ಪ್ರೇರಣಾ ಜುಂಜುನ್‌ವಾಲಾ 'ಕ್ರಿಯೇಟಿವ್ ಗೆಲಿಲಿಯೋ' ಹಾಗೂ 'ಲಿಟಲ್ ಸಿಂಗಮ್ - ಕಿಡ್ಸ್ ಅರ್ಲಿ ಲರ್ನ್' ಅಪ್ಲಿಕೇಶನ್ ನ ಸಂಸ್ಥಾಪಕರಾಗಿದ್ದು, ಸಿಂಗಾಪುರದಲ್ಲಿ ಪ್ರೀ - ಸ್ಕೂಲ್ ಹೊಂದಿದ್ದು ಅವರೊಬ್ಬ ಭಾರತೀಯ ಸೀರಿಯಲ್ ಎಂಟ್ರೆಪ್ರೆನಿಯರ್ ಆಗಿದ್ದಾರೆ. ಅವರ ಕ್ರಿಯೇಟಿವ್ ಗೆಲಿಲಿಯೋ ಅಪ್ಲಿಕೇಶನ್ ಮೂರರಿಂದ ಎಂಟು ವರ್ಷಗಳ ನಡುವಿನ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿದೆ.
ಪ್ರೇರಣಾ ಜುಂಜುನ್ವಾಲಾ ಅವರ ಬಗ್ಗೆ ಹೇಳಬೇಕೆಂದರೆ ಅವರು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್ ನ ವಿಜ್ಞಾನ ವಿಷಯದಲ್ಲಿ ಪದವೀಧರರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರೇರಣಾ ಅವರಿಗೆ ಸುಮಾರು ಒಂದು ದಶಕದ ಅನುಭವವಿದ್ದು ಅವರ ಅಪ್ಲಿಕೇಶನ್ ಅನ್ನು ಭಾರತೀಯ ಉಪಖಂಡದಲ್ಲಿಯೇ 9 ಮಿಲಿಯನ್‌ಗೂ ಹೆಚ್ಚು ಡೌನ್‌ಲೋಡ್ ಮಾಡಲಾಗಿದೆ.

ಇನ್ನು ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರ ಅಪ್ಲಿಕೇಶನ್ ವಿವರಣಾತ್ಮಕ ವಿಡಿಯೋ, ಗ್ಯಾಮಿಫಿಕೇಶನ್ ಮೂಲಕ ಪೆರ್ಸನಲೈಸ್ಡ್ ಕಲಿಕೆಯ ಪ್ರಯಾಣಕ್ಕೆ ಮಗುವಿಗೆ ಸಹಾಯ ಮಾಡುತ್ತದೆ. ಪ್ರೇರಣಾ ಜುಂಜುನ್‌ವಾಲಾ ಅವರು ಹೇಳಿರುವ ಪ್ರಕಾರ ಫಂಡಿಂಗ್ ರೌಂಡ್ ನಲ್ಲಿ ಕಂಪನಿಯು ಕಳೆದ ವರ್ಷ ಸುಮಾರು 60 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದು ಕಂಪನಿ ಮೌಲ್ಯದಲ್ಲಿ 40 ಮಿಲಿಯನ್ ಡಾಲರ್ (330 ಕೋಟಿ ರೂ.) ಹೆಚ್ಚಿಸಿಕೊಂಡಿದೆ ಎಂದು ಹೇಳಿದ್ದಾರೆ.
ತಮ್ಮ ಬೆಳವಣಿಗೆಯು ಕನಿಷ್ಟ ಮಾರ್ಕೆಟಿಂಗ್ ಖರ್ಚುಗಳೊಂದಿಗೆ ಉತ್ತಮವಾಗಿದೆ ಮಾತ್ರವಲ್ಲದೇ ಒಂದು ವರ್ಷದಲ್ಲಿ30 ಉದ್ಯೋಗಿಗಳಿದ್ದ ತನ್ನ ತಂಡವನ್ನು 60ಕ್ಕೆ ಏರಿಸುವ ಮೂಲಕ ದ್ವಿಗುಣಗೊಳಿಸುವುದಾಗಿ ಹೇಳಿದ್ದಾರೆ. ಪ್ರೇರಣಾ ಜುಂಜುನ್‌ವಾಲಾ ಇಂಡೋಸಿಯಾ ಮತ್ತು ವಿಯೆಟ್ನಾಂನಲ್ಲಿ ತಮ್ಮ ಕಂಪನಿಯನ್ನು ಪ್ರಾರಂಭಿಸಲು ಯೋಚಿಸಿದ್ದು ಪ್ರಮುಖವಾಗಿ ಕಲಿಕಾ ವಿಷಯಗಳನ್ನು ಸ್ಥಳೀಯ ಭಾಷೆಯಲ್ಲಿ ಪ್ರಾರಂಭಿಸಲು ಚಿಂತನೆ ನಡೆಸುತ್ತಿದ್ದಾರೆ.
"ಪ್ರೇರಣಾ ಅವರ ನಿರಂತರ ಗಮನ ಮತ್ತು ಬಲವಾದ ಅನುಷ್ಟಾನವೇ ಕಾರಣದಿಂದ ಮಕ್ಕಳ ವಿಭಾಗದಲ್ಲಿ ಪ್ರೇರಣಾ ಅವರ ಆ್ಯಪ್ ಟಾಪ್ 20ರಲ್ಲಿ ಉಳಿದುಕೊಂಡಿದೆ," ಎಂದು ಹೆಮ್ಮೆಯಿಂದಲೇ ಅವರ ಹೂಡಿಕೆದಾರ ವಾಣಿ ಕೋಲಾ ಹೇಳಿದ್ದಾರೆ. ಅವರ ಸಂಸ್ಥೆಯು ಸಿಂಗಾಪುರದಲ್ಲಿ ಏಳು ಸ್ಕೂಲ್ ಗಳನ್ನು ಹೊಂದಿವೆ. ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಎದುರಾಗುತ್ತಿರುವ ಶಿಕ್ಷಕರ ಕೊರತೆಯನ್ನು ಪರಿಹರಿಸುವ ಸಲುವಾಗಿ ಅವರು ಕಲಿಕೆಯನ್ನು ಆನ್‌ಲೈನ್‌ನಲ್ಲಿ ಪ್ರಸ್ತುತಪಡಿಸಿದರು.
ಉದ್ಯಮಿಗಳಾಗಿ ಬೆಳೆದ ಮಹಿಳೆಯರು
ಈ ಹಿಂದೆ ಉದ್ಯಮಿಗಳಾಗಿ ಅದರಲ್ಲೂ ಮುಖ್ಯವಾಗಿ ಯಶಸ್ವಿ ಉದ್ಯಮವನ್ನು ನಡೆಸಿದ ಹಲವಾರು ಮಹಿಳೆಯರ ಬಗ್ಗೆ ನಾವು ವಿವರಣೆ ನೀಡಿದ್ದೇವೆ. ಅಮೀರ ಶಾ ತನ್ನ ತಂದೆಯ ಕ್ಲಿನಿಕ್ ಅನ್ನು 6478 ಕೋಟಿ ರೂಪಾಯಿ ಮೌಲ್ಯದ ಸಂಸ್ಥೆಯಾಗಿ ಬೆಳೆಸಿದ್ದಾರೆ. ಭಾರತದ ಟ್ರಾಕ್ಟರ್ ಕ್ವೀನ್ ಆದ ಮಲ್ಲಿಕಾ ಯಶಸ್ವಿ ಉದ್ಯಮಿಯಾಗಿದ್ದಾರೆ.
ಭಾರತದ ಶ್ರೀಮಂತ ಮಹಿಳಾ ಸಿಇಒಗಳಲ್ಲಿ ಒಬ್ಬರಾದ ವಿನಿತಾ ಗುಪ್ತಾ, ಇನ್ಫೋಸಿಸ್‌ನ ನಾರಾಯಣ ಮೂರ್ತಿ ಪುತ್ರಿ ಅಕ್ಷತ ಮೂರ್ತಿ, ಭಾರತದಲ್ಲಿ ನೆಟ್‌ಫ್ಲಿಕ್ಸ್ ಅನ್ನು ಜನಪ್ರಿಯಗೊಳಿಸಿದ ಮೋನಿಕಾ ಶೆರ್ಗಿಲ್, ಗೃಹಿಣಿಯಾಗಿ 100 ಮಂದಿ ಉದ್ಯೋಗಿಗಳ 200 ಕೋಟಿ ರೂಪಾಯಿ ಮೌಲ್ಯದ ಕಂಪನಿಯನ್ನು ಕಟ್ಟಿದ ಹರಿಣಿ ಶಿವಕುಮಾರ್ ಮೊದಲಾದವರುಗಳನ್ನು ನಾವು ಕಾಣಬಹುದಾಗಿದೆ.
ಕ್ರಿಶಾ ಗುಪ್ತಾ ತನ್ನ 24ನೇ ವಯಸ್ಸಿನಲ್ಲಿಯೇ 100 ಕೋಟಿ ರೂಪಾಯಿ ಫಂಡ್ ಸ್ಥಾಪನೆ ಮಾಡಿದ್ದಾರೆ. ಇನ್ನು ಅಮೇರಿಕಾದ ಬಿಲಿಯನ್ ಡಾಲರ್ ಕಂಪನಿಯ ಸಿಇಒ ಅಮ್ರಾಪಾಲಿ ಗ್ಯಾನ್ ಯಶಸ್ವಿ ಉದ್ಯಮಿಯಾಗಿದ್ದಾರೆ. ಇನ್ನು ದೇವಿತಾ ಸರಾಫ್ ತನ್ನ 24ನೇ ವಯಸ್ಸಿನಲ್ಲಿಯೆ ಸಿಇಒ ಆದ ಮಹಿಳೆಯಾಗಿದ್ದಾರೆ.
ದೇಶದ ಯಶಸ್ವಿ ಉದ್ಯಮಿ ಫಲ್ಗುಣಿ ನಾಯರ್ ಪುತ್ರಿ ಅದ್ವೈತ ನಾಯರ್ 36,000 ಕೋಟಿ ರೂ. ಉದ್ಯಮ ಮುನ್ನಡೆಸುತ್ತಿದ್ದಾರೆ. 3200 ರೂಪಾಯಿ ಸಂಬಳ ಪಡೆಯುತ್ತಿದ್ದ ರೇಣು ಗುಜ್ರಾಲ್ 200 ಕೋಟಿ ರೂಪಾಯಿ ಮೌಲ್ಯದ ಸಂಸ್ಥೆಯನ್ನು ಕಟ್ಟಿದ್ದಾರೆ.


Click it and Unblock the Notifications