ಸ್ನ್ಯಾಕ್ ಬಾಕ್ಸ್‌ಗಳು, ವಾಟರ್ ಬಾಟಲ್‌ಗಳು, ಸ್ಟೋರೇಜ್ ಬಾಕ್ಸ್ ಸೇರಿದಂತೆ ಹಲವಾರು ಕಿಚನ್ ವೇರ್ ತಯಾರಕ ಸೆಲ್ಲೋ (Cello World) ಬ್ರ್ಯಾಂಡ್ ಬಹಳಷ್ಟು ಮಹಿಳೆಯರ ನೆಚ್ಚಿನ ಬ್ರ್ಯಾಂಡ್ ಆಗಿದೆ. ಇದು ಮುಂಬೈ ಮೂಲದ ಕಂಪನಿಯಾಗಿದ್ದು ಇದರ ತಯಾರಕರು ಈಗ ಭಾರತದ ಬಿಲಿಯನೇರ್ಸ್ ಕ್ಲಬ್‌ನ ಹೊಸ ಸದಸ್ಯರಾಗಿದ್ದಾರೆ.
ಫೋರ್ಬ್ಸ್ ಪ್ರಕಾರ, ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪ್ರದೀಪ್ ರಾಥೋಡ್ (59) ಐಪಿಒ ಪರಿಣಾಮವಾಗಿ ಕಂಪನಿಯಲ್ಲಿನ ಅವರ ಶೇಕಡ 44 ಪಾಲಿನಿಂದಾಗಿ ಭಾರತದ ಬಿಲಿಯನೇರ್ ಕ್ಲಬ್‌ಗೆ ಸೇರಿದ್ದಾರೆ. ಈ ಸಂಸ್ಥೆ ಈಗ 1 ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ.

ಸೆಲ್ಲೋ ಬ್ರ್ಯಾಂಡ್‌ನ ಅಡಿಯಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವ ಸೆಲ್ಲೋ ವರ್ಲ್ಡ್ ತನ್ನ ಕುಕ್‌ವೇರ್‌ಗಳ ಹೊರತಾಗಿ ಒಟ್ಟಾರೆ ಗಳಿಕೆಯಲ್ಲಿ ಮೂರನೇ ಎರಡರಷ್ಟನ್ನು ಪೆನ್ಸಿಲ್‌ಗಳು, ಸ್ಟೇಷನರಿಗಳು ಮೌಲ್‌ಡೆಡ್ ಫರ್ನಿಚರ್ ಮಾರಾಟದಿಂದ ಗಳಿಸುತ್ತದೆ.
ಸೆಲ್ಲೋ ವರ್ಲ್ಡ್ ಷೇರುಗಳು 39 ಬಾರಿ ಓವರ್‌ಸಬ್‌ಸ್ಕ್ರೈಬ್ ಆಗಿದ್ದು, ಅವುಗಳ ಐಪಿಒ ಬೆಲೆ 648 ರೂಪಾಯಿಗಳಿಗೆ ಶೇಕಡ 28 ಪ್ರೀಮಿಯಂನಲ್ಲಿ ಪಟ್ಟಿಮಾಡಲಾಗಿದೆ.ಸೆಲ್ಲೋ ವರ್ಲ್ಡ್ ಕಳೆದ ಎರಡು ವರ್ಷಗಳಲ್ಲಿ ಆದಾಯದಲ್ಲಿ ಗಮನಾರ್ಹವಾಗಿ ಶೇಕಡ 70 ಏರಿಕೆ ಕಂಡಿದೆ.
ಮಾರ್ಚ್ 2023 ರ ಆರ್ಥಿಕ ವರ್ಷದಲ್ಲಿ ಆದಾಯ 17.97 ಶತಕೋಟಿ ರೂಪಾಯಿಗಳನ್ನು (219 ಮಿಲಿಯನ್ ಡಾಲರ್) ತಲುಪಿದೆ. ನಿವ್ವಳ ಲಾಭವು ಆ ಸಮಯದಲ್ಲಿ ಶೇಕಡ 58 ರಷ್ಟು 2.8 ಶತಕೋಟಿ ರೂಪಾಯಿಗಳಿಗೆ (35 ಮಿಲಿಯನ್ ಡಾಲರ್) ಹೆಚ್ಚಾಗಿದೆ.
ಐಪಿಒ ಅಗ್ಗವಾಗಿಲ್ಲದಿದ್ದರೂ ಕಂಪನಿಯ ಪ್ಲಾಸ್ಟಿಕ್, ಗಾಜು ಮತ್ತು ಪಿಂಗಾಣಿ ಉತ್ಪನ್ನಗಳ ವ್ಯಾಪಕ ಶ್ರೇಣಿಯು ಹೂಡಿಕೆದಾರರನ್ನು ಆಕರ್ಷಿಸಿತು. ಸೆಲ್ಲೊ ವರ್ಲ್ಡ್ ಮಾರುಕಟ್ಟೆಯಲ್ಲಿ ಬೊರೊಸಿಲ್, ಟಿಟಿಕೆ, ಮಿಲ್ಟನ್ ಮತ್ತು ಲಾ ಒಪಾಲಾ ಸೇರಿದಂತೆ ಇತರ ಪ್ರಸಿದ್ಧ ಬ್ರ್ಯಾಂಡ್‌ಗಳೊಂದಿಗೆ ಸ್ಪರ್ಧಿಸುತ್ತಿದೆ.
1962 ರ ಹಿಂದೆ ಸ್ಥಾಪನೆಯಾದ ಸೆಲ್ಲೋ ವರ್ಲ್ಡ್ , ಪ್ರದೀಪ್ ಅವರ ದಿವಂಗತ ತಂದೆ ಘಿಸುಲಾಲ್ ರಾಥೋಡ್ ಅವರು ಪ್ಲಾಸ್ಟಿಕ್ ವಸ್ತುಗಳ ಸಣ್ಣ ತಯಾರಕರೊಂದಿಗೆ ಸೇರಿಕೊಂಡು ನಿರ್ಮಿಸಿದ್ದರು. ಈ ಪರಂಪರೆಯನ್ನು ಮುಂದುವರಿಸುತ್ತಿರುವ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರದೀಪ್ ಮತ್ತು ಅವರ 56 ವರ್ಷದ ಕಿರಿಯ ಸಹೋದರ ಪಂಕಜ್ ಸಂಸ್ಥೆಯಲ್ಲಿ ಮತ್ತಷ್ಟು ಉತ್ಪನ್ನಗಳನ್ನು ವೈವಿಧ್ಯಗೊಳಿಸಿದ್ದಾರೆ


Click it and Unblock the Notifications