ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಟಾಟಾ ಸನ್ಸ್ ಗ್ರೂಪ್‌ನ ರತನ್ ಟಾಟಾ ಅವರು ಕ್ರಾಂತಿಯನ್ನು ಸೃಷ್ಟಿಸಿದ್ದು, ಅವರ ನಾಯಕತ್ವವನ್ನು ಈ ಗ್ರೂಪ್ ಅನ್ನು ಎತ್ತರಕ್ಕೆ ಬೆಳೆಸಿದೆ. ರತನ್ ಟಾಟಾ ಅವರು ಅಧ್ಯಕ್ಷರಾಗಿದ್ದ 1990ರಿಂದ 2012ರ ಅವಧಿಯಲ್ಲಿ ಈ ಸಂಸ್ಥೆಯು ವಿಶ್ವದೆಲ್ಲೆಡೆ ವಿಸ್ತಾರವಾಗಿ ಬೆಳೆದಿದೆ.
ರತನ್ ಅವರು ತಮ್ಮ ಗಮನವನ್ನು ಜನೋಪಕಾರಿ ಚಟುವಟಿಕೆಗಳತ್ತ ಕೇಂದ್ರೀಕರಿಸಿದ್ದು, ತಮ್ಮ ಕುಟುಂಬಕ್ಕೆ ಸೇರಿದ ಮೂವರು ಮಕ್ಕಳಾದ ಲೇಹ್, ಮಾಯ ಹಾಗೂ ನೆವಿಲ್ಲೆ ಅವರಿಗೆ ಕುಟುಂಬದ ಬಹು ಮಿಲಿಯನ್ ಡಾಲರ್ ಮೊತ್ತದ ಬಿಸಿನೆಸ್ ಸಾಮ್ರಾಜ್ಯದ ನೇತೃತ್ವವನ್ನು ವಹಿಸಿಕೊಟ್ಟಿದ್ದಾರೆ.

ಲೇಹ್, ಮಾಯಾ ಹಾಗೂ ನೆವಿಲ್ಲೆ ಅವರನ್ನು ಟಾಟಾ ಗ್ರೂಪ್‌ನ ಟಾಟಾ ಮೆಡಿಕಲ್ ಟ್ರಸ್ಟ್‌ಗೆ ಆಡಳಿತ ಮಂಡಳಿಗೆ 2022ರ ನವೆಂಬರ್ 2ರಂದು ನೇಮಕಗೊಳಿಸಲಾಯಿತು. ಟಾಟಾ ಸಮೂಹದ ಉತ್ತರಾಧಿಕಾರಿಯಾಗಿರುವ ಇವರೆಲ್ಲ ನೊಯೆಲ್ ಟಾಟಾ ಅವರ ಮಕ್ಕಳಾಗಿದ್ದು, ರತನ್ ಟಾಟಾ ಅವರು ಮಾರ್ಗದರ್ಶನ ನೀಡುತ್ತಿದ್ದಾರೆ.
ಲೇಹ್ ಟಾಟಾ ಯಾರು?
ನೊಯೆಲ್ ಟಾಟಾ ಹಾಗೂ ಅಲೊ ಮಿಸ್ತ್ರಿ ಅವರು ಲೇಹಾ ಟಾಟಾ ಅವರಿಗೆ ಟಾಟಾ ಕುಟುಂಬಕ್ಕೆ ಸ್ವಾಗತ ನೀಡಿದ್ದಾರೆ. ಅವರ ತಂದೆ ಹಾಗೂ ತಾಯಿ ಉತ್ತುಂಗಕ್ಕೆ ಏರಿದ ಯಶಸ್ವಿ ಉದ್ಯಮಿಗಳಾಗಿದ್ದಾರೆ. ಅಲ್ಲದೆ ಲೇಹ್ ಮ್ಯಾಡ್ರಿಡ್‌ನ ಐಇ ಬಿಸಿನೆಸ್ ಸ್ಕೂಲ್‌ನಿಂದ ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.
2010ರಲ್ಲಿ ಲೂಯಿ ವಿಟಾನ್‌ನಲ್ಲಿ ಮೂರು ತಿಂಗಳ ಇಂಟರ್ನ್‌ಶಿಪ್ ಹೊರತುಪಡಿಸಿ ಲೇಹ್ ಅವರು ಪ್ರಮುಖವಾಗಿ ಭಾರತೀಯ ಹೋಟೆಲ್ ಉದ್ಯಮದಲ್ಲಿ ಸುಮಾರು 10 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಆ ಮೂಲಕ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರು 2006ರಲ್ಲಿ ಟಾಟಾ ಹೋಟೆಲ್ಸ್ ರೆಸಾರ್ಟ್ಸ್ ಅಂಡ್ ಪ್ಯಾಲೇಸಸ್‌ನಲ್ಲಿ ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಆಗಿ ವೃತ್ತಿ ಆರಂಭಿಸಿದ್ದರು.
ಕೋಲ್ಕೊತ್ತಾದ ಕ್ಯಾನ್ಸರ್ ಆಸ್ಪತ್ರೆ ಮ್ಯಾನೇಜ್‌ಮೆಂಟ್ ನೋಡಿಕೊಳ್ಳುವುದಕ್ಕೆ ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್(ಟಿಎಂಸಿಟಿ) ಲೇಹ್, ಮಾಯಾ, ನಾವೆಲ್ಲೆ ಅವರನ್ನು ಟ್ರಸ್ಟಿಗಳಾಗಿ ಆಯ್ಕೆ ಮಾಡಿದೆ. ರತನ್ ಟಾಟಾ ಅವರು 2011ರಲ್ಲಿ ಈ ಆಸ್ಪತ್ರೆಯನ್ನು ಸ್ಥಾಪಿಸಿದ್ದರು. ಆದರೆ ಇಂಡಿಯಾ ಟೈಮ್ಸ್ ವರದಿ ಪ್ರಕಾರ, 2005ರಲ್ಲಿ ಈ ಆಸ್ಪತ್ರೆಯನ್ನು ಕಂಪನಿಯ ಪ್ರಧಾನ ಫೌಂಡೇಶನ್ ಆಗಿರುವ ಸರ್ ದೊರಾಬ್ಜಿ ಟಾಟಾ ಟ್ರಸ್ಟ್‌ನಿಂದ 500 ಕೋಟಿ ರೂಪಾಯಿಗೆ ಸ್ಥಾಪಿಸಲಾಗಿದೆ.
ಮೊದಲ ಬಾರಿಗೆ ಟಾಟಾ ಚಾರಿಟೇಬಲ್ ಸಂಸ್ಥೆಯ ಆಡಳಿತ ಮಂಡಳಿಗೆ ಪ್ರಮುಖ ಮೂರು ಮಂದಿಯ ಹೆಸರುಗಳನ್ನು ಸೂಚಿಸಲಾಗಿದೆ. ಇದು 154 ವರ್ಷಗಳ ಹಳೆಯ ಟಾಟಾ ಗ್ರೂಪ್‌ಗೆ ಮುಂದಿನ ತಲೆಮಾರಿನ ನಾಯಕರನ್ನು ಆಯ್ಕೆ ಮಾಡುವಲ್ಲಿ ಮಹತ್ವದ ನಿರ್ಧಾರವಾಗಿದೆ.


Click it and Unblock the Notifications