ಭಾರತವೂ ಸ್ಟಾರ್ಟ್ಅಪ್ ಯುಗದಲ್ಲಿದ್ದು ಮಾಜಿ ಟಾಪ್ ಕಾರ್ಪೋರೇಟರ್ ಎಕ್ಸಿಕ್ಯೂಟಿವ್ ಓರ್ವರು ಉದ್ಯಮಿಯಾಗಿ ಬದಲಾದ ಸ್ಟೋರಿ ಇಲ್ಲಿದೆ. ಅವರೇ ನಿತಿನ್ ಅಗರ್ವಾಲ್. ನಿತಿನ್ ಅವರು ಭಾರತದಲ್ಲಿ ಅತ್ಯಂತ ವೇಗದ ಯುನಿಕಾರ್ನ್‌ಗಳಲ್ಲಿ ಒಂದನ್ನು ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. 2021 ರ ಏಪ್ರಿಲ್‌ನಲ್ಲಿ ಕಂಪನಿ ಪ್ರಾರಂಭವಾದಾಗಿನಿಂದ, ಅವರು ಕೆಲವೇ ತಿಂಗಳುಗಳಲ್ಲಿ ಅಂದರೆ ಡಿಸೆಂಬರ್‌ನ ವೇಳೆಗೆ $ 1 ಬಿಲಿಯನ್ ಮೌಲ್ಯದ ಸಂಸ್ಥೆಯಾಗಿ GlobalBees ಅನ್ನು ನಿರ್ಮಿಸಿದರು.
ಗ್ಲೋಬಲ್‌ಬೀಸ್ ರೋಲ್ ಅಪ್ ಇ-ಕಾಮರ್ಸ್ ಕಂಪನಿಯಾಗಿದ್ದು, ಮೆನ್ಸಾ ಬ್ರಾಂಡ್‌ಗಳ ನಂತರ ಭಾರತದಲ್ಲಿ ಯುನಿಕಾರ್ನ್ ಸ್ಥಾನಮಾನವನ್ನು ಗಳಿಸಿದ ವಿಭಾಗದಲ್ಲಿ ಇದು ಎರಡನೇ ಸ್ಥಾನದಲ್ಲಿದೆ. ಗ್ಲೋಬಲ್‌ಬೀಸ್ ಒಂದು ಇನ್ವೆಸ್ಟ್ಮೆಂ ಟ್ ಪ್ಲಾಟ್ ಫಾರ್ಮ್ ಆಗಿದೆ. ಅಮೆಜಾನ್‌ನಲ್ಲಿ ಥರ್ಡ್-ಪಾರ್ಟಿ ಮಾರಾಟಗಾರರನ್ನು ಖರೀದಿಸುವ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದಾಗಿರುವ ಅಮೇರಿಕಾ ಮೂಲದ ಸ್ಟಾರ್ಟ್‌ಅಪ್ ಆದ ಥ್ರಾಸಿಯೊ ಮಾದರಿಯಲ್ಲಿ ಇದನ್ನು ರೂಪಿಸಲಾಗಿದೆ.

ನಿತಿನ್ ಅವರು ಗ್ಲೋಬಲ್‌ಬೀಸ್‌ಗಾಗಿ ಫ್ಯಾಶನ್, ವೆಲ್ ನೆಸ್, ಜ್ಯುವೆಲ್ಲರಿ, ಪರ್ಸನಲ್ ಕೇರ್, ಲೈಫ್ ಸ್ಟೈಲ್ಲಿ ಮತ್ತು ಐ ವೇರ್ ಗಳಂತಹ ವಿವಿಧ ಬ್ರ್ಯಾಂಡ್‌ಗಳೊಂದಿಗೆ ಗ್ಲೋಬಲ್‌ಬೀಸ್‌ಗಾಗಿ ಪೋರ್ಟ್‌ಫೋಲಿಯೊವನ್ನು ನಿರ್ಮಿಸಿದ್ದಾರೆ. ಇದು ಕಂಪನಿ ಆರಂಭವಾದ ಕೇವಲ ಅರ್ಧ ವರ್ಷದಲ್ಲಿ ನಿರ್ಮಿಸಿದ್ದಾರೆ. ನಿತಿನ್ ಅಗರ್ವಾಲ್ ಅವರು FirstCry ಸಂಸ್ಥಾಪಕ ಸುಪಮ್ ಮಹೇಶ್ವರಿ ಅವರೊಂದಿಗೆ ಗ್ಲೋಬಲ್‌ಬೀಸ್ ಅನ್ನು ಸ್ಥಾಪನೆ ಮಾಡುವ ಮೊದಲು ಎಡೆಲ್‌ವೀಸ್ ಫೈನಾನ್ಷಿಯಲ್ ಸರ್ವಿಸಸ್‌ನಲ್ಲಿ ಅಧ್ಯಕ್ಷ ಮತ್ತು ಗ್ರೂಪ್ ಸಿಇಒ, ಸಿಟಿಒ ಮತ್ತು ಚೀಫ್ ಡಿಜಿಟಲ್ ಆಫೀಸರ್ ಆಗಿದ್ದರು.
ನಿತಿನ್ ಅವರು ದೆಹಲಿಯ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಇಂಜಿನಿಯರ್ ಪದವಿ ಪಡೆದಿದ್ದು, ಅವರು ತಮ್ಮ ವೃತ್ತಿಜೀವನವನ್ನು ಸಿಟಿಬ್ಯಾಂಕ್‌ನೊಂದಿಗೆ ಪ್ರಾರಂಭಿಸಿದ್ದು ಅಲ್ಲಿ ಅವರು ಅನೇಕ ಸಂಸ್ಥೆಗಳಿಗೆ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಂತಹ ಪಾತ್ರಗಳನ್ನು ನಿರ್ವಹಿಸಿದರು. ಅವರು ಎರಡು ಬಾರಿ ಕಂಪನಿಗಳ ಸಂಸ್ಥಾಪಕರಾಗಿದ್ದಾರೆ. ಒಂದು ದಶಕದ ಕಾಲ ಕಾರ್ಪೊರೇಟ್ ಲೀಡರ್ ಆಗಿದ್ದ ಅವರುಗ್ಲೋಬಲ್‌ಬೀಸ್ ಅನ್ನು ಸ್ಥಾಪಸಲು ತಮ್ಮ ಅತ್ಯಧಿಕ ಸಂಬಳದ ಎಡೆಲ್ವೀಸ್ ಸಂಸ್ಥೆಯ ಕೆಲಸಕ್ಕೆ ಗುಡ್ ಬೈ ಹೇಳಿದರು.
ಕೇವಲ 3 ತಿಂಗಳ ಪ್ರಾರಂಭದಲ್ಲಿ, ಸಿರೀಸ್ A ನಲ್ಲಿ FirstCry ಮತ್ತು ಇತರ ಕೆಲವು ಹೂಡಿಕೆದಾರರಿಂದ $ 150 ಮಿಲಿಯನ್ ಹೂಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಸಿರೀಸ್ B ನಲ್ಲಿ ಬಿಲಿಯನೇರ್ ಅಜೀಂ ಪ್ರೇಮ್‌ಜಿ ಅವರ ಖಾಸಗಿ ಷೇರು ಸಂಸ್ಥೆಯಾದ ಪ್ರೇಮ್‌ಜಿ ಇನ್ವೆಸ್ಟ್ ನೇತೃತ್ವದಲ್ಲಿ $111.5 ಮಿಲಿಯನ್ ಹೂಡಿಕೆ ಬಂತು. ಸಾಫ್ಟ್‌ಬ್ಯಾಂಕ್ ಮತ್ತು ಸ್ಟೆಡ್‌ವ್ಯೂ ಕ್ಯಾಪಿಟಲ್ ಕೂಡಾ ಇತರ ಹೂಡಿಕೆದಾರರಾಗಿದ್ದಾರೆ. 2021 ರ ಡಿಸೆಂಬರ್ ನಲ್ಲಿ ಕಂಪನಿ ಮೌಲ್ಯವು $ 1.1 ಬಿಲಿಯನ್ ಆಗಿದ್ದು 2023 ರಲ್ಲಿಏಪ್ರಿಲ್ ವೇಳೆಗೆ ಅದು 9,000 ಕೋಟಿ ರೂ.ಗೆ ಏರಿತು.
ನಿತಿನ್ ಅಗರ್ವಾಲ್ ಅವರ ಗ್ಲೋಬಲ್‌ಬೀಸ್ ಸುಮಾರು 26 ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದೆ. ಹಾಗೂ ಈ ಪೋರ್ಟ್ ಪೊಲೀಯೋ 55 ಕ್ಕೂ ಹೆಚ್ಚು ಬ್ರ್ಯಾಂಡ್ ಗಳಲ್ಲಿ ಹಿಡಿತ ಸಾಧಿಸಿದೆ. ಇದು ಒಂದು ಆನ್ ಲೈನ್ ಸ್ಟೋರ್ ಹೊಂದಿದ್ದು, ಈ ವರ್ಷದಲ್ಲಿ ಹತ್ತುಈ ರೀತಿಯ ಸ್ಟೋರ್ ತೆರಯುವ ಉದ್ದೇಶ ಹೊಂದಿರುವುದಾಗಿ ಅಗರ್ವಾಲ್ ಇತ್ತೀಚೆಗೆ ಎಕನಾಮಿಕ್ ಟೈಮ್ಸ್‌ಗೆ ತಿಳಿಸಿದರು.
ಪ್ರಸ್ತುತ ಗ್ಲೋಬಲ್ ಬೀಸ್ ಪ್ರಸ್ತುತ ತಿಂಗಳಿಗೆ 140-150 ಕೋಟಿ ರೂ.ಗಳ ಒಟ್ಟು ವಹಿವಾಟು ನಡೆಸುತ್ತಿದೆ. ಥರ್ಡ್ ಪಾರ್ಟ್ ಸೆಲ್ಲರ್ ಕೆಟಗರಿಯಲ್ಲಿ ಅತಿ ದೊಡ್ಡ ಕಂಪನಿಯಾಗಿರುಯ್ವ ಗ್ಲೋಬರ್ ಹೌಸ್ 22 ಸರ್ಟಿಫೈಡ್ ವೇರ್ ಹೌಸ್ ಹೊಂದಿದೆ.2026 ರ ವೇಳೆಗೆ ಅಗರ್ವಾಲ್ ಅವರು ಲಾಭದೊಂದಿಗೆ $1 ಬಿಲಿಯನ್ ಆದಾಯ ಗಳಿಸುವ ಗುರಿ ಹೊಂದಿದ್ದಾರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?



Click it and Unblock the Notifications