ಇತ್ತೀಚಿನ ದಿನಗಳಲ್ಲಿ ಅನೇಕ ಯುವ ಉದ್ಯಮಿಗಳ ಬದುಕು ಇತರರಿಗೆ ಸ್ಫೂರ್ತಿದಾಯಕವಾಗಿದೆ. ಅಂಥವರ ಸಾಲಿಗೆ ನೀರಜ್ ಚೋಪ್ರಾ ಅವರ ಯಶೋಗಾಥೆಯೂ ಸೇರಿದೆ. ಅವರ ಅಜ್ಜ ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರು. ನೀರಜ್ ಚೋಪ್ರಾ ಮಗು ಆಗಿರುವ ಸಂದರ್ಭದಲ್ಲಿ ಅವರ ತಂದೆಯು ಅನಿವಾರ್ಯವಾಗಿ ತರಕಾರಿ ಮಾರಾಟ ಮಾಡುತ್ತಿದ್ದರು.
ಹೀಗಿರುವಾಗ, ಚೋಪ್ರಾ ಕುಟುಂಬವು ಆರ್ಥಿಕವಾಗಿ ಬಹಳ ಸಂಕಷ್ಟವನ್ನು ಎದುರಿಸಿದ್ದಾರೆ. ಈ ಕಾರಣದಿಂದಲೇ ನೀರಜ್ ಚೋಪ್ರಾ ಬದುಕಿನಲ್ಲಿ ಸಾಕಷ್ಟ ಸವಾಲುಗಳನ್ನು ಎದುರಿಸುವ ಮೂಲಕ ಯಶಸ್ಸಿನತ್ತ ಮುನ್ನಡೆದವರು. ನೀರಜ್ ಚೋಪ್ರಾ ಅವರ ತಂದೆಯು ತನ್ನ ಮಗ ಯಶಸ್ವಿ ಬಿಸಿನೆಸ್‌ಮೆನ್ ಆಗಬೇಕೆಂದು ಬಯಸಿದ್ದರು.

ಅಪ್ಪನ ಕನಸನ್ನು ನನಸು ಮಾಡುವ ಛಲ ಹೊತ್ತುಕೊಂಡಿದ್ದ ನೀರಜ್ ಚೋಪ್ರಾ ಆ ದಿಕ್ಕಿನಲ್ಲಿ ಪರಿಶ್ರಮ ಪಟ್ಟಿದ್ದು, ಝೋಬಾಕ್ಸ್ ಎಂಬ ಹೆಸರಿನ ಕಂಪನಿಯನ್ನು ಹುಟ್ಟು ಹಾಕಿದ್ದಾರೆ. ಇದೊಂದು ಬಹಳ ವಿಭಿನ್ನ ರೀತಿಯ ಬಿಸಿನೆಸ್ ಮಾಡೆಲ್ ಆಗಿ ಗುರುತಿಸಿಕೊಂಡಿದೆ. ಅವರು ಸ್ಥಾಪಿಸಿದ ಕಂಪನಿಯು ಹಳೇಯ ಹಾಗೂ ಪುನರ್ ನವೀಕರಿಸಿದ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ.
ನೀರಜ್ ಚೋಪ್ರಾ ತಮ್ಮ ಬಿಸಿನೆಸ್ ಮಾಡೆಲ್ ಅನ್ನು ಭಾಸ್ಕರ್ ಎಂಬವರಿಗೆ ವಿವರಿಸಿದ್ದು, ಅವರ ಪ್ರಕಾರ ಹೆಚ್ಚಿನ ಜನರು ತಮ್ಮ ಹಳೇ ಫೋನ್‌ಗಳನ್ನು ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಎಕ್ಸ್‌ಚೇಂಜ್ ಮಾಡಿಕೊಳ್ಳುತ್ತಾರೆ. ನೀರಜ್ ಚೋಪ್ರಾ ಕಂಪನಿಯು ಹಳೇ ಫೋನ್‌ಗಳನ್ನು ರಿಪೇರಿ ಮಾಡುವ ಮೂಲಕ ಅದಕ್ಕೆ ಹೊಸ ರೂಪವನ್ನು ನೀಡುತ್ತಾರೆ. ಆ ನಂತರದಲ್ಲಿ ರಿಪೇರಿಗೊಂಡ ಫೋನ್‌ಗಳನ್ನು ವ್ಯಾರಂಟಿ ಜನತೆಗೆ ಮಾರುಕಟ್ಟೆಯಲ್ಲಿ ಸೇಲ್ ಮಾಡುತ್ತಾರೆ.
ಚೋಪ್ರಾ ತಮ್ಮ ಕಂಪನಿ ಮೂಲಕ 2, 3 ಹಾಗೂ 4ನೇ ಹಂತದ ನಗರಗಳನ್ನು ಕೇಂದ್ರೀಕರಿಸಿ ತಮ್ಮ ವ್ಯಾಪಾರದ ಗಮನವನ್ನು ಹರಿಸಿದರು. ಈ ಕಂಪನಿಯು ಹೆಚ್ಚಿನ ಸಂಖ್ಯೆಯಲ್ಲಿ ಫೋನ್‌ಗಳನ್ನು ಮಾರಾಟ ಮಾಡುವುದಕ್ಕೆ ಪ್ರಾರಂಭಿಸಿತು. ಜತೆಗೆ, ಈ ಕಂಪನಿಯು ಮೊಬೈಲ್ ಮಾರಾಟಕ್ಕಾಗಿ 5000 ವ್ಯಾಪಾರಸ್ಥರೊಂದಿಗೆ ನೆಟ್‌ವರ್ಕ್ ಅನ್ನು ಹೊಂದಿದೆ.
ಈ ಕಂಪನಿಯು ಪ್ರಸಕ್ತ ವರ್ಷದಲ್ಲಿ 50 ಕೋಟಿ ರೂಪಾಯಿ ವಹಿವಾಟು ನಡೆಸಿದೆ. ಈ ಕಂಪನಿಯು ಮೊಬೈಲ್‌ನಲ್ಲಿ ಕಂಡುಬರುವ ಯಾವುದೇ ತಾಂತ್ರಿಕ ದೋಷವನ್ನು ಪತ್ತೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದು, ಆ ಮೂಲಕ ಹಳೇ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಇನ್ನೊಂದೆಡೆ, ಈ ಹಳೇ ಫೋನ್‌ಗಳು ಎಷ್ಟೊಂದು ಬಾಳ್ವಿಕೆಯನ್ನು ಹೊಂದಿದೆ ಎಂಬುದರ ಮಾಹಿತಿಯನ್ನು ಕೂಡ ಈ ತಂತ್ರಜ್ಞಾನ ನೀಡುತ್ತದೆ.
ಚೋಪ್ರಾ ಅವರ ತಂದೆಯು ಹಲವು ವರ್ಷ ತರಕಾರಿ ಮಾರಾಟವನ್ನು ಮಾಡಿದ ಬಳಿಕ ತಮ್ಮದೇ ಸ್ವಂತ ರಫ್ತು-ಆಮದು ವ್ಯಾಪಾರವನ್ನು ಪ್ರಾರಂಭಿಸಿದ್ದಾರೆ. ಚೋಪ್ರಾ ಅವರ ತಂದೆಯು ಹಾಂಗ್‌ಕಾಂಗ್‌ನಲ್ಲಿ ನೆಲೆಸಿದ್ದು, ಅಲ್ಲಿಯೇ ಕೆಲಸ ಕೂಡ ಮಾಡುತ್ತಿದ್ದರು. ಅಲ್ಲಿ ಅವರು ರಫ್ತು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 12 ವರ್ಷಗಳ ಕಾಲ ಕೆಲಸ ಮಾಡಿದ್ದರು. 2012ರಲ್ಲಿ ಚೋಪ್ರಾ ಅವರ ತಂದೆಯು ಭಾರತಕ್ಕೆ ವಾಪಾಸ್ಸಾಗಿದ್ದರು.
ನಂತರದಲ್ಲಿ ಅವರ ತಂದೆ ಹಾಗೂ ಮಾವ ಸಾವನ್ನಪ್ಪಿದ್ದು, ಚೋಪ್ರಾ ಅವರು ಕೂಡ ತಮ್ಮ ವ್ಯಾಪಾರ-ವಹಿವಾಟನ್ನು ಬಂದ್ ಮಾಡಿ ಭಾರತಕ್ಕೆ ಹಿಂತಿರುಗಬೇಕಾದ ಅನಿವಾರ್ಯತೆ ಎದುರಾಗಿತ್ತು. ಮುಂದೆ ಚೋಪ್ರಾ ಅವರು 2015 ತಮ್ಮದೇ ಬಿಸಿನೆಸ್ ಅನ್ನು ಪ್ರಾರಂಭಿಸಿದ್ದರು. ಅವರು ಪವರ್ ಬ್ಯಾಂಕ್ ಸಾಧನಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದ್ದರು.
ಆದರೆ, ನೋಟು ಬ್ಯಾನ್ ಸಂದರ್ಭದಲ್ಲಿ ಚೋಪ್ರಾ ಅವರು ಮತ್ತೆ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿ ಬಂತು. ಈ ರೀತಿ ಆರ್ಥಿಕ ಹೊಡೆತಕ್ಕೆ ಸಿಲುಕಿ ಬಿಸಿನೆಸ್ ಮುಂದುವರಿಸುತ್ತಿರಬೇಕಾದರೆ ಕೊರೊನಾ ಕಾಣಿಸಿಕೊಂಡು ಅವರ ಉದ್ಯಮವನ್ನು ನೆಲಕಚ್ಚುವಂತೆ ಮಾಡಿತ್ತು.
ಇದೆಲ್ಲದರಿಂದ ಕೈಸುಟ್ಟುಕೊಂಡಿದ್ದ ಚೋಪ್ರಾ ಅವರು ಬಳಿಕ ಹಳೇ ಫೋನ್ ಮಾರಾಟ ಮಾಡುವ ಬಿಸಿನೆಸ್ ಅನ್ನು ಪ್ರಾರಂಭಿಸಿದ್ದರು. ಹಲವು ವ್ಯಾಪಾರಗಳ ನಷ್ಟದ ಬಳಿಕ ಅವರ ವ್ಯಾಪಾರವು ಬಿ-ಬಿ ಬಿಸಿನೆಸ್ ಕಾರ್ಯಾಚರಣೆಯತ್ತ ತಮ್ಮ ಗಮನವನ್ನು ಹರಿಸಿದರು. ಸದ್ಯ ಚೋಪ್ರಾ ಅವರ ಹೊಸ ಬಿಸಿನೆಸ್ ಯಶಸ್ವಿನತ್ತ ಸಾಗುತ್ತಿದೆ.


Click it and Unblock the Notifications