ನರೇನ್ ಕಾರ್ತಿಕೇಯನ್ 2000ದಲ್ಲಿ ಸಾಮಾನ್ಯ ಜ್ಞಾನ ಪುಸ್ತಕಗಳ ಭಾಗವಾಗಿದ್ದರು. ತಮಿಳುನಾಡು ಮೂಲದ ಈ ವ್ಯಕ್ತಿ ಫಾರ್ಮುಲಾ 1 ರೇಸ್ ಕಾರನ್ನು ಡ್ರೈವ್ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತೀಯ ವಾಹನ ಕ್ಷೇತ್ರದ ಈ ಅಪ್ರತಿಮ ವ್ಯಕ್ತಿಗೆ 2010ರಲ್ಲಿ ಭಾರತದ ನಾಲ್ಕನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.
ಆದರೂ ಕಾರ್ತಿಕೇಯನ್ ಒಬ್ಬರು ಯಶಸ್ವಿ ಉದ್ಯಮಿ ಎಂಬುದು ಅನೇಕರಿಗೆ ತಿಳಿದಿಲ್ಲ. ನರೇನ್ ಕಾರ್ತಿಕೇಯನ್ ಅವರು 2020ರಲ್ಲಿ ಡ್ರೈಎಕ್ಸ್ ಎಂಬ ಕಂಪೆನಿಯನ್ನು ಪ್ರಾರಂಭಿಸಿದ್ದರು. ಕೇವಲ ಎರಡು ವರ್ಷದಲ್ಲಿ ಅಂದರೆ 2022ರಲ್ಲಿ ಈ ಕಂಪೆನಿಯ ಅಂದಾಜು ಮೌಲ್ಯ 178 ಕೋಟಿ ರೂಪಾಯಿಗೆ ಏರಿತ್ತು. ವಿಶ್ವದ ಅತಿದೊಡ್ಡ ಮೋಟಾರ್ ಸೈಕಲ್ ತಯಾರಿಕಾ ಕಂಪೆನಿಯಾದ ಭಾರತದ ಟಿವಿಎಸ್ ಗ್ರೂಪ್ ಈ ಕಂಪೆನಿಯನ್ನು ಹೂಡಿಕೆ ಮಾಡುವ ಮೂಲಕ ಇದಕ್ಕೆ ಬೆಂಬಲವಾಗಿ ನಿಂತಿದೆ.

ಇವರ ಪೂರ್ಣ ಹೆಸರು ಕುಮಾರ್ ರಾಮ್ ನಾರಾಯಣ್ ಕಾರ್ತಿಕೇಯನ್. ಕಾರ್ತಿಕೇಯನ್ ಅವರು 1977ರ ಜನವರಿ 14ರಂದು ಜನಿಸಿದ್ದಾರೆ. ಅವರು ಜಾಗತಿಕ ಮೋಟಾರ್ ಸ್ಪೋರ್ಟ್‌ನಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯರಾಗಿದ್ದಾರೆ. ಇದಕ್ಕೂ ಮೊದಲು ಅವರು ನಿಸ್ಸಾನ್, ಆಟೋಜಿಪಿ, ಫಾರ್ಮುಲಾ ಏಷ್ಯಾ, ಬ್ರಿಟಿಷ್ ಫಾರ್ಮುಲಾ ಫೋರ್ಡ್ ಮತ್ತು ಒಪೆಲ್‌ನಿಂದ A1GP, ಬ್ರಿಟಿಷ್ F3, ವರ್ಲ್ಡ್ ಸರಣಿಗಳಲ್ಲಿ ಅನೇಕ ರೇಸ್‌ಗಳನ್ನು ಗೆದ್ದಿದ್ದರು.
ಅಲ್ಲದೆ ನರೇನ್ ಕಾರ್ತಿಕೇಯನ್ ಬ್ರಿಟಿಷ್ ಫಾರ್ಮುಲಾ ಫೋರ್ಡ್ ವಿಂಟರ್ ಸೀರೀಸ್ ಫಾರ್ಮುಲಾ ಒನ್‌ಗೆ ಪಾದಾರ್ಪಣೆ ಮಾಡಿದರು. ಈ ನಡುವೆ ಅವರು ಎರಡು ವರ್ಷಗಳ ಕಾಲ ವಿಲಿಯಮ್ಸ್ ತಂಡಕ್ಕೆ ಟೆಸ್ಟ್ ಡ್ರೈವರ್ ಕೂಡ ಆಗಿದ್ದರು. ಜತೆಗೆ, ಅವರು NASCAR ಟ್ರಕ್ ಸೀರೀಸ್‌ನಲ್ಲಿಯೂ ಸ್ಪರ್ಧಿಸಿದ್ದರು.
ಕಾರ್ತಿಕೇಯನ್ ಅವರು ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಜನಿಸಿದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಸ್ಟೇನ್ಸ್ ಆಂಗ್ಲೋ ಇಂಡಿಯನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪೂರ್ಣಗೊಳಿಸಿದರು. ಅವರ ತಂದೆ ಕೂಡ ಸ್ವತಃ ರೇಸರ್ ಆಗಿದ್ದು, ಅವರು ಏಳು ಬಾರಿ ದಕ್ಷಿಣ ಭಾರತ ರ್‍ಯಾಲಿಯನ್ನು ಗೆದ್ದಿದ್ದರು. ಹುಡುಗನಾಗಿದ್ದಾಗಲೇ ಅವರು ಜಗತ್ತಿನಾದ್ಯಂತ ಹಲವಾರು ತಂಡಗಳಿಗೆ ರೇಸರ್ ಆಗಿದ್ದರು.
ಅವರು ರೇಸಿಂಗ್‌ನಿಂದ ನಿವೃತ್ತರಾದ ನಂತರ ಉದ್ಯಮಿಯಾಗಿ ಬದಲಾಗಿದ್ದಾರೆ. 2022ರಲ್ಲಿ ಟಿವಿಎಸ್ ಕಂಪನಿಯು ಕಾರ್ತಿಕೇಯನ್‌ರ ಕಂಪನಿಯ ಶೇ.48ರಷ್ಟು ಷೇರುಗಳನ್ನು ಖರೀದಿಸಿದೆ. ಆ ಮೂಲಕ ಕಂಪನಿಗೆ 85.4 ಕೋಟಿ ರೂ. ಪಾವತಿಸಿತ್ತು. ಹೀಗಾಗಿ, ಕಾರ್ತಿಕೇಯನ್ ಕಂಪನಿಯ ವಹಿವಾಟು ಮೌಲ್ಯ 178 ಕೋಟಿ ರೂ.ಗೆ ತಲುಪಿದೆ. 2020-2021ರಲ್ಲಿ ಕಾರ್ತಿಕೇಯನ್ ಡ್ರೈವ್‌ಎಕ್ಸ್ ಕಂಪೆನಿಯ ವಹಿವಾಟು 47.98 ಲಕ್ಷ ರೂಪಾಯಿ ಆಗಿತ್ತು.
ಡ್ರೈವ್‌ಎಕ್ಸ್ ಚಂದಾದಾರಿಕೆ ಮಾದರಿಯಲ್ಲಿ ದ್ವಿಚಕ್ರ ವಾಹನಗಳನ್ನು ಒದಗಿಸುತ್ತದೆ. ಜತೆಗೆ ದ್ವಿಚಕ್ರ ವಾಹನಗಳನ್ನು ಕೂಡ ಮಾರಾಟ ಮಾಡುತ್ತದೆ. ಈ ಕಂಪನಿಯು ತನ್ನ ವಹಿವಾಟನ್ನು ದೇಶದ ಐದು ನಗರಗಳಿಗೂ ವಿಸ್ತರಿಸಿಕೊಂಡಿತ್ತು. ಕಂಪೆನಿಯು ಪ್ರೀ ಓನ್ಡ್ ಮೋಟಾರ್‌ಸೈಕಲ್ ಹಾಗೂ ಸ್ಕೂಟರ್ಸ್‌ನ್ನು ಮಾರಾಟ ಮತ್ತು ವಿತರಣೆಯನ್ನು ಮಾಡುತ್ತದೆ. ಇದು ಡಿಜಿಟಲ್ ಆಧಾರಿತ ವ್ಯವಹಾರವಾಗಿದೆ.
ವೇಣು ಶ್ರೀನಿವಾಸನ್ ಟಿವಿಎಸ್ ಮೋಟಾರ್ ಕಂಪೆನಿಯ ವಿಶ್ರಾಂತ ಅಧ್ಯಕ್ಷರು ಹಾಗೂ ನಿರ್ದೇಶಕರಾಗಿದ್ದಾರೆ. ಕಾರ್ತಿಕೇಯನ್ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಕಂಪೆನಿಯು ಭಾರತದಲ್ಲಿ ಮೂರು ಹಾಗೂ ಇಂಡೋನೇಷ್ಯಾದಲ್ಲಿ ಒಂದು ಕಾರ್ಖಾನೆಯನ್ನು ಹೊಂದಿದೆ. ಕಂಪೆನಿಯ ಬಿಲಿಯನ್‌ಗೂ ಹೆಚ್ಚು ಆದಾಯವನ್ನು ಹೊಂದಿದೆ.
ಸುದರ್ಶನ್ ವೇಣು ಅವರು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಲಕ್ಷ್ಮಿ ವೇಣು ಅವರು ಆಡಳಿತ ಮಂಡಳಿ ನಿರ್ದೇಶಕರಾಗಿದ್ದಾರೆ. ಇವರು 1911ರಲ್ಲಿ ಟಿವಿಎಸ್ ಗ್ರೂಪ್ ಅನ್ನು ಸ್ಥಾಪಿಸಿದ ಟಿವಿ ಸುಂದರಂ ಅಯ್ಯಂಗಾರ್ ಅವರ ಮೊಮ್ಮಗ. ವೇಣು ಶ್ರೀನಿವಾಸನ್ ಅವರು 2020ರಲ್ಲಿ ಪದ್ಮಭೂಷಣ ಬಿರುದನ್ನು ಪಡೆದುಕೊಂಡಿದ್ದಾರೆ.


Click it and Unblock the Notifications