ಬಹು ಶತಕೋಟಿ ಚಿಲ್ಲರೆ ಸಾಮ್ರಾಜ್ಯದ ಮಗಳಾಗಿದ್ದರೂ, ನಿಶಾ ಜಗ್ತಿಯಾನಿ ಅವರು ಲ್ಯಾಂಡ್‌ಮಾರ್ಕ್ ಗ್ರೂಪ್‌ನ ಆಡಳಿತ ಮಂಡಳಿಗೆ ಸೇರುವ ಮೊದಲು ಕಾರ್ಪೊರೇಟ್ ಶ್ರೇಣಿಯ ಕೆಳಹಂತದಿಂದ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ನಿಶಾ ಅವರು ಇಂದು ಗ್ರೂಪ್ ಡೈರೆಕ್ಟರ್ ಆಗಿ ದುಬೈ ಮೂಲದ ಸಂಘಟಿತ ಮಂಡಳಿಯಲ್ಲಿದ್ದಾರೆ. ಝೂಮ್‌ಇನ್ಫೋ ಪ್ರಕಾರ, ಲ್ಯಾಂಡ್‌ಮಾರ್ಕ್ ಗ್ರೂಪ್ $9.5 ಬಿಲಿಯನ್(ಸುಮಾರು 78,000 ಕೋಟಿ ರೂ.) ಆದಾಯವನ್ನು ಹೊಂದಿದೆ.
ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಅತ್ಯಂತ ಶ್ರೀಮಂತ ಉದ್ಯಮಿ ಮಿಕ್ಕಿ ಜಗ್ತಿಯಾನಿ ಅವರ ಮಕ್ಕಳ ಪೈಕಿ ನಿಶಾ ಕೂಡ ಒಬ್ಬರಾಗಿದ್ದಾರೆ. ಮಿಕ್ಕಿ ಜಗ್ತಿಯಾನಿ ಅವರು ಶೂನ್ಯದಿಂದ ಶ್ರೀಮಂತರಾದ ಕಥೆಯು ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ ನೀಡುವಂತದ್ದು. ಅವರು ಟ್ಯಾಕ್ಸಿ ಡೈವರ್ ಆಗಿ ಹಾಗೂ ಹೋಟೆಲ್ ಕ್ಲೀನರ್ ಆಗಿ ತಮ್ಮ ಬದುಕು ರೂಪಿಸಲು ಪ್ರಾರಂಭಿಸಿದ್ದರು. ಆದರೆ ಬದುಕಿನ ಎಲ್ಲ ಸವಾಲುಗಳನ್ನು ಬಹಳ ಧೈರ್ಯದಿಂದ ಎದುರಿಸುವ ಮೂಲಕ ಬಡತನದಿಂದ ಬಹಳ ಎತ್ತರಕ್ಕೆ ಬೆಳೆದವರು. ಪ್ರಸ್ತುತ ಮಿಕ್ಕಿ ಜಗ್ತಿಯಾನಿ ಅವರು ಯುಎಇ ನಲ್ಲಿ ನೆಲೆಸಿರುವ ಅತ್ಯಂತ ಶ್ರೀಮಂತ ಅನಿವಾಸಿ ಭಾರತೀಯರಾಗಿದ್ದಾರೆ. ಅಷ್ಟೇಅಲ್ಲ, ಜಗ್ತಿಯಾನಿ ಕುಟುಂಬವು ದುಬೈನ ಅತ್ಯಂತ ಪ್ರಭಾವಶಾಲಿ ವ್ಯಾಪಾರ ಕುಟುಂಬಗಳ ಪೈಕಿ ಒಂದಾಗಿದೆ.

ಮುಕೇಶ್ 'ಮಿಕ್ಕಿ' ಜಗ್ತಿಯಾನಿ ಅವರು ಮಧ್ಯಪ್ರಾಚ್ಯಕ್ಕೆ ತೆರಳುವ ಮೊದಲು ಚೆನ್ನೈ ಹಾಗೂ ಮುಂಬೈನಲ್ಲಿ ಶಿಕ್ಷಣವನ್ನು ಪಡೆದಿದ್ದರು. ನಂತರ ಲಂಡನ್‌ಗೆ ತೆರಳಿದ ಅವರು ಅಂತಿಮವಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಟ್ಯಾಕ್ಸಿ ಓಡಿಸಲು ಪ್ರಾರಂಭಿಸಿದ್ದರು. ಆದರೆ ಹಲವಾರು ಘಟನೆಗಳು ಅವರನ್ನು ಬಹರೀನ್‌ನತ್ತ ತೆರಳುವಂತೆ ಮಾಡಿತ್ತು. 1973ರಲ್ಲಿ ಮೃತಪಟ್ಟ ತಮ್ಮ ಸಹೋದರನ ಬೇಬಿ ಉತ್ಪನ್ನ ಮಾರಾಟ ಅಂಗಡಿಯನ್ನು ಸ್ವಾಧೀನಪಡಿಸಿಕೊಂಡರು.
ನಂತರದ ವರ್ಷಗಳಲ್ಲಿ ಮಿಕ್ಕಿ ಅವರು ತಮ್ಮ ವ್ಯಾಪಾರವನ್ನು ರಿಟೇಲ್ ಉದ್ಯಮದತ್ತ ವಿಸ್ತರಿಸಿಕೊಂಡರು. ಪ್ರಸ್ತುತ ಲ್ಯಾಂಡ್‌ಮಾರ್ಕ್ ಗ್ರೂಪ್ ಮಧ್ಯಪ್ರಾಚ್ಯದ 24 ದೇಶಗಳಲ್ಲಿ 2,200 ಸ್ಟೋರ್‌ಗಳನ್ನು ಹೊಂದಿದೆ. ಅಂದರೆ, ಭಾರತದ ಉಪಖಂಡ, ಆಗ್ನೇಯಾ ಏಷ್ಯಾ ಮತ್ತು ಆಫ್ರಿಕಾದಂಥಹ ಖಂಡಗಳಲ್ಲಿಯೂ ಮಳಿಗೆಗಳು ಸ್ಥಾಪನೆಯಾಗಿವೆ. ಫೋರ್ಬ್ಸ್‌ನ 2023 ವರದಿ ಪ್ರಕಾರ, ಮಿಕ್ಕಿ ಜಗ್ತಿಯಾನಿ $5.2 ಬಿಲಿಯನ್ (ಸುಮಾರು 42,000ಕೋಟಿ ರೂ.) ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ.
ಮಿಕ್ಕಿ ಅವರ ಪತ್ನಿ ರೇಣುಕಾ ಅವರು ಈ ಗ್ರೂಪ್‌ನ ಸಿಇಒ ಆಗಿದ್ದು, ಅವರ ಮೂವರು ಮಕ್ಕಳಾದ ನಿಶಾ, ಆರತಿ ಹಾಗೂ ರಾಹುಲ್ ಅವರು ಪ್ರಮುಖ ನಾಯಕತ್ವವನ್ನು ವಹಿಸಿಕೊಂಡಿದ್ದು, ಬಹು ಶತಕೋಟಿ ಡಾಲರ್ ವ್ಯಾಪಾರ ಸಾಮ್ರಾಜ್ಯದ ವಿವಿಧ ವಿಭಾಗಗಳ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ನಿಶಾ ಜಗ್ತಿಯಾನಿ ಅವರು ಗ್ರೂಪ್ ಡೈರೆಕ್ಟರ್ ಆಗಿ, ಜನರ ಕಾರ್ಯಸೂಚಿಗೆ ಸಂಬಂಧಿಸಿದಂತೆ ಲ್ಯಾಂಡ್‌ಮಾರ್ಕ್ ಗ್ರೂಪ್‌ನ ಸ್ಟ್ರ್ಯಾಟಜಿಕ್ ವಿಷನ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಜತೆಗೆ ಕಂಪೆನಿಯ ಸಿಎಸ್‌ಆರ್ ಕಾರ್ಯಚಟುವಟಿಕೆಯಾದ ಬೀಟ್ ಡಯಾಬಿಟಿಸ್ ನಿರ್ವಹಣೆಯನ್ನು ಕೂಡ ನೋಡಿಕೊಳ್ಳುತ್ತಿದ್ದಾರೆ. ಜತೆಗೆ 2017ರಲ್ಲಿ ಲ್ಯಾಂಡ್‌ಮಾರ್ಕ್ ಹ್ಯಾಪಿ ಮೂಮೆಂಟ್ ಅನ್ನು ಲಾಂಚ್ ಮಾಡಿದ್ದಾರೆ. ನಿಶಾ ಅವರು ದುಬೈ ಡಿಸೈನ್ ಅಂಡ್ ಫ್ಯಾಶನ್ ಕೌನ್ಸಿಲ್ ಹಾಗೂ ದುಬೈ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಅಂಡ್ ಇನ್ನೋವೇಷನ್ ಮಂಡಳಿಯಲ್ಲಿದ್ದಾರೆ. ನಿಶಾ ಅವರು ಲಂಡನ್‌ನ ಕಿಂಗ್ಸ್ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದಾರೆ. ಅಲ್ಲದೆ, ಈ ಬಿಲಿಯನೇರ್ ಉತರಾಧಿಕಾರಿಯು ಪ್ರತಿಷ್ಠಿತ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಿಂದ ಬಿಸಿನೆಸ್ ಲೀಡರ್‌ಶಿಫ್ ಪ್ರೋಗ್ರಾಮ್ ಪದವಿಯನ್ನೂ ಪಡೆದುಕೊಂಡಿದ್ದಾರೆ.


Click it and Unblock the Notifications