕಾರಿ ವ್ಯಕ್ತಿ. ಈ ನಡುವೆ ಟಾಟಾ ಗ್ರೂಪ್ ರತನ್ ಟಾಟಾ ಅವರ ಹೃದಯಕ್ಕೆ ತುಂಬಾ ಹತ್ತಿರವಾದ ಸಂಸ್ಥೆ.
ಹೀಗಾಗಿ, ಟಾಟಾ ಸನ್ಸ್ ಸಂಸ್ಥೆಯ ನಾಯಕ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದಾಗ ಅವರು ತಮ್ಮ ಬಲಗೈ ಬಂಟನಾಗಿದ್ದ ಎನ್. ಚಂದ್ರಶೇಖರ್ ಅವರಿಗೆ ಎಲ್ಲ ಜವಾಬ್ದಾರಿಗಳನ್ನು ನೀಡುವ ಮೂಲಕ ಅವರನ್ನೇ ಟಾಟಾ ಸನ್ಸ್ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದರು. ಎನ್. ಚಂದ್ರಶೇಖರ್ ಅವರ ಹೆಸರು ಭಾರತದಲ್ಲಿ ಹೆಚ್ಚು ಜನಪ್ರಿಯ ಹೊಂದಿದೆ.

ಆದರೆ ಟಿಸಿಎಸ್‌ನಲ್ಲಿ ಇಂಟರ್ನಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ ವ್ಯಕ್ತಿಯೇ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ ಎನ್ನುವ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಉದ್ಯಮ ವಲಯದಲ್ಲಿ ಚಂದ್ರಶೇಖರ್ ಅವರು ಚಂದ್ರ ಎಂದು ಪರಿಚಿತರಾಗಿದ್ದಾರೆ. 2017ರಲ್ಲಿ ಚಂದ್ರಶೇಖರ್ ಅವರು ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಎನ್. ಚಂದ್ರಶೇಖರ್ ಯಾರು?
ಎನ್. ಚಂದ್ರಶೇಖರ್ ಅವರು ತಮಿಳುನಾಡಿನ ಮೊಹನೂರಿನಲ್ಲಿ 1963ರಲ್ಲಿ ರೈತ ಕುಟುಂಬದಲ್ಲಿ ಜನಿಸಿದ್ದಾರೆ. ಚಂದ್ರಶೇಖರ್ ಅವರು ಸರ್ಕಾರಿ ಶಾಲೆಯಲ್ಲಿ ಓದಿದ್ದು, ಕೊಯಂಬತ್ತೂರಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಅಪ್ಲೈಡ್ ಸೈನ್ಸ್‌ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ಅವರು ತಿರುಚಿರಪಳ್ಳಿಯ ರೀಜಿನಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್(ಎಂಸಿಎ) ಪದವಿಯನ್ನು ಪೂರ್ಣಗೊಳಿಸಿದ್ದಾರೆ.
ನಟರಾಜನ್ ಚಂದ್ರಶೇಖರ್ ಅವರು 1987ರಲ್ಲಿ ಟಿಸಿಎಸ್‌ನಲ್ಲಿ ಇಂಟರ್ನಿಯಾಗಿ ತಮ್ಮ ವೃತ್ತಿ ಬದುಕು ಪ್ರಾರಂಭಿಸಿದ್ದರು. ಮುಂದೆ 2007ರಲ್ಲಿ ಚಂದ್ರಶೇಖರ್ ಅವರು ಟಿಸಿಎಸ್‌ನ ಚೀಫ್ ಆಪರೇಟಿಂಗ್ ಆಫೀಸರ್(ಸಿಒಒ)ಆಗಿ ನೇಮಕಗೊಂಡರು. 2009ರ ಅಕ್ಟೋಬರ್‌ನಲ್ಲಿ ಕೇವಲ 46 ವರ್ಷ ವಯಸ್ಸಿನಲ್ಲಿ ಟಿಸಿಎಸ್‌ನ ಸಿಇಒ ಆಗಿ ನೇಮಕಗೊಂಡಿದ್ದರು.
2019ರಲ್ಲಿ ಎನ್. ಚಂದ್ರಶೇಖರ್ ಅವರ ವೇತನವು 65 ಕೋಟಿ ರೂ. ಇತ್ತು. 2021-2022ರ ಅವಧಿಯಲ್ಲಿ ಟಾಟಾ ಗ್ರೂಪ್ ಅಧ್ಯಕ್ಷರಾಗಿ ಎನ್. ಚಂದ್ರಶೇಖರ್ ಅವರು 109 ಕೋಟಿ ರೂ. ವೇತನ ಪ್ಯಾಕೇಜ್ ಅನ್ನು ಪಡೆದುಕೊಂಡಿದ್ದಾರೆ. 2020ರಲ್ಲಿ ಚಂದ್ರಶೇಖರ್ ಅವರು ಮುಂಬೈನಲ್ಲಿ 98 ಕೋಟಿ ರೂ.ಗೆ ಡ್ಯೂಪ್ಲೆಕ್ಸ್ ಫ್ಲ್ಯಾಟ್ ಅನ್ನು ಖರೀದಿಸಿದ್ದಾರೆ. ವಿಶೇಷವೆಂದರೆ ಈ ಫ್ಲ್ಯಾಟ್ ಮುಕೇಶ್ ಅಂಬಾನಿ ಹಾಗೂ ಕುಟುಂಬ ನೆಲೆಸಿರುವ ಆಂಟಿಲಿಯಾ ಪ್ರದೇಶದಲ್ಲೇ ಇದೆ.
ಎನ್. ಚಂದ್ರಶೇಖರ್ ಅವರು ಬಹಳ ಸರಳ ವ್ಯಕ್ತಿತ್ವವನ್ನು ಹೊಂದಲು ಇಷ್ಟಪಡುತ್ತಾರೆ. ಆದರೆ, ಮೇ ತಿಂಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಂಡ ಸಾಕ್ಷ್ಯಚಿತ್ರ ʻವರ್ಕಿಂಗ್ ವಿ ಡು ಆಲ್ ಡೇʼ ನಲ್ಲಿ ಟಾಟಾ ಸನ್ಸ್ ಅಧ್ಯಕ್ಷರು ತಮ್ಮ ವೈಯಕ್ತಿಕ ಜೀವನದ ಅಪರೂಪದ ಕಥೆಯನ್ನು ಹೇಳಿಕೊಂಡಿದ್ದಾರೆ.
ಈ ಡಾಕ್ಯುಮೆಂಟರಿಯನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೋಸ್ಟ್ ಮಾಡಿದ್ದರು. ಈ ಸಾಕ್ಷ್ಯಚಿತ್ರದಲ್ಲಿ ಎನ್. ಚಂದ್ರಶೇಖರ್ ಅವರು "ಒಮ್ಮೆ ತಂದೆಗೆ ಜಮೀನು ಕೆಲಸದಲ್ಲಿ ನೆರವಾಗಿದ್ದೆ. ಆದರೆ, ಅದು ಹೆಚ್ಚು ಇಷ್ಟವಾದ ಕಾರಣ ಕೃಷಿ ಕೆಲಸವನ್ನು ಬಿಟ್ಟು ಬಿಟ್ಟಿದ್ದೆ," ಎಂಬುದಾಗಿ ಹೇಳಿಕೊಂಡಿದ್ದಾರೆ.
98 ಕೋಟಿ ರೂಪಾಯಿ ಮನೆ ಖರೀದಿ
ಕಳೆದ ವರ್ಷ ಮೇ ತಿಂಗಳಿನಲ್ಲಿ ಟಾಟಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಮತ್ತು ಅವರ ಕುಟುಂಬ ಮುಂಬೈನ ಪೆದ್ದಾರ್ ರಸ್ತೆಯಲ್ಲಿರುವ ಐಷಾರಾಮಿ ಟವರ್‌ನಲ್ಲಿ 98 ಕೋಟಿ ರೂಪಾಯಿಗಳ ಐಷಾರಾಮಿ ಮನೆಯನ್ನು ಖರೀದಿ ಮಾಡಿದ್ದಾರೆ. 28 ಅಂತಸ್ತಿನ ಎತ್ತರದ, ಈ ಮನೆಯು ದಕ್ಷಿಣ ಮುಂಬೈನ ಜಸ್ಲೋಕ್ ಆಸ್ಪತ್ರೆಯ ಬಳಿ ಇದೆ. ಎನ್ ಚಂದ್ರಶೇಖರನ್ ಕುಟುಂಬ ಕಳೆದ 5 ವರ್ಷಗಳಿಂದ ಡ್ಯೂಪ್ಲೆಕ್ಸ್‌ನಲ್ಲಿ ಬಾಡಿಗೆಗೆ ವಾಸವಿತ್ತು.


Click it and Unblock the Notifications