ಹೃದ್ರೋಗ ತಜ್ಞ ಪ್ರತಾಪ್ 1983 ರಲ್ಲಿ ಅಪೋಲೋ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಅನ್ನು ಸ್ಥಾಪಿನೆ ಮಾಡಿದ್ದಾರೆ. ಇದು ಭಾರತದ ಉನ್ನತ ಆರೋಗ್ಯ ಸಂಸ್ಥೆಯಾಗಿದೆ. ಭಾರತದಲ್ಲಿ ಮೊದಲ ಖಾಸಗಿ, ಕಾರ್ಪೊರೇಟ್ ಆಸ್ಪತ್ರೆಯನ್ನು ಡಾ. ಪ್ರತಾಪ್ ಸಿ. ರೆಡ್ಡಿ ನಾಲ್ಕು ದಶಕಗಳ ಹಿಂದೆ ಸ್ಥಾಪನೆ ಮಾಡಿದ್ದಾರೆ. ಚೆನ್ನೈನ 150 ಹಾಸಿಗೆಗಳ ಅಪೊಲೊ ಹೋಟೆಲ್ ಗ್ರೀಮ್ಸ್ ರಸ್ತೆಯಲ್ಲಿ ಪ್ರಾರಂಭವಾಯಿತು.
90 ವರ್ಷ ವಯಸ್ಸಿನ ಪ್ರತಾಪ್ ರೆಡ್ಡಿ ಪ್ರೀತಾ ರೆಡ್ಡಿ, ಸಂಗೀತಾ ರೆಡ್ಡಿ, ಸುನೀತಾ ರೆಡ್ಡಿ ಮತ್ತು ಶೋಬನಾ ಕಾಮಿನೇನಿ ಎಂಬ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ. ಸುಚರಿತ ರೆಡ್ಡಿಯು ಪ್ರತಾಪ್ ರೆಡ್ಡಿಯ ಪತ್ನಿಯಾಗಿದ್ದಾರೆ. ಈ ನಿಗಮವು 71 ಆಸ್ಪತ್ರೆಗಳು, 291 ಪ್ರಾಥಮಿಕ ಆರೈಕೆ ಆರೋಗ್ಯ ಸೌಲಭ್ಯಗಳು ಮತ್ತು 5,000 ಕ್ಕೂ ಹೆಚ್ಚು ಔಷಧಿ ಅಂಗಡಿಗಳ ವ್ಯವಸ್ಥೆಯನ್ನು ನಡೆಸುತ್ತದೆ. ಇದು 1.9 ಶತಕೋಟಿ ಡಾಲರ್ ಆದಾಯವನ್ನು ಹೊಂದಿದೆ.

2.2 ಬಿಲಿಯನ್ ಡಾಲರ್ ಅಥವಾ ಸುಮಾರು 18,000 ಕೋಟಿ ರೂಪಾಯಿಯು ರೆಡ್ಡಿಯವರ ನಿವ್ವಳ ಆದಾಯವಾಗಿದೆ. ಹಿರಿಯ ಮಗಳು ಪ್ರೀತಾ ರೆಡ್ಡಿ ಮತ್ತು ಮೂರನೇ ಮಗಳು ಶೋಬನಾ ಕಾಮಿನೇನಿ ವ್ಯವಹಾರದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನು ಪ್ರಸ್ತುತ ರೆಡ್ಡಿ ಅವರ ನಾಲ್ಕು ಹೆಣ್ಣುಮಕ್ಕಳು ನಿರ್ವಹಿಸುತ್ತಿದ್ದಾರೆ. ಕಿರಿಯವರಾದ ಸಂಗೀತಾ ರೆಡ್ಡಿ, ಎರಡನೇ ಮಗಳು ಸುನೀತಾ ರೆಡ್ಡಿ ಜೊತೆ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವ್ಯವಸ್ಥಾಪಕ ನಿರ್ದೇಶಕಿಯ ಪಾತ್ರವನ್ನು ವಹಿಸಿದ್ದಾರೆ.
ಅಪೊಲೊ ಪರಿಕಲ್ಪನೆಯು ಹೇಗೆ ಪ್ರಾರಂಭವಾಯಿತು?
ಯುಎಸ್‌ನಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಕಳೆದ ನಂತರ, ಪ್ರತಾಪ್ ರೆಡ್ಡಿ 1970 ರಲ್ಲಿ ಭಾರತಕ್ಕೆ ಹಿಂತಿರುಗಿದರು. ಡಾ. ರೆಡ್ಡಿ ಅಮೆರಿಕಾದಲ್ಲಿ ಕಾರ್ಡಿಯಾಕ್ ಬೈಪಾಸ್ ಆಪರೇಷನ್‌ಗೆ ವ್ಯವಸ್ಥೆ ಮಾಡಲು ಸಾಧ್ಯವಾಗದ ಕಾರಣ 38 ವರ್ಷ ವಯಸ್ಸಿನ ಮದ್ರಾಸ್‌ನಲ್ಲಿನ ರೋಗಿಯೋರ್ವ ಸಾವನ್ನಪ್ಪಿದರು. ಹಾಗೆಯೇ ಪ್ರತಾಪ್ ತಾಯಿ ಗರ್ಭಕಂಠದ ಕ್ಯಾನ್ಸರ್‌ನಿಂದ ನಿಧನರಾದರು. ತಂದೆ ರಾಘವ ರೆಡ್ಡಿ ಮಿದುಳಿನ ರಕ್ತಸ್ರಾವದಿಂದ ಅಸುನೀಗಿದರು. ತನ್ನ ತಂದೆಯನ್ನು ಉಳಿಸಿಕೊಳ್ಳಲೇ ಪ್ರತಾಪ್ ರೆಡ್ಡಿಗೆ ಸಾಧ್ಯವಾಗಲಿಲ್ಲ.
ಹೃದಯಾಘಾತದಿಂದ ಹಠಾತ್ ನಿಧನರಾದ ಅವರ ಪ್ರೀತಿಯ ಗೆಳೆಯ ಕುಮಾರರಾಜ ಮುತ್ತಯ್ಯರನ್ನು ಕೂಡಾ ಪ್ರತಾಪ್‌ಗೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಅಪೋಲೋ ಇದ್ದಿದ್ದರೆ ಅವರೆಲ್ಲರನ್ನೂ ರಕ್ಷಿಸಬಹುದಿತ್ತು ಎಂಬ ಕಲ್ಪನೆ ಅವರ ಮನಸ್ಸಲ್ಲಿ ಬೇರೂರಿದೆ. ಭಾರತದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ, ಉನ್ನತ ತಂತ್ರಜ್ಞಾನವನ್ನು ಆರೋಗ್ಯ ಕ್ಷೇತ್ರಕ್ಕೆ ತರುವ ನಿಟ್ಟಿನಲ್ಲಿ ಅಪೋಲೋವನ್ನು ಆರಂಭ ಮಾಡಿದ್ದಾರೆ.
ಡಾ. ರೆಡ್ಡಿ ಯಾವಾಗಲೂ ಒಂದು ಶತಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತದಂತಹ ರಾಷ್ಟ್ರದಲ್ಲಿ ಆರೋಗ್ಯ ಕ್ಷೇತ್ರ ಅಭಿವೃದ್ಧಿಯ ಬಗ್ಗೆ ಯೋಚಿಸುತ್ತಿದ್ದರು. ಅದಕ್ಕಾಗಿ ಅಪೋಲೋ ಆಸ್ಪತ್ರೆಯನ್ನು ಆರಂಭ ಮಾಡಿ, ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿಗೆ ನಾಂದಿ ಹಾಡಿದರು. ಅವರು ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗಾಗಿ ನರ್ಸ್ ತರಬೇತಿ ಕಾರ್ಯಕ್ರಮಗಳು ಮತ್ತು ಶಾಲೆಗಳನ್ನು ಸ್ಥಾಪಿಸಿದರು.
1983 ರಲ್ಲಿ ಭಾರತದ ಮೊದಲ ಅಪೊಲೊ ಆಸ್ಪತ್ರೆಯನ್ನು ಸ್ಥಾಪಿಸಿದರು, ಇದು 150 ಹಾಸಿಗೆಗಳನ್ನು ಹೊಂದಿತ್ತು ಮತ್ತು ಅಲ್ಲಿ ಸುಧಾರಿತ ವೈದ್ಯಕೀಯ ತಂತ್ರಜ್ಞಾನವನ್ನು ಸ್ಥಾಪಿಸಲಾಗಿತ್ತು. ಅವರು ತಮ್ಮ 40 ವರ್ಷಗಳ ಉದ್ಯಮ ಅವಧಿಯಲ್ಲಿ ಭಾರತದಲ್ಲಿ ಆರೋಗ್ಯ ಕ್ಷೇತ್ರವನ್ನು ಗಮನಾರ್ಹವಾಗಿ ಬದಲಾವಣೆ ಮಾಡಿದ್ದಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications