ಐಷಾರಾಮಿ ಕಾರುಗಳು, ಬಂಗಲೆಗಳು, ಖಾಸಗಿ ಜೆಟ್‌ಗಳು ಮತ್ತು ಸೂಪರ್ ಲಕ್ಸುರಿ ವಿಹಾರ ನೌಕೆಗಳ ಮಾಲೀಕರಾಗಿರುವ ಅನೇಕ ಬಿಲಿಯನೇರ್‌ಗಳು ಜಗತ್ತಿನಲ್ಲಿದ್ದಾರೆ. ಐಷಾರಾಮಿ ಸೊತ್ತುಗಳ ಮಾಲೀಕರಾಗುವುದು ಉದ್ಯಮಿಗಳ ಪ್ರತಿಷ್ಟೆಯ ವಿಚಾರವೂ ಆಗಿರುತ್ತದೆ.
ಇನ್ನು ಲಕ್ಸುರಿ ನೌಕೆಗಳನ್ನು ಸೂಪರ್‌ಯಾಚ್, ಮೆಗಾಯಾಚ್ ಮುಂತಾದ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಐಷಾರಾಮಿ ನೌಕೆ ಹೆಸರಿಗೆ ತಕ್ಕಂತೆ ಎಲ್ಲಾ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿರುವುದು ಮಾತ್ರವಲ್ಲದೇ ಅದರ ಮಾಲೀಕರಾಗುವುದು ಸ್ಟೇಟಸ್ ನ ಸಂಕೇತವಾಗಿದೆ.

ತಮ್ಮದೇ ಆಗಿರುವ ಯಾಚ್‌ಗಳ ಒಡೆತನ ಹೊಂದಿರುವ ಅನೇಕ ಭಾರತೀಯ ಬಿಲಿಯನೇರ್‌ಗಳಿದ್ದಾರೆ. ಈ ಪೈಕಿ ಕೆಲವು ಭಾರತೀಯ ಬಿಲಿಯನೇರ್‌ಗಳು ತಮ್ಮ ಲಕ್ಸುರಿ ಲೈಫ್ ನಿಂದ ಮತ್ತು ಹಲವಾರು ಆಧುನಿಕ ಸವಲತ್ತುಗಳ ಮಾಲೀಕತ್ವದಿಂದ ಪ್ರಸಿದ್ದಿ ಪಡೆದಿದ್ದಾರೆ.
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಸುಮಾರು 100 ಮಿಲಿಯನ್ ಡಾಲರ್ ಮೌಲ್ಯದ ಕುದುರೆಲಾಳ ಆಕಾರ ಹೊಂದಿರುವ ಅತ್ಯಂತ ಆಧುನಿಕ ಅಲ್ಟ್ರಾ- ಐಷಾರಾಮಿಯಾಗಿರುವ ಯಾಚ್ ಹೊಂದಿದ್ದಾರೆಂದು ವರದಿಯಾಗಿದೆ.
ಇದು 58 ಮೀಟರ್ ಉದ್ದದ ವಿಹಾರ ನೌಕೆಯಲ್ಲಿ ಪ್ರೈವೆಟ್ ಸೂಟ್‌ಗಳು, ಸ್ಪಾ, ಸುಮಾರು 25 ಮೀಟರ್ ಉದ್ದ ಈಜುಕೊಳ ಮತ್ತು ಲಾಂಜ್ ಬಾರ್‌ಗಳನ್ನು ಹೊಂದಿದೆ. ಮುಕೇಶ್ ಮಾತ್ರವಲ್ಲದೇ ಅವರ ಕಿರಿಯ ಸಹೋದರ ಅನಿಲ್ ಅಂಬಾನಿ ಅವರು ಕೂಡಾ 200 ಕೋಟಿ ರೂಪಾಯಿ ಮೌಲ್ಯದ TIAN ಹೆಸರಿನ ವಿಹಾರ ನೌಕೆಯ ಮಾಲೀಕರಾಗಿದ್ದಾರೆ.
ಆರ್ಥಿಕ ಅಪರಾಧವೆಸಗಿ ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ "ಎಂಪ್ರೆಸ್ಸ್ ಆಫ್ ಇಂಡಿಯಾ" ಎಂಬ ಯಾಚ್ ಹೊಂದಿದ್ದು, 2006 ರಲ್ಲಿ ಬಹಿರಂಗಪಡಿಸಿದ ಬೃಹತ್ ಮೊತ್ತಕ್ಕೆ ಖರೀದಿಸಿದ್ದರು. 95 ಮೀಟರ್‌ನಷ್ಟಿದ್ದ ಈ ಐಷಾರಾಮಿ ಯಾಚ್ ಅನ್ನು 2018 ರಲ್ಲಿ 43.5 ಮಿಲಿಯನ್ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಮಲ್ಯ ಹೇಳಿದ್ದರು. ಅದಿ ಗೋದ್ರೇಜ್ ಮತ್ತು ಗೌತಮ್ ಸಿಂಘಾನಿಯಾ ಇವರು ಕೂಡಾ ಲಕ್ಸುರಿ ನೌಕೆಗಳನ್ನು ಹೊಂದಿರುವ ಪ್ರಮುಖರಾಗಿದ್ದಾರೆ.
ವಿಶ್ವದ ಎರಡನೇ ಅತಿದೊಡ್ಡ ಉಕ್ಕು ತಯಾರಿಕೆ ಕಂಪನಿಯಾದ ಆರ್ಸೆಲರ್ ಮಿತ್ತಲ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರು ದುಬಾರಿ ವಿಹಾರ ನೌಕೆಯ ಮಾಲೀಕರ ಸಾಲಿನ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುತ್ತಾರೆ. ಯಾಕೆಂದರೆ ಮಿತ್ತಲ್ ಅವರು 262 ಮೀಟರ್ ಉದ್ದ ಅಮೇವಿ ಸೂಪರ್‌ಯಾಚ್ ನ ಮಾಲೀಕರಾಗಿದ್ದಾರೆ.
ಸುಮಾರು 1,000 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ನೌಕೆಯು ಈಜುಕೊಳ, ಜಿಮ್ನಾಷಿಯಂ, ಸ್ಪಾ ಮತ್ತು ಸಿನೆಮಾ ಹಾಲ್ ಅನ್ನು ಹೊಂದಿದೆ. ಅಮೆವಿಯ ಒಳಾಂಗಣವನ್ನು ಖ್ಯಾತ ಐಷಾರಾಮಿ ಯಾಚ್ ಡಿಸೈನರ್ ಅಲ್ಬರ್ಟೊ ಪಿಂಟೊ ವಿನ್ಯಾಸಗೊಳಿಸಿದ್ದಾರೆ. ಇದು 8 ವಿಐಪಿ ಕೊಠಡಿಗಳನ್ನು ಹೊಂದಿದ್ದು, 16 ಅತಿಥಿಗಳಿಗೆ ವಸತಿ ಸೌಕರ್ಯವನ್ನು ಹೊಂದಿದ್ದು, 20 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊತ್ತೊಯ್ಯಬಹುದಾದ ಸಾಮಾರ್ಥ್ಯ ಹೊಂದಿದೆ.
ದುಬೈ ಮೂಲದ ಬಿಲಿಯನೇರ್ ಮತ್ತು ಸ್ಟಾಲಿಯನ್ ಗ್ರೂಪ್ ಮುಖ್ಯಸ್ಥ ಸುನಿಲ್ ವಾಸ್ವಾನಿ ಕೂಡ ಐಷಾರಾಮಿ ಯಾಚ್ ನ ಮಾಲೀಕರಾಗಿದ್ದ್ದಾರೆ. ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಅವರು ಎಂವೈ ಅಶೆನಾ ಹೆಸರಿನ ಐಷಾರಾಮಿ ಲಕ್ಸುರಿ ನೌಕೆಯ ಒಡೆಯರಾಗಿದ್ದಾರೆ. ಬರ್ಮಾದಿಂದ ಆಮದು ಮಾಡಿಕೊಂಡ ತೇಗದ ಮರದಿಂದ ಮಾಡಿದ ಈ ಯಾಚ್ ನೌಕೆಯು 3 ಡೆಕ್‌ಗಳನ್ನು ಹೊಂದಿದೆ. ಇದರ ಮೌಲ್ಯ 51 ಕೋಟಿ ರೂಪಾಯಿ ಆಗಿದೆ.


Click it and Unblock the Notifications