ತಮ್ಮ ಪದವಿಯಲ್ಲಿಎಂಜಿನಿಯರಿಂಗ್ ಮಾಡಿದ ಹಲವಾರು ಯಶಸ್ವಿ ಉದ್ಯಮಿಗಳಿದ್ದಾರೆ. ಅಂಥವರ ಪೈಕಿ ಅನೇಕರು ಆ ಬಳಿಕ ವ್ಯಾಪಾರೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಹಲವರು ಟೆಕ್, ಮೂಲಸೌಕರ್ಯ ಸೇರಿದಂತೆ ಅನೇಕ ದೊಡ್ಡ ಕಂಪನಿಗಳನ್ನು ನಡೆಸುತ್ತಿದ್ದಾರೆ. ಆ ಸಾಲಿಗೆ ಸೇರಿದವರು ಟಾಟಾ ಸ್ಟೀಲ್ ಲಿಮಿಟೆಡ್ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಟಿ.ವಿ. ನರೇಂದ್ರನ್.
ನರೇಂದ್ರನ್ ಅವರು ಗಣಿ ಹಾಗೂ ಲೋಹ ಉದ್ಯಮದಲ್ಲಿ 34 ವರ್ಷಗಳ ಅನುಭವವನ್ನು ಹೊಂದಿದ್ದಾರೆ. 2017ರಿಂದ ಅವರು ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಆ ಮೂಲಕ ಕೆಲವು ವರ್ಷಗಳಿಂದ ಟಾಟಾ ಸ್ಟೀಲ್ ಕಂಪನಿಯ ಆರ್ಗಾನಿಕ್ ಹಾಗೂ ಇನ್ ಆರ್ಗಾನಿಕ್ ಬೆಳವಣಿಗೆಯನ್ನು ನೋಡಿಕೊಳ್ಳುತ್ತಿದ್ದಾರೆ.

2023ರ ಆ.25ರ ಮಾಹಿತಿಯಂತೆ ಕಂಪನಿಯು 143,000 ಕೋಟಿ ರೂ. ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಶುಕ್ರವಾರ ಟಾಟಾ ಸ್ಟೀಲ್‌ನ ಷೇರು ಮೌಲ್ಯವು 117.10 ರೂ. ಇತ್ತು. ಈ ಕಂಪನಿಯು ಏಷ್ಯಾದ ಮೊದಲ ಸಮಗ್ರ ಖಾಸಗಿ ಸ್ಟೀಲ್ ಕಂಪನಿಯಾಗಿ 1907ರಲ್ಲಿ ಭಾರತದಲ್ಲಿ ಸ್ಥಾಪನೆಗೊಂಡಿತ್ತು.
ನರೇಂದ್ರನ್ ಅವರು ತಿರುಚಿ(ಎನ್‌ಐಟಿ)ಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. 58 ವರ್ಷದ ನರೇಂದ್ರನ್ ಅವರು ಕೊಲ್ಕೊತ್ತಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ. ತಿರುಚಿ ಎನ್‌ಐಟಿ ಹಾಗೂ ಕೊಲ್ಕೊತ್ತಾದ ಐಐಎಂನಿಂದ ಅತ್ಯುತ್ತಮ ಹಳೇ ವಿದ್ಯಾರ್ಥಿ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ. ಅವರು ಫ್ರಾನ್ಸ್‌ನ INSEAD ನಲ್ಲಿ ಸುಧಾರಿತ ನಿರ್ವಹಣಾ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದರು.
ನರೇಂದ್ರನ್ ಅವರು ಕೊಲ್ಕೊತ್ತಾದ ಐಐಎಂನಿಂದ ಪದವಿ ಪಡೆದ ಬಳಿಕ 1988ರಲ್ಲಿ ಟಾಟಾ ಸ್ಟೀಲ್ ಕಂಪನಿಗೆ ಸೇರಿದ್ದರು. ಅವರು 1988ರಿಂದ 1997ರವರೆಗೆ ಟಾಟಾ ಸ್ಟೀಲ್‌ನ ಅಂತಾರಾಷ್ಟ್ರೀಯ ವ್ಯಾಪಾರ ವಿಭಾಗದಲ್ಲಿ ಕೆಲಸ ಮಾಡಿದರು. ಈ ಅವಧಿಯಲ್ಲಿ ಅವರು ಮಧ್ಯ ಪ್ರಾಚ್ಯದ ಟಾಟಾ ಸ್ಟೀಲ್ಸ್‌ನ ರಫ್ತುಗಳನ್ನು ನೋಡಿಕೊಳ್ಳಲು ದುಬೈನಲ್ಲಿ ಐದು ವರ್ಷಗಳನ್ನು ಕಳೆದಿದ್ದರು.
ಅವರು 2021ರಿಂದ 2022ರವರೆಗೆ ಭಾರತೀಯ ಕೈಗಾರಿಕಾ ಒಕ್ಕೂಟದ (CII) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಟಾಟಾ ಸ್ಟೀಲ್ ಯುರೋಪ್ ಮತ್ತು ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಅಧ್ಯಕ್ಷರೂ ಆಗಿದ್ದಾರೆ. ಅವರು XLRI ಜಮ್ಶೆಡ್‌ಪುರದ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿದ್ದಾರೆ. ನರೇಂದ್ರನ್ ಅವರು ವರ್ಲ್ಡ್ ಸ್ಟೀಲ್ ಅಸೋಸಿಯೇಷನ್‌ನ ಕಾರ್ಯಕಾರಿ ಸಮಿತಿ ಮತ್ತು ಮಂಡಳಿಯ ಸದಸ್ಯರಾಗಿದ್ದಾರೆ.


Click it and Unblock the Notifications