ಪಾಕಿಸ್ತಾನದಲ್ಲಿ ಸರಕಾರ ರಚನೆ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಕೆಲವು ರಾಜಕೀಯ ಬೆಳವಣಿಗೆಗಳು ನಡೆದು ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡ ನಂತರ ದೇಶದ ಮುಂದಿನ ಪ್ರಧಾನಿಯಾಗಲು ಪಿಎಂಎಲ್- ಎನ್ (ಪಾಕಿಸ್ತಾನ ಮುಸ್ಲಿಂ ಲೀಗ್ - ನವಾಜ್) ಅಧ್ಯಕ್ಷ ಶೆಹಬಾಜ್ ಷರೀಫ್ ಅವರು ಪ್ರಧಾನಿ ಪಟ್ಟವನ್ನು ಏರಲು ಸಿದ್ದತೆ ಮಾಡಿಕೊಂಡಿದ್ದಾರೆ.
ಇವರು 990-93, 1997-98 ಮತ್ತು 2013-17ರ ಅವಧಿಯಲ್ಲಿ ಸತತ ಮೂರು ಅವಧಿಗೆ ಪಾಕಿಸ್ತಾನವನ್ನು ಪ್ರಧಾನಿಯಾಗಿ ಮುನ್ನಡೆಸಿದ ವ್ಯಕ್ತಿ ನವಾಜ್ ಷರೀಫ್ ಅವರ ಸಹೋದರರಾಗಿದ್ದಾರೆ.

ನವಾಜ್ ಷರೀಫ್ ಅವರು ಇತ್ತೆಫಾಕ್ ಮತ್ತು ಷರೀಫ್ ಗುಂಪುಗಳ ಸಂಸ್ಥಾಪಕ ಮುಹಮ್ಮದ್ ಷರೀಫ್ ಅವರ ಪುತ್ರನಾಗಿದ್ದು, ಲಾಹೋರ್‌ನ ಮೇಲ್ ಮಧ್ಯಮ ವರ್ಗದ ಷರೀಫ್ ಕುಟುಂಬದಲ್ಲಿ ಬೆಳೆದರು. ಲಾಹೋರ್‌ನಲ್ಲಿರುವ ಪಂಜಾಬ್ ವಿಶ್ವವಿದ್ಯಾನಿಲಯದಿಂದ, LLB ಅಧ್ಯಯನ ಬಳಿಕ ಷರೀಫ್ ಅವರ ಕುಟುಂಬದ ಹೌಸ್ ಆಫ್ ಇತ್ತೆಫಾಕ್ (ಇತ್ತೆಫಾಕ್ ಗ್ರೂಪ್) ಗೆ ಅವರು ಸೇರ್ಪಡೆಗೊಂಡರು.
ಇದು ಜವಳಿ, ಸ್ಟೀಲ್ ಮತ್ತು ಸಕ್ಕರೆ ಹಲವು ಪ್ರಸಿದ್ಧ ಕೈಗಾರಿಕಾ ಸಂಘಟಿತವಾಗಿರುವ ಸಮೂಹ ಸಂಸ್ಥೆಯಾಗಿದೆ. ನವಾಜ್ ಅವರ ಪಂಜಾಬ್ ಪ್ರಾಂತೀಯ ಮಂಡಳಿಗೆ ಸೇವೆ ಸಲ್ಲಿಸುತ್ತಿರುವಾಗಲೇ ಅವರ ರಾಜಕೀಯ ಜೀವನವು ಈ ಹಂತದಲ್ಲಿ ಆರಂಭವಾಯಿತು. ಅಕ್ಟೋಬರ್ 1990 ರಲ್ಲಿ, ಷರೀಫ್ ಮೊದಲ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.
ಅದಕ್ಕೂ ಮೊದಲು ಅವರ ರಾಜಕೀಯ ಜೀವನದ ಬಗ್ಗೆ ನೋಡೋದಾದ್ರೆ 1981 ರಲ್ಲಿ ಪ್ರಾಂತ್ಯದ ಹಣಕಾಸು ಸಚಿವರಾಗಿ ನೇಮಕಗೊಂಡ, ಅವರು 1985 ರ ಚುನಾವಣೆಯ ನಂತರ ಅವರು ಮುಖ್ಯಮಂತ್ರಿಯಾದರು. ಷರೀಫ್ ಇದೇ ವೇಳೆ ಅವರು ಪಾಕಿಸ್ತಾನ್ ಮುಸ್ಲಿಂ ಲೀಗ್ ಅನ್ನು ಮುನ್ನಡೆಸಿದರು, ಇದು 1993 ರಲ್ಲಿ ಇಸ್ಲಾಮಿಕ್ ಡೆಮಾಕ್ರಟಿಕ್ ಅಲೈಯನ್ಸ್ ಒಕ್ಕೂಟದ ಪ್ರಮುಖ ಪಕ್ಷವಾದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ [ಪಿಎಂಎಲ್-ಎನ್] ಆಗಿ ಬೆಳೆದು ನಿಂತಿತು.
ಲಾಹೋರ್‌ನ ಹೊರವಲಯದಲ್ಲಿರುವ ರೈವಿಂಡ್‌ನ ಜಟಿ ಉಮ್ರಾದಲ್ಲಿರುವ, ರೈವಿಂಡ್ ಪ್ಯಾಲೆಸ್ ಅವರ ಮೂಲಮನೆಯಾಗಿದೆ. ಅವರ ಗಡಿಪಾರು ಸಮಯದಲ್ಲಿ ಅವರು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಷರೀಫ್ ವಿಲ್ಲಾವನ್ನು ಹೊಂದಿದ್ದರು.
ಪಾಕಿಸ್ತಾನದ ಚುನಾವಣಾ ಆಯೋಗದ ಪ್ರಕಾರ ಪಾಕಿಸ್ತಾನದ ಶ್ರೀಮಂತರಲ್ಲಿ ನವಾಜ್ ಒಬ್ಬರು. ಇದೀಗ ಅವರ ಅಂದಾಜು ನಿವ್ವಳ ಮೌಲ್ಯವು 200 ಕೋಟಿ ರೂಪಾಯಿ ಅಥವಾ 2021 ರಲ್ಲಿ ಕನಿಷ್ಠ $31 ಮಿಲಿಯನ್ ಆಗಿದೆ. ಹೀಗಾಗಿ ಅವರೊಬ್ಬ ಪಾಕಿಸ್ತಾನದ ಅತ್ಯಂತ ಶ್ರೀಮಂತ ರಾಜಕಾರಣಿಯಾಗಿದ್ದಾರೆ.


Click it and Unblock the Notifications