ಕಲಿಕೆಯಲ್ಲಿ ಹಿಂದುಳಿದು, ಕಾಲೇಜು ಡ್ರಾಪ್ ಔಟ್‌ನಿಂದ ಹಿಡಿದು, ಇಂದು ದೇಶದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ ರೆಸ್ಟೋರೆಂಟ್ ಮಾಲೀಕ ಪ್ರಿಯಾಂಕ್ ಸುಖಿಜಾ ಅವರ ಜೀವನದ ಕಷ್ಟಕರವಾದ ಹಾದಿ ಪ್ರಾರಂಭವಾಗೋದು 19 ನೇ ವಯಸ್ಸಿನಲ್ಲಿ. ಆದರೆ ಇಂದು ಅವರು ದೇಶದ ಶ್ರೀಮಂತ ರೆಸ್ಟೋರೆಂಟ್ ಮಾಲೀಕರಾಗಿ ಹೊರಹೊಮ್ಮಿದ್ದಾರೆ.
ಪ್ರಿಯಾಂಕ್ ಸುಖಿಜಾ ಅವರು ದೆಹಲಿಯಲ್ಲಿ ಫುಡ್ & ಕ್ಲಬ್ ಸಂಸ್ಕೃತಿಯು ತ್ವರಿತವಾಗಿ ಬೆಳವಣಿಗೆಯಾಗಲು ಕಾರಣರಾಗಿರುವ ಹಿಂದಿನ ವ್ಯಕ್ತಿಯಾಗಿದ್ದಾರೆ. ದೆಹಲಿ ಎನ್‌ಸಿಆರ್ ಮತ್ತು ಇತರ ಮೆಟ್ರೋ ಸಿಟಿ ಈಗ 30 ಕ್ಕೂ ಹೆಚ್ಚು ಹೈ- ಎಂಡ್ ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳನ್ನು ಹೊಂದಿರುವ ಸುಖಿಜಾ ಅವರು ಉತ್ತಮ ನಿವ್ವಳ ಮೌಲ್ಯ ಮತ್ತು ವಾರ್ಷಿಕ ವೇತನವನ್ನು ಹೊಂದಿದ್ದಾರೆ.

ರೆಸ್ಟೋರೆಂಟ್ ಮಾಲೀಕ ಪ್ರಿಯಾಂಕ್ ಸುಖಿಜಾ ಅವರು ಕೇವಲ 19 ವರ್ಷದವರಾಗಿದ್ದಾಗ ಈ ಪ್ರಯಾಣವನ್ನು ಪ್ರಾರಂಭಿಸಿದರು. ಕಾಲೇಜಿನಿಂದ ಡ್ರಾಪ್ ಔಟ್ ಆಗಿ ತಮ್ಮ ಜೀವನದ ನಿಜವಾದ ಆಸಕ್ತಿಯಾದ ಫುಡ್ ಇಂಡಸ್ಟ್ರಿ ಕಡೆಗೆ ಮುಂದುವರಿಸಲು ನಿರ್ಧರಿಸಿದರು. ಇದಕ್ಕಾಗಿ ತಂದೆಯಿಂದ ಸಾಲ ಪಡೆದು, ತಮ್ಮ ಮೊದಲ ರೆಸ್ಟೋರೆಂಟ್ "ಲಾಝಿಜ್ ಅಫೇರ್" ಅನ್ನು ತೆರೆದರು.
ಈಗ, ಪ್ರಿಯಾಂಕ್ ಸುಖಿಜಾ ಅವರು ಭಾರತದಲ್ಲಿ ಅತ್ಯಂತ ಶ್ರೀಮಂತ ಮತ್ತು ಯಶಸ್ವಿ ರೆಸ್ಟೋರೆಂಟ್ ಮಾಲೀಕರಾಗಿ ಹೊರಹೊಮ್ಮಿದ್ದಾರೆ. ದೆಹಲಿಯ ಡಯಾಬ್ಲೊ, ಲಾರ್ಡ್ ಆಫ್ ದಿ ಡ್ರಿಂಕ್ಸ್, ವೇರ್‌ಹೌಸ್ ಕೆಫೆ, ಫ್ಲೈಯಿಂಗ್ ಸಾಸರ್, ಡ್ರಾಗನ್‌ಫ್ಲೈ ಎಕ್ಸಿಪಿರೀಯನ್ಸ್ ಮತ್ತು ತಮಾಷಾ ಸೇರಿದಂತೆ ಹಲವು ಜನಪ್ರಿಯ ರೆಸ್ಟೋರೆಂಟ್‌ಗಳು ಮತ್ತು ಬ್ರ್ಯಾಂಡ್‌ಗಳ ಮಾಲೀಕರಾಗಿದ್ದಾರೆ.
ಪ್ರಿಯಾಂಕ್ ಸುಖಿಜಾ ಅವರ ಸಂಸ್ಥೆಯ ಹೆಸರು "ಫಸ್ಟ್ ಫಿಡಲ್ F&B Pvt Ltd" ಎಂದಾಗಿದ್ದು, ಇದು ದೇಶಾದ್ಯಂತ ಕೆಲವು ಐಷಾರಾಮಿ ಮತ್ತು ಉನ್ನತ ದರ್ಜೆಯ ರೆಸ್ಟೋರೆಂಟ್‌ಗಳನ್ನು ಸ್ಥಾಪಿಸುವಲ್ಲಿ ಪರಿಣಿತಿ ಪಡೆದಿದೆ. 2022 ರಲ್ಲಿ, ಕಂಪನಿಯು 275 ಕೋಟಿ ರೂ.ಗಳಿಸಿದೆ. ಇನ್ನು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಪ್ರಕಾರ, ಸುಖಿಜಾ ಆ ವರ್ಷ ಸುಮಾರು 110 ಕೋಟಿ ರೂಪಾಯಿ ಗಳಿಸಿದ್ದಾರೆ.
43ನೇ ವಯಸ್ಸಿನಲ್ಲಿ, ಪ್ರಿಯಾಂಕ್ ಸುಖಿಜಾ ಅವರು ಭಾರತದಲ್ಲಿ ಫುಡ್ & ಬೇವರೇಜ್ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ. ರೆಸ್ಟೋರೆಂಟ್ ಮಾಲೀಕರ ನಿವ್ವಳ ಮೌಲ್ಯದ ಬಗ್ಗೆ ನಿಖರತೆ ಇಲ್ಲ, ಆದರೆ ಅವರ ನಿವ್ವಳ ಮೌಲ್ಯವು 200 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ತಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಅಮೆರಿಕದ ಮೆಕ್‌ಡೊನಾಲ್ಡ್ ಮತ್ತು ಪಿಜ್ಜಾ ಹಟ್‌ನ ಫ್ರಾಂಚೈಸ್ ಮಾದರಿಯನ್ನು ಅಳವಡಿಸಿಕೊಳ್ಳಲು ಯೋಜಿಸಿದ್ದು, ಮುಂದಿನ ವರ್ಷಗಳಲ್ಲಿ ಫ್ರಾಂಚೈಸ್ ಪಾಲುದಾರರ ಮೂಲಕ ಭಾರತದಾದ್ಯಂತ ಮತ್ತು ಯುಎಸ್, ದುಬೈ ಮತ್ತು ಲಂಡನ್‌ನಂತಹ ಅಂತರರಾಷ್ಟ್ರೀಯ ಸ್ಥಳಗಳಲ್ಲಿ 150 ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳನ್ನು ತೆರೆಯಲು ಯೋಜಿಸಿದ್ದಾರೆ.
"ನಮ್ಮ ಅಜ್ಜಿಯರು ಎಂದಿಗೂ ಹೊರಗೆ ಹೋಗಿ ತಿನ್ನುತ್ತಿರಲಿಲ್ಲ, ನಮ್ಮ ಪೋಷಕರು ತಿಂಗಳಿಗೊಮ್ಮೆ ನಮ್ಮನ್ನು ಹೊರಗೆ ಕರೆದೊಯ್ಯುತ್ತಿದ್ದರು, ನಾವು ವಾರಕ್ಕೊಮ್ಮೆ ಹೋಗುತ್ತೇವೆ ಮತ್ತು ನಮ್ಮ ಮಕ್ಕಳು ಬಹುಶಃ ಪ್ರತಿದಿನ ಹೊರಗೆ ಹೋಗಿ ಹೋಗುವ ಅಭ್ಯಾಸ ಬೆಳೆಸಿಕೊಳ್ಳಬಹುದು. ಸಿಂಗಾಪುರದಲ್ಲಿ ಈಗ ಅಡಿಗೆಮನೆಗಳಿಲ್ಲದ ಅಪಾರ್ಟ್‌ಮೆಂಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ನೀವು ಪ್ರತಿದಿನ ಹೊರಗೆ ಹೋಗಿ ತಿನ್ನುವ ಸಾಂಸ್ಕೃತಿಕ ಪಲ್ಲಟ ಭಾರತಕ್ಕೂ ಬರಲಿದೆ," ಪ್ರಿಯಾಂಕ್ ಸುಖಿಜಾ ಎಂದಿದ್ದಾರೆ.
"ನಿಮ್ಮ ನೆಚ್ಚಿನ ರೆಸ್ಟೋರೆಂಟ್‌ನಲ್ಲಿ ನಿಮ್ಮ ನೆಚ್ಚಿನ ಆಹಾರದ ಬೆಲೆ ನಿಮಗೆ ತಿಳಿದಿದೆಯೇ? ಇಲ್ಲ, ಯಾಕೆಂದರೆ ಜನರು ಇಷ್ಟಪಡುವದನ್ನು ತಿನ್ನುವಾಗ, ಅವರು ಅದನ್ನು ಪಾವತಿಸಲು ಸಿದ್ಧರಿರುತ್ತಾರೆ. ಕಾರು, ಮನೆ ಖರೀದಿಸುವ ಹಾಗೆ ಇದಕ್ಕೆಲ್ಲ ಎರಡು - ಮೂರು ಬಾರಿ ಯೋಚಿಸಬೇಕಾಗಿಲ್ಲ," ಎಂದು ಉದ್ಯಮದಲ್ಲಿಆಗಬಹುದಾದ ಬದಲಾವಣೆ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications