ರೈತನ ಮಗನಾದ ಪವನ್ ಶರ್ಮಾ ಅವರು 2022ರಲ್ಲಿ ಐಐಎಂ ಅಹಮದಾಬಾದ್‌ನ ಪಿಜಿಪಿಎಕ್ಸ್ ದೇಶೀಯ ಪ್ಲೇಸ್‌ಮೆಂಟ್‌ನಲ್ಲಿ 75.2 ಲಕ್ಷ ರೂಪಾಯಿಗಳ ಅತ್ಯಧಿಕ ವಾರ್ಷಿಕ ಪ್ಯಾಕೇಜ್ ಪಡೆಯುವ ಮೂಲಕ ಇತಿಹಾಸ ಬರೆದಿದ್ದಾರೆ. ವಾಸ್ತವದಲ್ಲಿ ಪವನ್ ಶರ್ಮಾ ಅವರು ಕೆಲವು ವರ್ಷಗಳ ಹಿಂದೆ ತಮ್ಮ ಮೊದಲ ಉದ್ಯೋಗದಲ್ಲಿ ಅಕೌಂಟೆಂಟ್ ಆಗಿ 3,000 ರೂಪಾಯಿ ವೇತನ ಪಡೆಯುತ್ತಿದ್ದರು.
ಪವನ್ ಶರ್ಮಾ ಅವರು ಹೈದರಾಬಾದ್ ಮೂಲದವರಾಗಿದ್ದು, ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಕೋರ್ಸ್ ಮಾಡಿದ ಬಳಿಕ ಅವರು ಐಐಎಂ-ಅಹಮದಾಬಾದ್‌ನ ಪಿಜಿಪಿಎಕ್ಸ್ ಕೋರ್ಸ್‌ಗೆ ಅಡ್ಮಿಷನ್ ಪಡೆದುಕೊಂಡರು. ಪವನ್ ಶರ್ಮಾ ಅವರು 2014ರಲ್ಲಿ ಸಿಎ ಪೂರ್ಣಗೊಳಿಸಿ 2021ರವರೆಗೆ ಗ್ರಾಂಟ್ ಥಾರ್ನ್‌ಟನ್ ಜತೆ ಕೆಲಸ ಮಾಡಿದರು.

ಬಳಿಕ ಅವರು ಐಐಎಂನಲ್ಲಿ ಪ್ರವೇಶ ಪಡೆದುಕೊಂಡರು. ಪವನ್ ಶರ್ಮಾ ಅವರು ಹೇಳುವ ಪ್ರಕಾರ, ಅವರು ರೈತ ಕುಟುಂಬದಿಂದ ಬಂದವರಾಗಿದ್ದು, ವಾಣಿಜ್ಯ ವಿಷಯದಲ್ಲಿ ಶಿಕ್ಷಣವನ್ನು ಪಡೆಯಲು ಬಯಸಿದ್ದರು. ಏಕೆಂದರೆ ಅದಕ್ಕೆ ಕಡಿಮೆ ವೆಚ್ಚ ಸಾಕಾಗಿತ್ತು. ಕೈತುಂಬ ಸಂಬಳ ಪಡೆಯುವ ಉದ್ಯೋಗದ ಆಫರ್‌ಗೆ ಮಾಡಿದ ಸಿದ್ಧತೆಗಳ ಕುರಿತು ಮಾತನಾಡಿದ ಪವನ್ ಶರ್ಮಾ ಅವರು ಟಿಒಐಗೆ ಈ ರೀತಿ ಹೇಳಿದ್ದಾರೆ.
"ಟಾಪ್ ಬಿ-ಸ್ಕೂಲ್ ಪ್ಲೇಸ್‌ಮೆಂಟ್‌ಗೆ ಬಂದಾಗ ಪೂಲ್‌ನಲ್ಲಿರುವ ಬಹುತೇಕ ಎಲ್ಲ ಅಭ್ಯರ್ಥಿಗಳು ಸರಿಯಾದ ಬಾಕ್ಸ್‌ಗಳನ್ನು ಟಿಕ್ ಮಾಡುವ ಬೇಸ್‌ಲೈನ್ ಯಾವಾಗಲೂ ಇರುತ್ತದೆ. ಹೀಗಾಗಿ, ಕಂಪೆನಿಗಳು ಕೂಡ ಅಲ್ಲಿಗೆ ಬರುತ್ತಿರುತ್ತವೆ. ಆದರೆ ನನ್ನ ವಿಚಾರದಲ್ಲಿ ನಿಜ ಜೀವನದ ಸನ್ನಿವೇಶಕ್ಕೆ ಪರಿಹಾರವನ್ನು ಹುಡುಕುವುದಕ್ಕೆ ನನ್ನನ್ನು ಕೇಳಲಾಯಿತು. ನೀವು ಪರಿಹಾರದೊಂದಿಗೆ ಬರುತ್ತೀರಿ ಅಥವಾ ಅದನ್ನು ಸರಿಯಾದ ರೀತಿಯಲ್ಲಿ ಬಗೆಹರಿಸುತ್ತೀರಿ ಎನ್ನುವುದು ಮುಖ್ಯವಲ್ಲ. ಬದಲಿಗೆ ನೀವು ಪ್ರಾರಂಭಿಸುವ ವಿಧಾನವು ಉದ್ಯೋಗದಾತರಿಗೆ ನಿಮ್ಮ ಆಲೋಚನೆಗಳ ಬಗ್ಗೆ ಇಣುಕು ನೋಟವನ್ನು ನೀಡುತ್ತದೆ," ಎನ್ನುತ್ತಾರೆ.
ಪವನ್ ಶರ್ಮಾ ಹೇಳುವ ಪ್ರಕಾರ, ಕಂಪೆನಿಗಳು ಉದ್ಯಮಶೀಲ ಮನಸ್ಥಿತಿಯನ್ನು ಹೊಂದಿರುವ ಅಭ್ಯರ್ಥಿಗಳನ್ನು ಹುಡುಕುತ್ತಿರುತ್ತವೆ. ಹೀಗಿರುವಾಗ, ಯುವ ಬಿಸಿನೆಸ್ ಲೀಡರ್‌ಗಳು ಡಿಜಿಟಲ್ ಇಕೊಸಿಸ್ಟಮ್ ಬಗ್ಗೆ ತಿಳಿದುಕೊಂಡಿರಬೇಕು.
ರೈತನ ಮಗ ಐಷಾರಾಮಿ ಕಾರುಗಳ ಒಡೆಯನಾದ ಬಗ್ಗೆ ತಿಳಿಯಿರಿ
ನಾವು ಬಡ ವರ್ಗದವರು ಶ್ರೀಮಂತರಾದ ಬಗ್ಗೆ ತಿಳಿಯುವುದಾದರೆ ನಮ್ಮ ಮುಂದೆ ಬಿಲಿಯನೇರ್ ರವಿ ಪಿಳ್ಳೈ ಕೂಡಾ ಬರುತ್ತಾರೆ. ಬಿಲಿಯನೇರ್ ರವಿ ಪಿಳ್ಳೈ ಅವರನ್ನು ಕೇರಳದ ಅತ್ಯಂತ ಶ್ರೀಮಂತ ವ್ಯಕ್ತಿಯೆಂದು ಪರಿಗಣಿಸಲಾಗಿದ್ದು, ಮಧ್ಯ ಪ್ರಾಚ್ಯದಲ್ಲಿಯೂ ಪ್ರಭಾವಿ ಭಾರತೀಯರಾಗಿದ್ದಾರೆ.
ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿರುವ ಈ ಶ್ರೀಮಂತ ಸ್ವಯಂ ನಿರ್ಮಿತ ದೊಡ್ಡ ಉದ್ಯಮಿಯ ಸಿರಿವಂತಿಕೆಯ ಕಥೆಯು ಬಹಳ ಸ್ಫೂರ್ತಿದಾಯಕವಾದದ್ದು. ಪಿಳ್ಳೈ ಅವರು ಇತ್ತೀಚೆಗೆ 100 ಕೋಟಿ ರೂ. ಬೆಲೆಯ H145 ಹೆಲಿಕಾಪ್ಟರ್ ಖರೀದಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಡೆಯುವ ಮೂಲಕ ಸಂಪತ್ತಿನ ಇತಿಹಾಸದ ಪುಸ್ತಕದಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ.
ಈ ಚಾಪರ್‌ನ ಮೊದಲ ಪ್ರಯಾಣದ ಮೂಲಕ ಅವರು ಪಂಚತಾರಾ ಹೋಟೆಲ್‌ವೊಂದಕ್ಕೆ ಹಾರಿದ್ದರು. ಬಡತನದಲ್ಲಿದ್ದ ಕೃಷಿಕನ ಮಗನಾಗಿ ಹುಟ್ಟಿದ ಪಿಳ್ಳೈ ಅವರು ಜೀವನದಲ್ಲಿ ಸಾಕಷ್ಟು ಹೋರಾಟ ಮಾಡಿ ಆರ್‌ಪಿ ಗ್ರೂಪ್ ಮೂಲಕ ನಿರ್ಮಾಣ ಕ್ಷೇತ್ರದಲ್ಲಿ ಬಹು ಶತಕೋಟಿ ಡಾಲರ್‌ನ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿ ಉನ್ನತ ಸ್ಥಾನಕ್ಕೇರಿದ್ದಾರೆ.
$7.8 ಬಿಲಿಯನ್(64,000 ಕೋಟಿ) ಆದಾಯವನ್ನು ಹೊಂದಿ ಸಂಪತ್ತು ಹಾಗೂ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ನಂತರ ಅವರು ಐಷಾರಾಮಿ ಹೋಟೆಲ್‌ಗಳು, ಸ್ಟೀಲ್, ಗ್ಯಾಸ್, ಎಣ್ಣೆ, ಸಿಮೆಂಟ್, ಶಾಪಿಂಗ್ ಮಾಲ್‌ಗಳಂತಹ ವ್ಯವಹಾರ ಕ್ಷೇತ್ರಗಳಿಗೆ ಕಾಲಿಟ್ಟರು.


Click it and Unblock the Notifications