5ಪೈಸಾ ಕ್ಯಾಪಿಟಲ್ ಕಂಪನಿಯು ತನ್ನ ಐಟಿ ಆವಿಷ್ಕಾರದ ಪ್ಲಾಟ್‌ಫಾರ್ಮ್‌ನ ಗುಣಮಟ್ಟ ಹೆಚ್ಚಿಸಲು ಹಾಗೂ ಡಿಜಿಟಲ್ ಕ್ರಾಂತಿಕಾರಿ ಬದಲಾವಣೆಗಾಗಿ ನಾರಾಯಣ ಗಂಗಾಧರ್ ಅವರನ್ನು ಸಿಇಒ ಆಗಿ ನೇಮಕ ಮಾಡಿದೆ. ಎರಡು ದಶಕಗಳ ಪರಿಣತಿಯನ್ನು ಹೊಂದಿರುವ ಗಂಗಾಧರ್ ಅವರು ಯುಎಸ್ ಮೂಲದ ಜಾಗತಿಕ ದೈತ್ಯ ಕಂಪೆನಿಗಳಾದ ಗೂಗಲ್, ಉಬರ್ ಮತ್ತು ಅಮೆಜಾನ್‌ನಲ್ಲಿ ಕೆಲಸ ಮಾಡಿದ್ದಾರೆ.
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿ ನೆಲೆಸಿರುವ ನಾರಾಯಣ ಗಂಗಾಧರ್ ಅವರು 20 ವರ್ಷಗಳ ಸುಧೀರ್ಘ ಅನುಭವವನ್ನು ಹೊಂದಿದ್ದು, ಆ ಪೈಕಿ ಹೆಚ್ಚಿನ ಅವಧಿಯನ್ನು ಪ್ರಮುಖ ಅಂತಾರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಗಳಲ್ಲಿ ದುಡಿಯುವ ಮೂಲಕ ಕಳೆದಿದ್ದಾರೆ.

ಉಬರ್‌ನ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಗಂಗಾಧರ್ ಅವರು ವಿಶ್ವದಾದ್ಯಂತ 500ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಂಪನಿಯ ವ್ಯವಹಾರಗಳನ್ನು ಬೆಂಬಲಿಸುವ ಎಂಜಿನಿಯರಿಂಗ್ ಪ್ಲಾಟ್‌ಫಾರ್ಮ್, ಕೋರ್ ಎಪಿಐ ಹಾಗೂ ಕ್ಲೌಡ್ ಸೊಲ್ಯೂಷನ್ಸ್‌ನ್ನು ನೋಡಿಕೊಳ್ಳುತ್ತಿರುವ 1,000 ಹೆಚ್ಚು ಸೃಜನಶೀಲ ಉದ್ಯೋಗಿಗಳ ತಂಡದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಕಳೆದ ಫೆಬ್ರವರಿಯಲ್ಲಿ ರಾಜೀನಾಮೆ ನೀಡುವುದಕ್ಕೂ ಮೊದಲು ಗಂಗಾಧರ್ ಅವರು ಏಂಜೆಲ್ ಒನ್‌ನ ಸಿಇಒ ಆಗಿದ್ದರು.
ನಾರಾಯಣ್ ಗಂಗಾಧರ್ ಅವರ ಶಿಕ್ಷಣ ಹಾಗೂ ಅರ್ಹತೆ
ನಾರಾಯಣ ಗಂಗಾಧರ್ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ. ಲಿಂಕ್ಡ್‌ಇನ್ ಫ್ರೊಫೈಲ್ ಪ್ರಕಾರ, ನಂತರ ಅವರು ವೋರ್ಸೆಸ್ಟರ್ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್‌ನಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಮುಂದೆ ಅವರು ಮೈಕ್ರೋಸಾಫ್ಟ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.
ಅಲ್ಲಿ ಅವರು ಎಂಜಿನಿಯರಿಂಗ್ ವಿಭಾಗಕ್ಕೆ ಸಂಬಂಧಿಸಿದಂತೆ ಹಲವಾರು ಹುದ್ದೆಗನ್ನು ನಿರ್ವಹಿಸಿದ್ದಾರೆ. ಇದಕ್ಕೂ ಮೊದಲು ಗಂಗಾಧರ್ ಅವರು ಗೂಗಲ್‌ನಲ್ಲಿ ಕ್ಲೌಡ್ ಎಂಜಿನಿಯರಿಂಗ್ ಮತ್ತು ಮೂಲಸೌಕರ್ಯ ಮೇಲ್ವಿಚಾರಣೆಯ ಹಿರಿಯ ನಿರ್ದೇಶಕರಾಗಿದ್ದರು.
ಅಲ್ಲಿ ಅವರು ಎಲ್ಲ ಬ್ಯಾಕೆಂಡ್ ತಂತ್ರಜ್ಞಾನ ಮತ್ತು ಬಾಹ್ಯವಾಗಿರುವ ಕ್ಲಸ್ಟರ್ ಬೇಸ್ಡ್ ಕಂಪ್ಯೂಟಿಂಗ್ ಪ್ರಾಡೆಕ್ಟ್ಸ್ ವಿಭಾಗದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು. ಅದಲ್ಲದೆ ಗಂಗಾಧರ್ ಅವರು ಅಮೆಜಾನ್‌ನಲ್ಲಿ ಎಂಜಿನಿಯರಿಂಗ್ ನಿರ್ದೇಶಕರಾಗಿದ್ದು, ಅಲ್ಲಿ ಅವರು ಅಮೆಜಾನ್ ರಿಲೇಷನಲ್ ಡೇಟಾಬೇಸ್ ಸರ್ವೀಸ್ ಅನ್ನು ಪ್ರಾರಂಭಿಸಿದ್ದರು.
5ಪೈಸಾ.ಕಾಮ್ ಎಂದರೇನು?
5ಪೈಸಾ.ಕಾಮ್ ಭಾರತದ ಟಾಪ್ ಡಿಸ್ಕೌಂಟ್ ಬ್ರೋಕರ್‌ಗಳಲ್ಲಿ ಒಂದಾಗಿದ್ದು, 2023ರ ಮಾರ್ಚ್ ಅಂತ್ಯಕ್ಕೆ 35 ಲಕ್ಷ ಗ್ರಾಹಕರನ್ನು ಹೊಂದಿದೆ. ಆ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 27ರಷ್ಟು ಏರಿಕೆಯಾಗಿದೆ. ಬಿಸಿನೆಸ್ ವರ್ಲ್ಡ್ ವರದಿ ಪ್ರಕಾರ, 23ರ ಆರ್ಥಿಕ ವರ್ಷದಲ್ಲಿ ಲಾಭಾಂಶವು ಶೇಕಡ 216 ಏರಿಕೆಯಾಗಿ 43.6 ಕೋಟಿ ರೂಪಾಯಿಯನ್ನು ಗಳಿಸಿದೆ.
ಜತೆಗೆ ಆದಾಯ ಕೂಡ ಶೇಕಡ 14ರಷ್ಟು ಏರಿಕೆಯಾಗುವ ಮೂಲಕ 339 ಕೋಟಿ ರೂಪಾಯಿ ದಾಖಲಿಸಿದೆ. ಭಾರತದ ಅತ್ಯಂತ ಜನಪ್ರಿಯ ಸ್ಟಾಕ್ ಟ್ರೇಡಿಂಗ್ ಅಪ್ಲಿಕೇಷನ್ ಆಗಿರುವ 5ಪೈಸಾ.ಕಾಮ್ 15 ಮಿಲಿಯನ್‌ಗೂ ಹೆಚ್ಚು ಯೂಸರ್‌ಗಳನ್ನು ಹೊಂದಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ 4.31 ರೇಟಿಂಗ್ಸ್ ಅನ್ನು ಹೊಂದಿದೆ.


Click it and Unblock the Notifications