ಭಾರತದ ಶ್ರೀಮಂತ ಮಹಿಳೆಯರ ಸಾಲಿನಲ್ಲಿ ನಿಲಿಮಾ ಮೊಟಪರ್ತಿ ಒಬ್ಬರು. ಮಾರ್ಚ್ 2023 ರಲ್ಲಿ 28,180 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯ ಹೊಂದಿರುವ ಶ್ರೀಮಂತ ಮಹಿಳೆಯಾಗಿದ್ದಾರೆ. ಇವರು ದಿವೀಸ್ ಲ್ಯಾಬೋರೇಟರೀಸ್ ಸ್ಥಾಪಕ ಮುರಳಿ ಕೃಷ್ಣ ಡಿವಿ ಅವರ ಪುತ್ರಿಯಾಗಿದ್ದಾರೆ. ನಿಲಿಮಾ ಮೊಟಪರ್ತಿ ಅವರು ಗ್ಲ್ಯಾಸ್ಗೋ ಯೂನಿವರ್ಸಿಟಿಯಿಂದ ಇಂಟರ್ನ್ಯಾಷನಲ್ ಫೈನಾನ್ಸ್ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಪ್ರಸ್ತುತ ದಿವೀಸ್‌ನ ಎಲ್ಲಾ ಪ್ರಯೋಗಾಲಯಗಳ ಮೆಟೀರಿಯಲ್ ಸೋರ್ಸಿಂಗ್ ಮತ್ತು ಸಂಗ್ರಹಣೆ, ಕಾರ್ಪೊರೇಟ್ ಹಣಕಾಸು ಮತ್ತು ಹೂಡಿಕೆದಾರರ ಸಂಬಂಧಗಳನ್ನು ನೋಡಿಕೊಳ್ಳುತ್ತಾರೆ. ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಪ್ರಕಾರ, ನಿಲಿಮಾ ಅವರ ಸಂಪತ್ತು 2021ರಲ್ಲಿ ಶೇಕಡ 51ರಷ್ಟು ಏರಿಕೆಯಾಗಿದೆ. ಅವರ ತಂದೆ ದಿವೀಸ್ ಲ್ಯಾಬೋರೇಟರೀಸ್ ಮಾಲೀಕತ್ವವನ್ನು ಹೊಂದಿದ್ದರು.

ಮೆಟೀರಿಯಲ್ ರಿಕ್ವೇರ್‌ಮೆಂಟ್ ಹಣಕಾಸು ಮತ್ತು ಲೆಕ್ಕಪರಿಶೋಧನೆಯಲ್ಲಿ ಸುಮಾರು ಐದು ವರ್ಷಗಳ ಅನುಭವವನ್ನು ಪಡೆದ ನಂತರವೇ 2012 ರಲ್ಲಿ ಡಿವಿ'ಸ್ ಲ್ಯಾಬ್ಸ್‌ಗೆ ನಿಲಿಮಾ ಸೇರ್ಪಡೆಗೊಂಡರು. ವರದಿಗಳ ಪ್ರಕಾರ, ನಿಲಿಮಾ ಮೊಟಪರ್ತಿ ಕಂಪನಿಯಲ್ಲಿ 20.34% ಪಾಲನ್ನು ಹೊಂದಿದ್ದಾರೆ.
ನಿಲಿಮಾ ಮೊಟಪರ್ತಿ ಅವರ ತಂದೆ ಮುರಳಿ ಡಿವಿ ವಿಶ್ವದ ಶ್ರೀಮಂತ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ಅವರು 5.8 ಬಿಲಿಯನ್ ಯೂಎಸ್ ಡಿ ನಿವ್ವಳ ಮೌಲ್ಯ ಹೊಂದಿದ್ದಾರೆ. ಇನ್ನು ಡಿವಿಸ್ ಲ್ಯಾಬ್ಸ್ ಬಗ್ಗೆ ಹೇಳಬೇಕೆಂದರೆ ಆಕ್ಟಿವ್ ಫಾರ್ಮಸಿಟಿಕಲ್ ಇನ್ಗ್ರೇಡಿಯೆಂಟ್ಸ್ (API) ನ ಪ್ರಮುಖ ಮೂರು ತಯಾರಕರಲ್ಲಿಇದು ಒಂದಾಗಿದೆ. ದಿವೀಸ್ ಲ್ಯಾಬ್ಸ್‌ನ ಮಾರುಕಟ್ಟೆ ಬಂಡವಾಳೀಕರಣವು ಸುಮಾರು 1.3 ಲಕ್ಷ ಕೋಟಿ ರೂ ($17 ಬಿಲಿಯನ್‌ಗಿಂತಲೂ ಹೆಚ್ಚು) ಆಗಿದೆ.
ಮುರಳಿ ಡಿವಿ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದವರು. ಅವರ ತಂದೆ ಆಂಧ್ರಪ್ರದೇಶದಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದರು. ಮುರಳಿಯವರ ತಂದೆಗೆ ತಿಂಗಳಿಗೆ ಸಿಗುತ್ತಿದ್ದ 10,000 ರೂ. ಪಿಂಚಣಿಯಲ್ಲಿ ತಮ್ಮ ಕುಟುಂಬವನ್ನು ನಡೆಸುತ್ತಿದ್ದ ಕಾಲವೊಂದಿತ್ತು.ಮುರಳಿ ಅವರು 1976 ರಲ್ಲಿ ಅಮೇರಿಕಾಗೆ ತೆರಳಿ ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅಮೇರಿಕಾಕ್ಕೆ ತೆರಳುವಾಗ ಕೇವಲ 500 ರೂ. ಅವರ ಕೈಯಲ್ಲಿದ್ದು, ಆಗ ಕೇವಲ 25 ವರ್ಷದವರಾಗಿದ್ದರು ಎಂದು ವರದಿ ಮಾಡಿದೆ.
ಮುರಳಿ ವಿನೋದ ಸ್ವಭಾವದವರಾಗಿದ್ದು ಹೆಚ್ಚು ಚಿಂತಿಸದ ಸೌಮ್ಯ ಗುಣವುಳ್ಳ ವ್ಯಕ್ತಿಯಾಗಿದ್ದಾರೆ. ಫೈಕ್ ಕೆಮಿಕಲ್‌ನಂತಹ ಅಮೇರಿಕನ್ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಕೆಲಸ ಮಾಡಿದ ನಂತರ ಭಾರತಕ್ಕೆ ಹಿಂದಿರುಗಿ 1984 ರಲ್ಲಿಉದ್ಯಮಿಯಾಗಿ ಅವರ ಜೀವನ ಪ್ರಾರಂಭವಾಯಿತು. ದಿವೀಸ್ ಲ್ಯಾಬ್ಸ್ ಅಸ್ಥಿಸಂಧಿವಾತಕ್ಕೆ ಚಿಕಿತ್ಸೆ ನೀಡಲು ಬಳಸಲಾಗುವ ಔಷಧಿಗಳ ಭಾಗವಾಗಿರುವ ಉರಿಯೂತ ನಿವಾರಕವಾದ ನ್ಯಾಪ್ರೋಕ್ಸೆನ್‌ನ ವಿಶ್ವದ ಅತಿದೊಡ್ಡ ತಯಾರಕ ಸಂಸ್ಥೆಯಾಗಿದೆ ವಾಗಿದೆ.
ದೇಶದ 2ನೇ, 3ನೇ ಶ್ರೀಮಂತ ಮಹಿಳೆ
ಫೋರ್ಬ್ಸ್ ಪ್ರಕಾರ, 2023ರಲ್ಲಿ ಭಾರತದಲ್ಲಿ ಬಿಲಿಯನೇರ್ ಆದ ಮೂವರು ಮಹಿಳೆಯರಲ್ಲಿ ರೋಹಿಕಾ ಮಿಸ್ತ್ರಿ ಕೂಡ ಒಬ್ಬರು. ಆಕೆಯ ನಿವ್ವಳ ಆಸ್ತಿ ಮೌಲ್ಯ 7 ಶತಕೋಟಿ ಡಾಲರ್ ಆಗಿದ್ದು, ಅದು 56000 ಕೋಟಿ ರೂ. ಆಗಿದೆ. ಅಷ್ಟೇಅಲ್ಲ ಅವರು ಭಾರತದ 2ನೇ ಅತಿದೊಡ್ಡ ಮಹಿಳೆಯಾಗಿದ್ದಾರೆ. 17 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಸಾವಿತ್ರಿ ಜಿಂದಾಲ್ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಮೊದಲ ಸ್ಥಾನದಲ್ಲಿದ್ದಾರೆ.
ದೇಶದ ಪ್ರಸಿದ್ಧ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಅವರು ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಜುಂಜುನ್‌ವಾಲಾ ಹಾಗೂ ಸರೋಜ್ ರಾಣಿ ಗುಪ್ತ ಅವರು ಬಿಲಿಯನೇರ್ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications