ಭಾರತವು ಹಲವಾರು ಬಿಲಿಯನೇರ್ ಉದ್ಯಮಿಗಳನ್ನು ಹೊಂದಿರುವ ದೇಶವಾಗಿದೆ. ಇವರೆಲ್ಲರೂ ತಮ್ಮ ಉದ್ಯಮ ಸಾಮ್ರಾಜ್ಯವನ್ನು ತಳಮಟ್ಟದಿಂದಲೇ ಕಟ್ಟಿದವರು. ಹೀಗೆ ಸ್ಕ್ರಾಚ್‌ನಿಂದ ಆರಂಭಿಸಿ ಬಿಸಿನೆಸ್ ಎಂಪಾಯೈರ್ ಕಟ್ಟಿದ ಉದ್ಯಮಿಗಳಲ್ಲಿ ಭದ್ರೇಶ್ ಶಾ ಕೂಡಾ ಓರ್ವರಾಗಿದ್ದಾರೆ.
ಅಹಮದಾಬಾದ್ ನಗರದಲ್ಲಿನ ಸ್ಥಾಪನೆಗೊಂಡಿರುವ ಮೆಟಲರ್ಜಿಕಲ್ ಕಂಪನಿಯಾದ ಅಹಮದಾಬಾದ್ ಇಂಡಕ್ಷನ್ ಅಲೋಯ್ಸ್ ಪ್ರೈವೇಟ್ ಲಿಮಿಟೆಡ್ (ಎಐಎ) ಇಂಜಿನಿಯರಿಂಗ್‌ನ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಶಾ ಅವರು 1978 ರಲ್ಲಿ ಸಣ್ಣ ಎರಕದ (ಕುಲುಮೆ) ಕಾರ್ಖಾನೆ ಪ್ರಾರಂಭಿಸಿ ಅದನ್ನು 34,765 ಕೋಟಿ ರೂಪಾಯಿಗಳ ಮಾರುಕಟ್ಟೆ ಕ್ಯಾಪ್ ನ ಕಂಪನಿಯನ್ನಾಗಿ ಪರಿವರ್ತಿಸಿದ ಉದ್ಯಮಿಯಾಗಿದ್ದಾರೆ. 72 ವರ್ಷದ ಭದ್ರೇಶ್ ಶಾ ಅವರು ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೆ ವಿದ್ಯಾರ್ಥಿ.
1975 ರಲ್ಲಿ ಐಐಟಿ ಕಾನ್ಪುರದಿಂದ ಮೆಟಲರ್ಜಿಕಲ್ ಮತ್ತು ಮೆಟೀರಿಯಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಫೋರ್ಬ್ಸ್ ಪ್ರಕಾರ, ಶಾ ಅವರು ಡಿಸೆಂಬರ್ 11 ರ ಹೊತ್ತಿಗೆ 21,680 ಕೋಟಿ ರೂಪಾಯಿಗಳ ರಿಯಲ್ ಟೈಮ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಶಾ ಅವರು ವೈದ್ಯರ ಕುಟುಂಬದ ಹಿನ್ನಲೆಯಿಂದ ಬಂದವರಾದರೂ ಕೂಡಾ ವೈದ್ಯಕೀಯಕ್ಕಿಂತ ಹೆಚ್ಚಾಗಿ ಎಂಜಿನಿಯರಿಂಗ್ ಅಧ್ಯಯನವನ್ನು ಆಯ್ಕೆ ಮಾಡಿದರು. ಅಧ್ಯಯನ ಬಳಿಕ ಉದ್ಯೋಗವನ್ನು ಪಡೆಯಲು ಪ್ರಯತ್ನಿಸುವ ಬದಲು, ಶಾ ನೇರವಾಗಿ ವ್ಯವಹಾರಕ್ಕೆ ಧುಮುಕಲು ನಿರ್ಧರಿಸಿದರು.
ಶಾ ಅವರು ಸ್ವತಂತ್ರ ನಿರ್ದೇಶಕರಾಗಿ ಝೈಡಸ್ ಲೈಫ್ ಸೈನ್ಸಸ್ (Zydus Lifesciences) ಮಂಡಳಿಯಲ್ಲಿ ಇದ್ದು ಈ ಕಂಪನಿಯು ಫಾರ್ಮಾ ಬಿಲಿಯನೇರ್ ಪಂಕಜ್ ಪಟೇಲ್ ಅವರ ನೇತೃತ್ವದಲ್ಲಿದೆ. ಶಾ ಅವರು 1976 ರಲ್ಲಿ ತಮ್ಮ ಬ್ಯಾಂಕ್ ಸಾಲ ಮತ್ತು ತಂದೆ ನೀಡಿದ ಹಣಕಾಸಿನ ನೆರವಿನಿಂದ ಫೌಂಡ್ರಿ (ಕುಲುಮೆ ಕಾರ್ಖಾನೆ) ಯನ್ನು ಸ್ಥಾಪಿಸಿದರು.
ಸಣ್ಣ ಫೌಂಡ್ರಿಯಲ್ಲಿ ಜವಳಿ ಘಟಕಗಳಿಗೆ ಪೂರೈಸಲು ಕಂಪ್ರೆಸರ್ ಮೇಕರ್ಸ್ ತಯಾರಿಕೆಯನ್ನು ಪ್ರಾರಂಭಿಸಿದ್ದು ಆದರೆ ಇದು ವಿಫಲವಾಗಿ ನಷ್ಟ ಉಂಟಾಯಿತು. ನಂತರ ಬಹಳಷ್ಟು ಯೋಚನೆ ಮಾಡಿ ತರ್ಕಬದ್ಧ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ವ್ಯವಹಾರ ಯೋಜನೆಗಳನ್ನು ಬದಲಾಯಿಸಿದರು.
ವಿದ್ಯುತ್ ಸ್ಥಾವರಗಳಿಗೆ ರಿಪ್ಲೇಸೆಮೆಂಟ್ ಕಾಂಪೊನೆಂಟ್ಸ್ ಪೂರೈಕೆ ಮಾಡಲು ಆರಂಭಿಸಿದರು. 1979 ರಲ್ಲಿ, ಅವರು ತಮ್ಮ ಸ್ನೇಹಿತರೊಬ್ಬರ ಪಾಲುದಾರಿಕೆಯಲ್ಲಿ ಅಹಮದಾಬಾದ್ ಇಂಡಕ್ಷನ್ ಅಲೋಯ್ (AIA) ಅನ್ನು ಸ್ಥಾಪಿಸಿದರು.
ಶಾ ಅವರ ಕಂಪನಿಯು ಇಂದು ಜಾಗತಿಕವಾಗಿ ಎರಡನೇ ಅತಿ ದೊಡ್ಡ ಹೈ-ಕ್ರೋಮ್ ಕಾಸ್ಟಿಂಗ್ ತಯಾರಕವಾಗಿದೆ. ಇದು ಸಿಮೆಂಟ್, ಗಣಿಗಾರಿಕೆ ಮತ್ತು ವಿದ್ಯುತ್ ಕೈಗಾರಿಕೆಗಳಿಗೆ ಹೆಚ್ಚಿನ ಕ್ರೋಮಿಯಂ ಗ್ರೈಂಡಿಂಗ್ ಭಾಗಗಳ ಮಾರಾಟದ ಮೂಲಕದ ಮೂಲಕ ವಿಶ್ವದಲ್ಲೇ ಮುಂಚೂಣಿಯಲ್ಲಿದೆ.
ಕಂಪನಿಯು ಜಾಗತಿಕವಾಗಿ ಮೆಚ್ಚುಗೆ ಪಡೆದ ಮೆಟಲರ್ಜಿಕಲ್ ಉತ್ಪನ್ನಗಳ ಕಂಪನಿಯಾಗಿದ್ದು, ಕೈಗಾರಿಕೆಗಳಾದ್ಯಂತ ಮೆಟಲ್ ಕಾಸ್ಟಿಂಗ್ ಸ್ಥಾಸಿಸುವುದು ಮತ್ತು ಸೇವೆಯಲ್ಲಿ ಪರಿಣತಿಯನ್ನು ಹೊಂದಿದೆ.


Click it and Unblock the Notifications