ಈ ಹಿಂದೆ ವಿಎನ್‌ಆರ್ ಸೀಡ್ಸ್‌ನಲ್ಲಿ ಸೇಲ್ಸ್ ಮತ್ತು ಮಾರ್ಕೆಟಿಂಗ್ ತಂಡದ ಸದಸ್ಯನಾಗಿದ್ದ ರಾಜೀವ್ ಭಾಸ್ಕರ್ ತಾನು ಮುಂದೊಂದು ದಿನ ಯಶಸ್ವಿ ಕೃಷಿಕನಾಗಬಹುದು, ತನ್ನ ಹಿಂದಿನ ಕೆಲಸವು ತನ್ನನ್ನು ರೈತ ಮತ್ತು ಉದ್ಯಮಿಯಾಗುವಂತೆ ಮಾಡಬಹುದು ಎಂಬ ಯೋಚನೆಯನ್ನು ಕೂಡಾ ಮಾಡಿರಲಿಲ್ಲ. ರಾಜೀವ್ ಭಾಸ್ಕರ್ ಸೀಡ್ಸ್ ಕಂಪನಿಯಲ್ಲಿನ ತನ್ನ ಅನುಭವವನ್ನು ಸದುಪಯೋಗ ಮಾಡಿಕೊಂಡಿದ್ದಾರೆ.
ಹೌದು, ಸೀಡ್ಸ್ ಕಂಪನಿಯ ತನ್ನ ಉದ್ಯೋಗದ ಅನುಭವವನ್ನು ಸದುಪಯೋಗ ಮಾಡಿಕೊಂಡ ರಾಜೀವ್ ಭಾಸ್ಕರ್ ಸೀಬೆಹಣ್ಣು ಕೃಷಿ ಉದ್ಯಮದಿಂದ 1 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ. ಭಾರತದ ವಿವಿಧ ಭಾಗಗಳ ರೈತರೊಂದಿಗೆ ಮಾತನಾಡುವ ಅವಕಾಶವನ್ನು ಹೊಂದಿದ್ದ ರಾಜೀವ್ ಭಾಸ್ಕರ್ ದಿನ ಕಳೆದಂತೆ ಕೃಷಿ ಕ್ಷೇತ್ರದತ್ತ ವಾಲಿದ್ದಾರೆ.

ಥಾಯ್ ಸೀಬೆಹಣ್ಣಿನ ತಳಿಯನ್ನು ಮತ್ತು ಅದರ ಬೇಸಾಯವನ್ನು ಮಾಡಿದ ರೈತರೊಂದಿಗೆ ಮಾತನಾಡಿ ರಾಜೀವ್ ಭಾಸ್ಕರ್ ಸೀಬೆಹಣ್ಣಿನ ಕೃಷಿಯ ಬಗ್ಗೆ ತಿಳಿದುಕೊಂಡಿದ್ದಾರೆ. 2017ರಲ್ಲಿ ತನ್ನ ಉದ್ಯೋಗವನ್ನು ತೊರೆದ ರಾಜೀವ್ ಭಾಸ್ಕರ್, ಹರಿಯಾಣದ ಪಂಚ್‌ಕುಲದ ಬಾಡಿಗೆ ಜಮೀನಿನಲ್ಲಿ 5 ಎಕರೆಯಲ್ಲಿ ಥಾಯ್ ಸೀಬೆಹಣ್ಣಿನ ಕೃಷಿಯನ್ನು ನಡೆಸಿದ್ದಾರೆ.
ಕೃಷಿ ಸುರಕ್ಷತೆಗಾಗಿ ಹಲವು ಕ್ರಮಗಳು
ಉಳಿದ ಪದಾರ್ಥಗಳನ್ನು ಗೊಬ್ಬರಕ್ಕಾಗಿ ಬಳಸುವ ಕೃಷಿ ವಿಧಾನಗಳನ್ನು ಪಾಲನೆ ಮಾಡಿದ ರಾಜೀವ್ ಭಾಸ್ಕರ್ ಜೈವಿಕ ವಸ್ತುಗಳಿಂದ ತಯಾರಿಸಿದ ಜೀವನಾಶಕಗಳು ಮತ್ತು ಜೈವಿಕ ಗೊಬ್ಬರಗಳನ್ನು ಬೆಳೆ ಬೆಳವಣಿಗೆಗೆ ಬಳಕೆ ಮಾಡಲು ಉತ್ತೇಜನ ನೀಡಿದ್ದಾರೆ. ಹಾಗೆಯೇ ಕೃಷಿ ಹಾನಿ ಹಾಗೂ ಕೀಟಗಳಿಂದ ಕೃಷಿಯನ್ನು ರಕ್ಷಿಸಲು ಕೂಡಾ ತಂತ್ರವನ್ನು ಬಳಕೆ ಮಾಡಿದ್ದಾರೆ.
ರಾಜೀವ್ ಭಾಸ್ಕರ್ ಮೂರು-ಪದರದ ಬ್ಯಾಗಿಂಗ್ ತಂತ್ರವನ್ನು ಬಳಸಿಕೊಂಡಿದ್ದಾರೆ. ಸುಗ್ಗಿಯ ತನಕ ಹಣ್ಣು ಸುರಕ್ಷಿತವಾಗಿ ಬೆಳವಣಿಗೆ ಹೊಂದುವುದನ್ನು ನೋಡಿಕೊಂಡಿದ್ದಾರೆ. 2017 ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ತನ್ನ ಮೊದಲ ಬೆಳೆ ಕೊಯ್ಲು ಮತ್ತು ಮಾರಾಟ ಮಾಡಿದ ನಂತರ, ರಾಜೀವ್ ಒಟ್ಟು 20 ಲಕ್ಷ ರೂಪಾಯಿ ಆದಾಯವನ್ನು ಗಳಿಸಿದ್ದಾರೆ.
ಬಳಿಕ ಸಾವಯವ ತರಕಾರಿ ಉತ್ಪಾದನೆಯಲ್ಲಿ ತೊಡಗಿಕೊಂಡ ರಾಜೀವ್ ಭಾಸ್ಕರ್ ತಮ್ಮ ಉತ್ಪನ್ನವನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡುವಲ್ಲಿ ವಿಫಲರಾಗಿದ್ದಾರೆ. ಅದಾದ ಬಳಿಕ ಥಾಯ್ ಪೇರಳೆ ಅಥವಾ ಸೀಬೆಹಣ್ಣಿನ ಕೃಷಿಯನ್ನು ಮುಂದುವರಿಸಲು ನಿರ್ಧಾರ ಮಾಡಿದ್ದಾರೆ. 2019 ರಲ್ಲಿ ಇತರ ಮೂವರು ಹೂಡಿಕೆದಾರರೊಂದಿಗೆ ಪಂಜಾಬ್‌ನ ರೂಪನಗರದಲ್ಲಿ 55 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಕೃಷಿ ಉದ್ಯಮ ಮುಂದುವರಿಸಿದ್ದಾರೆ.
ರಾಜೀವ್ ಮತ್ತು ತಂಡವು 25 ಎಕರೆ ಭೂಮಿಯಲ್ಲಿ ಸೀಬೆಹಣ್ಣಿನ ಮರಗಳನ್ನು ನೆಟ್ಟು, 2021 ರಲ್ಲಿ ಮಾಲೀಕರು ಭೂಮಿಯನ್ನು ಮಾರಾಟ ಮಾಡುವವರೆಗೆ ಪಂಚಕುಲ ತೋಟದ ಐದು ಎಕರೆಯಲ್ಲಿ ಥಾಯ್ ಸೀಬೆಹಣ್ಣನ್ನು ಬೆಳೆಸುವುದನ್ನು ಮುಂದುವರೆಸಿದರು. ಮಳೆಗಾಲ ಮತ್ತು ಚಳಿಗಾಲದಲ್ಲಿ ವರ್ಷಕ್ಕೆ ಎರಡು ಬಾರಿ ಈ ಹಣ್ಣಿನ ಫಲ ಲಭ್ಯವಾಗುತ್ತದೆ.
ಆದರೆ ಇತರ ವಿಧಗಳು ಮತ್ತು ಮಾರಾಟಗಾರರಿಂದ ಸ್ಪರ್ಧೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಳೆಗಾಲದಲ್ಲಿ ಮಾತ್ರ ಕೊಯ್ಲನ್ನು ಮಾಡಲಾಗುತ್ತದೆ. ರಾಜೀವ್ ತಮ್ಮ ಸರಕುಗಳನ್ನು 10-ಕೆಜಿ ಕ್ರೇಟ್‌ಗಳಲ್ಲಿ ದೆಹಲಿ ಎಪಿಎಂಸಿ ಮಾರುಕಟ್ಟೆಗೆ ತಲುಪಿಸುತ್ತಾರೆ. ಹಾಗೆಯೇ ಪ್ರತಿ ಎಕರೆಗೆ ಸರಾಸರಿ 6 ಲಕ್ಷ ಲಾಭ ಗಳಿಸುತ್ತಾರೆ.
ಭವಿಷ್ಯದಲ್ಲಿ ಸೀಬೆಹಣ್ಣಿನ ಸರಾಸರಿ ಗರಿಷ್ಠ ಇಳುವರಿಯನ್ನು ಪ್ರತಿ ಗಿಡಕ್ಕೆ 25 ಕೆಜಿಯಿಂದ 40 ಕೆಜಿಗೆ ಹೆಚ್ಚಿಸಲು ರಾಜೀವ್ ಚಿಂತನೆ ನಡೆಸಿದ್ದಾರೆ. ರಾಸಾಯನಿಕ ಕೃಷಿಯನ್ನು ಹೆಚ್ಚಾಗಿ ಬಳಕೆ ಮಾಡದ ಪ್ರದೇಶಗಳಲ್ಲಿ ಸಾವಯವ ಕೃಷಿ ವಿಧಾನಗಳನ್ನು ಬಳಸುವುದಕ್ಕೆ ರಾಜೀವ್ ಭಾಸ್ಕರ್ ಮಹತ್ವ ನೀಡುತ್ತಾರೆ. ಆದರೆ ಕೀಟಗಳ ದಾಳಿಯಿಂದ ತೋಟಗಳನ್ನು ರಕ್ಷಿಸಲು ರಾಸಾಯನಿಕಗಳನ್ನು ಬಳಸುವ ಪ್ರದೇಶಗಳಲ್ಲಿ ಸಾವಯವ ಕೃಷಿಯನ್ನು ನಿರ್ವಹಿಸುವುದು ಸವಾಲಿನ ಸಂಗತಿ ಎನ್ನುತ್ತಾರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications